• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷ್ಯ ವಿಶ್ಲೇಷಣೆ: ರಷ್ಯಾ, ಅಮೆರಿಕ ಪೈಕಿ ಮೋದಿ ಆಯ್ಕೆ ಯಾವುದಿರಲಿ?

By ಪ್ರಕಾಶ್ ಅಮ್ಮಣ್ಣಾಯ
|

ಇಂದಿನ ಲೇಖನ ಸ್ವಲ್ಪ ವಿಭಿನ್ನವಾಗಿದೆ. ಈ ಹಿಂದೆ ಟ್ರಂಪ್, ಇಮ್ರಾನ್ ಖಾನ್ ಅವರ ವೈಯಕ್ತಿಕ ಭವಿಷ್ಯ ಹೇಗಿದೆ ಎಂದು ಹೇಳಿದ್ದೇನೆ ವಿನಾ ಅವರಿಬ್ಬರಿಂದ ಭಾರತಕ್ಕೆ ಆಗಬಹುದಾದ ಅನುಕೂಲ-ಅನಾನುಕೂಲದ ಬಗ್ಗೆ ತುಂಬ ವಿಸ್ತೃತವಾಗಿ ಏನೂ ಬರೆದಿರಲಿಲ್ಲ. ನಾನು ಒಬ್ಬ ಜ್ಯೋತಿಷಿಯೇ ವಿನಾ ರಾಜತಾಂತ್ರಿಕ ನಿಪುಣನಲ್ಲ.

ಆದರೆ, ಇಂದಿನ ಸನ್ನಿವೇಶದಲ್ಲಿ ಭಾರತಕ್ಕೆ ಅಮೆರಿಕದ ಜತೆಗಿನ ಸ್ನೇಹ ಉತ್ತಮವೋ ಅಥವಾ ರಷ್ಯಾ ಜತೆಗಿನ ಒಡನಾಟ ಹೆಚ್ಚು ಅನುಕೂಲವೋ ಎಂಬುದನ್ನು ಜ್ಯೋತಿಷ್ಯ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಭಾರತದ ಪ್ರವಾಸ ಮಾಡಿದರು. ಹಲವು ಒಪ್ಪಂದಗಳಿಗೂ ಪರಸ್ಪರ ಒಪ್ಪಿಗೆಯೂ ಆಯ್ತು.

ರಷ್ಯಾ-ಭಾರತ ಸಂಬಂಧ ವೃದ್ಧಿಗೆ 8 ಮಹತ್ವದ ಒಪ್ಪಂದಗಳ ವಿನಿಮಯ

ಇದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸ್ವಲ್ಪ ಮುನಿಸು ಆಗಿದೆ. ಈಗ ಈ ಇಬ್ಬರ ಮಧ್ಯೆ (ಡೊನಾಲ್ಡ್ ಟ್ರಂಪ್ ಹಾಗೂ ವ್ಲಾಡ್ಮಿರ್ ಪುಟಿನ್) ಭಾರತದ ಪರವಾಗಿ ಇರುವವರು ಯಾರು? ಮೇಲ್ನೋಟಕ್ಕೆ ಹತ್ತಿರದ ಪುಟಿನ್ ಕಾಣಬಹುದು. ಆದರೆ ಒಳಗಣ್ಣನ್ನು ಬಿಡಿಸಿದರೆ ಪುಟಿನ್ ಬಹಳ ಅಪಾಯಕಾರಿ ಎಂದು ಜಾತಕ ರೀತಿಯಲ್ಲಿ ತಿಳಿಯುತ್ತದೆ.

