ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ್ಮ ಕುಂಡಲಿಯಲ್ಲಿ ಲಗ್ನದಿಂದ ಎಷ್ಟನೇ ಮನೆಯ ಶನಿ ಏನು ಫಲ ನೀಡುತ್ತಾನೆ?

By ಶಂಕರ್ ಭಟ್
|
Google Oneindia Kannada News

ನಿಮ್ಮ ಜಾತಕದಲ್ಲಿ ಶನಿ ಗ್ರಹ ಎಲ್ಲಿದೆ ಎಂಬ ಆಧಾರದಲ್ಲಿ ನಿಮ್ಮ ಜೀವನದ ಮೇಲೆ ಆಗಿರುವ- ಆಗುತ್ತಿರುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬಹುದು. ಈಗ ನಿಮ್ಮ ಜಾತಕ ಇದ್ದಲ್ಲಿ ಅದನ್ನು ತೆಗೆದುಕೊಂಡು ಪರಿಶೀಲಿಸಿಕೊಳ್ಳಿ ಅಥವಾ ಜಾತಕದಲ್ಲಿ ಶನಿ ಎಷ್ಟನೇ ಸ್ಥಾನದಲ್ಲಿ ಇದ್ದಾನೆ ಎಂಬುದು ನೆನಪಿದ್ದರೆ ಹಾಗೇ ಪರಾಂಬರಿಸಿಕೊಳ್ಳಿ.

Recommended Video

Saturn Translition : Scoripon To Saggitarius | Oneindia Kannada

ಲಗ್ನ ಎಂದು ಜನ್ಮ ಕುಂಡಲಿ ಅಥವಾ ರಾಶಿ ಕುಂಡಲಿಯಲ್ಲಿ ಬರೆದಿರುತ್ತದೆ. ಕೆಲವು ಕಡೆ ಆ ಮನೆಯಲ್ಲಿ ಒಂದು ಅಥವಾ ಎರಡು ಗೀಟು ಹಾಕುವ ಪದ್ಧತಿಯೂ ಉಂಟು. ಲಗ್ನ ಅಂದರೆ ಒಂದನೇ ಸ್ಥಾನದಲ್ಲಿ ಶನಿ ಇದ್ದಾನೆ ಅಂತ ಅರ್ಥ. ಅಲ್ಲಿಂದ ಗಡಿಯಾರ ತಿರುಗುವ ಬಗೆಯಲ್ಲಿ (ಕ್ಲಾಕ್ ವೈಸ್) ಒಂದು, ಎರಡು, ಮೂರು ಎಂದು ಎಣಿಸುತ್ತಾ ಹೋದರೆ ಶನಿ ಗ್ರಹವು ಎಷ್ಟನೇ ಸ್ಥಾನದಲ್ಲಿ ಇದೆ ಎಂದು ಬರೆದಿರುತ್ತದೆ.

ಸಾಡೇ ಸಾತ್ ಶನಿಯ ಈ ಏಳು ಲಕ್ಷಣಕ್ಕೂ ನೀವು ಎಚ್ಚೆತ್ತುಕೊಳ್ಳದಿದ್ದರೆ!ಸಾಡೇ ಸಾತ್ ಶನಿಯ ಈ ಏಳು ಲಕ್ಷಣಕ್ಕೂ ನೀವು ಎಚ್ಚೆತ್ತುಕೊಳ್ಳದಿದ್ದರೆ!

ಕನ್ನಡದಲ್ಲಿ ಜಾತಕ ಬರೆಸಿದ್ದರೆ ಶನಿ, ಶ ಎಂದಿರುತ್ತದೆ. ಇಂಗ್ಲಿಷ್ ನಲ್ಲಿ Saturn ಅಥವಾ Sat ಅಥವಾ Sa ಎಂದಿರುತ್ತದೆ. ಶನಿ ಗ್ರಹವು ತುಲಾ ರಾಶಿಯಲ್ಲಿ ಉಚ್ಚನಾಗುತ್ತದೆ. ಮೇಷದಲ್ಲಿ ನೀಚನಾಗುತ್ತದೆ. ಮಕರ- ಕುಂಭ ರಾಶಿಗಳು ಶನಿಗೆ ಸ್ವ ಕ್ಷೇತ್ರವಾಗುತ್ತದೆ. ಸಾಮಾನ್ಯವಾಗಿ ಶನಿಯು ಒಂದು ಮನೆಯಲ್ಲಿ ಎರಡೂವರೆ ವರ್ಷಗಳ ಕಾಲ ಇರುತ್ತದೆ.

