ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ: ಯಾರಿಗೆ ಯಾವ ಉದ್ಯೋಗ- ವೃತ್ತಿ, ವ್ಯಾಪಾರ ಸೂಕ್ತ? ಇಲ್ಲಿದೆ ಮಾಹಿತಿ

By ಶ್ರೀನಿವಾಸ ಗುರೂಜಿ
|
Google Oneindia Kannada News

"ಬೆಟ್ಟಕ್ಕೆ ಕಲ್ಲು ಹೊರುವುದು" ಎಂಬ ಮಾತೊಂದಿದೆ. ಯಾವುದೇ ವ್ಯಕ್ತಿಗೆ ತನ್ನ ಸ್ವಭಾವಕ್ಕೆ ಅಲ್ಲದ, ತನ್ನ ಜಾತಕಕ್ಕೆ ಹೊಂದದ ಉದ್ಯೋಗವನ್ನೋ ಉದ್ಯಮವನ್ನೋ ಮಾಡಿದರೆ ಹೀಗೇ ಆಗುತ್ತದೆ. ಆದ್ದರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ ಅಥವಾ ಪೋಸ್ಟ್ ಗ್ರಾಜ್ಯುಯೇಷನ್ ಹಂತದಲ್ಲೇ ಮುಂದೆ ಏನು ಉದ್ಯೋಗ ಅಥವಾ ವೃತ್ತಿ ಕೈಗೊಳ್ಳಬೇಕು ಎಂಬುದನ್ನು ನಿರ್ಧಾರ ಮಾಡುವ ಜತೆಗೆ, ಅದು ತನಗೆ ಪೂರಕವೇ ಎಂಬುದನ್ನು ಒಮ್ಮೆ ಜಾತಕ ತೋರಿಸಿಕೊಂಡು ಖಾತ್ರಿ ಪಡಿಸಿಕೊಳ್ಳಿ.

ಜನ್ಮ ಜಾತಕದಲ್ಲಿ ಇರುವ ಕುಂಡಲಿಯಲ್ಲಿ ಹನ್ನೆರಡು ಮನೆಗಳಿರುತ್ತವೆ. ಚಂದ್ರ ಇರುವುದು ಜನ್ಮ ರಾಶಿಯಾದರೆ, ಲಗ್ನ ಎಂದಿರುವುದು ನಿಮ್ಮ ಜೀವನದ ಎಲ್ಲ ಆಗು ಹೋಗುಗಳನ್ನು ತಿಳಿಯುವುದಕ್ಕೆ ಜಿಪಿಎಸ್ ನಂತೆ ಸಹಾಯ ಮಾಡುತ್ತದೆ. ಲಗ್ನ ಅಂದರೆ ಆ ವ್ಯಕ್ತಿಯ ಸ್ವಭಾವವಾದರೆ, ಅಲ್ಲಿಂದ ಎರಡನೇ ಮನೆ ಧನ ಸ್ಥಾನ, ವಾಕ್ ಸ್ಥಾನ.

ಜ್ಯೋತಿಷ್ಯ: ಮಕ್ಕಳೇಕೆ ತಂದೆ-ತಾಯಿಯ ಮಾತು ಕೇಳುವುದಿಲ್ಲ? ಇಲ್ಲಿದೆ ಉತ್ತರಜ್ಯೋತಿಷ್ಯ: ಮಕ್ಕಳೇಕೆ ತಂದೆ-ತಾಯಿಯ ಮಾತು ಕೇಳುವುದಿಲ್ಲ? ಇಲ್ಲಿದೆ ಉತ್ತರ

ಇನ್ನು ಹತ್ತನೇ ಮನೆ ಕರ್ಮ ಸ್ಥಾನವಾದರೆ (ಏನು ಕೆಲಸ ಅಥವಾ ವೃತ್ತಿ ಮಾಡುತ್ತೀರಿ ಎಂಬುದನ್ನು ತಿಳಿಸುತ್ತದೆ), ಹನ್ನೊಂದನೇ ಮನೆ ಲಾಭ ಸ್ಥಾನ. ಹಾಗಂದರೆ ವ್ಯಾಪಾರದ ಮೂಲಕ ಲಾಭ ಗಳಿಸುವ ಯೋಗ ಇದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.