ಮೋದಿ-ಪುಟಿನ್ ಜಾತಕ ವಿಶ್ಲೇಷಣೆ

ಮೋದಿ-ಪುಟಿನ್ ಜಾತಕ ವಿಶ್ಲೇಷಣೆ

ಈಗ ಈ ಇಬ್ಬರ ಜಾತಕ ವಿಶ್ಲೇಷಣೆ ಮಾಡಿ ನೋಡೋಣ. ಹೇಗೆ ಮೋದಿಯವರು ಬಲಿಷ್ಠ ಶನಿಯನ್ನು ( 29.5 ಡಿಗ್ರಿ ಸಿಂಹ) ಹೊಂದಿ ಚಾಣಕ್ಯರೋ, ಹಾಗೆಯೇ ಪುಟಿನ್ ಕೂಡಾ ಬಲಿಷ್ಠ ಶನಿಯನ್ನು(24 ಡಿಗ್ರಿ ಕನ್ಯಾ) ಹೊಂದಿ, ಮೋದಿಯನ್ನು ತನ್ನ ಶೈಲಿಯಲ್ಲಿ ಮೋಡಿ ಮಾಡುವ ಚಾಣಾಕ್ಷ. ಅವರ ಸ್ವಾರ್ಥ ದೃಷ್ಟಿಯಿಂದ ಎಂತಹ ಮರುಳು ಬೇಕಾದರೂ ಮಾಡಬಹುದು. ಆದರೆ ಮೋದಿಯವರಿಗೆ ಕಲಿಸಿಕೊಡಬೇಕಾಗಿ ಇಲ್ಲ. ಯಾಕೆಂದರೆ ಮೋದಿಯದ್ದು ಸ್ವತಂತ್ರ ಶನಿ. ಪುಟಿನ್ ಜಾತಕದಲ್ಲಿ ರವಿ ಸಂಪರ್ಕದಲ್ಲಿ ಬಲ ಕಳೆದುಕೊಳ್ಳುತ್ತಿರುವ ಬಲಿಷ್ಠ ಶನಿ!

ಟ್ರಂಪ್ ನ ದೂರವಿಟ್ಟರೆ ಅಪಾಯ ಜಾಸ್ತಿ

ಟ್ರಂಪ್ ನ ದೂರವಿಟ್ಟರೆ ಅಪಾಯ ಜಾಸ್ತಿ

ಹಾಗಾಗಿ ಮೋದಿಯವರನ್ನು ಮೋಡಿ ಮಾಡಿ ಬುಟ್ಟಿಗೆ ಹಾಕಿಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಆದರೆ ಈ ಸಂಬಂಧದಿಂದ ಟ್ರಂಪ್ ಮಿತ್ರತ್ವ ಹಾಳಾದೀತು. ಟ್ರಂಪ್ ಗೆ ಕರ್ಕದಲ್ಲಿ ದುರ್ಬಲ (2 ಡಿಗ್ರಿ ಕರ್ಕ) ಶನಿ ಇದ್ದು, ಚಂದ್ರ ದಶಮದಲ್ಲಿ ಕುಜನೂ (ಸಿಂಹ ಲಗ್ನದಲ್ಲೇ) ಇರುವುದರಿಂದ ಸಂಶಯ ಜಾಸ್ತಿ. ಶೀಘ್ರ ಕೋಪಿಷ್ಠ ಹೌದು. ಶೀಘ್ರ ನಿರ್ಧಾರಕ್ಕೂ ಬರುವವರು. ಸಂಶಯ ಇರುವವರಿಗೆ ಶನಿ ಬಲಿಷ್ಠನಿದ್ದರೆ ಪರವಾಗಿಲ್ಲ. ಆದರೆ ಇಲ್ಲಿ ದುರ್ಬಲ ಶನಿ. ಹಿಂದು ಮುಂದು ನೋಡದೆ ಮೇಲೇರಿ ಹೋಗಿ ಬಿಡುತ್ತಾನೆ. ಇಂತಹವರನ್ನು ದೂರವಿಟ್ಟರೆ ಅಪಾಯ. ಹತ್ತಿರ ಇಟ್ಟುಕೊಂಡು, ಪರಮಾಪ್ತನಂತೆ ಇದ್ದರೆ ಮಿತ್ರರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ.