ಇದೀಗ ಲಗ್ನದಿಂದ ಶುರುವಾಗಿ ಅಂದರೆ ಒಂದರಿಂದ ಹನ್ನೆರಡನೇ ಮನೆಯ ತನಕ ಎಲ್ಲಿ ಶನಿ ಇದ್ದರೆ ಯಾವ ಫಲ ಎಂಬುದನ್ನು ತಿಳಿದುಕೊಳ್ಳಿ.

ಲಗ್ನದಲ್ಲಿ ಶನಿ ಗ್ರಹ ಸ್ಥಿತವಾಗಿದ್ದರೆ (ಒಂದನೇ ಮನೆ)

ಲಗ್ನದಲ್ಲಿ ಶನಿ ಗ್ರಹ ಸ್ಥಿತವಾಗಿದ್ದರೆ (ಒಂದನೇ ಮನೆ)

ಲಗ್ನದಲ್ಲೇ ಶನಿ ಇರುವವರ ಉದ್ಯೋಗ ಜೀವನ ಬಹಳ ಚೆನ್ನಾಗಿರುತ್ತದೆ. ಏಕೆಂದರೆ ಅ ಸ್ಥಾನದಲ್ಲಿ ಇರುವ ಶನಿ ಹತ್ತನೇ ಮನೆ ಅಂದರೆ ವೃತ್ತಿ ಬದುಕಿನ ಸ್ಥಾನವನ್ನು ವೀಕ್ಷಣೆ ಮಾಡುತ್ತಾನೆ. ಇನ್ನೊಂದು ಬಗೆಯಲ್ಲಿ ನೋಡಿದರೆ ಶಿಸ್ತು ಹೆಚ್ಚಾಗಿರುತ್ತದೆ. ಶ್ರಮ ಜೀವಿಗಳು ಹಾಗೂ ಮಹತ್ವಾಕಾಂಕ್ಷಿಗಳು ಆಗಿರುತ್ತಾರೆ. ಆದರೆ ಜೀವನದುದ್ದಕ್ಕೂ ನಿಮ್ಮ ಅಸಲಿ ವಯಸ್ಸಿಗಿಂತ ಸ್ವಲ್ಪ ಹೆಚ್ಚು ವಯಸ್ಸಾದಂಥ ಭಾವ ಇರುತ್ತದೆ. ಇನ್ನು ಶನಿಯು ಏಳನೇ ಮನೆಯನ್ನೂ ದೃಷ್ಟಿಸುವುದರಿಂದ ಇವರಿಗಿಂತ ವಯಸ್ಸಿನಲ್ಲಿ ಹಿರಿಯರಾದವರು ಪತ್ನಿಯಾಗಿ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮೂರನೇ ಮನೆಯ ಮೇಲೂ ದೃಷ್ಟಿ ಬೀರುವುದರಿಂದ ಸೋದರ ಸಂಬಂಧ ಚೆನ್ನಾಗಿರುವುದಿಲ್ಲ್.

