ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Astrology: ಸಾಲ- ಋಣ ಬಾಧೆಗೆ ಎಷ್ಟೆಲ್ಲ ಕಾರಣ? ನಿಮಗೂ ಹೀಗಾಗುತ್ತಿದೆಯಾ?

By ಶ್ರೀನಿವಾಸ ಗುರೂಜಿ
|
Google Oneindia Kannada News

ಸಾಲ ಸಾಲ ಸಾಲ... ಇದನ್ನು ಋಣ ಬಾಧೆ ಅಂತಲಾದರೂ ಕರೆಯಬಹುದು. ಕೆಲವರು ಬಹಳ ಅನುಕೂಲವಾಗಿ ಇರುತ್ತಾರೆ. ದಿಢೀರನೇ ಕಷ್ಟಗಳ ಸರಮಾಲೆ ಬರುತ್ತದೆ. ಒಂದೊಂದಾಗಿ ಮಾರಲು ಆರಂಭಿಸಿದ ಮೇಲೆ ಕೊನೆಗೆ ಏನೂ ಉಳಿಯದ ಸ್ಥಿತಿ ತಲುಪುತ್ತಾರೆ. ಮತ್ತೆ ಕೆಲವರಿಗೆ ಎಷ್ಟು ಶ್ರಮ ಪಟ್ಟು ಕೆಲಸ ಮಾಡಿದರೂ ಏನೂ ಉಳಿಸಲೂ ಸಾಧ್ಯವಾಗುವುದಿಲ್ಲ. ಯಾವಾಗಲೂ ಸಾಲದಲ್ಲಿ ಇರುತ್ತಾರೆ.

ಆದ್ದರಿಂದ ಸಾಲ ಎಂಬುದು ಎರಡು ಬಗೆಯಲ್ಲಿ ಕಾಡುತ್ತದೆ. ಒಂದು, ಎಲ್ಲ ಅನುಕೂಲವಾಗಿ ಇದ್ದು, ಜೀವನದ ಮಧ್ಯ ಭಾಗದಲ್ಲೆಲ್ಲೋ ಕಷ್ಟಗಳ ಸರಮಾಲೆ ಅನುಭವಿಸುವುದು. ಇಲ್ಲ, ಜೀವನಪೂರ್ತಿ ಕಷ್ಟಗಳನ್ನೇ ಪಡುತ್ತಿರುವುದು. ಯಾವುದೋ ಋಣಭಾರ ಸದಾ ಕಾಡುತ್ತಿರುತ್ತದೆ. ಆದ್ದರಿಂದ ಇದಕ್ಕೆ ಕಾರಣ ಏನು ಹಾಗೂ ಪರಿಹಾರ ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇನೆ.

ಜ್ಯೋತಿಷ್ಯ: ಯಾರಿಗೆ ಯಾವ ಉದ್ಯೋಗ- ವೃತ್ತಿ, ವ್ಯಾಪಾರ ಸೂಕ್ತ? ಇಲ್ಲಿದೆ ಮಾಹಿತಿಜ್ಯೋತಿಷ್ಯ: ಯಾರಿಗೆ ಯಾವ ಉದ್ಯೋಗ- ವೃತ್ತಿ, ವ್ಯಾಪಾರ ಸೂಕ್ತ? ಇಲ್ಲಿದೆ ಮಾಹಿತಿ

* ಜನ್ಮ ಜಾತಕದಲ್ಲಿ ಲಗ್ನದಿಂದ ಎರಡನೇ ಮನೆ, ಐದನೇ ಮನೆ, ಆರು ಮತ್ತು ಹನ್ನೆರಡನೇ ಸ್ಥಾನವನ್ನು ಇದೇ ಕಾರಣಕ್ಕಾಗಿ ಪರಿಶೀಲನೆ ನಡೆಸಲಾಗುತ್ತದೆ.

Astrology Reason For Loan. Health Problem And Solution

* ಲಗ್ನದ ಎರಡನೇ ಮನೆ ಧನ ಸ್ಥಾನ. ಅಂದರೆ ಹಣ ಬರುವ ಬಗೆಯನ್ನು ತಿಳಿಸುತ್ತದೆ. ಆದ್ದರಿಂದ ಈ ಮನೆಯಲ್ಲಿ ಯಾವ ಗ್ರಹಗಳಿವೆ? ಅಥವಾ ಆ ಸ್ಥಾನದ ಅಧಿಪತಿ ಯಾರು, ಆ ಗ್ರಹ ಯಾವ ಮನೆಯಲ್ಲಿ ಇದೆ? ಆ ಮನೆಯ ಮೇಲೆ ಯಾವ ಗ್ರಹಗಳ ದೃಷ್ಟಿ ಇದೆ. ಲಗ್ನಕ್ಕೂ ಹಾಗೂ ಈ ಮನೆಯ ಅಧಿಪತಿಗೂ ಸಂಬಂಧ ಹೇಗಿದೆ ಎಂಬುದನ್ನು ನೋಡಲಾಗುತ್ತದೆ.

