ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಲಾ ನಕ್ಷತ್ರದಲ್ಲಿ ಹುಟ್ಟಿದವರ ಯೋಗಾಯೋಗ, ಶಾಂತಿ-ಪರಿಹಾರಗಳು

By ಹರಿ ಶಾಸ್ತ್ರಿ
|
Google Oneindia Kannada News

Recommended Video

Moola Nakshatra : ಮೂಲ ನಕ್ಷತ್ರದ ಬಗ್ಗೆ ಮಾಹಿತಿಗಳನ್ನ ನೀಡಿದ ಪ್ರಖ್ಯಾತ ಜ್ಯೋತಿಷಿಗಳು | Oneindia Kannada

ಈ ದಿನ ಮೂಲಾ ನಕ್ಷತ್ರದಲ್ಲಿ ಜನನ ಆದವರ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಬಹಳ ಜನರ ಪ್ರಶ್ನೆ ಏನೆಂದರೆ, ನನ್ನ ಮಗಳು ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದಾಳೆ. ಅವಳಿಗೆ ಮದುವೆ ಆಗುವುದಿಲ್ಲವಾ ಎಂದು ಕೇಳಿಕೊಂಡು ಬರುತ್ತಾರೆ. ನಕ್ಷತ್ರ ಜನನ ದೋಷ ವಿಚಾರಕ್ಕೆ ಬಂದರೆ ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಗಂಡುಮಕ್ಕಳಿಗೂ ಹೆಣ್ಣುಮಕ್ಕಳಿಗೂ ಇಬ್ಬರಿಗೂ ಬರುತ್ತದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗಂಡು ಮಕ್ಕಳ ಪೋಷಕರಿದ್ದರೆ ನೆನಪಿಟ್ಟುಕೊಳ್ಳಿ; ಯಾವ ಕಾರಣಕ್ಕೂ ಮೂಲಾ ನಕ್ಷತ್ರದ ಹೆಣ್ಣು ಮಕ್ಕಳನ್ನು ಕಡೆಗಣಿಸಬೇಡಿ, ದೂಷಣೆ ಮಾಡಬೇಡಿ. ಕೇವಲ ಜನನ ಕಾಲದ ನಕ್ಷತ್ರದ ಆಧಾರದಲ್ಲಿ ಇಡೀ ಜೀವನವನ್ನು ಹಾಗೂ ಅದೃಷ್ಟವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆ ನಕ್ಷತ್ರದ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ದೋಷ ಬರಬಹುದೇ ಹೊರತು ಇಡೀ ಜೀವನ ನಿರ್ಧರಿಸುವಂಥ ಪ್ರಭಾವ ಬೀರುವುದಿಲ್ಲ.

ಯುಗಾದಿ ವಿಶೇಷ: ಮೇಷದಿಂದ ಮೀನ ರಾಶಿ ತನಕ ಯಾರಿಗೆ, ಯಾವ ಫಲ?ಯುಗಾದಿ ವಿಶೇಷ: ಮೇಷದಿಂದ ಮೀನ ರಾಶಿ ತನಕ ಯಾರಿಗೆ, ಯಾವ ಫಲ?

ಮೂಲಾ ನಕ್ಷತ್ರಕ್ಕೂ ಮೊದಲು ಬರುವುದು ಜ್ಯೇಷ್ಠಾ ನಕ್ಷತ್ರ. ಆ ನಕ್ಷತ್ರದ ಕೊನೆಯ ಭಾಗದ ಇಪ್ಪತ್ನಾಲ್ಕು ನಿಮಿಷದಲ್ಲಿ ಹುಟ್ಟಿದ್ದರೆ ಅಥವಾ ಮೂಲಾ ನಕ್ಷತ್ರದ ಆರಂಭದ ಇಪ್ಪತ್ನಾಲ್ಕು ನಿಮಿಷದಲ್ಲಿ ಜನಿಸಿದ್ದರೆ ಇದನ್ನು 'ಅಭುಕ್ತಿ ಮೂಲ' ಎಂದು ಕರೆಯುತ್ತಾರೆ.

