• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರೇಂದ್ರ ಮೋದಿ ಅವರಿಗಿರುವ ಬುಧಾದಿತ್ಯ ಯೋಗದ ಬಗ್ಗೆ ನಿಮಗೆಷ್ಟು ಗೊತ್ತು?

By ಶ್ರೀ ಶಂಕರನಾರಾಯಣ
|

ಈ ದಿನ ನಿಮಗೆಲ್ಲ ಒಂದು ಯೋಗದ ಬಗ್ಗೆ ತಿಳಿಸಿಕೊಡುತ್ತೇನೆ. ನೀವು ಮಾಡಬೇಕಾದ್ದು ಇಷ್ಟೇ. ನಿಮ್ಮ ಜಾತಕವನ್ನು ಎದುರಿಗೆ ಇಟ್ಟುಕೊಳ್ಳಿ. ಅದರಲ್ಲಿ ರಾಶಿ ಅಥವಾ ಜನ್ಮಕುಂಡಲಿ ನೋಡಿಕೊಳ್ಳಬೇಕು. ಜನ್ಮ ಜಾತಕದಲ್ಲಿ ರವಿ ಹಾಗೂ ಬುಧ ಎರಡೂ (ಇವುಗಳನ್ನು ಕನ್ನಡದಲ್ಲಿ ರ, ಬು ಅಂತಲೂ ಇಂಗ್ಲಿಷಿನಲ್ಲಿ Su, Me ಅಂತಲೂ ನಮೂದಿಸಲಾಗಿರುತ್ತದೆ) ಒಂದೇ ಕಡೆ ಇದೆಯಾ ಎಂದು ಪರೀಕ್ಷಿಸಿಕೊಳ್ಳಿ.

   R Ashwin , ಬೌಲರ್‌ಗಳ ನೆರವಿಗೆ ಹೊಸ ಐಡಿಯಾ ಕೊಟ್ಟಿದ್ದಾರೆ | Oneindia Kannada

   ಈ ರೀತಿ ಜಾತಕದಲ್ಲಿ ಒಂದೇ ಮನೆಯಲ್ಲಿ ರವಿ, ಬುಧರು ಇರುವುದನ್ನು ಬುಧಾದಿತ್ಯ ಯೋಗ ಎನ್ನಲಾಗುತ್ತದೆ. ಇದರಿಂದ ಬುದ್ಧಿವಂತಿಕೆ, ಅದೃಷ್ಟ, ಕೀರ್ತಿ, ಹಣ, ಅಧಿಕಾರ, ಗೌರವ ಮತ್ತಿತರ ಶುಭ ಫಲಗಳನ್ನು ನುಡಿಯಬೇಕಾಗುತ್ತದೆ. ಆದರೆ ಒಟ್ಟಿಗೆ ಇದ್ದ ಮಾತ್ರಕ್ಕೆ ಇವೆಲ್ಲವೂ ದೊರೆಯುತ್ತದೆ ಅಂತಲ್ಲ.

   ಜನ್ಮ ಕುಂಡಲಿಯಲ್ಲಿ ಲಗ್ನದಲ್ಲೋ ಅಥವಾ ಲಗ್ನದಿಂದ ಎಷ್ಟನೇ ಮನೆಯಲ್ಲಿ, ಉಚ್ಚ ಸ್ಥಾನವೋ ಹಾಗೂ ಯಾವ ಕಾರಕತ್ವ ಮತ್ತು ಯಾವ ಗ್ರಹದ ದೃಷ್ಟಿಯಿದೆ ಎಂಬುದನ್ನು ಪರೀಕ್ಷಿಸಬೇಕು. ಸಾಮಾನ್ಯವಾಗಿ ಬಹುಸಂಖ್ಯಾತ ಜಾತಕರಲ್ಲಿ ಈ ಯೋಗ ಕಂಡುಬರುತ್ತದೆ. ಆದರೆ ಎಲ್ಲರಿಗೂ ಆ ಫಲ ದೊರೆಯುವುದಿಲ್ಲ.

