ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

By ಹರಿ ಶಾಸ್ತ್ರಿ ಗುರೂಜಿ
|
Google Oneindia Kannada News

Recommended Video

ಕುಜ ದೋಷ ಎಂದರೇನು? ಕುಜ ದೋಷದಿಂದಾಗುವ ಪರಿಣಾಮಗಳೇನು? ಶ್ರೀ ಗುರೂಜಿ ಹರಿ ಶಾಸ್ತ್ರಿ ತಿಳಿಸುತ್ತಾರೆ

ಈ ಹಿಂದೆ ನಿಮಗೆ ಗಜಕೇಸರಿ ಯೋಗದ ಬಗ್ಗೆ ತಿಳಿಸಿಕೊಟ್ಟಿದ್ದೆ. ಈ ದಿನ ದೋಷವೊಂದರ ಬಗ್ಗೆ ತಿಳಿದುಕೊಳ್ಳೋಣ. ಪದೇ ಪದೇ ಕೇಳಿರಬಹುದಾದ, ಪರಿಚಿತವಾದ ಪದ ಇದು. ವಿಶೇಷವಾಗಿ ವಿವಾಹ ಸಂದರ್ಭದಲ್ಲಿ ವಧುವಿನ ಕಡೆಯವರು ಚಿಂತೆಗೆ ಈಡಾಗುತ್ತಾರೆ. ಅದಕ್ಕೆ ಕಾರಣ ಜನ್ಮ ಜಾತಕದಲ್ಲಿನ ಕುಜ ದೋಷ. ಹೆಣ್ಣುಮಕ್ಕಳ ಪೋಷಕರನ್ನು ಬಹಳ ಚಿಂತೆಗೆ ಗುರಿ ಮಾಡುವ ಈ 'ಕುಜ ದೋಷ'ದ ಬಗ್ಗೆ ಮಾಹಿತಿ ಇಲ್ಲಿದೆ.

ಕುಜ ಅಂದರೆ ಅಗ್ನಿ ತತ್ವದ ಗ್ರಹ. ಜನ್ಮ ಜಾತಕದಲ್ಲಿ ಯಾವ ಸ್ಥಾನಗಳಲ್ಲಿ ಕುಜ ಗ್ರಹ ಇದ್ದರೆ ದೋಷಪೂರಿತ ಆಗುತ್ತದೆ ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಅದಕ್ಕೆ ಮುನ್ನ ಕುಜ ದೋಷ ಇದೆ ಎಂದಾಕ್ಷಣ ಭಯ ಪಡುವ ಅಗತ್ಯ ಇಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಧೈರ್ಯಗೆಡಬೇಡಿ.

Astrology yogas: ಗಜಕೇಸರಿ ಯೋಗದ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿAstrology yogas: ಗಜಕೇಸರಿ ಯೋಗದ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿ

ಭಾರತದಲ್ಲಿ ಜನಿಸುವವರ ಪೈಕಿ ಶೇಕಡಾ ಅರವತ್ತರಿಂದ ಎಪ್ಪತ್ತರಷ್ಟು ಮಂದಿಗೆ ಕುಜ ದೋಷಕಾರಿಯಾಗಿ ಇದ್ದೇ ಇರುತ್ತದೆ. ಅದೇ ರೀತಿಯಾಗಿ ದೋಷವು ಪರಿಹಾರ ಕೂಡ ಆಗಿರುತ್ತದೆ. ಆದರೆ ಆ ದೋಷ ಪರಿಹಾರ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿದುಕೊಂಡರೆ ಆಯಿತು. ದೋಷಕಾರಿ ಹೌದು ಎಂದಾದರೆ ಅದನ್ನು ಪರಿಹರಿಸಿಕೊಂಡು ಮುಂದುವರಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ.

ಕುಜ ದೋಷ ಎಂದರೇನು?

ಕುಜ ದೋಷ ಎಂದರೇನು?

ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿನ ಲಗ್ನದಿಂದ ನೋಡಬೇಕು. ಲಗ್ನದಿಂದ ಎರಡು, ನಾಲ್ಕು, ಏಳು, ಎಂಟು ಅಥವಾ ಹನ್ನೆರಡನೇ ಸ್ಥಾನಗಳ ಪೈಕಿ ಯಾವುದೇ ಮನೆಯಲ್ಲಿ ಕುಜ ಗ್ರಹ ಇದ್ದರೆ ಅದು ದೋಷವಾಗಿ ಮಾರ್ಪಾಡಾಗುತ್ತದೆ. ಈ ರೀತಿ ದೋಷ ಇರುವವರಿಗೆ ಕುಜ ದೋಷ ಇರುವವರ ಜತೆಗೇ ವಿವಾಹ ಮಾಡಬೇಕು. ಆಗ ಅವರ ಜೀವನ ಚೆನ್ನಾಗಿರುತ್ತದೆ. ಸಂತಾನದಲ್ಲಿ ಸಮಸ್ಯೆಗಳಾಗುವುದಿಲ್ಲ. ಯಾವುದೇ ಸಮಸ್ಯೆಗಳಾಗುವುದಿಲ್ಲ. ಪುರುಷರ ಜಾತಕದಲ್ಲಿ ಲಗ್ನದಿಂದ ಎರಡು, ಏಳು ಅಥವಾ ಎಂಟರಲ್ಲಿ ಇರುವ ಕುಜ ಉಗ್ರ ಸ್ವರೂಪದ ದೋಷವನ್ನು ನೀಡಿದರೆ, ಸ್ತ್ರೀಯರಿಗೆ ಏಳು, ಎಂಟು ಹಾಗೂ ಹನ್ನೆರಡು ಕುಜ ದೋಷ ಉಗ್ರವಾದ ಸ್ಥಾನ. ಆದರೆ ಇದಕ್ಕೆ ಸ್ವಾಭಾವಿಕವಾಗಿಯೇ ಪರಿಹಾರಗಳಿರುತ್ತವೆ.

