ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Astrology Tips: ಮಾನಸಿಕ ಒತ್ತಡ ನಿವಾರಣೆಗೆ ಯಾವ ರಾಶಿಯವರು ಏನು ಮಾಡಬೇಕು?

By ಪಂಡಿತ್ ಶ್ರೀ ಗಣೇಶಕುಮಾರ್
|
Google Oneindia Kannada News

ಕೆಲಸದ ಒತ್ತಡವೋ ಸಾಂಸಾರಿಕ ಜಂಜಡವೋ ಒಟ್ಟಿನಲ್ಲಿ ಭಾರೀ ಒತ್ತಡ ಇದೆ ಅನ್ನಿಸುತ್ತಿದೆಯಾ? ಹೌದು, ಹೀಗೆ ಅನ್ನಿಸಿದರೆ ಏನು ಮಾಡಬೇಕು ಅನ್ನೋದು ಬಹಳ ಜನರ ಪ್ರಶ್ನೆಯಾಗಿದೆ. ಈಗ ನನ್ನ ಬಳಿ ಜ್ಯೋತಿಷ್ಯ ಕೇಳುವುದಕ್ಕೆ ಬರುವವರಲ್ಲಿ ಸಹ ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಇರುತ್ತದೆ.

ಆ ಸಮಯದಲ್ಲಿ ಮಾನಸಿಕವಾಗಿ ಬಹಳ ಕುಗ್ಗಿ ಹೋದಂತಾಗುತ್ತದೆ. ಆ ಕಾರಣಕ್ಕೆ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ ಎನ್ನುವವರು ಸಹ ಇದ್ದಾರೆ. ಈ ರೀತಿ ಸಮಸ್ಯೆಯನ್ನು ಎದುರಿಸುತ್ತಿರುವವರಿಗಾಗಿಯೇ ಕೆಲವು ಪರಿಹಾರಗಳನ್ನು ಈ ಲೇಖನದಲ್ಲಿ ಸೂಚಿಸಲಾಗುತ್ತಿದೆ.

2021 Money, Finance Horoscope: ಮೇಷದಿಂದ ಕನ್ಯಾ ಹಣಕಾಸು ಭವಿಷ್ಯ2021 Money, Finance Horoscope: ಮೇಷದಿಂದ ಕನ್ಯಾ ಹಣಕಾಸು ಭವಿಷ್ಯ

ನಿಮ್ಮ ರಾಶಿ ಯಾವುದು ಹಾಗೂ ರಾಶಿಯ ಅಧಿಪತಿ ಯಾವುದು ಅನ್ನೋದು ಗೊತ್ತಿದ್ದರೆ ಸಾಕು. ಇಲ್ಲಿರುವ ಪರಿಹಾರ ಮಾರ್ಗಗಳನ್ನು ಅನುಸರಿಸಿ ನೆಮ್ಮದಿ ಕಂಡುಕೊಳ್ಳಬಹುದು. ಚಂದ್ರನ ಸ್ಥಿತಿಯ ಆಧಾರದಲ್ಲಿ ಪರಿಹಾರ ತಿಳಿಸುತ್ತಿರುವುದರಿಂದ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳವರು ಹೇಗೆ ತಮ್ಮ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಬೇಕು ಎಂಬ ಬಗ್ಗೆ ವಿವರಣೆ ಇಲ್ಲಿದೆ. ಇನ್ನೇಕೆ ತಡ ಮಾಡುತ್ತೀರಿ, ಒತ್ತಡ ನಿವಾರಣೆಯ ಮಾರ್ಗಗಳನ್ನು ತಿಳಿದುಕೊಂಡು ಬಿಡಿ.

2021 Money and Finance Horoscope: ತುಲಾ- ಮೀನ ಹಣ ಭವಿಷ್ಯ2021 Money and Finance Horoscope: ತುಲಾ- ಮೀನ ಹಣ ಭವಿಷ್ಯ

ಶ್ರೀ ಪಂಚಮುಖಿ ಜ್ಯೋತಿಷ್ಯಂ, ಪಂಡಿತ್ ಶ್ರೀ ಗಣೇಶಕುಮಾರ್, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಸ್ತ್ರೀ ಪುರುಷ ಆಕರ್ಷಣೆ , ದಾಂಪತ್ಯ, ಪ್ರೇಮವಿಚಾರ , ಮಾನಸಿಕ, ಗೃಹಶಾಂತಿ, ಆರೋಗ್ಯ, ಹಣಕಾಸು, ಮಾಟಭಾದೆ, ಶತ್ರುಕಾಟ, ಅಲ್ಲದೇ ರಾಜಯೋಗವಶಗಳು, ಅಖಂಡಯೋಗವಶಗಳು ಇನ್ನಿತರ ನಿಮ್ಮ ಯಾವುದೇ ಕಠಿಣ, ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಪರಿಹಾರ ಶತಸಿದ್ದ . (ಫೋನಿನ ಮೂಲಕ ಪರಿಹಾರ) PH:-9880533337 ಮೈಸೂರು ಸರ್ಕಲ್ (ಸಿರಸಿ ವೃತ್ತ) ಚಾಮರಾಜಪೇಟೆ, ಬೆಂಗಳೂರು.