   ನರೇಂದ್ರ ಮೋದಿ ಜಾತಕದಲ್ಲಿ ಬುಧಾದಿತ್ಯ ಯೋಗ

   ಆದರೆ, ಈ ಫಲದ ಸಮರ್ಥ ಬಳಕೆ ಆಗಿರುವುದು ನರೇಂದ್ರ ಮೋದಿ ಅವರಲ್ಲಿ. ಅವರಿಗೆ ಬುಧಾದಿತ್ಯ ಯೋಗದ ಜತೆಗೆ ಶಶಿ- ಮಂಗಳ (ಚಂದ್ರ್ ಹಾಗೂ ಕುಜ ಒಂದೇ ಮನೆಯಲ್ಲಿ ಇರುವುದು) ಯೋಗ ಸಹ ಇದೆ. ಅದಿರಲಿ. ಬುಧಾದಿತ್ಯ ಯೋಗದ ಶುಭ ಫಲ ದೊರೆಯಬೇಕಿದ್ದಲ್ಲಿ ಎರಡೂ ಗ್ರಹ ಉತ್ತಮ ಸ್ಥಾನದಲ್ಲೇ ಇರಬೇಕು.

   ಜ್ಯೋತಿಷ್ಯ: ಯಾರನ್ನೂ ಕಾಡಬಹುದಾದ ದೃಷ್ಟಿದೋಷ ಮತ್ತು ಪರಿಹಾರ ಮಾರ್ಗ

   ಒಂದು ಗ್ರಹ ಉಚ್ಚವಾಗಿದ್ದು, ಮತ್ತೊಂದು ನೀಚ ಆಗಿದ್ದಲ್ಲಿ ಅಥವಾ ದೋಷಪ್ರದವಾಗಿದ್ದಲ್ಲಿ ಈ ಯೋಗದ ಫಲ ಸಿಗುವುದಿಲ್ಲ ಅಥವಾ ಪೂರ್ಣ ಪ್ರಮಾಣದಲ್ಲಿ ಸಿಗುವುದಿಲ್ಲ. ಆಗ ನಕಾರಾತ್ಮಕ ಪ್ರಭಾವ ಬೀರುವ ಗ್ರಹವು ಶುಭ ಫಲವು ಪೂರ್ಣವಾಗಿ ದೊರೆಯದಂತೆ ಮಾಡಿಬಿಡುತ್ತದೆ. ಆದರೆ ಎರಡೂ ಗ್ರಹ ನೀಚವಾಗಿದ್ದಲ್ಲಿ ಮಾತ್ರ ದುಷ್ಪ್ರಭಾವ ಕಾಣಬೇಕಾಗುತ್ತದೆ.

   ಉದಾಹರಣೆಗೆ, ಒಂದು ವೇಳೆ ರವಿ ಅನುಕೂಲಕರವಾಗಿದ್ದು, ಬುಧ ದುಷ್ಪ್ರದವಾಗಿದ್ದಲ್ಲಿ ಯಾವ ರಾಶಿಯಲ್ಲಿ ಇವೆರಡು ಗ್ರಹಗಳು ಒಟ್ಟಾಗಿವೆ ಎಂಬುದನ್ನು ನೋಡಿ, ಆ ಕಾರಕತ್ವಕ್ಕೆ ತಕ್ಕಂತೆ ಫಲ ನುಡಿಯಬೇಕಾಗುತ್ತದೆ. ಜಾತಕದಲ್ಲಿ ಎರಡೂ ಗ್ರಹ ಒಟ್ಟಾಗಿದ್ದು, ದುಷ್ಪ್ರಭಾವ ಬೀರುತ್ತಿದ್ದಲ್ಲಿ ಮಾತ್ರ ಅದಕ್ಕೆ ತಕ್ಕ ಶಾಂತಿ ಮಾಡಿಕೊಳ್ಳಬೇಕಾಗುತ್ತದೆ.

