ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ: ಹರಕೆ ತೀರಿಸದಿದ್ದರೆ ಏನೆಲ್ಲ ತೊಂದರೆ ಮತ್ತು ಪರಿಹಾರೋಪಾಯ

By ಹರಿ ಶಾಸ್ತ್ರಿ ಗುರೂಜಿ
|
Google Oneindia Kannada News

Recommended Video

ಜನರು ದೇವರಿಗೆ ಹಲವಾರು ಹರಕೆಗಳನ್ನ ಸಲ್ಲಿಸುತ್ತಾರೆ | ಆದರೆ ಇದರ ಬಗ್ಗೆ ನಿಮಗೆಷ್ಟು ಗೊತ್ತು? | Oneindia Kannada

ನಾನಾ ಬಗೆಯಲ್ಲಿ ದೇವರನ್ನು ಪ್ರಾರ್ಥನೆ ಮಾಡುವುದು ಉಂಟು. ಮದುವೆ ತಡೆ ನಿವಾರಣೆ, ಉತ್ತಮ ಕೆಲಸ ಸಿಗಲಿ, ಆರೋಗ್ಯ ಉತ್ತಮವಾಗಲಿ, ಹಣಕಾಸಿನ ಅಡಚಣೆ ನಿವಾರಣೆ ಆಗಲಿ, ಮನೆ ಕಟ್ಟುವುದಕ್ಕೆ ಅಡಚಣೆ ಇದ್ದಲ್ಲಿ ತೊಂದರೆ ಪಕ್ಕಕ್ಕೆ ಸರಿಯಲಿ ಹೀಗೆ ಕೇವಲ ಪ್ರಾರ್ಥನೆಯಷ್ಟೇ ಮಾಡದೆ ಕೆಲವು ಹರಕೆ ಕಟ್ಟಿಕೊಳ್ಳುತ್ತಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದೇವರೇ, ನನಗೆ ಇಂತಹ ಅನುಕೂಲ ಆದಲ್ಲಿ ಇಂಥ ಸೇವೆಯೊಂದನ್ನು ಮಾಡಿಸುತ್ತೇನೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ ಮತ್ತು ಕೆಲವರು ಮುಡಿಪು ಕಟ್ಟಿಕೊಳ್ಳುತ್ತಾರೆ. ಹರಕೆ ಅಥವಾ ಮುಡಿಪು ಹೊತ್ತುಕೊಂಡು, ಆ ಕೆಲಸ ಯಶಸ್ವಿಯಾಗಿ ಆದ ನಂತರ ಏನು ಸಮಸ್ಯೆ ಆಗುತ್ತದೆ? ಒಂದು ವೇಳೆ ಹರಕೆ ತೀರಿಸದಿದ್ದಲ್ಲಿ ನೆನಪಿಟ್ಟುಕೊಂಡು ಕಷ್ಟ ಕೊಡುತ್ತಾನಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಹರಕೆ ಕೂಡ ಒಂದು ಬಗೆಯಲ್ಲಿ ಹೇಳಲು ಸಾಧ್ಯವಿಲ್ಲ. ಪುರುಷ ದೇವರಿಗೆ, ಸ್ತ್ರೀ ಶಕ್ತಿಗೆ ಹೀಗೆ ಪ್ರತ್ಯೇಕ ಹರಕೆಗಳು ಇರುತ್ತವೆ. ಜತೆಗೆ ಕುಲ ದೇವರ ಹರಕೆ ಇರುತ್ತದೆ. ಇನ್ನು ವಿಶೇಷವಾಗಿ ಮುಡಿಪುಗಳನ್ನು ಕಟ್ಟುತ್ತಾರೆ. ಬಹಳ ಸಲ ಏನಾಗುತ್ತದೆ ಅಂದರೆ, ಹರಕೆ ಹೊತ್ತ ಫಲ ಸಿಕ್ಕ ನಂತರ ಆ ಕಡೆ ಗಮನ ಹರಿಸುವುದಿಲ್ಲ. ಕೆಲವು ಸಲ ಮರೆತು ಬಿಡ್ತೀರಿ.

