ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ ಲೇಖನ: ಗ್ರಹಗಳು ಉತ್ತಮ ಫಲ ನೀಡುವ ಸಮಯ ಯಾವುದು?

By ಪಂಡಿತ್ ಶ್ರೀ ಗಣೇಶಕುಮಾರ್
|
Google Oneindia Kannada News

ಜ್ಯೋತಿಷ್ಯದಲ್ಲಿ ಗೋಚಾರ ಹಾಗೂ ದಶಾ- ಭುಕ್ತಿಗಳ ಮಹತ್ವವನ್ನು ವಿವರಿಸುವಂಥ ಲೇಖನ ಇದು. ಯಾವುದೇ ವ್ಯಕ್ತಿಯ ಭವಿಷ್ಯ ವಿಶ್ಲೇಷಣೆಗೆ ಜನ್ಮ ಜಾತಕ ಬಹಳ ಮುಖ್ಯ. ಎಷ್ಟೋ ಸಲ ಗೋಚಾರ (ಪ್ರಸ್ತುತ ಗ್ರಹಗಳ ಸಂಚಾರ) ತುಂಬಾ ಚೆನ್ನಾಗಿರುತ್ತದೆ. ಆದರೆ ತುಂಬ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ಅಯ್ಯೋ, ಗೋಚಾರ ಚೆನ್ನಾಗಿದೆ ಅಂತಾರೆ. ಆದರೂ ತೀರಾ ಹಿಂಸೆ ಅನುಭವಿಸುತ್ತಿದ್ದೇನೆ, ಯಾವುದೇ ಕೆಲಸದಲ್ಲೂ ಯಶಸ್ಸು ಕಾಣುತ್ತಿಲ್ಲ ಎಂದು ಅಲವತ್ತುಕೊಳ್ಳುವವರೇ ಹೆಚ್ಚು.

ಏಕೆ ಹೀಗಾಗುತ್ತದೆ? ಗೋಚಾರದ ಜತೆಗೆ ಏನು ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಈ ಲೇಖನದ ಮೂಲಕ ನಿಮಗೆ ತಿಳಿಸುತ್ತೇನೆ.

ಶ್ರೀ ಪಂಚಮುಖಿ ಜ್ಯೋತಿಷ್ಯಂ, ಪಂಡಿತ್ ಶ್ರೀ ಗಣೇಶಕುಮಾರ್, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಸ್ತ್ರೀ ಪುರುಷ ಆಕರ್ಷಣೆ , ದಾಂಪತ್ಯ, ಪ್ರೇಮವಿಚಾರ , ಮಾನಸಿಕ, ಗೃಹಶಾಂತಿ, ಆರೋಗ್ಯ, ಹಣಕಾಸು, ಮಾಟಭಾದೆ, ಶತ್ರುಕಾಟ, ಅಲ್ಲದೇ ರಾಜಯೋಗವಶಗಳು, ಅಖಂಡಯೋಗವಶಗಳು ಇನ್ನಿತರ ನಿಮ್ಮ ಯಾವುದೇ ಕಠಿಣ, ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಪರಿಹಾರ ಶತಸಿದ್ದ . (ಫೋನಿನ ಮೂಲಕ ಪರಿಹಾರ) PH:-9880533337 ಮೈಸೂರು ಸರ್ಕಲ್ (ಸಿರಸಿ ವೃತ್ತ) ಚಾಮರಾಜಪೇಟೆ, ಬೆಂಗಳೂರು.