ಸ್ವಾಭಾವಿಕ ಪರಿಹಾರಗಳೇನು?

ಸ್ವಾಭಾವಿಕ ಪರಿಹಾರಗಳೇನು?

ನಿಮ್ಮ ಜನ್ಮ ಜಾತಕದಲ್ಲಿ ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭ ರಾಶಿಗಳಲ್ಲಿ ಕುಜ ಗ್ರಹ ಇದ್ದರೆ, ಅದು ಲಗ್ನದಿಂದ 1, 4, 7, 8, 12ನೇ ಸ್ಥಾನಗಳೇ ಆಗಿದ್ದರೂ ದೋಷವು ಸ್ವಾಭಾವಿಕವಾಗಿಯೇ ನಿವಾರಣೆ ಆಗುತ್ತದೆ. ಅಂಥ ಸಂದರ್ಭದಲ್ಲಿ ಪ್ರತ್ಯೇಕವಾಗಿ ದೋಷ ಪರಿಹಾರ ಪೂಜೆಗಳನ್ನೇನೂ ಮಾಡುವ ಅಗತ್ಯವಿಲ್ಲ. ಕರ್ಕಾಟಕ, ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ. ವೃಶ್ಚಿಕ, ಮಿಥುನ ಲಗ್ನದವರಿಗೆ ಹನ್ನೆರಡನೇ ಸ್ಥಾನದಲ್ಲಿ ಕುಜನಿದ್ದರೂ ದೋಷವಿಲ್ಲ.

ಚಂದ್ರ ಗ್ರಹಣ 2019: ಮೇಷದಿಂದ ಮೀನ ರಾಶಿಯವರೆಗಿನ ಶುಭಾಶುಭ ಫಲಗಳುಚಂದ್ರ ಗ್ರಹಣ 2019: ಮೇಷದಿಂದ ಮೀನ ರಾಶಿಯವರೆಗಿನ ಶುಭಾಶುಭ ಫಲಗಳು

ಪರಿಹಾರ ಮಾಡಿಕೊಳ್ಳಲಿಲ್ಲ ಅಂದರೆ ಏನಾಗುತ್ತದೆ?

ಪರಿಹಾರ ಮಾಡಿಕೊಳ್ಳಲಿಲ್ಲ ಅಂದರೆ ಏನಾಗುತ್ತದೆ?

ವಿವಾಹದಲ್ಲಿ ಸಮಸ್ಯೆಗಳಾಗುತ್ತವೆ. ವಿವಾಹ ವಿಚ್ಛೇದನ ಆಗಬಹುದು. ದಂಪತಿ ಮಧ್ಯೆ ಮನಸ್ತಾಪ ಆಗುತ್ತದೆ. ಒಂದೇ ಮನೆಯಲ್ಲಿದ್ದರೂ ವೈವಾಹಿಕ ಸುಖ ಅನುಭವಿಸಲು ಆಗುವುದಿಲ್ಲ. ಸಂತಾನ ಸಮಸ್ಯೆಗಳಾಗುತ್ತವೆ. ಇನ್ನು ಕುಜನನ್ನು ಭೂಮಿ ಪುತ್ರ ಎನ್ನುತ್ತಾರೆ. ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸ ಕೈ ಹಿಡಿಯುವುದಿಲ್ಲ. ರಿಯಲ್ ಎಸ್ಟೇಟ್, ಕೃಷಿ ಪ್ರಗತಿ ಆಗುವುದಿಲ್ಲ. ಆದ್ದರಿಂದ ಕುಜ ದೋಷವುಳ್ಳವರ ಹೆಸರಲ್ಲಿ ಭೂಮಿ ನೋಂದಣಿ ಮಾಡಿಕೊಂಡರೆ ಅದು ಉಳಿಯದೆ, ಮಾರಾಟ ಆಗಿಬಿಡುತ್ತದೆ. ಕಾಯಿಲೆ ಕಾಣಿಸಿಕೊಂಡು, ಅದರ ನಿವಾರಣೆಗಾಗಿ ಹಣಕಾಸಿನ ಅಗತ್ಯ ಕಂಡುಬಂದು, ಆ ಭೂಮಿ ಮಾರಾಟ ಮಾಡಬೇಕಾದ ಸಂದರ್ಭ ಬರುತ್ತದೆ.

