ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂರೊನಾ ಜ್ಯೋತಿಷ್ಯ ಭವಿಷ್ಯ: ಕೇವಲ 20 ದಿನ ಜಾಗ್ರತೆಯಿಂದ ಇರಿ

|
Google Oneindia Kannada News

ಕೊರೊನಾ ಎರಡನೇ ಅಲೆ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಇದರ ಕಾಟದಿಂದ ಯಾವಾಗ ನೆಮ್ಮದಿ ಸಿಗಬಹುದು ಎನ್ನುವುದರ ಬಗ್ಗೆ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಉತ್ತರ ಭಾರತ ಮೂಲದ ಕೆ.ಎಂ.ಸಿನ್ಹಾ, ಐದು ರಾಜ್ಯಗಳ ಚುನಾವಣೆಯ ವಿಚಾರದಲ್ಲೀ ಭವಿಷ್ಯವನ್ನು ನುಡಿದಿದ್ದರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೋಲು ಅನುಭವಿಸುತ್ತಾರೆಂದೂ ಇವರು ಭವಿಷ್ಯ ನುಡಿದಿದ್ದರು.

5 ರಾಜ್ಯಗಳ ಚುನಾವಣೆ: ಎಲ್ಲಿ ಯಾರ ಸರಕಾರ, ಖ್ಯಾತ ಜ್ಯೋತಿಷಿಯ ಭವಿಷ್ಯ5 ರಾಜ್ಯಗಳ ಚುನಾವಣೆ: ಎಲ್ಲಿ ಯಾರ ಸರಕಾರ, ಖ್ಯಾತ ಜ್ಯೋತಿಷಿಯ ಭವಿಷ್ಯ

ರಾಜಧಾನಿ ದೆಹಲಿ ಲಾಕ್ ಡೌನ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದ ಸಿನ್ಹಾ, ಮುಂದಿನ ಇಪ್ಪತ್ತು ದಿನಗಳು ಮಾತ್ರ ಸಾರ್ವಜನಿಕರು ಅತ್ಯಂತ ಜಾಗರೂಕತೆಯಿಂದ ಇರಬೇಕಾದ ಸಮಯ, ಎಲ್ಲಾ ಸರಿ ಹೋಗುತ್ತದೆ ಎಂದು ಸಿನ್ಹಾ ನುಡಿದಿದ್ದಾರೆ.

 ಕೊರೊನಾ ನಿರ್ಮೂಲನೆ; ಮೋದಿಗೆ ಪ್ರಕಾಶ್ ಅಮ್ಮಣ್ಣಾಯ ಸಲಹೆ ಏನು? ಕೊರೊನಾ ನಿರ್ಮೂಲನೆ; ಮೋದಿಗೆ ಪ್ರಕಾಶ್ ಅಮ್ಮಣ್ಣಾಯ ಸಲಹೆ ಏನು?

ನಮ್ಮ ದೇಶದ ಜಾತಕದ ಆಧಾರದ ಮೇಲೆ ಹೇಳುವುದಾದರೆ ಕಠಿಣಾತೀತ ಸಮಸ್ಯೆಗಳನ್ನು ಭಾರತೀಯರು ಮುಂದಿನ ಕೆಲವು ದಿನಗಳಲ್ಲಿ ಎದುರಿಸಬೇಕಾಗುತ್ತದೆ. ಕೊರೊನಾ ವಿಚಾರದಲ್ಲಿ ಜನರು ಸ್ವಲ್ಪದಿನ ಜಾಗರೂಕತೆಯಿಂದ ಇದ್ದರೆ ಸಾಕು ಎಂದು ಸಿನ್ಹಾ ಹೇಳಿದ್ದಾರೆ. ಮುಂದೆ ಓದಿ

 ಮೇ 6ರಿಂದ 26ರವರೆಗೆ ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು

ಮೇ 6ರಿಂದ 26ರವರೆಗೆ ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು

"ಮೇ 6ರಿಂದ 26ರವರೆಗೆ ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು. ಈ ಅವಧಿ ಸ್ವಲ್ಪದಿನ ಅಂದರೆ ಜೂನ್ 3ರವರೆಗೆ ಹೋಗಬಹುದು. ಈ ಅವಧಿ ಮುಗಿದ ನಂತರ, ಕೊರೊನಾ ವೈರಸಿನ ಪ್ರಭಾವ ಕಮ್ಮಿಯಾಗಲಿದೆ. ಆದರೆ, ಮೇ 6ರಿಂದ 26ರವರೆಗಿನ ಅವಧಿಯಲ್ಲಿ ಕೊರೊನಾ ಗರಿಷ್ಠ ಮಟ್ಟಕ್ಕೆ ಹೋಗಲಿದೆ"ಎಂದು ಕೆ.ಎಂ.ಸಿನ್ಹಾ ಭವಿಷ್ಯ ನುಡಿದಿದ್ದಾರೆ.