ಲಗ್ನದಿಂದ ಎರಡನೇ ಮನೆಯಲ್ಲಿ ಶನಿಯಿದ್ದರೆ

ಲಗ್ನದಿಂದ ಎರಡನೇ ಮನೆಯಲ್ಲಿ ಶನಿಯಿದ್ದರೆ

ಈ ಸ್ಥಾನದಲ್ಲಿ ಶನಿ ಇದ್ದರೆ ಯಶಸ್ಸು ದೊರೆಯುವಂತೆ ಮಾಡುತ್ತಾನೆ. ಆದರೆ ಕುಟುಂಬದಿಂದ, ಅದರಲ್ಲೂ ತಾಯಿಯಿಂದ ದೂರ ಆಗುವಂತೆ ಮಾಡುತ್ತಾನೆ. ಮೂವತ್ನಾಲ್ಕನೇ ವಯಸ್ಸಿನ ತನಕ ಕಾರು, ಮನೆ ಇತ್ಯಾದಿ ಆಸ್ತಿ ಖರೀದಿ ಮಾಡಲು ಕಷ್ಟವಾಗುತ್ತದೆ. ಮನೆಯಲ್ಲಿ ತುಂಬ ಕಠಿಣ ನಿಯಮಗಳನ್ನು ವಿಧಿಸಿ, ವಿಪರೀತ ಶಿಸ್ತಿನಿಂದ ಬೆಳೆಯುವಂತಾಗುತ್ತದೆ. ಇವರ ಬಗ್ಗೆ ತಾಯಿಯಾದವರು ತುಂಬ ಕಠಿಣವಾಗಿ ನಡೆದುಕೊಳ್ಳುತ್ತಾರೆ. ಶನಿ ದಶೆ ನಡೆಯುವ ಅವಧಿಯಲ್ಲಿ ಇವರಿಗೆ ಹೆಚ್ಚಿನ ಲಾಭ ಆಗುತ್ತದೆ.

ಲಗ್ನದಿಂದ ಮೂರನೇ ಮನೆಯಲ್ಲಿ ಶನಿಯಿದ್ದರೆ

ಲಗ್ನದಿಂದ ಮೂರನೇ ಮನೆಯಲ್ಲಿ ಶನಿಯಿದ್ದರೆ

ಈ ವ್ಯಕ್ತಿಗಳು ತಮಗೆ ತಾವೇ ಬಾಸ್ ನಂತೆ ಇರುತ್ತಾರೆ. ಕಾದಂಬರಿಕಾರರು, ಆರ್ ಜೆ ಹೀಗೆ ವೃತ್ತಿ ಅಥವಾ ವ್ಯಾಪಾರ ಕೈಗೊಳ್ಳುತ್ತಾರೆ. ಒಂದು ವೇಳೆ ಈ ಸ್ಥಾನದಲ್ಲಿ ಶನಿಯ ಜತೆಗೆ ರವಿ ಗ್ರಹ ಇದ್ದರೆ ತಂದೆಯ ಜತೆಗಿನ ಸಂಬಂಧ ಚೆನ್ನಾಗಿರುವುದಿಲ್ಲ. ಜತೆಗೆ ಸೋದರ-ಸೋದರಿ ಜತೆಗೆ ಸಂಬಂಧವೂ ಚೆನ್ನಾಗಿರುವುದಿಲ್ಲ. ಉನ್ನತ ಶಿಕ್ಷಣಕ್ಕೆ ನಾನಾ ಅಡ್ಡಿಗಳು ಬರುತ್ತವೆ. ಧಾರ್ಮಿಕ- ಆಧ್ಯಾತ್ಮಿಕ ಕಾರ್ಯಗಳಲ್ಲೂ ನಾನಾ ಅಡಚಣೆಗಳು ಬರುತ್ತವೆ.

ಲಗ್ನದಿಂದ ನಾಲ್ಕನೇ ಭಾವದ ಶನಿ

ಲಗ್ನದಿಂದ ನಾಲ್ಕನೇ ಭಾವದ ಶನಿ

ಮನೆಯಲ್ಲಿ ಶಿಸ್ತುಬದ್ಧ ವಾತಾವರಣ ಇರುತ್ತದೆ. ತಾಯಿ ಜತೆಗೆ ಬಾಂಧವ್ಯ ದೀರ್ಘ ಕಾಲ ಇರುವುದಿಲ್ಲ. ಅನಾರೋಗ್ಯ ಸಮಸ್ಯೆಗಳು ಬಹಳ ಕಾಡುವುದಿಲ್ಲ. ಜತೆಗೆ ಶತ್ರುಗಳ ವಿರುದ್ಧ ಕೈ ಮೇಲಾಗಿರುತ್ತದೆ. ಒಂದು ವೇಳೆ ಈ ಸ್ಥಾನದಲ್ಲಿ ಶನಿ ನೀಚನಾಗಿದ್ದರೆ ಮೂಳೆ ಹಾಗೂ ಸಂದು ನೋವುಗಳು ಕಾಣಿಸಿಕೊಳ್ಳಬಹುದು. ಇನ್ನು ಉದ್ಯೋಗ ಹಾಗೂ ವೃತ್ತಿ ಬದುಕಿನಲ್ಲಿ ಬೆಳೆಯಲು ಸಹಕಾರಿ ಆಗಿರುತ್ತದೆ.