ಮೊದಲನೆಯದಾಗಿ ವಾಕ್ ದೋಷ ಬರುತ್ತದೆ

ಮೊದಲನೆಯದಾಗಿ ವಾಕ್ ದೋಷ ಬರುತ್ತದೆ

ಹರಕೆ ಹೊತ್ತ ನಂತರ ಅದರ ಫಲ ಸಿಕ್ಕಿದ ಮೇಲೆ ಅದನ್ನು ತೀರಿಸದಿದ್ದಲ್ಲಿ ಮೊದಲನೆಯದಾಗಿ 'ವಾಕ್ ದೋಷ' ಬರುತ್ತದೆ. ಅಂದರೆ ಸುಳ್ಳು ಹೇಳಿದ ತಪ್ಪು ಮಾಡಿದವರಾಗುತ್ತೀರಿ. ಹರಕೆ ಮೂಲಕ ಪಡೆದ ಫಲ ನಾಶ ಆಗುತ್ತದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬಹಳ ಜನ ಹೇಗೆಂದರೆ, ಅರಿಶಿಣದ ಬಟ್ಟೆಯಲ್ಲಿ ಹನ್ನೊಂದು ರುಪಾಯಿ ಮುಡಿಪು ಕಟ್ಟಿರುತ್ತಾರೆ. ಮನೆ ದೇವರಿಗೆ ಹರಕೆ ಹೊತ್ತಿರುತ್ತಾರೆ. ಅದನ್ನು ಪೂರ್ಣ ಮಾಡದಿದ್ದಲ್ಲಿ ದಾಂಪತ್ಯ ಜೀವನದಲ್ಲಿ ಸುಖ ಇರುವುದಿಲ್ಲ. ಮನೆ ಕಟ್ಟಬೇಕು ಅಂದರೆ ಅಡಚಣೆ ಆಗುತ್ತಿರುತ್ತದೆ. ಮದುವೆ- ಸಂತಾನ ವಿಳಂಬ, ಪದೇಪದೇ ಆರೋಗ್ಯ ಸಮಸ್ಯೆ ಆಗುತ್ತದೆ.

ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅಡಚಣೆಯಾಗುತ್ತದೆ

ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅಡಚಣೆಯಾಗುತ್ತದೆ

ಇನ್ನು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅಡಚಣೆ ಆಗುತ್ತಲೇ ಇರುತ್ತದೆ. ಎಷ್ಟೋ ಮಂದಿಗೆ ಮನೆ ಬಾಡಿಗೆ ಕಟ್ಟುವುದಕ್ಕೆ ಸಹ ತೊಂದರೆ ಅನುಭವಿಸುವಂತೆ ಆಗುತ್ತದೆ. ಇನ್ನೂ ಕೆಲವು ಸಲ ಹರಕೆ ಹೊತ್ತು ಮರೆತು ಬಿಟ್ಟಿರುವ ಸಾಧ್ಯತೆ ಇರುತ್ತದೆ. ತಂದೆ-ತಾಯಿ ಮಕ್ಕಳ ಪರವಾಗಿ ಹರಕೆ ಹೊತ್ತಿರುತ್ತಾರೆ. ಅಥವಾ ನಾವೇ ಹರಕೆ ಹೊತ್ತು ಮರೆತಿರುತ್ತೇವೆ. ಅಂಥ ಸಂದರ್ಭದಲ್ಲಿ ವಿಶೇಷ ಪೂಜೆಯೊಂದನ್ನು ಮಾಡಿಸಬೇಕಾಗುತ್ತದೆ. ಹಾಗೆ ಪೂಜೆ ಮಾಡಿಸಿ, ಆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ. ನಾವು ಏನು ಹರಕೆ ಹೊತ್ತುಕೊಂಡಿದ್ದೆವೋ ಗೊತ್ತಿಲ್ಲ. ನಮ್ಮ ತಪ್ಪುಗಳಿದ್ದಲ್ಲಿ ಕ್ಷಮಿಸಿ, ಒಳ್ಳೆಯದನ್ನು ಮಾಡು ಎಂದು ಪ್ರಾರ್ಥಿಸಿ.