ಆರು ಹಾಗೂ ಒಂಬತ್ತನೇ ಮನೆಯ ಫಲ

ಆರು ಹಾಗೂ ಒಂಬತ್ತನೇ ಮನೆಯ ಫಲ

ಒಂದು ಉದಾಹರಣೆ ತೆಗೆದುಕೊಳ್ಳಿ. ಒಬ್ಬ ವ್ಯಕ್ತಿಯದು ಮೀನ ರಾಶಿ ಹಾಗೂ ಕರ್ಕಾಟಕ ಲಗ್ನ ಹಾಗೂ ಸದ್ಯಕ್ಕೆ ಗುರು ದಶೆ ನಡೆಯುತ್ತಿದೆ ಎಂದಿಟ್ಟುಕೊಳ್ಳಿ. ಗೋಚಾರದ ಪ್ರಕಾರ, ಹನ್ನೊಂದನೇ ಮನೆಯಲ್ಲಿ ಗುರು- ಶನಿ, ಮೂರರಲ್ಲಿ ರಾಹು, ಒಂಬತ್ತರಲ್ಲಿ ಕೇತು ಸಂಚಾರ ನಡೆಯುತ್ತಿದೆ. ಗುರು ದಶೆ ಅಂದರೆ, ಕರ್ಕಾಟಕ ರಾಶಿಗೆ ಆರು ಮತ್ತು ಒಂಬತ್ತನೆ ಸ್ಥಾನಾಧಿಪತಿ ಗುರು. ಆರನೇ ಮನೆ ಅಂದರೆ, ಶತ್ರು- ರೋಗ ಸ್ಥಾನ. ಒಂಬತ್ತನೇ ಮನೆ ಅಂದರೆ ಪಿತೃ ಹಾಗೂ ಅದೃಷ್ಟ ಸ್ಥಾನ. ಗುರು ದಶೆ ಒಟ್ಟು ಹದಿನಾರು ವರ್ಷ ಇರುತ್ತದೆ. ಮೊದಲ ಎಂಟು ವರ್ಷ ಆರನೇ ಮನೆಯ ಫಲವನ್ನು ಹಾಗೂ ಎರಡನೇ ಎಂಟು ವರ್ಷ ಒಂಬತ್ತನೇ ಮನೆಯ ಫಲವನ್ನು ಗುರು ಗ್ರಹ ನೀಡುತ್ತದೆ. ಅಂದರೆ ಗುರು ದಶೆ ಆರಂಭವಾದ ಮೊದಲ ಎಂಟು ವರ್ಷ ರೋಗ- ರುಜಿನ, ಶತ್ರು ಬಾಧೆ ಮೊದಲಾದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಆ ನಂತರದ ಎಂಟು ವರ್ಷ ಉತ್ತಮ ಫಲವನ್ನು ನಿರೀಕ್ಷಿಸಬಹುದು. ಸದ್ಯಕ್ಕೆ ಮೀನ ರಾಶಿಯ ಗೋಚಾರ ಫಲವಂತೂ ಇದ್ದೇ ಇರುತ್ತದೆ.

ದಶಾ, ಭುಕ್ತಿ ಪರಿಶೀಲಿಸಬೇಕು

ದಶಾ, ಭುಕ್ತಿ ಪರಿಶೀಲಿಸಬೇಕು

ಆದರೆ, ಇಲ್ಲಿ ಇನ್ನೊಂದು ವಿಚಾರ ಇದೆ. ಜನ್ಮ ಕಾಲದಲ್ಲಿ ಲಗ್ನದಿಂದ ಎಷ್ಟನೇ ಸ್ಥಾನದಲ್ಲಿ ಗುರು ಗ್ರಹ ಇತ್ತು ಎಂಬುದನ್ನು ಸಹ ನೋಡಬೇಕು. ಅದಕ್ಕೆ ಶುಭ ಗ್ರಹಗಳ ದೃಷ್ಟಿ ಇದೆಯಾ, ಗಜಕೇಸರಿ ಮೊದಲಾದ ಶುಭ ಯೋಗಗಳು ಇವೆಯಾ ನೋಡಬೇಕಾಗುತ್ತದೆ. ಇದರ ಜತೆಗೆ ಗುರುವಿನ ದಶೆಯಲ್ಲಿ ಯಾವ ಗ್ರಹದ ಭುಕ್ತಿ ಇದೆ ಎಂಬುದು ಸಹ ಅತಿ ಮುಖ್ಯ. ಜನ್ಮ ಜಾತಕವನ್ನು ಪರಿಶೀಲನೆ ಮಾಡಿದಾಗ ಜಾತಕದಲ್ಲಿನ ಯೋಗ ಹಾಗೂ ಒಂದು ವೇಳೆ ಆ ಯೋಗವನ್ನು ಭಂಗ ಮಾಡುವಂಥ ಬೇರೆ ಯಾವುದಾದರೂ ಗ್ರಹಗಳು ಇದ್ದಲ್ಲಿ ಗೊತ್ತಾಗುತ್ತದೆ. ಅದಕ್ಕೆ ಬೇಕಾದ ಮುಂಜಾಗ್ರತೆ ತೆಗೆದುಕೊಳ್ಳುವುದು ಮುಖ್ಯ.

