ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಶ್ಲೇಷಾ, ಮೂಲಾ, ವಿಶಾಖ, ಜ್ಯೇಷ್ಠ ನಕ್ಷತ್ರದಲ್ಲಿ ಹುಟ್ಟಿದವರು ದುರದೃಷ್ಟವಂತರೆ?

By ಶ್ರೀಶಂಕರನಾರಾಯಣ
|
Google Oneindia Kannada News

ಈ ವಿಚಾರ ನನ್ನ ಮನಸಿನಲ್ಲಿ ಬಹಳ ಸಮಯದಿಂದ ಕಾಡುತ್ತಿತ್ತು. ಅದನ್ನೇ ನಿಮ್ಮೆದುರು ಇಡುತ್ತಿದ್ದೇನೆ. "ಅಯ್ಯೋ ಮೂಲಾ ನಕ್ಷತ್ರದ ಹುಡುಗೀನಾ, ಅಶ್ಲೇಷಾ ನಕ್ಷತ್ರವಾ...ವಿಶಾಖ, ಜ್ಯೇಷ್ಠ ನಕ್ಷತ್ರವಾ?" ಹೀಗೆ ಜ್ಯೋತಿಷದ ಬಗ್ಗೆ ಪ್ರಾಥಮಿಕ ಜ್ಞಾನ ಇಲ್ಲದವರು ಸಹ ಆ ನಕ್ಷತ್ರದ ಹೆಣ್ಣುಮಗಳಾದರೆ ಮದುವೆ ಬೇಡ ಅಥವಾ ಆ ನಕ್ಷತ್ರದ ಹೆಣ್ಣುಮಕ್ಕಳ ಜಾತಕವೇ ಸರಿ ಇಲ್ಲ ಎಂಬ ಧ್ವನಿಯಲ್ಲಿ ಹೇಳಿಬಿಡುತ್ತಾರೆ. ಮತ್ತು ಈ ದೋಷ ಗಂಡಿನ ಜಾತಕಕ್ಕೆ ಅನ್ವಯ ಆಗುವುದಿಲ್ಲ ಎಂಬುದು ನಿಜ.

Recommended Video

ಇನ್ಮುಂದೆ ಈ ಏರಿಯಾ ವರೆಗೂ ಬರುತ್ತೆ ಮೆಟ್ರೋ | Oneindia Kannada

ಕೆಲವರು ಈ ನಕ್ಷತ್ರದ ಗಂಡು ಮಕ್ಕಳನ್ನು ಹೀಗಳೆಯುವುದು ಉಂಟು. ನನ್ನ ಬಳಿ ಜಾತಕ ತೆಗೆದುಕೊಂಡು ಬರುತ್ತಾರೆ. ಹಾಗೆ ಕೇಳಲು ಬರುವವರು ಸಹ, ಈ ನಕ್ಷತ್ರ ಬೇಡ ಅಂತ ನಾನು ಹೇಳಿದೆ ಗುರುಗಳೇ ಎನ್ನುತ್ತಾರೆ. ನನಗೆ ನಗು ಬರುತ್ತದೆ. ಅದರ ಬೆನ್ನಿಗೇ ಸಿಟ್ಟು ಕೂಡ ಬರುತ್ತದೆ. ಏಕೆಂದರೆ, ಇವರಿಗೆ ಯಾರೋ ಹೇಳಿದ ಮಾತು ಕಿವಿಗೆ ಬಿದ್ದಿದೆ. ಅದನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನೇ ಮತ್ತೆ ಹೇಳುತ್ತಿರುತ್ತಾರೆ.

ನರೇಂದ್ರ ಮೋದಿ ಅವರಿಗಿರುವ ಬುಧಾದಿತ್ಯ ಯೋಗದ ಬಗ್ಗೆ ನಿಮಗೆಷ್ಟು ಗೊತ್ತು?ನರೇಂದ್ರ ಮೋದಿ ಅವರಿಗಿರುವ ಬುಧಾದಿತ್ಯ ಯೋಗದ ಬಗ್ಗೆ ನಿಮಗೆಷ್ಟು ಗೊತ್ತು?