ಲಗ್ನದಿಂದ ಐದನೇ ಮನೆಯಲ್ಲಿ ಶನಿ

ಲಗ್ನದಿಂದ ಐದನೇ ಮನೆಯಲ್ಲಿ ಶನಿ

ಈ ಸ್ಥಾನದಲ್ಲಿ ಶನಿಯಿದ್ದರೆ ಕ್ರಿಯಾತ್ಮಕತೆಗೆ ತಡೆ. ಜತೆಗೆ ಮದುವೆ, ಸಂತಾನ ವಿಚಾರ ತಡ ಆಗುತ್ತದೆ. ಒಂದು ವೇಳೆ ಶನಿಯು ಬುಧ ಅಥವಾ ಶುಕ್ರನ ಜತೆಗೆ ಇದ್ದರೆ ಕ್ರಿಯೇಟಿವಿಟಿ ಹೆಚ್ಚುತ್ತದೆ. ಪ್ರಬುದ್ಧ ಹಾಗೂ ಶಿಸ್ತುಬದ್ಧ ಸಂಗಾತಿ ಸಿಗುತ್ತಾರೆ. ಅನಿರೀಕ್ಷಿತವಾದ ಲಾಭಗಳನ್ನು ಪಡೆಯುತ್ತಾರೆ. ಈ ವ್ಯಕ್ತಿಗಳಿಗೆ ನಾಚಿಕೆ ಸ್ವಭಾವ ಇರುತ್ತದೆ.

ಲಗ್ನದಿಂದ ಆರನೇ ಸ್ಥಾನದಲ್ಲಿ ಶನಿ

ಲಗ್ನದಿಂದ ಆರನೇ ಸ್ಥಾನದಲ್ಲಿ ಶನಿ

ಇಲ್ಲಿ ಶನಿ ಗ್ರಹ ಇದ್ದರೆ ಶತ್ರುಗಳು ನಾಶವಾಗುತ್ತಾರೆ. ವಿರೋಧಿಗಳ ವಿರುದ್ಧ ಕೈ ಮೇಲಾಗುತ್ತದೆ. ಸರಿಯಾದ ಸಮಯಕ್ಕೆ ಉದ್ಯೋಗ- ವೃತ್ತಿ ಬದುಕಿನ ಏಳ್ಗೆ ಆಗುತ್ತದೆ. ದೀರ್ಘಾಯುಷ್ಯ ನೀಡುತ್ತದೆ. ಸಾಲ- ವ್ಯಾಜ್ಯಗಳ ವಿಚಾರವನ್ನು ಇವರು ತುಂಬ ಚೆನ್ನಾಗಿ ನಿರ್ವಹಿಸುತ್ತಾರೆ. ಒಂದು ವೇಳೆ ಶನಿ ನೀಚನಾಗಿದ್ದಲ್ಲಿ ಮೂಳೆ ಮತ್ತಿತರ ಆರೋಗ್ಯ ಸಮಸ್ಯೆ ಕಾಡುತ್ತದೆ. ವಿದೇಶಗಳಿಗೆ ಪ್ರಯಾಣ ಮಾಡುತ್ತಾರೆ. ಇವರು ಉದ್ಯೋಗಿಗಳಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು. ಮಾಲೀಕರಾಗುವ ಅವಕಾಶ ಕಡಿಮೆ. ಸೋದರ- ಸೋದರಿಯರ ನೆರವು ದೊರೆಯುತ್ತದೆ.