ಈ ಹೆಣ್ಣುಮಕ್ಕಳನ್ನು ಮದುವೆ ಆಗುವುದರಲ್ಲಿ ಸಮಸ್ಯೆಗಳಿಲ್ಲ

ಈ ಹೆಣ್ಣುಮಕ್ಕಳನ್ನು ಮದುವೆ ಆಗುವುದರಲ್ಲಿ ಸಮಸ್ಯೆಗಳಿಲ್ಲ

ಮೂಲಾ ನಕ್ಷತ್ರದ ಲೋಕವಾಸ ಫಲ ಹೇಗಿರುತ್ತದೆ ಅಂದರೆ, ಆಷಾಢ, ಭಾದ್ರಪದ ಹಾಗೂ ಆಶ್ವೀಜ ಮಾಸದಲ್ಲಿ, ವೃಷಭ, ಸಿಂಹ, ವೃಶ್ಚಿಕ ಅಥವಾ ಕುಂಭ ಲಗ್ನದಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ರಾಜ್ಯ ಪ್ರಾಪ್ತಿ ಆಗುತ್ತದೆ. ಇನ್ನು ಇದು ಸರಸ್ವತಿ ದೇವಿಯ ನಕ್ಷತ್ರ. ಈಗ ತಿಳಿಸಿದ ಮಾಸ, ಲಗ್ನದಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ಯಾವ ದೋಷವೂ ಇರುವುದಿಲ್ಲ. ಇಂಥ ಹೆಣ್ಣುಮಕ್ಕಳನ್ನು ಮದುವೆ ಆದರೆ ಯಾವುದೇ ತೊಂದರೆಗಳಿಲ್ಲ.

ಸದಾ ಕಾಲ ಧನ ಪ್ರಾಪ್ತಿ ಆಗುತ್ತದೆ

ಸದಾ ಕಾಲ ಧನ ಪ್ರಾಪ್ತಿ ಆಗುತ್ತದೆ

ಚೈತ್ರ, ಶ್ರಾವಣ, ಕಾರ್ತೀಕ, ಪುಷ್ಯ ಮಾಸಗಳಲ್ಲಿ ಮೇಷ, ಕರ್ಕಾಟಕ, ಧನುಸ್ಸು, ಮಕರ ಲಗ್ನಗಳಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆಗಳು ಆಗುತ್ತವೆ. ಈ ಮಾಸ ಹಾಗೂ ಲಗ್ನಗಳಲ್ಲಿ ಜನಿಸಿದ ಮೂಲಾ ನಕ್ಷತ್ರದವರು ಜ್ಯೋತಿಷಿಗಳಲ್ಲಿ ತಮ್ಮ ಜಾತಕವನ್ನು ತೋರಿಸಿ, ಸುಲಭ ಪರಿಹಾರ ಮಾಡಿಕೊಳ್ಳಬಹುದು. ವೈಶಾಖ, ಜ್ಯೇಷ್ಠಾ, ಮಾರ್ಗಶಿರ, ಫಾಲ್ಗುಣ ಮಾಸಗಳಲ್ಲಿ, ಮಿಥುನ, ಕನ್ಯಾ, ತುಲಾ ಅಥವಾ ಮೀನ ಲಗ್ನದಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ವಿಶೇಷವಾದ ಅನುಕೂಲಗಳು ಆಗುತ್ತವೆ. ಸದಾ ಕಾಲ ಧನ ಪ್ರಾಪ್ತಿ ಆಗುತ್ತದೆ. ಸಂಪೂರ್ಣ ವಿದ್ಯಾವಂತರಾಗುತ್ತಾರೆ. ಯಾವುದೇ ದೋಷವಿಲ್ಲ. ಆದರೂ ನವಗ್ರಹ, ನಕ್ಷತ್ರ ಶಾಂತಿ ಮಾಡಿಸಿಕೊಳ್ಳುವುದು ಉತ್ತಮ.

ಮೂಲಾ ನಕ್ಷತ್ರದ ಯಾವ ಪಾದದಲ್ಲಿ ಜನಿಸಿದರೆ ಏನು ಫಲ?

ಮೂಲಾ ನಕ್ಷತ್ರದ ಯಾವ ಪಾದದಲ್ಲಿ ಜನಿಸಿದರೆ ಏನು ಫಲ?