 ಕೊರೊನಾ ಜೊತೆಗೆ ಪ್ರಾಕೃತಿಕ ವಿಕೋಪಗಳೂ ಎದುರಾಗಲಿವೆ

ಕೊರೊನಾ ಜೊತೆಗೆ ಪ್ರಾಕೃತಿಕ ವಿಕೋಪಗಳೂ ಎದುರಾಗಲಿವೆ

"ಮೇ 6ರಿಂದ 26ರ ಅವಧಿಯಲ್ಲಿ ಕೊರೊನಾ ಜೊತೆಗೆ ಪ್ರಾಕೃತಿಕ ವಿಕೋಪಗಳೂ ಎದುರಾಗಲಿವೆ. ಮಳೆ ಹೆಚ್ಚಾಗುವ ಸಾಧ್ಯತೆಯಿದೆ, ಆದರೆ ಈ ಅತಿವೃಷ್ಟಿ ದೇಶದ ಎಲ್ಲಾ ಭಾಗದಲ್ಲೂ ಆಗುವುದಿಲ್ಲ. ಜಲಾಯನ ಪ್ರದೇಶಗಳಲ್ಲಿ ಮಳೆ ಹೆಚ್ಚಾಗಬಹುದು"ಎಂದು ಸಿನ್ಹಾ ಹೇಳಿದ್ದಾರೆ.

 ಮೇ 26ರ ನಂತರವೂ ಸರಕಾರದ ಮಾರ್ಗಸೂಚಿಯನ್ನು ಪಾಲಿಸಬೇಕಿದೆ

ಮೇ 26ರ ನಂತರವೂ ಸರಕಾರದ ಮಾರ್ಗಸೂಚಿಯನ್ನು ಪಾಲಿಸಬೇಕಿದೆ

ಮೇ 26ರ ನಂತರವೂ ಸರಕಾರದ ಮಾರ್ಗಸೂಚಿಯನ್ನು ಪಾಲಿಸಬೇಕಿದೆ. ಕೊರೊನಾ ಈ ಮಟ್ಟಿನ ಹಾವಳಿ ಮಾಡುವುದಕ್ಕೆ ಬರೀ ಕೇಂದ್ರ ಸರಕಾರವನ್ನು ದೂಷಿಸಿದರೆ ಆಗದು, ಸಾರ್ವಜನಿಕರ ಸಹಕಾರವೂ ಬೇಕಾಗುತ್ತದೆ. ಕೋವಿಡ್ ಕಾರಣದಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಹೇಳಿದ್ದೆ. ಅದರಂತೇ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ"ಎಂದು ಸಿನ್ಹಾ ಹೇಳಿದ್ದಾರೆ.

Recommended Video

ಪುಕ್ಸಟ್ಟೆ ಸವಲತ್ತು ಬಿಟ್ಟು ಜನಕ್ಕೋಸ್ಕರ ಕೆಲಸ ಮಾಡೋದು ಯಾವಾಗ?? | Oneindia Kannada
 ಒಂದು ತುಂಡು ಕರ್ಪೂರಕ್ಕೆ ಏಲಕ್ಕಿ, ಲವಂಗ, ಲೋಬನವನ್ನು ಮಿಕ್ಸ್ ಮಾಡಿ

ಒಂದು ತುಂಡು ಕರ್ಪೂರಕ್ಕೆ ಏಲಕ್ಕಿ, ಲವಂಗ, ಲೋಬನವನ್ನು ಮಿಕ್ಸ್ ಮಾಡಿ

"ಸದ್ಯ ಈಗ ರೆಡ್ ಅಲರ್ಟ್ ಇದೆ, ಜನರು ಜಾಗರೂಕತೆಯಿಂದ ಇರಬೇಕು, ಯಾವ ಕಾರಣಕ್ಕೂ ಈ ಅವಧಿಯಲ್ಲಿ ಮೈಮೆರೆಯುವುದು ಬೇಡ. ಈಶ್ವರನ ದಯೆಯಿಂದ ಎಲ್ಲವೂ ಒಳ್ಳೆಯದಾಗಲಿದೆ. ಒಂದು ತುಂಡು ಕರ್ಪೂರಕ್ಕೆ ಏಲಕ್ಕಿ, ಲವಂಗ, ಲೋಬನವನ್ನು ಮಿಕ್ಸ್ ಮಾಡಿ ಅದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ಜೇಬಿನಲ್ಲಿ ಇಟ್ಟುಕೊಳ್ಳಿ. ಇದರಿಂದ ಕೊರೊನಾ ವೈರಸ್ ಬರುವುದಿಲ್ಲ ಎಂದು ಹೇಳುವುದಿಲ್ಲ, ಆದರೆ, ಬ್ಯಾಕ್ಟೀರಿಯಾವನ್ನು ನಿಗ್ರಹಿಸುವ ಶಕ್ತಿಯನ್ನು ಇದು ಹೊಂದಿದೆ"ಎಂದು ಕೆ.ಎಂ.ಸಿನ್ಹಾ ಹೇಳಿದ್ದಾರೆ.

English summary
Astrology Prediction On Corona, People Should Be Very Careful In Next 20 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X