ಲಗ್ನದಿಂದ ಏಳರಲ್ಲಿ ಶನಿಯಿದ್ದರೆ

ಲಗ್ನದಿಂದ ಏಳರಲ್ಲಿ ಶನಿಯಿದ್ದರೆ

ಲಗ್ನದಿಂದ ಏಳನೇ ಮನೆ ತುಲಾ ರಾಶಿ ಆಗಿದ್ದು, ಅಲ್ಲೇ ಶನಿಯಿದ್ದರೆ ಬಹಳ ಉತ್ತಮ. ಇಲ್ಲದಿದ್ದರೆ ತುಂಬ ಗಂಭೀರ ಸ್ವಭಾವದ ಹಾಗೂ ವಿಪರೀತ ಶಿಸ್ತಿನ ಸಂಗಾತಿ ದೊರೆಯುತ್ತಾರೆ. ಈ ಸಂಬಂಧ ದೀರ್ಘಾವಧಿ ಇರುತ್ತದಾದರೂ ಪ್ರೀತಿ ಹಾಗೂ ಭಾವನೆಗಳಿಗೆ ಅವಕಾಶ ಇರುವುದಿಲ್ಲ. ತತ್ವಶಾಸ್ತ್ರ, ಉನ್ನತ ವಿದ್ಯಾಭ್ಯಾಸ ಮಾಡುವ ಅವಕಾಶ ಇರುತ್ತದೆ. ವ್ಯವಹಾರ ಬುದ್ಧಿ ಈ ಜನರು, ಹೆಚ್ಚಿನ ಪಕ್ಷ ಜನರ ಜತೆ ಬೆರೆಯುವುದಿಲ್ಲ. ಮನೆಯಲ್ಲಿ ಕೂಡ ನಿರ್ಬಂಧಗಳು ಇರುತ್ತವೆ.

ಲಗ್ನದಿಂದ ಎಂಟನೇ ಸ್ಥಾನದಲ್ಲಿ ಶನಿ ಸ್ಥಿತನಾಗಿದ್ದರೆ

ಲಗ್ನದಿಂದ ಎಂಟನೇ ಸ್ಥಾನದಲ್ಲಿ ಶನಿ ಸ್ಥಿತನಾಗಿದ್ದರೆ

ಲಗ್ನಕ್ಕೆ ಎಂಟರಲ್ಲಿ ಶನಿಯಿದ್ದರೆ ದೀರ್ಘಾಯುಷ್ಯವನ್ನು ನೀಡುವ ಜತೆಗೆ ದುರದೃಷ್ಟವನ್ನೂ ತರುತ್ತಾನೆ. ಈ ಸ್ಥಾನದಲ್ಲಿ ಶನಿ ಇದ್ದರೆ ಭೂಮಿಯ ಒಳ ಭಾಗದಲ್ಲಿನ ಕೆಲಸಗಳು, ಉದಾಹರಣೆಗೆ ಒಳಚರಂಡಿ ಕಾಮಗಾರಿ ಇತ್ಯಾದಿ ಮಾಡಿದರೆ ಲಾಭ ಆಗುತ್ತದೆ. ಇವರಿಗೆ ಕಷ್ಟಗಳು- ಸಮಸ್ಯೆಗಳು ತಡವಾಗಿ ಬರುತ್ತವೆ. ಜೀವನ ಸ್ಥಿರವಾಗಿರುತ್ತದೆ. ಜೀವನದ ಆರಂಭಿಕ ಹಂತದಲ್ಲೇ ಇವರು ಕುಟುಂಬದಿಂದ ದೂರ ಆಗುವ ಸಾಧ್ಯತೆ ಹೆಚ್ಚು. ಕುಟುಂಬಕ್ಕೆ ಸಂಬಂಧಿಸಿದ ರಹಸ್ಯವೊಂದು ಇರುತ್ತದೆ. ಶಿಕ್ಷಣದಲ್ಲಿ ಅಡೆತಡೆಗಳು ಹಾಗೂ ಸಂತಾನ ವಿಚಾರದಲ್ಲಿ ಸಮಸ್ಯೆಗಳಾಗುತ್ತವೆ.