ಮೇಷ

ಮೇಷ

ನಿಮ್ಮ ರಾಶಿಯಲ್ಲಿ ಚಂದ್ರನ ಸ್ಥಿತಿ ಆರಾಮವಾಗಿ ಇರುತ್ತದೆ. ಏಕೆಂದರೆ ಮೇಷ ರಾಶ್ಯಾಧಿಪತಿಯಾದ ಕುಜ ಮತ್ತು ಚಂದ್ರ ಮಿತ್ರರು. ಮೇಷ ರಾಶಿಯ ವ್ಯಕ್ತಿಗಳಿಗೆ ಭಾವನಾತ್ಮಕವಾಗಿ ಒತ್ತಡ ಏರ್ಪಟ್ಟಲ್ಲಿ, ಕುಗ್ಗಿದಂತೆ ಅನಿಸಿದಲ್ಲಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಗಾರ್ಡನಿಂಗ್, ವಾಕಿಂಗ್, ವ್ಯಾಯಾಮ, ಯೋಗಾಸನ, ಟ್ರೆಕ್ಕಿಂಗ್, ಸೈಕ್ಲಿಂಗ್ ಇಂಥ ಚಟುವಟಿಕೆಗಳಿಂದ ಉತ್ಸಾಹ ಮರಳುತ್ತದೆ.

ವೃಷಭ

ವೃಷಭ

ನಿಮ್ಮ ರಾಶಿಯಲ್ಲಿ ಚಂದ್ರ ಉಚ್ಚ ಸ್ಥಿತಿ. ಮನಸ್ಸು ಸ್ಥಿರವಾಗಿ ಇರಬೇಕು ಅಂದರೆ, ರಾತ್ರಿ ವೇಳೆ ಒಳ್ಳೆ ನಿದ್ದೆ ಆಗಬೇಕು. ಹಾಗೆ ಪೂರ್ಣ ಪ್ರಮಾಣದಲ್ಲಿ ನಿದ್ದೆ ಬಂದಲ್ಲಿ ಮರು ದಿನ ಮನಸ್ಸು ಪ್ರಶಾಂತವಾಗಿ, ಉಲ್ಲಸಿತವಾಗಿ ಇರುತ್ತದೆ. ಸ್ಪಾಗೆ ತೆರಳುವುದು ಅಥವಾ ಒಂದೊಳ್ಳೆ ಊಟದಿಂದ ಸಹ ಇವರ ಮನಸ್ಸು ಉತ್ಸಾಹವಾಗುತ್ತದೆ.

ಮಿಥುನ

ಮಿಥುನ

ನಿಮ್ಮ ರಾಶಿಯ ಅಧಿಪತಿ ಬುಧ. ನಿಮಗೆ ಗೊತ್ತಿರಲಿ, ಬುಧನ ತಾಯಿ ಚಂದ್ರ ಎನ್ನುತ್ತಾರೆ. ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಮನಸ್ಸು ಉಲ್ಲಾಸಭರಿತ ಆಗಿರುತ್ತದೆ. ಸ್ನೇಹಿತ- ಸ್ನೇಹಿತೆಯರ ಜತೆಗೆ ಮಾತುಕತೆ ಆಡುತ್ತಾ ಸಮಯ ಕಳೆಯುವುದರಿಂದ ಹಾಗೂ ತಮ್ಮ ಮನಸಿನ ಭಾವನೆ ಹಂಚಿಕೊಳ್ಳುವುದರಿಂದ ಒತ್ತಡ ಕಡಿಮೆಯಾಗಿ, ಸಂತೋಷವಾಗಿ ಇರಬಹುದು.

ಕರ್ಕಾಟಕ

ಕರ್ಕಾಟಕ

ಈ ರಾಶಿಯ ಅಧಿಪತಿಯೇ ಚಂದ್ರ. ತಮ್ಮ ಸುತ್ತಲಿನ ವಾತಾವರಣ ಹಾಗೂ ಜನರ ಮೂಲಕವಾಗಿ ಈ ರಾಶಿಯವರು ಉತ್ತೇಜಿತಗೊಳ್ಳುತ್ತಾರೆ. ಇವರು ದಿನದಲ್ಲಿ ಸ್ವಲ್ಪ ಸಮಯವನ್ನಾದರೂ ತಮಗಾಗಿ ಮೀಸಲಿಡಬೇಕು. ಅಡುಗೆಯಂಥ ಚಟುವಟಿಕೆಯಲ್ಲಿ ಪಾಲ್ಗೊಂಡು, ಮಾನಸಿಕವಾಗಿ ಪ್ರಶಾಂತವಾಗಬೇಕು.