ಹಾಗಿದ್ದರೆ, ಯಾವ ನಕ್ಷತ್ರಕ್ಕೆ ದೋಷ ಎನ್ನಲಾಗುತ್ತದೆ ಗೊತ್ತಾ? ಮೂಲಾ ನಕ್ಷತ್ರದಲ್ಲಿ ಹುಟ್ಟಿದರೆ ಮಾವನಿಗೆ, ಆಶ್ಲೇಷಾ ನಕ್ಷತ್ರದಲ್ಲಿ ಹುಟ್ಟಿದರೆ ಅತ್ತೆಗೆ, ವಿಶಾಖ ನಕ್ಷತ್ರದಲ್ಲಿ ನಾಲ್ಕನೇ ಹುಟ್ಟಿದರೆ ಮೈದುನನಿಗೆ ಹಾಗೂ ಜ್ಯೇಷ್ಠ್ ನಕ್ಷತ್ರದ ನಾಲ್ಕನೇ -ಪಾದವಾದಲ್ಲಿ ಗಂಡನ ಅಣ್ಣನಿಗೆ ದುಷ್ಪ್ರದಳಾಗುತ್ತಾಳೆ ಎಂಬ ವಾಕ್ಯ ಇದೆ.

Astrology: Are Moola, Ashlesha, Vishakha And Jyeshta Nakshatra Natives Unlucky?

ಆದರೆ, ಮೂಲಾ ನಕ್ಷತ್ರದ ಒಂದನೇ ಪಾದ ಅಥವಾ ನಾಲ್ಕನೇ ಪಾದ ದೋಷವೋ? ಆಶ್ಲೇಷಾ ನಕ್ಷತ್ರದ ಒಂದನೇ ಪಾದ ಅಥವಾ ನಾಲ್ಕನೇ ಪಾದ ದೋಷವೋ? ಅಭಿಮತ ನಾನಾ ರೀತಿಯಲ್ಲಿ ಇದೆ. ಇದು ದುಷ್ಪ್ರದ ಅಂತ ಹೇಳಲಾಗಿದೆಯೇ ವಿನಾ ಮಾವನಿಗೋ ಅತ್ತೆಗೋ ಸಾವು ಸಂಭವಿಸುತ್ತದೆ ಅಂತ ಎಲ್ಲೂ ಇಲ್ಲ.

ಇನ್ನು ಜಾತಕದಲ್ಲಿ ಉತ್ತಮವಾದ ಬಲ ಇದ್ದಲ್ಲಿ ಆ ದೋಷ ಕೂಡ ಇಲ್ಲ. ಒಂದು ವೇಳೆ ಅತ್ತೆಗೋ ಮಾವನಿಗೋ ಆಯುಷ್ಯ ಸ್ಥಾನದಲ್ಲಿ ಸಮಸ್ಯೆ ಇದ್ದಲ್ಲಿ ಆ ಹೆಣ್ಣುಮಗಳ ತಪ್ಪೇನಿದೆ? ಇನ್ನು ವಿಶಾಖ ಹಾಗೂ ಜ್ಯೇಷ್ಠ ನಕ್ಷತ್ರದ ವಿಚಾರದಲ್ಲಿ ಅದರದೇ ಕಾರಣಗಳಿವೆ. ಅದು ಕೂಡ ಸಾವು ತರುತ್ತದೆ ಅಂತ ಖಂಡಿತಾ ಅಲ್ಲ, ನೆನಪಿರಲಿ.