Astrology: Job Or Business Which One Suitable For Whom?

ಲಗ್ನದಿಂದ ಆ ವ್ಯಕ್ತಿಯು ಶಾಂತ ಸ್ವಭಾವದವರೋ, ಕೋಪಿಷ್ಟರೋ, ಸಹನೆ- ತಾಳ್ಮೆ ಇದೆಯೋ ಇತ್ಯಾದಿ ತಿಳಿಯಬಹುದು. ಎರಡನೇ ಮನೆ ಮೂಲಕ ಯಾವ ರೀತಿ ಒಬ್ಬ ವ್ಯಕ್ತಿಗೆ ಹಣ ಬರುತ್ತದೆ ಎಂದು ತಿಳಿಯಬಹುದು. ಆತನ ವಾಕ್ಚಾತುರ್ಯದಿಂದಲೋ ಅಥವಾ ಅದಕ್ಕಾಗಿ ದೈಹಿಕವಾಗಿ ಬಹಳ ಶ್ರಮಿಸಬೇಕೋ, ಬುದ್ಧಿಯನ್ನು ಖರ್ಚು ಮಾಡಿ ಹಣದ ಸಂಪಾದನೆ ಮಾಡುತ್ತಾರೋ ಹೀಗೆ.

ಹತ್ತನೇ ಸ್ಥಾನದಿಂದ ಉದ್ಯೋಗ ಮಾಡುತ್ತಾರೋ ಅಥವಾ ವೃತ್ತಿಯೋ ಎಂಬುದನ್ನು ಗುರುತಿಸಬಹುದು. ಅಷ್ಟೇ ಅಲ್ಲ, ಯಾವ ಕ್ಷೇತ್ರವನ್ನು ಆರಿಸಿಕೊಳ್ಳುವುದು ಉತ್ತಮ ಎಂಬುದನ್ನು ಕೂಡ ಹೇಳಲು ಸಾಧ್ಯವಿದೆ. ಯಾವ ಉದ್ಯೋಗ ಹಾಗೂ ವೃತ್ತಿಯಲ್ಲಿ ಮುಂದುವರಿದರೆ ಏಳ್ಗೆ- ಪ್ರಗತಿ ಇದೆ ಎಂಬುದು ತಿಳಿದುಕೊಳ್ಳಬಹುದು.

ಹನ್ನೊಂದು ಸ್ಥಾನ ಲಾಭ ಸ್ಥಾನ. ಅದರ ಮೂಲಕ ಸ್ವಂತ ವ್ಯಾಪಾರ- ಉದ್ಯಮ ಆರಂಭಿಸಿದರೆ ಅದರಲ್ಲಿ ಯಶಸ್ಸು ದೊರೆಯುತ್ತದೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಕೆಲವು ಜಾತಕರಿಗೆ ಮಧ್ಯವಯಸ್ಸಿನ ತನಕ ಯಶಸ್ಸು ದೊರೆಯುವುದಿಲ್ಲ. ಕೆಲವರಿಗೆ ತುಂಬ ಚಿಕ್ಕವಯಸ್ಸಿನಲ್ಲೇ ದೊಡ್ಡ ಯಶಸ್ಸು ದೊರೆಯುತ್ತದೆ. ಅದಕ್ಕೆ ದಶಾ- ಭುಕ್ತಿಗಳು ಮತ್ತು ಜಾತಕದಲ್ಲಿನ ಗ್ರಹ ಸ್ಥಿತಿಗಳು ಕಾರಣ ಆಗುತ್ತವೆ.

ಕನಸಲ್ಲಿ ಹಾವು ಕಾಣಿಸಿಕೊಳ್ಳುವುದರ ಸೂಚನೆ ಏನು? ಸರ್ಪ ದೋಷ ಪರಿಹಾರ ಹೇಗೆ?ಕನಸಲ್ಲಿ ಹಾವು ಕಾಣಿಸಿಕೊಳ್ಳುವುದರ ಸೂಚನೆ ಏನು? ಸರ್ಪ ದೋಷ ಪರಿಹಾರ ಹೇಗೆ?

