• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಗುರು ನುಡಿದ ಕೊರೊನಾ ಭವಿಷ್ಯ: ಕೊಟ್ಟ ಎಚ್ಚರಿಕೆ ಫಲಿಸಲಿಲ್ಲ, ಮೋದಿ ಇತ್ತ ಬರಲಿಲ್ಲ

|
Google Oneindia Kannada News

ಕೊರೊನಾ ಎರಡನೇ ಅಲೆಯಿಂದ ದೇಶ ಹೈರಾಣವಾಗುತ್ತಿರುವ ಈ ಸಂದರ್ಭದಲ್ಲಿ ಹಲವು ಜ್ಯೋತಿಷಿಗಳು ಭವಿಷ್ಯವಾಣಿಯನ್ನು ನುಡಿದಿದ್ದಾರೆ. ರಾಜಗುರು ಎಂದೇ ಹೆಸರಾಗಿರುವ ಖ್ಯಾತ ಜ್ಯೋತಿಷಿ ದ್ವಾರಕಾನಾಥ ಗುರೂಜಿ ಅವರು ಕೊರೊನಾ ಬಗ್ಗೆ ತಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾತನಾಡಿದ್ದಾರೆ.

   Narendra Modi ಮೇಲೆ ಕೋಪಗೊಂಡ RajGuru | Oneindia Kannada

   ಮೇ ಆರರಿಂದ ಮಾಸಾಂತ್ಯದವರೆಗೆ ಎರಡನೇ ಅಲೆ ಗರಿಷ್ಠ ಮಟ್ಟಕ್ಕೆ ಹೋಗಲಿದೆ ಎಂದು ಈಗಾಗಲೇ ಹಲವು ತಜ್ಞರು, ಪಂಡಿತರು ಭವಿಷ್ಯವನ್ನು ನುಡಿದಿದ್ದಾಗಿದೆ.ಬಹುತೇಕ ಎಲ್ಲರ ಪ್ರಕಾರ, ಮೇ ಮಾಸಾಂತ್ಯದಲ್ಲಿ, ಇಲ್ಲದಿದ್ದರೆ ಜೂನ್ ಆರಂಭದಲ್ಲಿ ಇದರ ಪ್ರಭಾವ ಕಮ್ಮಿಯಾಗಲಿದೆ.

    ಕೂರೊನಾ ಜ್ಯೋತಿಷ್ಯ ಭವಿಷ್ಯ: ಕೇವಲ 20 ದಿನ ಜಾಗ್ರತೆಯಿಂದ ಇರಿ ಕೂರೊನಾ ಜ್ಯೋತಿಷ್ಯ ಭವಿಷ್ಯ: ಕೇವಲ 20 ದಿನ ಜಾಗ್ರತೆಯಿಂದ ಇರಿ

   ಕಳೆದ ಒಂದು ವಾರದಲ್ಲಿ ಸತತವಾಗಿ 44ಸಾವಿರ ಹೊಸ ಕೇಸುಗಳು ವರದಿಯಾಗುತ್ತಿದೆ. ಒಂದು ದಿನವಂತೂ 50 ಸಾವಿರ ಕೇಸುಗಳು ದಾಖಲಾಗಿದ್ದವು. ಸಾವಿನ ಪ್ರಮಾಣವೂ ಹೆಚ್ಚುತ್ತಿರುವುದು ಆತಂಕದ ವಿಚಾರವಾಗಿದೆ.

   ಕೂರೊನಾ ಎರಡನೇ ಅಲೆಯ ಬಗ್ಗೆ ಮಾತನಾಡುತ್ತಿದ್ದ ದ್ವಾರಕಾನಾಥ ಗುರೂಜಿ ಅವರು, ರಾಜ್ಯ, ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿಯ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಯಾವಾಗ ಎರಡನೇ ಅಲೆಯಿಂದ ಮುಕ್ತಿ ಸಿಗಬಹುದು? ಮುಂದೆ ಓದಿ..

   ಕೊರೊನಾ ಸಂಕಷ್ಟದ ಮಧ್ಯೆ ಗುಡ್ ನ್ಯೂಸ್ ಹೇಳಿದ ಡಾ.ಸಿ.ಎನ್.ಮಂಜುನಾಥ್: ಕಂಡೀಷನ್ ಅಪ್ಲೈಕೊರೊನಾ ಸಂಕಷ್ಟದ ಮಧ್ಯೆ ಗುಡ್ ನ್ಯೂಸ್ ಹೇಳಿದ ಡಾ.ಸಿ.ಎನ್.ಮಂಜುನಾಥ್: ಕಂಡೀಷನ್ ಅಪ್ಲೈ

    ರಾಜಗುರು ಎಂದೇ ಹೆಸರಾಗಿರುವ ಖ್ಯಾತ ಜ್ಯೋತಿಷಿ ದ್ವಾರಕಾನಾಥ ಗುರೂಜಿ

   ರಾಜಗುರು ಎಂದೇ ಹೆಸರಾಗಿರುವ ಖ್ಯಾತ ಜ್ಯೋತಿಷಿ ದ್ವಾರಕಾನಾಥ ಗುರೂಜಿ

   "ಜ್ಯೋತಿಷಿಗಳು ಹೇಳಿದರೆ ಯಾರೂ ಕೇಳುತ್ತಿಲ್ಲವಲ್ಲ.. ಏನೂಂತ ಹೇಳೋಣ.. ಜನವರಿ 2017ರಲ್ಲೇ ಅಂದರೆ ನಾಲ್ಕು ವರ್ಷದ ಕೆಳಗೆಯೇ ನಾನು ಈ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದೆ. ನನ್ನ ಎಚ್ಚರಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ"ಎಂದು ರಾಜಗುರು ದ್ವಾರಕಾನಾಥ್ ಬೇಸರ ವ್ಯಕ್ತ ಪಡಿಸಿದ್ದಾರೆ.

