ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ: ವಾಹನ ಖರೀದಿ ಮಾಡುವಾಗ ಏನೆಲ್ಲ ಗಮನಿಸಬೇಕು?

By ಶ್ರೀನಿವಾಸ ಗುರೂಜಿ
|
Google Oneindia Kannada News

ಹೊಸ ವರ್ಷದ ಎರಡನೇ ತಿಂಗಳು ಮುಗಿಯುತ್ತಾ ಬಂದು, ಬಿಎಸ್ 6 ಎಂಜಿನ್ ನ ವಾಹನಗಳು ಮಾರುಕಟ್ಟೆಗೆ ಬರಲು ಆರಂಭಿಸುತ್ತಿದ್ದಂತೆ "ಯಾವ ಬಣ್ಣದ ವಾಹನ ಖರೀದಿಸಬಹುದು?" ಎಂದು ಕೇಳಿಕೊಂಡು ಬರುವವರು ಹೆಚ್ಚಾಗಿದ್ದಾರೆ. ಹಾಗೆ ಕೇಳುವವರಿಗೆ ತಮ್ಮ ರಾಶಿಯು ಗೊತ್ತಿರುತ್ತದೆ. ಅದಕ್ಕೆ ಆಗಿಬರುವ ಬಣ್ಣ ಯಾವುದು ಎಂದು ತಿಳಿದುಕೊಂಡು, ಆ ನಂತರ ಖರೀದಿ ಮಾಡಬೇಕು ಎಂಬುದು ಸಹ ಗೊತ್ತಿರುತ್ತದೆ.

ಆ ಕಾರಣಕ್ಕೆ ಯಾವ ರಾಶಿಯವರು ಯಾವ ಬಣ್ಣದ ವಾಹನವನ್ನು ಖರೀದಿಸಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ಮೊದಲಿಗೆ ಹೇಳಿಬಿಡುತ್ತೀನಿ. ಆ ನಂತರ ಮುಖ್ಯವಾದ ವಿಚಾರಗಳು ಕೆಲವನ್ನು ನಿಮಗೆ ತಿಳಿಸುತ್ತೀನಿ.

Astrology: What Are The Points To Consider While Purchasing Vehicle?

ಮೇಷ- ಕೆಂಪು, ಬಿಳಿ

ವೃಷಭ- ಬಿಳಿ

ಮಿಥುನ- ಬಿಳಿ, ಹಸಿರು

ಕರ್ಕಾಟಕ- ಕೆಂಪು, ಬಿಳಿ

ಸಿಂಹ- ಹಳದಿ, ಬಿಳಿ

ಕನ್ಯಾ- ಬಿಳಿ, ನೀಲಿ, ಸಿಲ್ವರ್

ತುಲಾ- ನೀಲಿ, ಬಿಳಿ, ಕೆಂಪು

ವೃಶ್ಚಿಕ- ಕೆಂಪು, ಬಿಳಿ

ಧನುಸ್ಸು- ಕೆಂಪು, ಹಳದಿ, ಬಿಳಿ

ಮಕರ- ನೀಲಿ, ಬಿಳಿ

ಕುಂಭ- ನೀಲಿ, ಕಪ್ಪು

ಮೀನ- ಬಿಳಿ, ಹಳದಿ ಅಥವಾ ಕೆಂಪು

ಜ್ಯೋತಿಷ್ಯ: ಮಕ್ಕಳೇಕೆ ತಂದೆ-ತಾಯಿಯ ಮಾತು ಕೇಳುವುದಿಲ್ಲ? ಇಲ್ಲಿದೆ ಉತ್ತರಜ್ಯೋತಿಷ್ಯ: ಮಕ್ಕಳೇಕೆ ತಂದೆ-ತಾಯಿಯ ಮಾತು ಕೇಳುವುದಿಲ್ಲ? ಇಲ್ಲಿದೆ ಉತ್ತರ

ಈಗ ಮುಖ್ಯ ವಿಚಾರಕ್ಕೆ ಬರೋಣ. ವಾಹನ ಸೌಖ್ಯ ಎಂಬುದು ಎಲ್ಲರ ಜಾತಕದಲ್ಲೂ ಇರುವುದಿಲ್ಲ. ಆದ್ದರಿಂದ ಜನ್ಮ ಜಾತಕವನ್ನು ತೋರಿಸಿ, ಆ ನಂತರ ಮುಂದಿನ ನಿರ್ಧಾರ ಕೈಗೊಳ್ಳಿ. ಉದಾಹರಣೆಗೆ ಲಗ್ನದ ಚತುರ್ಥ ಸ್ಥಾನ ಅನುಕೂಲವಾಗಿಲ್ಲದಿದ್ದಲ್ಲಿ ವಾಹನ ಖರೀದಿ ಮಾಡಿದರೂ ಅದು ಅವರ ಸುಖಕ್ಕೆ ಇರುವುದಿಲ್ಲ. ಸ್ನೇಹಿತರು, ಸಂಬಂಧಿಗಳು ಅದರಿಂದ ಪ್ರಯೋಜನ ಪಡೆಯುತ್ತಾರೆ.