ಲಗ್ನದಿಂದ ಒಂಬತ್ತರಲ್ಲಿ ಶನಿ

ಲಗ್ನದಿಂದ ಒಂಬತ್ತರಲ್ಲಿ ಶನಿ

ಕಾನೂನು-ಕಟ್ಟಲೆಯನ್ನು ಗೌರವಿಸುವ ಜನರಾಗಿರುತ್ತಾರೆ. ಧರ್ಮ, ಗುರು-ಹಿರಿಯರು, ಪೋಷಕರ ಬಗ್ಗೆ ಗೌರವ ಇರುತ್ತದೆ. ಆದರೆ ಬಾಲ್ಯದಲ್ಲೇ ತಂದೆಯಿಂದ ದೂರ ಆಗಬೇಕಾಗುತ್ತದೆ. ಶನಿ ದಶೆ ನಡೆಯುವಾಗ ಉತ್ತಮ ಫಲ ದೊರೆಯುತ್ತದೆ. ಉನ್ನತ ಶಿಕ್ಷಣದಲ್ಲಿ ತೊಂದರೆಗಳು ಎದುರಾಗುತ್ತವೆ. ಧಾರ್ಮಿಕ, ಆಧ್ಯಾತ್ಮಿಕ ಬರವಣಿಗೆಯಲ್ಲಿ ಅಸಕ್ತಿ ಹೆಚ್ಚಿರುತ್ತದೆ. ಸಾಲ, ಆಡೆತಡೆ ಹಾಗೂ ಅನಾರೋಗ್ಯ ಸಮಸ್ಯೆ ನಿವಾರಣೆ ಬೇಗ ಆಗುತ್ತದೆ.

ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಶನಿ

ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಶನಿ

ಉದ್ಯೋಗ ಅಥವಾ ವೃತ್ತಿ ಬದುಕು ಅದ್ಭುತವಾಗಿರುತ್ತದೆ. ಕಬ್ಬಿಣ, ಗಣಿಗಾರಿಕೆ ಹಾಗೂ ತೈಲಕ್ಕೆ ಸಂಬಂಧಿಸಿದ ಉದ್ಯೋಗ- ವೃತ್ತಿ ಚೆನ್ನಾಗಿ ಕೈ ಹಿಡಿಯುತ್ತದೆ. ಆದರೆ ಇತರ ಗ್ರಹಗಳ ಬೆಂಬಲವೂ ಇರಬೇಕು. ಸಾಮಾನ್ಯವಾಗಿ ಸರಕಾರಿ ಕೆಲಸ ದೊರೆಯುವ ಸಾಧ್ಯತೆ ಇರುತ್ತದೆ. ಯಾವುದೇ ಉದ್ಯೋಗ ಇದ್ದರೂ ಗಂಭೀರವಾಗಿ ತೊಡಗಿಕೊಳ್ಳುತ್ತಾರೆ. ಶ್ರಮಜೀವಿಗಳು, ಮಹತ್ವಾಕಾಂಕ್ಷಿಗಳಾಗಿ ಇರುತ್ತಾರೆ. ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವ ಅವಕಾಶಗಳು ದೊರೆಯುತ್ತವೆ. ಇವರಿಗೆ ದೊರೆಯುವ ಸಂಗಾತಿ ಕೂಡ ಉದ್ಯೋಗ- ವೃತ್ತಿ ಬದುಕಿನ ಬಗ್ಗೆ ಅಷ್ಟೇ ಗಂಭೀರವಾಗಿ ಇರುತ್ತಾರೆ. ಕೆಲಸ- ವೃತ್ತಿ ಕಾರಣಕ್ಕಾಗಿಯೇ ತಮ್ಮ ಮದುವೆಯನ್ನು ಮುಂದಕ್ಕೆ ಹಾಕುತ್ತಾರೆ.