* ಇನ್ನು ಐದನೇ ಮನೆ ಪೂರ್ವಪುಣ್ಯ ಸ್ಥಾನ. ಹೋದ ಜನ್ಮದಲ್ಲಿ ಜಾತಕರು ಏನು ಪುಣ್ಯ ಮಾಡಿದ್ದಾರೋ ಅದರ ಫಲವನ್ನು ಅನುಭವಿಸಬೇಕು. ಪಾಪ- ಪುಣ್ಯಗಳ ತುಲನೆಯನ್ನು ಮಾಡಬಹುದು. ಅದರ ಫಲಿತವನ್ನೇ ಈ ಜನ್ಮದಲ್ಲಿ ಅನುಭವಿಸುತ್ತೀರಿ.

ಜ್ಯೋತಿಷ್ಯ: ಮಕ್ಕಳೇಕೆ ತಂದೆ-ತಾಯಿಯ ಮಾತು ಕೇಳುವುದಿಲ್ಲ? ಇಲ್ಲಿದೆ ಉತ್ತರಜ್ಯೋತಿಷ್ಯ: ಮಕ್ಕಳೇಕೆ ತಂದೆ-ತಾಯಿಯ ಮಾತು ಕೇಳುವುದಿಲ್ಲ? ಇಲ್ಲಿದೆ ಉತ್ತರ

* ಆರನೇ ಮನೆಯನ್ನು ಶತ್ರು ಸ್ಥಾನ ಅಥವಾ ಋಣ ಸ್ಥಾನ ಎಂದು ಕರೆಯಲಾಗುತ್ತದೆ. ಒಬ್ಬ ಜಾತಕರಿಗೆ ಋಣ ಬಾಧೆಗಳು ಹೇಗೆ ಏರ್ಪಡುತ್ತದೆ ಎಂದು ಈ ಮೂಲಕ ತಿಳಿದುಕೊಳ್ಳಬಹುದು.

* ಕೊನೆಯದಾಗಿ ಲಗ್ನದಿಂದ ಹನ್ನೆರಡನೇ ಮನೆ ವ್ಯಯ ಸ್ಥಾನ. ಖರ್ಚು, ನಷ್ಟವನ್ನು ಆ ಮನೆ ಮೂಲಕ ತಿಳಿದುಕೊಳ್ಳಬಹುದು.

ಈ ಮೇಲ್ಕಂಡ ಅಂಶಗಳನ್ನೆಲ್ಲ ಒಂದು ಜಾತಕದಲ್ಲಿ ಅಳೆದು- ತೂಗಿ ನೋಡಬೇಕಾಗುತ್ತದೆ. ಸರಿ ಇದೆಲ್ಲವೂ ಚೆನ್ನಾಗಿದೆ. ಮತ್ತೆ ಏನು ಸಮಸ್ಯೆ ಆಗಿದೆ ಅಂತ ಕೆಲವರು ತಲೆ ಕೆಡಿಸಿಕೊಳ್ಳುತ್ತಾರೆ. ಕೆಲವು ಗ್ರಹ ಸಂಯೋಗಗಳು ಮತ್ತು ಗ್ರಹ ಸ್ಥಿತಿ ದರಿದ್ರ ಯೋಗವನ್ನು ರೂಪಿಸುತ್ತವೆ. ಅಂಥ ಗ್ರಹ ಸ್ಥಿತಿ ಜಾತಕದಲ್ಲಿ ಇದ್ದಾಗಲೂ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಜ್ಯೋತಿಷ್ಯ: ಅದೃಷ್ಟ ರತ್ನಗಳ ಅಡ್ಡಪರಿಣಾಮಗಳು ಹೇಗೆ ಇರುತ್ತವೆ ಗೊತ್ತೆ?ಜ್ಯೋತಿಷ್ಯ: ಅದೃಷ್ಟ ರತ್ನಗಳ ಅಡ್ಡಪರಿಣಾಮಗಳು ಹೇಗೆ ಇರುತ್ತವೆ ಗೊತ್ತೆ?

ಜಾತಕದಲ್ಲಿ ಸರ್ಪ ದೋಷ ಅಥವಾ ಕಾಳಸರ್ಪ ದೋಷ ಇದ್ದಲ್ಲಿ, ಅದಕ್ಕೆ ಸೂಕ್ತ ಪರಿಹಾರ ಮಾಡಿಕೊಳ್ಳದಿದ್ದಲ್ಲಿ ಸಹ ಋಣ, ದಾರಿದ್ರ್ಯ ಅನುಭವಿಸಬೇಕಾಗುತ್ತದೆ. ಕೆಲ ಜಾತಕರಿಗೆ ಶುಕ್ರ ದಶೆ ಮುಗಿದು ರವಿ ದಶೆ ಶುರುವಾಗುವ ಆರಂಭದಲ್ಲಿ ಹಣ ಕಾಸಿನ ಸಮಸ್ಯೆ, ವ್ಯಾಪಾರ ನಷ್ಟ ಇತ್ಯಾದಿ ಕಾಡುತ್ತದೆ.