ಇನ್ನು ಮೂಲಾ ನಕ್ಷತ್ರದಲ್ಲಿ ದೋಷ ಇರುವಂಥವರಿಗೆ ಏನಾಗುತ್ತದೆ ಎಂಬುದನ್ನು ತಿಳಿಯುವುದಾದರೆ, ಹೆಣ್ಣಾಗಲಿ- ಗಂಡಾಗಲಿ ಅಗತ್ಯ ದೋಷವನ್ನು ನಿವಾರಣೆ ಮಾಡಿಕೊಳ್ಳಬೇಕು. ಅದಕ್ಕೂ ಮುನ್ನ ಕಡ್ಡಾಯವಾಗಿ ಜಾತಕ ವಿಶ್ಲೇಷಣೆ ಮಾಡಲೇಬೇಕು. ದೋಷ ಇದ್ದಲ್ಲಿ ಮೊದಲಿಗೆ ತಂದೆಗೆ ಸಮಸ್ಯೆ ಆಗುತ್ತದೆ. ಗೋಮುಖ ಪ್ರಸವ ಶಾಂತಿ ಎಂಬುದಿದೆ. ಅದನ್ನು ಮಾಡಿಸಿಕೊಳ್ಳಬೇಕು. ಆ ಶಾಂತಿಯನ್ನು ಮಾಡಿಸಿಕೊಳ್ಳುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ. ಕೆಲವರಿಗೆ ನಕ್ಷತ್ರ ಹೋಮವನ್ನು ಸಹ ಮಾಡಿಸಬಹುದು. ಆರ್ಥಿಕವಾಗಿ ಶಕ್ತಿ ಇದ್ದರೆ ಗೋದಾನವನ್ನು ಮಾಡಿ. ಅನ್ನದಾನ ಮಾಡಿದರೂ ಉತ್ತಮವಾದ ಫಲ ನೀಡುತ್ತದೆ.

ಈ ಮಂತ್ರ ಜಪಿಸಿ, ವಿವಾಹ ದೋಷ ನಿವಾರಿಸಿಕೊಳ್ಳಿ

ಈ ಮಂತ್ರ ಜಪಿಸಿ, ವಿವಾಹ ದೋಷ ನಿವಾರಿಸಿಕೊಳ್ಳಿ

ಮೂಲಾ ನಕ್ಷತ್ರದಲ್ಲಿ ಜನಿಸಿದ ಮಕ್ಕಳಿಗೆ ಯಾವ ರೀತಿಯ ಸಮಸ್ಯೆ ಆಗುತ್ತದೆ ಅಂದರೆ, ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಅಥವಾ ತೊಂದರೆಗಳು ಕಾಣಿಸಿಕೊಳ್ಳಬಹುದು. ಜೀವನ ಪೂರ್ತಿ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿರುತ್ತದೆ. ಮೂಲಾ ನಕ್ಷತ್ರ ಒಂದನೇ ಪಾದದಲ್ಲಿ ಜನಿಸಿದ್ದರೆ ತಂದೆಗೆ ದೋಷ, ಎರಡನೇ ಪಾದವಾದರೆ ತಾಯಿಗೆ ದೋಷ, ಮೂರನೇ ಪಾದದಲ್ಲಿ ಜನಿಸಿದವರು ಬಹಳ ಕಷ್ಟ ಅನುಭವಿಸುತ್ತಾರೆ. ನಾಲ್ಕನೇ ಪಾದಕ್ಕೆ ಯಾವುದೇ ದೋಷ ಇರುವುದಿಲ್ಲ. ಏನೂ ಭಯಪಡುವ ಅಗತ್ಯ ಇಲ್ಲ. ನಿಮ್ಮ ಮಕ್ಕಳದು, ಸ್ನೇಹಿತರದು, ಸಂಬಂಧಿಗಳದು.. ಹೀಗೇ ಯಾರದೇ ಮೂಲಾ ನಕ್ಷತ್ರವಾದರೂ ಅವರಿಗೆ ಈ ಮಾಹಿತಿ ತಲುಪಿಸಿ. ಮದುವೆಗೆ ಸಂಬಂಧಿಸಿದಂತೆ ತೊಂದರೆಗಳು ಆಗುತ್ತಿದ್ದಲ್ಲಿ ಸ್ವಯಂವರಪಾರ್ವತಿ ಜಪ ಮಾಡಿಸಿ. "ಓಂ ಹ್ರೀಂ ಯೋಗಿನಿ ಯೋಗಿನಿ ಯೋಗೇಶ್ವರಿ ಯೋಗೇಶ್ವರಿ ಯೋಗ ಭಯಂಕರಿ ಸಕಲ ಸ್ಥಾವರಸ್ಯ ಜಂಗಮ ಮುಖ ಹೃದಯಂ ಮಮ ವಶಂ ಆಕರ್ಷಯ ಆಕರ್ಷಯ" ಈ ಮಂತ್ರವನ್ನು ನಿತ್ಯ ಜಪ ಮಾಡಿದರೆ ಎಷ್ಟು ದೊಡ್ಡ ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ. ಶೀಘ್ರ ವಿವಾಹ ಆಗುತ್ತದೆ.

ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.

English summary
Astrology special: Moola nakshatra yogas and remedial measures for doshas explained by well known astrologer Hari Shastri guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X