ಗ್ರಹಗಳ ದೃಷ್ಟಿಯನ್ನು ನೋಡಬೇಕು

ಗ್ರಹಗಳ ದೃಷ್ಟಿಯನ್ನು ನೋಡಬೇಕು

ಇನ್ನು ಗ್ರಹಗಳ ಮೇಲೆ ಯಾವ ಗ್ರಹದ ದೃಷ್ಟಿ ಇದೆ ಎಂಬುದನ್ನು ಸಹ ಗಮನಿಸಬೇಕಾಗುತ್ತದೆ. ಆಯಾ ಗ್ರಹಗಳು ತಾವು ಇರುವ ರಾಶಿಯಿಂದ ಉಳಿದ ಮನೆಗಳ ಕಡೆಗೆ ದೃಷ್ಟಿ ಬೀರುತ್ತವೆ. ರವಿ, ಚಂದ್ರ, ಬುಧ, ಶುಕ್ರ, ಕುಜ, ಗುರು, ಶನಿ, ರಾಹು ಈ ಎಲ್ಲ ಗ್ರಹಗಳಿಗೂ ಏಳನೇ ಮನೆಯ ದೃಷ್ಟಿ ಸಾಮಾನ್ಯ. ಉಳಿದಂತೆ ಕುಜ ಗ್ರಹಕ್ಕೆ 4, 8, ಗುರು ಗ್ರಹಕ್ಕೆ 5, 9, ಶನಿ 3, 10 ಹಾಗೂ ರಾಹು ಗ್ರಹಕ್ಕೆ 5 ಮತ್ತು 9ನೇ ಮನೆಯ ದೃಷ್ಟಿ ಇರುತ್ತದೆ. ಕೇತು ಗ್ರಹಕ್ಕೆ ಯಾವುದೇ ದೃಷ್ಟಿ ಇಲ್ಲ ಎಂಬ ಅಭಿಪ್ರಾಯ ಇದೆ. ಆದರೆ ಕೆಲವರು ಹೇಳುವ ಪ್ರಕಾರ, 5, 9ನೇ ಮನೆ ದೃಷ್ಟಿ ಇದೆ ಎನ್ನುತ್ತಾರೆ.

ಆಯಾ ಗ್ರಹ ಇರುವ ಸ್ಥಾನದಿಂದ ಗೋಚಾರದ ಸಂಚಾರದ ತನಕ ಲೆಕ್ಕಾಚಾರ

ಆಯಾ ಗ್ರಹ ಇರುವ ಸ್ಥಾನದಿಂದ ಗೋಚಾರದ ಸಂಚಾರದ ತನಕ ಲೆಕ್ಕಾಚಾರ

ಗಮನಿಸಬೇಕಾದ ಇನ್ನೊಂದು ಅಂಶ ಏನೆಂದರೆ, ಜನ್ಮ ಜಾತಕದಲ್ಲಿ ಆಯಾ ಗ್ರಹವು ಇರುವ ಮನೆಯಿಂದ ಸದ್ಯ ಗೋಚಾರದಲ್ಲಿ ಇರುವ ಸ್ಥಾನ ಎಷ್ಟನೆಯದಾಗುತ್ತದೆ ಎಂಬುದು ಕೂಡ ಮುಖ್ಯವಾಗುತ್ತದೆ. ಈ ಮೇಲಿನ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಹುಟ್ಟಿದ ಸಮಯದಲ್ಲಿ ಧನುಸ್ಸು ರಾಶಿಯಲ್ಲಿ ಗುರು ಇದ್ದರೆ, ಈಗ ಮಕರ ರಾಶಿಯಲ್ಲಿ ಗುರು ಸಂಚಾರ (ಜನವರಿ 2021ರಲ್ಲಿ) ಆಗುತ್ತಿದೆ. ಎರಡನೇ ಮನೆಯಲ್ಲಿ ಗುರು ಸಂಚಾರ ಆಗುತ್ತಿದ್ದರೆ ಏನು ಫಲ ನೀಡುತ್ತದೆ ಎಂಬುದನ್ನು ಸಹ ಗಮನಿಸಬೇಕಾಗುತ್ತದೆ. ಲಗ್ನದಿಂದ, ಚಂದ್ರನಿಂದ ಹಾಗೂ ಗುರುವಿನಿಂದ ಸಹ ನೋಡಬೇಕು. ನಾನಾ ಮೂಲಗಳಿಂದ ಮಾಹಿತಿ ಸಿಗುತ್ತಿರುವ ಈಗಿನ ಸನ್ನಿವೇಶದಲ್ಲಿ ಜ್ಯೋತಿಷ್ಯ ಅಧ್ಯಯನ ಶಾಸ್ತ್ರೋಕ್ತವಾಗಿ ಮಾಡಿದವರಿಂದಲೇ ಪಡೆಯಿರಿ ಎಂಬುದನ್ನು ತಿಳಿಸಲು ಇಷ್ಟೆಲ್ಲ ನಿಮಗೆ ಹೇಳಬೇಕಾಯಿತು.

English summary
Planet blessing is very important to get good results. Dasha and bhukthi plays major role. Here is an explanation along with example.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X