ಅದೇ ರೀತಿ ಜಾತಕದಲ್ಲಿ ಶನಿಯು ನೀಚ ಸ್ಥಾನದಲ್ಲಿ ಇದ್ದು, ಕ್ರೂರ ದೃಷ್ಟಿ ಬೀರುತ್ತಿದ್ದಲ್ಲಿ ಶನಿ ದಶೆಯಲ್ಲಿ ಅಥವಾ ಗೋಚಾರದಲ್ಲಿ ಶನಿಯು ಪಂಚಮ, ಅಷ್ಟಮ ಅಥವಾ ಸಾಡೇ ಸಾತ್ ಸಂಚಾರ ಮಾಡುವಾಗ ಬಲು ತೊಂದರೆ ಅನುಭವಿಸುತ್ತಾರೆ.

ಈ ಪೈಕಿ ಯಾವ ಕಾರಣಕ್ಕೆ ಸಾಲ, ಋಣ ಬಾಧೆ ಅನುಭವಿಸುತ್ತಿದ್ದೀರಿ, ಅದಕ್ಕೆ ಪರಿಹಾರ ಹೇಗೆ ಎಂಬುದನ್ನು ಹೇಳಬೇಕಾದದ್ದು ಜ್ಯೋತಿಷಿಯ ಸಾಮರ್ಥ್ಯ, ಅನುಭವ ಹಾಗೂ ಪಾಂಡಿತ್ಯದ ಮೇಲೆ ಅವಲಂಬನೆ ಆಗಿರುತ್ತದೆ. ನನ್ನ ಬಳಿ ಜ್ಯೋತಿಷ್ಯ ಬರುವ ಸಾಕಷ್ಟು ಮಂದಿ ಇಂಟರ್ ನೆಟ್ ನೋಡಿ, ತಮಗೆ ತೋಚಿಸಿದಂತೆ- ಅದರಲ್ಲಿ ಸೂಚಿಸಿದಂತೆ ಎಂಥದ್ದೋ ಹೋಮ- ಹವನ ಮಾಡಿಸಿರುತ್ತಾರೆ.

ಮತ್ತೂ ಕೆಲವರು ನೀಲ, ವಜ್ರದಂಥ ಅದೃಷ್ಟದ ಹರಳನ್ನು ತಮಗೆ ಆಗಿಬರದಿದ್ದರೂ ಧರಿಸಿ, ಕಷ್ಟದ ಪಾಲಾಗಿರುತ್ತಾರೆ. ಇಂಥ ವಿಷಯದಲ್ಲಿ ದಯವಿಟ್ಟು ನಿಮಗೆ ನೀವೇ ಜ್ಯೋತಿಷಿಗಳಾಗಬೇಡಿ. ಇನ್ನೂ ಒಂದು ಅಂಶ ಗೊತ್ತಿರಲಿ, ಮನೆ ದೇವರ ಪೂಜೆಯು ನಿಂತು ಹೋಗಿದ್ದಲ್ಲಿ ಅಥವಾ ಹರಕೆ ಹೊತ್ತುಕೊಂಡು, ಅದನ್ನು ತೀರಿಸದಿದ್ದಲ್ಲಿ ಕೂಡ ನಾನಾ ಬಗೆಯ ಋಣ- ದಾರಿದ್ರ್ಯ ಕಾಡುತ್ತದೆ. ಅಷ್ಟೇ ಅಲ್ಲ, ಪಿತೃ ಶಾಪವೂ ಇದಕ್ಕೆ ಕಾರಣವಾಗಿರುತ್ತದೆ.

ಕೆಲವರು ಹೊಸದಾಗಿ ಭೂಮಿ ಖರೀದಿಸಿದ ಮೇಲೆ ಅಥವಾ ಮನೆ ಕಟ್ಟಿಸಿದ ಮೇಲೆ ಕಷ್ಟದ ಪಾಲಾಗಿರುತ್ತಾರೆ. ಅಂಥವರಿಗೆ ಭೂಮಿ ಶಾಪ ಅಥವಾ ದೃಷ್ಟಿ ದೋಷ ಕೂಡ ತಗುಲಿರಬಹುದು. ಇನ್ನು ಕೃತ್ರಿಮ ಪ್ರಯೋಗ ಆಗಿದ್ದಲ್ಲಿ ಕೂಡ ಸಾಲ- ಅನಾರೋಗ್ಯ ಇತ್ಯಾದಿಗಳು ಕಾಡುತ್ತವೆ. ಈ ಪೈಕಿ ನಿಮಗೆ ಯಾವುದಾದರೂ ಸಮಸ್ಯೆ ಆಗಿದ್ದಲ್ಲಿ ಬೇಗನೇ ತಜ್ಞ ಜ್ಯೋತಿಷಿಗಳಿಂದ ಪರಿಹಾರ ಕಂಡುಕೊಳ್ಳಿ.

ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ ವೈಯಕ್ತಿಕವಾಗಿ ಭೇಟಿಗೆ ಮೊಬೈಲ್ ಫೋನ್ ಸಂಖ್ಯೆ 9886665656- 9886155755 ಸಂಪರ್ಕಿಸಿ.

English summary
Here is the astrology reason and solution for loan and health problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X