ಸಿಂಹ

ಸಿಂಹ

ಈ ರಾಶಿಯ ಅಧಿಪತಿ ರವಿ. ಇವರಿಗೆ ಪ್ರಬಲವಾದ ನಾಯಕತ್ವ ಗುಣ ಇರುತ್ತದೆ. ಅದನ್ನು ಬೆಳೆಸುವುದು ಮತ್ತು ಪ್ರೀತಿಯ ಅಗತ್ಯ ಇರುತ್ತದೆ. ಒಂದು ವೇಳೆ ಇವರ ಮನಸ್ಸು ಬೇಸರಗೊಂಡಾಗ ಆಪ್ತರು, ಅದರಲ್ಲೂ ಇವರನ್ನು ಬಹಳ ಪ್ರೀತಿಸುವಂಥ ಜನರ ಜತೆಗೆ ಸಮಯ ಕಳೆದಲ್ಲಿ ಮತ್ತೆ ಸಹಜವಾಗುತ್ತದೆ.

ಕನ್ಯಾ

ಕನ್ಯಾ

ಈ ರಾಶಿಯವರ ಅಧಿಪತಿ ಕೂಡ ಬುಧ. ಇವರು ಮಾಡುವ ಕೆಲಸದಲ್ಲಿ ಹೆಚ್ಚು ಶ್ರದ್ಧೆಯಿಂದ ತೊಡಗಿಕೊಳ್ಳುತ್ತಾರೆ. ಅಚ್ಚುಕಟ್ಟುತನ ಎದ್ದುಕಾಣುತ್ತದೆ. ಆದ್ದರಿಂದ ಇವರನ್ನು ಏಕಾಕಿತನ ಸಿಕ್ಕಾಪಟ್ಟೆ ಕಾಡುತ್ತದೆ. ಅಯ್ಯೋ, ಅದೇ ಕೆಲಸವೇ ಎಂದು ಬೇಸರ ಪಟ್ಟುಕೊಳ್ಳದೆ ಇವರೇನೋ ಮಾಡುತ್ತಾರೆ. ಆದರೆ ಯಾರ ಜತೆಗೂ ಬೆರೆಯುವುದಿಲ್ಲ. ಆದ್ದರಿಂದ ಮೆದುಳಿಗೆ ಹೆಚ್ಚು ಕೆಲಸ ನೀಡದ, ತಮಾಷೆಯ ಚಟುವಟಿಕೆಗಳಲ್ಲಿ ಇವರು ಪಾಲ್ಗೊಳ್ಳಬೇಕು.

ತುಲಾ

ತುಲಾ

ಶುಕ್ರನು ಈ ರಾಶಿಯ ಅಧಿಪತಿ. ಈ ರಾಶಿಯವರು ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಎಲ್ಲರ ಜತೆಗೆ ಚೆನ್ನಾಗಿರುತ್ತೇನೆ ಅಂದುಕೊಂಡರೆ ಅದು ಕಷ್ಟ. ಏಕೆಂದರೆ, ಕೆಲವು ಕೆಟ್ಟ ಕ್ಷಣ, ಸನ್ನಿವೇಶಗಳೂ ಇರುತ್ತವೆ. ಅಂಥ ಸಂದರ್ಭದಲ್ಲಿ ಬೇಸರ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕಲಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಇವರ ಮನಸ್ಸು ಪ್ರಫುಲ್ಲವಾಗಿರುತ್ತದೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಯ ಅಧಿಪತಿ ಕುಜ. ಯಾರ ಮೇಲಾದರೂ ಇವರು ನಂಬಿಕೆ ಇಡುವುದು ಬಲು ಕಷ್ಟ. ಯಾರ ಜತೆಗೂ ಸುಲಭವಾಗಿ ಬೆರೆಯುವುದಕ್ಕೆ ಸಾಧ್ಯವಿಲ್ಲ. ಆದರೆ ಇವರು ಯಾರನ್ನಾದರೂ ಒಮ್ಮೆ ನಂಬಿದಲ್ಲಿ ಶಾಶ್ವತವಾಗಿ ವಿಶ್ವಾಸ ಇಡುತ್ತಾರೆ. ಇವರು ಒತ್ತಡದಿಂದ ಹೊರಬರುವುದಕ್ಕೆ ಇರುವ ಮಾರ್ಗವೆಂದರೆ ಏಕಾಂತ. ಪ್ರಶಾಂತವಾಗಿ ಒಂದು ಕಡೆ ಕೂತು, ಸಮಯ ಕಳೆದುಬಂದಲ್ಲಿ ಮತ್ತೆ ಚೈತನ್ಯ ಬರುತ್ತದೆ.

