ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ: ಯಾವ ವಾರ ಹುಟ್ಟಿದವರ ಗುಣ ಹೇಗಿರುತ್ತೆ?

ಯಾವ ವಾರ ಜನಿಸಿದವರ ಗುಣ ಹೇಗಿರುತ್ತದೆ ಎಂಬುದರ ಸ್ಥೂಲ ಪರಿಚಯ ಇಲ್ಲಿದೆ. ಗುಣಾವಗುಣಗಳು, ಯಾವ ವಾರ ಜನಿಸಿದವರಿಗೆ ಅಧಿಪತಿ ಯಾರು ಎಂಬ ಮಾಹಿತಿ ಕೂಡ ಇಲ್ಲಿದೆ

By ರವೀಶ್ ಗೌತಮ್
|
Google Oneindia Kannada News

ಜ್ಯೋತಿಷ್ಯ ಸಾಗರ ಇದ್ದಂತೆ. ಒಬ್ಬೊಬ್ಬರ ಜ್ಞಾನ-ಅನುಭವ ಒಂದೊಂದು ರೀತಿಯಲ್ಲಿರುತ್ತದೆ. ಈ ದಿನ ಯಾವ ವಾರ ಹುಟ್ಟಿದವರ ಗುಣ ಹೇಗಿರುತ್ತದೆ ಎಂದು ತಿಳಿಸ್ತೀವಿ. ನನ್ನ ಮಗ-ಮಗಳು ವಿಪರೀತ ಹಟ. ನಮ್ಮ ಮನೇಲಿ ಯಾರೂ ಹೀಗಿಲ್ಲ ಅಂತ ಮಾತನಾಡುವ ತಂದೆ-ತಾಯಿಯನ್ನು ನೋಡಿರ್ತೀರಿ.

ಹೌದು, ಆ ರೀತಿ ಗುಣ ಬರುವುದಕ್ಕೆ ಹುಟ್ಟಿದ ವಾರ ಕೂಡ ಕಾರಣ ಅನ್ನೋದು ನಿಮಗೆ ಗೊತ್ತಿರಲಿ. ಆಯಾ ದಿನ ಹುಟ್ಟಿದವರ ಮೇಲೆ ಆಯಾ ಗ್ರಹದ ಪ್ರಭಾವ ಇರುತ್ತದೆ. ಆದ್ದರಿಂದ ಗುಣ-ನಡವಳಿಕೆಗಳು ಬದಲಾಗುತ್ತವೆ. ಹಾಗಂತ ಇದರಿಂದ ಇಡೀ ಜೀವನದ ಭವಿಷ್ಯ ಹೀಗೆ ಇರುತ್ತದೆ ಅಂತ ತಿಳಿಯಬೇಡಿ.[ಯುಗಾದಿಗೆ ದ್ವಾದಶ ರಾಶಿಗಳಿಗೆ ಆಯವ್ಯಯ ಹೇಗಿದೆ?]

ಏಕೆಂದರೆ, ಜನ್ಮ ಕಾಲದಲ್ಲಿನ ಜಾತಕ, ಯೋಗ, ಶುಭಾಶುಭ ಫಲಗಳು, ದಶೆ ಎಲ್ಲವೂ ಆಯಾ ವ್ಯಕ್ತಿಯ ಜೀವನದಲ್ಲಿ ಖಂಡಿತಾ ಪರಿಣಾಮ ಬೀರುತ್ತವೆ. ಅವೆಲ್ಲದರ ಮಧ್ಯೆ ಸ್ಥೂಲವಾಗಿ ನೋಡಿದಾಗ ಇಲ್ಲಿ ಕೊಟ್ಟಿರುವ ಗುಣಗಳ ಪೈಕಿ ಹಲವು, ಕೆಲ ಬಾರಿ ಕೆಲವು ಗುಣಗಳು ತಾಳೆಯಾಗುತ್ತವೆ. ಇದನ್ನು ಓದಿಕೊಂಡರೆ ಗೊಂದಲವಿದ್ದರಂತೂ ಕಡಿಮೆಯಾಗುತ್ತದೆ.[ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವುದು ಅದೃಷ್ಟ ರತ್ನ?]