ಇನ್ನು ಜಾತಕದಲ್ಲಿ ಗ್ರಹಗಳ ಉಚ್ಚ- ನೀಚ ಸ್ಥಿತಿಯನ್ನು ಸಹ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕು. ಸರ್ಕಾರಿ ಕೆಲಸ ಸಿಗಬೇಕಿದ್ದರೆ ಯಾವ ಗ್ರಹದ ಅನುಗ್ರಹ ಬೇಕು ಎಂಬುದು ಜ್ಯೋತಿಷಿಯಾದವರಿಗೆ ಗೊತ್ತಿದ್ದರಷ್ಟೇ ಜಾತಕ ಕೇಳಲು ಬಂದ ವ್ಯಕ್ತಿಗೆ, ನೀವು ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಿ ಎಂದು ಹೇಳಲು ಸಾಧ್ಯ.

ಕೆಲವರಿಗೆ ಜ್ಯೋತಿಷ್ಯದಲ್ಲಿ ಎಷ್ಟೊಂದು ಕೋರ್ಸ್ ಗಳೇ ಆಗಿರುತ್ತವೆ. ಆದರೆ ಅವರು ಗಣಿತ ವಿಭಾಗದಲ್ಲಿ ಸಾಧನೆ ಮಾಡಬಹುದಾಗಿರುತ್ತದೆ ವಿನಾ ಫಲ ಭಾಗ ಒಲಿಯುವುದೇ ಇಲ್ಲ. ಅದೇ ರೀತಿ ಲಾಯರ್, ಚಾರ್ಟರ್ಡ್ ಅಕೌಂಟೆಂಟ್, ವೈದ್ಯರು, ಎಂಜಿನಿಯರ್, ಪತ್ರಕರ್ತ, ವಿಜ್ಞಾನಿ, ಜ್ಯೋತಿಷಿ, ಅಡುಗೆ ಕಾಂಟ್ರ್ಯಾಕ್ಟರ್, ಪುರೋಹಿತ... ಹೀಗೆ ಯಾವ ವೃತ್ತಿ ಸೂಕ್ತ ಎಂಬುದನ್ನು ಜಾತಕದ ಪರಿಶೀಲನೆ ಮೂಲಕ ತಿಳಿಸಲು, ಮಾರ್ಗದರ್ಶನ ನೀಡಲು ಸಾಧ್ಯವಿದೆ.

ಕೀರ್ತಿ, ಹಣ, ಯಶಸ್ಸು, ಸುಖ ನೀಡುವ ಶುಕ್ರ ಗ್ರಹ ನಿಮ್ಮ ಜಾತಕದಲ್ಲಿ ಹೇಗಿದೆ?ಕೀರ್ತಿ, ಹಣ, ಯಶಸ್ಸು, ಸುಖ ನೀಡುವ ಶುಕ್ರ ಗ್ರಹ ನಿಮ್ಮ ಜಾತಕದಲ್ಲಿ ಹೇಗಿದೆ?

ಆದ್ದರಿಂದ ಉದ್ಯೋಗದಲ್ಲೋ ವೃತ್ತಿಯಲ್ಲೋ ಅಥವಾ ಉದ್ಯಮದಲ್ಲೋ ಯಶಸ್ಸು ಸಿಗುತ್ತಿಲ್ಲ ಎಂದು ಕೊರಗುವ ಬದಲಿಗೆ ಒಮ್ಮೆ ನಿಮ್ಮ ಜಾತಕ ಪರಿಶೀಲನೆ ಮಾಡಿಸಿಕೊಳ್ಳಿ. ಬೆಟ್ಟಕ್ಕೆ ಕಲ್ಲು ಹೊರುವ ಅನವಶ್ಯಕ ಶ್ರಮ ತಪ್ಪುತ್ತದೆ.

ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ ವೈಯಕ್ತಿಕವಾಗಿ ಭೇಟಿಗೆ ಮೊಬೈಲ್ ಫೋನ್ ಸಂಖ್ಯೆ 9886665656- 9886155755 ಸಂಪರ್ಕಿಸಿ.

English summary
Here is an analysis about job or business which one suitable for whom according to astrology?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X