ಲಗ್ನದಿಂದ ಹನ್ನೊಂದರಲ್ಲಿ ಶನಿ

ಲಗ್ನದಿಂದ ಹನ್ನೊಂದರಲ್ಲಿ ಶನಿ

ಶನಿಯ ಸ್ವ ಕ್ಷೇತ್ರವೋ ಉಚ್ಚ ಕ್ಷೇತ್ರವೋ ಅಥವಾ ಮಿತ್ರ ಕ್ಷೇತ್ರವೋ ಅಗಿದ್ದಲ್ಲಿ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ದೊಡ್ಡ ಪ್ರಮಾಣದ ಆಸ್ತಿ, ಸಮಾಜದಲ್ಲಿ ಉತ್ತಮ ಸ್ಥಾನ-ಮಾನ ದೊರೆಯುತ್ತದೆ. ಜಾತಕದಲ್ಲಿ ಶುಕ್ರನ ಜತೆಗೆ ಚಂದ್ರ ಜತೆಗೆ ಇದ್ದು, ಅಲ್ಲೇ ಶನಿಯೂ ಇದ್ದರೆ ಯಶಸ್ಸು, ಅತ್ಯುನ್ನತ ಸ್ಥಾನ ಮಾನ ದೊರೆಯುತ್ತದೆ. ಒಂದು ವೇಳೆ ಶನಿ ನೀಚನಾಗಿದ್ದರೆ ಜೂಜು, ಸಟ್ಟಾ ವ್ಯವಹಾರದ ಮೂಲಕ ಹಣ ಗಳಿಸುತ್ತಾರೆ. ಇದರಿಂದ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ. ಸಮಾಜದಲ್ಲಿ ಅಪಾರ ಸಂಖ್ಯೆಯ ಸ್ನೇಹಿತರು ಇರುತ್ತಾರೆ. ಕುಜ ಅಥವಾ ಪಾಪ ಗ್ರಹಗಳು ಯಾವುದಾದರೂ ಗ್ರಹ ಲಗ್ನದಲ್ಲಿ ಇದ್ದಲ್ಲಿ ಆರೋಗ್ಯ ಸಮಸ್ಯೆಗಳು ಆಗುತ್ತವೆ. ಮಕ್ಕಳು ಮತ್ತು ತಮ್ಮ ಕ್ರಿಯಾತ್ಮಕ ಆಲೋಚನೆ ಮೂಲಕ ಅಪಾರ ಗಳಿಕೆ ಪಡೆಯುತ್ತಾರೆ.

ಲಗ್ನದಿಂದ ಹನ್ನೆರಡನೇ ಮನೆ ಶನಿ

ಲಗ್ನದಿಂದ ಹನ್ನೆರಡನೇ ಮನೆ ಶನಿ

ಈ ಸ್ಥಾನ ಶನಿಗೆ ಉತ್ತಮವಲ್ಲ. ಇದರಿಂದ ಒತ್ತಡ ಹೆಚ್ಚಾಗುತ್ತದೆ. ಆಸ್ತಿ ಕಳೆದುಕೊಳ್ಳುತ್ತಾರೆ. ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನೂ ಉಳಿಸಿಕೊಳ್ಳಲು ಆಗುವುದಿಲ್ಲ. ಒಂದು ಕಡೆಯಿಂದ ಆಸ್ತಿ ಸಂಪಾದನೆಗೆ ಶ್ರಮ ಪಡುತ್ತಿದ್ದರೂ ಅದನ್ನು ಉಳಿಸಿಕೊಳ್ಳಲು ಆಗುವುದಿಲ್ಲ್. ಆಧ್ಯಾತ್ಮಿಕ ಚಿಂತನೆಗಳು ಬರುತ್ತವೆ. ಅದು ಕೂಡ ತಡವಾಗಿ ಬರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ವಿದೇಶಿ ಮೂಲದಿಂದ ಅದ್ಭುತವಾದ ಗಳಿಕೆಯನ್ನೂ ನೀಡುತ್ತದೆ. ವಿರೋಧಿ ಪಾಳಯ್ದ ವಿರುದ್ಧ ಇವರ ಕೈ ಮೇಲಾಗುತ್ತದೆ. ಶನಿ ಮಹರ್ದಶಾ ನಡೆಯುವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

English summary
Astrology : What are the results of Saturn according to position from ascendant explained by astrologer Shankar Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X