ಭಾನುವಾರ

ಭಾನುವಾರ

ಈ ದಿನ ಹುಟ್ಟಿದವರ ಅಧಿಪತಿ ಸೂರ್ಯ. ವಿಪರೀತ ಕ್ರಿಯೇಟಿವ್. ತಪ್ಪು-ತಲೆಹರಟೆಗಳು ಮಾಡೋದಿದ್ದರೂ ಹೊಸದಾಗಿ ಮತ್ತು ಈ ಹಿಂದೆ ಮಾಡದಿರುವಂಥದ್ದನ್ನು ಮಾಡುತ್ತಾರೆ. ತುಂಬ ಚಟುವಟಿಕೆ, ಚೀರಾಟ, ತಮ್ಮ ಕಡೆಗೆ ಎಲ್ಲರ ಗಮನ ಇರಬೇಕು ಎಂಬ ಆಲೋಚನೆ. ಸಂಭಾಳಿಸುವುದರಲ್ಲಿ ಸಾಕು ಬೇಕಾಗುತ್ತದೆ. ದೊಡ್ಡವರಾದಂತೆ ನೇರವಂತಿಕೆ, ಸ್ವಲ್ಪ ಮಟ್ಟಿಗಿನ ಸ್ವಾರ್ಥ ಮುಂದುವರಿಯುತ್ತದೆ.

ಸೋಮವಾರ

ಸೋಮವಾರ

ಈ ದಿನ ಹುಟ್ಟಿದವರ ಅಧಿಪತಿ ಚಂದ್ರ. ಸೋಡಿದ ತಕ್ಷಣ ಗಮನಸೆಳೆಯುತ್ತಾರೆ. ವಿನಯವಂತಿಕೆ. ಎಲ್ಲ ಕಡೆಯೂ ಹೊಂದಿಕೊಳ್ಳುವ ಮನಸ್ಥಿತಿ. ತಾಯಿ ಕರುಳು. ತುಂಬ ಸೂಕ್ಷ್ಮ ಸ್ವಭಾವ. ಚಂಚಲಚಿತ್ತರಾಗಿರುತ್ತಾರೆ.ಮೃದುವಾದ ಮಾತಿನಿಂದ ಸಂಧಾನ ಮಾಡಿಸುವುದರಲ್ಲಿ ಎತ್ತಿದ ಕೈ.

ಮಂಗಳವಾರ

ಮಂಗಳವಾರ

ಇವರು ಬಲೇ ಧೈರ್ಯವಂತರು. ನಾಯಕತ್ವ ಗುಣಗಳಿರುತ್ತವೆ. ಅಧಿಪತಿ ಕುಜ. ಕೆಲವು ಸಲ ತಾಳ್ಮೆ ಕಳೆದುಕೊಂಡರೆ ಮಾತ್ರ ಇವರನ್ನು ಸುಧಾರಿಸುವುದು ತೀರಾ ಕಷ್ಟ ಕಷ್ಟ. ಕೋಪದ ಭರದಲ್ಲಿ ಕೆಲ ಬಾರಿ ಅನಾಹುತಗಳನ್ನು ಮಾಡಿಕೊಳ್ಳುವುದು ಸಹ ಉಂಟು. ಆಗ ತಮ್ಮದೇ ವಸ್ತುವಾದರೂ ಬಿಸಾಡಿ, ಚಚ್ಚಿ-ಕುಟ್ಟಿ ಹಾಳು ಮಾಡ್ತಾರೆ.

ಬುಧವಾರ

ಬುಧವಾರ

ಮಾನಸಿಕವಾಗಿ ತುಂಬ ಸದೃಢರು. ಹೇಳಬೇಕಾದ್ದನ್ನು ಹೇಳಬೇಕಾದ ರೀತಿಯಲ್ಲಿ ಎದುರಿನವರಿಗೆ ದಾಟಿಸುವುದರಲ್ಲಿ ನಿಸ್ಸೀಮರು. ಇವರ ಆಲೋಚನೆಗಳೇ ವಿಭಿನ್ನವಾಗಿರುತ್ತವೆ. ತರ್ಕಬದ್ಧವಾಗಿ ಮಾತನಾಡುತ್ತಾರೆ. ಆದರೆ ಸರಿಯಾದ ಟೈಮಲ್ಲಿ ಕೈ ಕೊಡ್ತಾರೆ. ವಿಪರೀತವಾದ ಮಾತು, ಬೇಜವಾಬ್ದಾರಿ ಇರುತ್ತದೆ. ಇವರ ಅಧಿಪತಿ ಬುಧ.