ಉದ್ಯೋಗ ಸಿಕ್ಕ ನಂತರ ಮಾಲೀಕರ ಜತೆ ಜಗಳ ಆಗಬಹುದು

ಉದ್ಯೋಗ ಸಿಕ್ಕ ನಂತರ ಮಾಲೀಕರ ಜತೆ ಜಗಳ ಆಗಬಹುದು

ಉದ್ಯೋಗ ಸಿಕ್ಕ ಮೇಲೆ ಹರಕೆ ತೀರಿಸದೆ ಹೋದರೆ ಮಾಲೀಕರ ಜತೆಗೆ ಜಗಳ ಆಗುತ್ತದೆ. ಕೆಲಸಗಾರರ ಜತೆ ಜಗಳ ಆಗುತ್ತದೆ. ಅನ್ಯೋನ್ಯತೆ ಇರುವುದಿಲ್ಲ. ಸರಕಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸ-ಕಾರ್ಯದಲ್ಲಿ ಅನುಕೂಲ ಆಗುವುದಿಲ್ಲ. ಅಕಸ್ಮಾತ್ ಸರಕಾರಿ ಕೆಲಸ ಸಿಕ್ಕಿದ್ದರೂ ಅದರಲ್ಲಿ ನಾನಾ ಬಗೆಯ ತೊಂದರೆ ಅನುಭವಿಸಬೇಕಾಗುತ್ತದೆ. ಇನ್ನು ವ್ಯಾಪಾರ-ವ್ಯವಹಾರ ಮಾಡುವವರಿಗೆ ಚೆನ್ನಾಗಿರುವ ಹಣಕಾಸಿನ ಆದಾಯ ಏಕಾಏಕಿ ಕುಸಿದು ಹೋಗುತ್ತದೆ. ಎಷ್ಟೋ ಮಂದಿ ಬೀದಿಗೆ ಬಂದು ಭಿಡುತ್ತಾರೆ. ಸಾಲ ಜಾಸ್ತಿ ಆಗುತ್ತದೆ. ಹರಕೆ ತೀರಿಸದಿದ್ದಲ್ಲಿ ಇಂಥ ಹಲವಾರು ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಹರಕೆ ಹೊರುವುದೆಂದರೆ ನಾವಾಗಿಯೇ ಕೇಳಿಪಡೆವ ಬ್ಯಾಂಕ್ ಸಾಲ

ಹರಕೆ ಹೊರುವುದೆಂದರೆ ನಾವಾಗಿಯೇ ಕೇಳಿಪಡೆವ ಬ್ಯಾಂಕ್ ಸಾಲ

ಆದ್ದರಿಂದ ಮೊದಲ ಸಲಹೆ ಏನೆಂದರೆ, ಹರಕೆ ಅಂತ ಹೊರಲು ಹೋಗಬೇಡಿ. ಹರಕೆ ಹೊತ್ತುಕೊಂಡಿರಾ? ಅದರ ಫಲ ಸಿಕ್ಕಿತಾ? ಆ ಕೂಡಲೇ ಹರಕೆ ತೀರಿಸಿ. ಇದು ಬ್ಯಾಂಕ್ ಸಾಲ ಇದ್ದಂತೆ. ನೀವು ಮನೆ ಕಟ್ಟುವುದಕ್ಕೋ, ವಿದ್ಯಾಭ್ಯಾಸಕ್ಕೋ ಮತ್ಯಾವುದಕ್ಕೋ ಸಾಲ ಪಡೆದಿದ್ದರೆ ಅದನ್ನು ತೀರಿಸಲೇಬೇಕು. ಹರಕೆ ವಿಚಾರಕ್ಕೆ ಬಂದರೆ ದೇವರು ಕೂಡ ಬ್ಯಾಂಕ್ ಇದ್ದಂತೆ. ನೀವಾಗಿಯೇ ಒಂದು ಹರಕೆ ಹೊತ್ತು, ಅದರ ಫಲವನ್ನು ಪಡೆದ ನಂತರ ಕಡ್ಡಾಯವಾಗಿ ತೀರಿಸಲೇಬೇಕು. ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಹರಕೆ ತೀರಿಸುವುದೊಂದೇ ಅದಕ್ಕೆ ಇರುವ ಪರಿಹಾರ.

ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.

English summary
What will happen if anyone not fulfill God's promise? Here is an explanation by well known astrologer Hari Shastri Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X