   ರವಿ- ಬುಧ ಗ್ರಹರ ಉಚ್ಚ ಹಾಗೂ ನೀಚ ಕ್ಷೇತ್ರಗಳು

   ರವಿ ಗ್ರಹವು ಮೇಷದಲ್ಲಿ ಉಚ್ಚ ಹಾಗೂ ತುಲಾದಲ್ಲಿ ನೀಚ. ಇನ್ನು ಬುಧ ಗ್ರಹವು ಕನ್ಯಾ ರಾಶಿಯಲ್ಲಿ ಉಚ್ಚ ಸ್ಥಿತಿಯಲ್ಲಿ ಇದ್ದರೆ, ಮೀನ ರಾಶಿಯಲ್ಲಿ ನೀಚವಾಗುತ್ತದೆ. ಜಾತಕ ನೋಡುವಾಗ ಗ್ರಹಗಳ ಬಲಾಬಲವನ್ನು ಪರೀಕ್ಷಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ರವಿ ಹಾಗೂ ಬುಧ ಮತ್ತು ಇತರ ಗ್ರಹಗಳ ಸ್ಥಾನವನ್ನು, ಅದರ ಬಲವನ್ನು ಅಳೆಯಬೇಕಾಗುತ್ತದೆ.

   ರವಿ ಹಾಗೂ ಬುಧ ಗ್ರಹ ಎರಡೂ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ತೆಗೆದುಕೊಳ್ಳುವ ಸಮಯ 1 ತಿಂಗಳು. ಆದ್ದರಿಂದ ಬಹುತೇಕರ ಜಾತಕದಲ್ಲಿ ಬುಧಾದಿತ್ಯ ಯೋಗ ಕಂಡುಬರುತ್ತದೆ. ಆದರೆ ಈಗಾಗಲೇ ಹೇಳಿರುವಂತೆ ಆ ಗ್ರಹಗಳು ಯಾವ ರಾಶಿಯಲ್ಲಿವೆ, ಆ ರಾಶಿ ಅವುಗಳಿಗೆ ಉತ್ತಮ ಬಲ ನೀಡುತ್ತದೋ ಇಲ್ಲವೋ ಮತ್ತು ಇತರ ಗ್ರಹಗಳ ಬಲಾಬಲ ಹೇಗಿದೆ ಎಂದು ನೋಡಿದ ನಂತರವೇ ಫಲ ನುಡಿಯಬೇಕಾಗುತ್ತದೆ.

   ಈ ಯೋಗಕ್ಕೆ ಸಂಬಂಧಿಸಿದಂತೆ ಅಥವಾ ಜಾತಕದಲ್ಲಿನ ಬೇರೆ ಯಾವುದೇ ಪ್ರಶ್ನೆ, ಗೊಂದಲ, ಭವಿಷ್ಯಕ್ಕೆ ಸಂಬಂಧಿಸಿದ ಮಾರ್ಗದರ್ಶನಕ್ಕಾಗಿ ವೈಯಕ್ತಿಕವಾಗಿ ಭೇಟಿಯಾಗಬಹುದು.

   ವೈಯಕ್ತಿಕ ಭೇಟಿಗೆ ವಿಳಾಸ:

   ಶ್ರೀ ಶಂಕರ ನಾರಾಯಣ

   ಮೀರಾ ನಿವಾಸ, ಸಾಯಿಬಾಬಾ ದೇವಸ್ಥಾನದ ಎದುರು,

   ಶೇಷಾದ್ರಿಪುರಂ ಕಾಲೇಜಿನ ಹತ್ತಿರ, ಶೇಷಾದ್ರಿಪುರ-

   ಬೆಂಗಳೂರು- 560020

   ಸಂಪರ್ಕ ಸಂಖ್ಯೆ: 9945065555

   ಇ-ಮೇಲ್: Shankarnarayana1981@gmail.com

   ವೆಬ್‌ಸೈಟ್: srisaiastrologer.com

   English summary
   What is Budhaditya yoga according to vedic astrology explained here and also it's importance and significance.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X