ಗುರುವಾರ

ಗುರುವಾರ

ಅಧಿಪತಿ ಗುರು. ಇವರಿಗೆ ಸ್ವಲ್ಪ ಮರ್ಯಾದೆ ಮಾಡಲಿ ಎಂಬ ನಿರೀಕ್ಷೆ ಇರುತ್ತದೆ. ಅದಕ್ಕೆ ತಕ್ಕ ಗೌರವವೂ ಸಿಗುತ್ತದೆ. ಖುಷಿಖುಷಿಯಾಗಿ ಇರ್ತಾರೆ. ನಾಲಗೆ ತುಂಬ ಚುರುಕಾಗಿರುತ್ತದೆ. ಒಂದಿಷ್ಟು ಅಧ್ಯಾತ್ಮ-ಧರ್ಮ-ಕರ್ಮ ಅಂತ ಡೈಲಾಗ್ ಹೊಡೀತಾರೆ. ಸೋಂಬೇರಿತನ ಬಿಡಬೇಕು ಅಂತ ಇವರಿಗೆ ಹೇಳಿದರೆ ಎಲ್ಲಿಲ್ಲದ ಸಿಟ್ಟು ಮಾಡಿಕೊಳ್ತಾರೆ. ಬೇರೆಯವರ ತಪ್ಪು ಹುಡುಕುವುದನ್ನು ತುಂಬ ಎಂಜಾಯ್ ಮಾಡ್ತಾರೆ.

ಶುಕ್ರವಾರ

ಶುಕ್ರವಾರ

ಇವರ ಪ್ರೀತಿಯನ್ನು ಸಹಿಸಿಕೊಳ್ಳೋದು ಕಷ್ಟ. ಅಂಟಿಕೊಂಡರೆ ಬಿಡೋ ಆಸಾಮಿಗಳಲ್ಲ. ಕರುಣೆ ಜಾಸ್ತಿ. ಬೇರೆಯವರ ಬಗ್ಗೆ ವಿಪರೀತ ಕಾಳಾಜಿ ಮಾಡ್ತಾರೆ. ಆಲಸಿಗಳು. ಲೈಂಗಿಕ ಆಸಕ್ತಿ ಹೆಚ್ಚು. ಪೋಲಿ ಮಾತನಾಡುತ್ತಾರೆ. ಇವರೊಳಗೆ ಕಲಾವಿದ ಮನಸಿರುತ್ತದೆ. ಅದರೆ ಆರಂಭದಲ್ಲೇ ಹೇಳಿದ ಹಾಗೆ ತುಂಬ ಹಚ್ಚಿಕೊಂಡರೆ ಕಷ್ಟ ಕಷ್ಟ. ಇವರ ಅಧಿಪತಿ ಶುಕ್ರ

ಶನಿವಾರ

ಶನಿವಾರ

ಇವರು ಸಾಮಾನ್ಯ ಬುದ್ಧಿವಂತರಲ್ಲ. ತಮ್ಮ ಕೆಲಸದ ಬಗ್ಗೆಯೇ ಯೋಚನೆ ಮಾಡ್ತಿರ್ತಾರೆ. ತುಂಬ ಶ್ರಮ ವಹಿಸಿ ನೀಡಿದ ಕೆಲಸವನ್ನು ಪೂರೈಸುತ್ತಾರೆ. ವಾಸ್ತವವಾದಿಗಳು. ಸ್ವಲ್ಪ ಅನುಮಾನ ಜಾಸ್ತಿ. ಜಗತ್ತಿನ ಬಗ್ಗೆ ತುಂಬ ದೂರುಗಳು ಇರುತ್ತವೆ. ಒಂದಿಷ್ಟು ಹೊಟ್ಟೆಕಿಚ್ಚು ಅದರ ಜತೆಗೆ ಭಯದ ಸ್ವಭಾವ ಇವರದು. ಈ ದಿನ ಹುಟ್ಟಿದವರ ಅಧಿಪತಿ ಶನಿ.

English summary
Traditional astrological lore seems to suggest that persons born on days of the week "ruled" by a particular planet may have some innate characteristics of that "ruler".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X