ಏನು ಇವರು ದೋಷದ ಪ್ರಭಾವ ಇಲ್ಲ ಅಂತಾರೆ. ಅದರ ಜತೆಗೆ ಜಾತಕ ನೋಡಬೇಕು ಅಂತಾರಲ್ಲ ಅಂದುಕೊಳ್ಳಬಹುದು. ನಕ್ಷತ್ರ ನೋಡಿ ದೋಷವನ್ನು ಹೇಳುವುದು ಅದು ಅಪರಾಧ, ಅಕ್ಷಮ್ಯ. ಜಾತಕದಲ್ಲಿನ ಕೆಲವು ಯೋಗಗಳು ಕೋಟಿ ದೋಷಗಳಿದ್ದರೂ ತೊಡೆದು ಹಾಕುತ್ತವೆ. ಅದೇ ರೀತಿ ಕೆಲವು ದೋಷಗಳು ಅದೆಂಥ ಯೋಗವನ್ನೂ ದೊರೆಯದಂತೆ ಮಾಡುತ್ತವೆ.

ಜ್ಯೋತಿಷ್ಯ: ಯಾರನ್ನೂ ಕಾಡಬಹುದಾದ ದೃಷ್ಟಿದೋಷ ಮತ್ತು ಪರಿಹಾರ ಮಾರ್ಗಜ್ಯೋತಿಷ್ಯ: ಯಾರನ್ನೂ ಕಾಡಬಹುದಾದ ದೃಷ್ಟಿದೋಷ ಮತ್ತು ಪರಿಹಾರ ಮಾರ್ಗ

ಆದ್ದರಿಂದ ಸ್ವಯಂ ವೈದ್ಯ ಎಷ್ಟು ಅಪಾಯಕಾರಿಯೋ ಸ್ವಯಂ ಆಗಿ ಜ್ಯೋತಿಷ್ಯ ನೋಡಿಕೊಳ್ಳುವುದು ಅಪಾಯ. ನಿಮ್ಮಲ್ಲಿ ಕೇಳಿಕೊಳ್ಳುವುದು ಇಷ್ಟೇ, ಮುಖ್ಯವಾಗಿ ಹೆಣ್ಣುಮಕ್ಕಳು ಹುಟ್ಟಿದಾಗ ಅವರದು ಈ ಮೇಲಿನ ನಕ್ಷತ್ರದ ಪೈಕಿ ಯಾವುದೋ ಒಂದು ಆಗಿದ್ದು, ಆ ಕಾರಣಕ್ಕೆ ಅವರ ದೂಷಿಸಬೇಡಿ. ಇನ್ನು ಮದುವೆಗೆ ಆ ನಕ್ಷತ್ರದವರ ಪ್ರಸ್ತಾವ ಬಂದಲ್ಲಿ ಜಾತಕ ಸಹಿತ ಪರಿಶೀಲನೆ ಮಾಡಿಸಿ. ಎಲ್ಲರಿಗೂ ಶುಭವಾಗಲಿ.

ಜಾತಕದಲ್ಲಿನ ಬೇರೆ ಯಾವುದೇ ಪ್ರಶ್ನೆ, ಗೊಂದಲ, ಭವಿಷ್ಯಕ್ಕೆ ಸಂಬಂಧಿಸಿದ ಮಾರ್ಗದರ್ಶನಕ್ಕಾಗಿ ವೈಯಕ್ತಿಕವಾಗಿ ಭೇಟಿಯಾಗಬಹುದು.

ವೈಯಕ್ತಿಕ ಭೇಟಿಗೆ ವಿಳಾಸ:

ಶ್ರೀ ಶಂಕರ ನಾರಾಯಣ

ಮೀರಾ ನಿವಾಸ, ಸಾಯಿಬಾಬಾ ದೇವಸ್ಥಾನದ ಎದುರು,

ಶೇಷಾದ್ರಿಪುರಂ ಕಾಲೇಜಿನ ಹತ್ತಿರ, ಶೇಷಾದ್ರಿಪುರ-

ಬೆಂಗಳೂರು- 560020

ಸಂಪರ್ಕ ಸಂಖ್ಯೆ: 9945065555

ಇ-ಮೇಲ್: [email protected]

ವೆಬ್‌ಸೈಟ್: srisaiastrologer.com

English summary
Here is an analysis of Moola, Ashlesha, Vishakha And Jyeshta Nakshatra natives. Are they really unlucky? Here is an explainer according to vedic astrology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X