ಧನುಸ್ಸು

ಧನುಸ್ಸು

ಈ ರಾಶಿಯ ಅಧಿಪತಿ ಗುರು. ಇವರು ಸ್ವಾತಂತ್ರ್ಯಪ್ರಿಯರು. ಯಾರಾದರೂ ವ್ಯಕ್ತಿಗಳು ಅಥವಾ ಜವಾಬ್ದಾರಿಗಳಿಗೆ ಕಟ್ಟು ಬೀಳುವುದನ್ನು ಇಷ್ಟಪಡದವರು. ಧನುಸ್ಸು ರಾಶಿಯವರು ಒತ್ತಡದಲ್ಲಿ ಇದ್ದಾಗ ಕಿರು ಪ್ರವಾಸ ಹೋಗಿಬರುವುದು ಉತ್ತಮ. ಕನಿಷ್ಠ ಕೆಲವು ಗಂಟೆಗಳ ಮಟ್ಟಿಗಾದರೂ ತಾವಿರುವಂಥ ಸ್ಥಳ ಬದಲಾವಣೆ ಮಾಡಬೇಕು. ಇದರಿಂದ ಅವರಿಗೆ ಬಹಳ ಸಹಾಯ ಆಗುತ್ತದೆ.

ಮಕರ

ಮಕರ

ಈ ರಾಶಿಯ ಅಧಿಪತಿ ಶನಿ. ಇವರು ಕಠಿಣ ಪರಿಶ್ರಮಿಗಳು. ತಲೆಮಾರು ತಲೆಮಾರುಗಳು ನೆನಪಿಟ್ಟುಕೊಳ್ಳುವಂಥ ಅದ್ಭುತಗಳನ್ನು ಸೃಷ್ಟಿಸಬೇಕು ಎಂದು ಹಂಬಲಿಸುತ್ತಾರೆ. ಈ ರಾಶಿಯವರು ಒತ್ತಡವನ್ನು ದೂರ ಮಾಡಿಕೊಳ್ಳಬೇಕು ಅಂದರೆ, ನಿತ್ಯವೂ ತಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳುವಂಥ ಪರಿಪಾಠ ಬೆಳೆಸಿಕೊಳ್ಳಬೇಕು. ಕೆಲಸಗಳಲ್ಲೇ ಕಳೆದು ಹೋಗುವ ಒತ್ತಡವನ್ನು ದೂರ ಮಾಡಿಕೊಳ್ಳುವ ವಿಧಾನ ಅದು.

ಕುಂಭ

ಕುಂಭ

ಈ ರಾಶಿಯ ಅಧಿಪತಿ ಕೂಡ ಶನಿ. ಬಹಳ ಹೊಂದಾಣಿಕೆ ಮಾಡಿಕೊಡು ಹೋಗುವಂಥ ಸ್ವಭಾವ ಇರುವಂಥವರು ಇವರು. ಬಹುತೇಕ ಸೇವಾ ವಲಯದಲ್ಲಿ ಅಥವಾ ಇತರರಿಗೆ ಸಹಾಯ ಮಾಡುವಂಥ ಕೆಲಸದಲ್ಲೇ ಇವರು ಇರುತ್ತಾರೆ. ಈ ರಾಶಿಯವರಲ್ಲಿ ಮಗುವಿನ ಕುತೂಹಲ, ಆಸೆಗಳು ಇರುತ್ತವೆ. ಸಣ್ಣ- ಪುಟ್ಟ ಸಾಹಸ ಕಾರ್ಯಗಳು ಸಹ ಉತ್ಸಾಹ ಹೆಚ್ಚಿಸುತ್ತವೆ.

ಮೀನ

ಮೀನ

ಈ ರಾಶಿಯ ಅಧಿಪತಿ ಗುರು. ಇವರು ಮಹತ್ವಾಕಾಂಕ್ಷಿಗಳು. ಆ ಎತ್ತರದಿಂದ ಇವರನ್ನು ಕೆಳಗೆ ಇಳಿಸಿ, ನೆಲದ ಮೇಲೆ ನಡೆದಾಡುವಂತೆ ಮಾಡುವುದು ಸಹ ಕಷ್ಟ. ತಮ್ಮ ಸುತ್ತ ಇರುವವರ ಬಗ್ಗೆ ಅತೀವ ಕಾಳಜಿ ತೋರಿಸುತ್ತಾರೆ. ಈಜು ಅಥವಾ ಸ್ನಾನದಿಂದ ಇವರ ಒತ್ತಡ ನಿವಾರಣೆ ಆಗುತ್ತದೆ.

English summary
Here is the astrology tips to Aries to Pisces zodiac signs to overcome stress. Follow these guidelines and get rid of professional and personal problem tension.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X