ಇನ್ನು ಗ್ರಹದ ದೃಷ್ಟಿಗಳನ್ನು ಗಮನಿಸಬೇಕು. ಕೆಲವರಿಗೆ ಪದೇ ಪದೇ ಅಪಘಾತ, ರಿಪೇರಿ ಬರುತ್ತದೆ. ಅದು ಜಾತಕದಲ್ಲಿನ ಗ್ರಹ ಸ್ಥಿತಿಯ ಪರಿಣಾಮ. ಗೋಚಾರವನ್ನು ಸಹ ಈ ವಿಚಾರದಲ್ಲಿ ಸೂಕ್ಷ್ಮವಾಗಿ ಗಮನಿಸಬೇಕು. ಜಾತಕದಲ್ಲಿ ಶನಿ ನೀಚವಾಗಿದ್ದು, ಗೋಚಾರದಲ್ಲಿ ಸಾಡೇಸಾತ್, ಪಂಚಮ, ಅಷ್ಟಮದಲ್ಲಿ ಸಂಚರಿಸುವಾಗ ವಾಹನ ಖರೀದಿ ಮಾಡದಿರುವುದೇ ಉತ್ತಮ.

ಜ್ಯೋತಿಷ್ಯ: ಅದೃಷ್ಟ ರತ್ನಗಳ ಅಡ್ಡಪರಿಣಾಮಗಳು ಹೇಗೆ ಇರುತ್ತವೆ ಗೊತ್ತೆ?ಜ್ಯೋತಿಷ್ಯ: ಅದೃಷ್ಟ ರತ್ನಗಳ ಅಡ್ಡಪರಿಣಾಮಗಳು ಹೇಗೆ ಇರುತ್ತವೆ ಗೊತ್ತೆ?

ಜಾತಕದಲ್ಲಿ ವಾಹನ ಸುಖ ಅನುಭವಿಸುವ ಯೋಗ ಇದ್ದರೆ ಅವರೇ ಖರೀದಿ ಮಾಡಬೇಕು ಅಂತಲೂ ಇಲ್ಲ. ಹೇಗಾದರೂ ವಾಹನದಲ್ಲಿ ಓಡಾಡುವ ಯೋಗ ಬಂದೇ ಬರುತ್ತದೆ. ಅದೇ ಜಾತಕದಲ್ಲಿ ಯೋಗ ಇಲ್ಲದಿದ್ದಲ್ಲಿ ಏನೂ ಪ್ರಯೋಜನ ಇಲ್ಲ.

ಇದು ಯಾಕೆ ಹೇಳಬೇಕಾಗಿದೆ ಅಂದರೆ, ಈಗೆಲ್ಲ ಕಾರೆಂದರೆ ಲಕ್ಷಾಂತರ ರುಪಾಯಿಯ ಮಾತು. ಅಷ್ಟೆಲ್ಲ ಹಣ ಹಾಕಿ ಅಥವಾ ಸಾಲ ತಂದು, ನಿಮ್ಮ ಪಾಲಿಗೆ ಅದರಲ್ಲಿ ಸುಖ ಇಲ್ಲ ಎಂದಾದರೆ ಹೇಗೆ? ಆದ್ದರಿಂದ ಸೂಕ್ತ ಜ್ಯೋತಿಷಿಗಳಲ್ಲಿ ಜಾತಕ ತೋರಿಸಿಕೊಂಡು, ಆ ನಂತರ ವಾಹನ ಖರೀದಿಸಿ. ನಿಮಗೆಲ್ಲ ಶುಭವಾಗಲಿ.

ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ ವೈಯಕ್ತಿಕವಾಗಿ ಭೇಟಿಗೆ ಮೊಬೈಲ್ ಫೋನ್ ಸಂಖ್ಯೆ 9886665656- 9886155755 ಸಂಪರ್ಕಿಸಿ.

English summary
Astrology tips to be followed while purchasing vehicle. Here is the complete details according to vedic astrology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X