ಯಾವ ನಕ್ಷತ್ರಗಳಿಗೆ ಕುಜ ದೋಷ ಇರುವುದಿಲ್ಲ?

ಯಾವ ನಕ್ಷತ್ರಗಳಿಗೆ ಕುಜ ದೋಷ ಇರುವುದಿಲ್ಲ?

ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಾಭಾದ್ರಾ ನಕ್ಷತ್ರದವರಿಗೆ ಕುಜ ದೋಷವಿದ್ದರೂ ಶಾಂತಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲವರು ವಿವಾಹ ಜೀವನದಲ್ಲಿ ತೊಂದರೆ ಅನುಭವಿಸುತ್ತಲೇ ಇರುತ್ತಾರೆ. ಕೆಲವರು ನಲವತ್ತು-ಐವತ್ತನೇ ವರ್ಷದಲ್ಲಿ ವಿವಾಹ ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಾರೆ. ಹಾಗಂತ ಕುಜ ದೋಷದ ಪರಿಣಾಮ ಕುಜ ದಶೆ, ಕುಜ ಭುಕ್ತಿ, ಗೋಚಾರದಲ್ಲಿ ನಿಮ್ಮ ನಕ್ಷತ್ರಕ್ಕೆ ಕುಜ ಪರಿಣಾಮ ಬೀರುವ ಸ್ಥಿತಿಯಲ್ಲಿ ಬಂದಾಗ ತೊಂದರೆ ಆಗುತ್ತದೆ.

ಖ್ಯಾತ ಜ್ಯೋತಿಷಿ ಹರೀಶ್ ಶಾಸ್ತ್ರಿ ಅವರಿಂದ ಸಂಕ್ರಾಂತಿ ರಾಶಿ ಫಲಖ್ಯಾತ ಜ್ಯೋತಿಷಿ ಹರೀಶ್ ಶಾಸ್ತ್ರಿ ಅವರಿಂದ ಸಂಕ್ರಾಂತಿ ರಾಶಿ ಫಲ

ಕುಜ ದೋಷದ ಪರಿಹಾರ ಮಾರ್ಗಗಳೇನು?

ಕುಜ ದೋಷದ ಪರಿಹಾರ ಮಾರ್ಗಗಳೇನು?

ಕುಜನ ಗಾಯತ್ರಿ ಮಂತ್ರವಾದ ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ ತನ್ನಃ ಕುಜಃ ಪ್ರಚೋದಯಾತ್ ಅನ್ನು ನಿತ್ಯವೂ ಹೇಳಿಕೊಂಡರೆ ಕುಜ ದೋಷದ ಪ್ರಭಾವ ಕಡಿಮೆ ಆಗುತ್ತದೆ. ಕೆಂಪು ವಸ್ತ್ರ ದಾನ ಮಾಡುವುದರಿಂದ, ಯಥಾ ಶಕ್ತಿ ತೊಗರಿಬೇಳೆ ಧಾನ್ಯ ಮಾಡುವುದರಿಂದ, ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ದರ್ಶನ ಹಾಗೂ ಅಲ್ಲಿ ಸೇವೆ ಮಾಡುವುದರಿಂದ, ಲಕ್ಷ್ಮಿ ನರಸಿಂಹ ಸ್ವಾಮಿ ಆರಾಧನೆ ಮಾಡುವುದರಿಂದ ಹಾಗೂ ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದ ಕೂಡ ಕುಜ ದೋಷ ಪ್ರಭಾವ ಕಡಿಮೆ ಆಗುತ್ತದೆ. ಆದರೆ ಸ್ವಯಂ ವೈದ್ಯ ಹೇಗೆ ಅಪಾಯಕಾರಿ ಹಾಗೂ ನಿರುಪಯೋಗಿಯೋ ಸ್ವಯಂ ಜ್ಯೋತಿಷ್ಯವೂ ಹಾಗೆಯೇ. ಆದ್ದರಿಂದ ನಿಮ್ಮ ಜಾತಕವನ್ನು ಒಮ್ಮೆ ತಜ್ಞ ಜ್ಯೋತಿಷಿಗಳಲ್ಲಿ ತೋರಿಸಿ. ಯೋಗ-ದೋಷಗಳ ಬಗ್ಗೆ ತಿಳಿದುಕೊಳ್ಳಿ. ಯೋಗವನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳಿ. ದೋಷ ಪರಿಹಾರ ಮಾಡಿಸಿಕೊಳ್ಳಿ.

ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.

English summary
What is Kuja dosha? How it is formed in horoscope? What is the remedy for this dosha? Other important details explained by Kannada well known astrologer Hari Shastri Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X