    ಮೋದಿಗೆ ಮತ್ತು ದೇಶಕ್ಕೆ ಯಾವುದಾದರೂ ಗಂಢಾಂತರ ಎದುರಾಗಲಿದೆ

   ಮೋದಿಗೆ ಮತ್ತು ದೇಶಕ್ಕೆ ಯಾವುದಾದರೂ ಗಂಢಾಂತರ ಎದುರಾಗಲಿದೆ

   "ಅಂದಿನಿಂದ ಪ್ರತೀ ಬಾರಿ ಎಚ್ಚರಿಕೆ ಕೊಡುತ್ತಲೇ ಬಂದೆ. ಎಲ್ಲಾ ಮಾಧ್ಯಮಗಳಲ್ಲೂ ನನ್ನ ಅಭಿಪ್ರಾಯವನ್ನು ಹೇಳಿದ್ದೆ. ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮತ್ತು ದೇಶಕ್ಕೆ ಯಾವುದಾದರೂ ಗಂಢಾಂತರ ಎದುರಾಗಲಿದೆ. ದತ್ತಾತ್ರೇಯ ದೇವರಿಂದ ಒಬ್ಬರಿಂದಲೇ ಇದನ್ನು ವಾಸಿ ಮಾಡಲು ಸಾಧ್ಯ ಎನ್ನುವ ಮಾತನ್ನು ಹೇಳಿದ್ದೆ. ಅಂದು ಹೇಳಿದ ಮಾತನ್ನು ಈಗಲೂ ಪುನರುಚ್ಚಿಸುತ್ತೇನೆ"ಎಂದು ಗುರೂಜಿ ಹೇಳಿದ್ದಾರೆ.

    ರಾಹು-ಕೇತು ಸಂಯೋಗದಿಂದ ಮತ್ತೆ ವೈರಸ್ ದಾಳಿ

   ರಾಹು-ಕೇತು ಸಂಯೋಗದಿಂದ ಮತ್ತೆ ವೈರಸ್ ದಾಳಿ

   ಸಾವಿನ ಸಂಖ್ಯೆಯಲ್ಲಿ ಏರುಪೇರಾಗಬಹುದು, ವಿದೇಶಗಳಲ್ಲಿ ಈಗ ಕೊರೊನಾ ನಿಯಂತ್ರಣದಲ್ಲಿ ಇರಬಹುದು. ಮುಂದಿನ ದಿನಗಳಲ್ಲಿ ರಾಹು-ಕೇತು ಸಂಯೋಗದಿಂದ ಮತ್ತೆ ವೈರಸ್ ದಾಳಿಯಾಗಬಹುದು. ಪ್ರಧಾನಿಗೆ ಗಾಣಗಾಪುರ ದತ್ತಾತ್ರೇಯನ ದರ್ಶನ ಮಾಡಲು ಹೇಳಿದ್ದೆ, ಮಾಡಿಲ್ಲ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ತ್ರಿಪುರಾಕ್ಕೆ ಹೋಗುವ ಪ್ರಧಾನಿ ಇಲ್ಲಿಗೆ ಬರುವುದಿಲ್ಲ ಎಂದು ದ್ವಾರಕಾನಾಥ್ ಗುರೂಜಿ ಹೇಳಿದ್ದಾರೆ.

    ಮುಂಬರುವ ಜೂನ್ ಒಂದನೇ ತಾರೀಕು ಕಳೆದ ಕೂಡಲೇ ಸೋಂಕು ಇಳಿಕೆ

   ಮುಂಬರುವ ಜೂನ್ ಒಂದನೇ ತಾರೀಕು ಕಳೆದ ಕೂಡಲೇ ಸೋಂಕು ಇಳಿಕೆ

   ಪ್ರಜೆಗಳ ಮತ್ತು ದೊರೆಯ ಪಾಪಕರ್ಮದಿಂದಾಗಿ ಈ ರೀತಿಯ ಕೆಟ್ಟ ವಾತಾವರಣ ನಿರ್ಮಾಣವಾಗುತ್ತದೆ. ಈ ವ್ಯಾಧಿಯಿಂದ ನನಗೂ ಬಹಳ ಬೇಸರವಾಗಿದೆ. ಮುಂಬರುವ ಜೂನ್ ಒಂದನೇ ತಾರೀಕು ಕಳೆದ ಕೂಡಲೇ ಸೋಂಕು ಇಳಿಯುತ್ತಾ ಬರುತ್ತದೆ. ಆದರೆ, ಸಾರ್ವಜನಿಕರು ಸರಕಾರದ ನಿಯಮಗಳನ್ನು ಮುಂದಿನ ಕೆಲವು ತಿಂಗಳು ಪಾಲಿಸಲು ಮರೆಯದಿರಿ.

   English summary
   Astrology Prediction By Famous Astrologer Rajaguru Dwarakanath Guruji On Coronavirus.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X