ಭಾರತದ ವ್ಯಾಪಾರ ಒಪ್ಪಂದ ಉತ್ಸುಕತೆ ಹಿಂದಿನ ರಹಸ್ಯ ಬಿಚ್ಚಿಟ್ಟ ಟ್ರಂಪ್

ಅಪಾಯ ತಂದಿಡುವ ಜಾಯಮಾನದವರು

ಅಪಾಯ ತಂದಿಡುವ ಜಾಯಮಾನದವರು

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಲ್ಲಿ ಟ್ರಂಪ್ ಪಾತ್ರ ದೊಡ್ಡದು. ಯಾಕೆಂದರೆ ಅವರು ಮೋದಿಯ ಮಿತ್ರತ್ವ ಬಯಸಿದ್ದರು ಎಂಬುದನ್ನು ಸ್ಮರಿಸಬೇಕು. ಟ್ರಂಪ್ ಒಬ್ಬ ಹುಚ್ಚು ಆಡಳಿತಗಾರ. ಆದರೆ ಪುಟಿನ್ ಮಹಾ ಚಾಣಕ್ಯ. ಯಾರಲ್ಲಿ ಒಳಗೊಳಗೆ ಮತ್ಸರ ಇದೆಯೋ ಅವರನ್ನು ಹತ್ತಿರ ಕರೆದು, ಸ್ನೇಹ ಸಂಪಾದಿಸಿ, ಅವರ ಮಿತ್ರರನ್ನು ದೂರ ಮಾಡಿ, ಬೇಳೆ ಬೇಯಿಸಿಕೊಳ್ಳುವ ಜಾಯಮಾನ ಪುಟಿನ್ ನದ್ದು. ಟ್ರಂಪ್ ಹಾಗಲ್ಲ. ಅವರೊಡನೆ ಇದ್ದುಬಿಟ್ಟರೆ ಯಾವ ಕೆಲಸವನ್ನೂ ಮಾಡಿಸಿಕೊಳ್ಳಬಹುದು. ಒಬ್ಬರನ್ನು ಒಪ್ಪಿಕೊಂಡರೆ ಅವರ ಶತ್ರುಗಳು ತನಗೂ ಶತ್ರು ಎಂದೆಣಿಸುವವರು. ವಿರುದ್ಧವಾದರೋ ಏನಾದರೂ ಒಂದು ಅಪಾಯ ತಂದೇ ತರುವ ಜಾಯಮಾನ ಡೊನಾಲ್ಡ್ ಟ್ರಂಪ್ ನದು.

ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸಹಿ ಹಾಕಿದ ಮೋದಿ-ಪುಟಿನ್

ಸ್ನೇಹ ವೃದ್ಧಿಸಿಕೊಳ್ಳಲು ಕಾಲ ಮಿಂಚಿಲ್ಲ

ಸ್ನೇಹ ವೃದ್ಧಿಸಿಕೊಳ್ಳಲು ಕಾಲ ಮಿಂಚಿಲ್ಲ

ಆ ಕಾರಣದಿಂದಲೇ ಟ್ರಂಪ್ ಹತ್ತಿರ ಮುನಿಸು ಮಾಡಿಕೊಳ್ಳಲೇ ಬಾರದು. ಪುಟಿನ್ ಯಾವ ಕಾಲಕ್ಕೆ ಹೇಗೆ ಬೇಕೋ ಹಾಗೆ ಜಾರಿಕೊಳ್ಳುವ, ಬದಲಾಗುವ ಜಾಯಮಾನದವರು. ಒಟ್ಟಿನಲ್ಲಿ ಯಾವುದೋ ವ್ಯವಹಾರಕ್ಕಾಗಿ ಪುಟಿನ್ ಸಂಬಂಧ ಒಪ್ಪಬಹುದಾದರೂ ಅವರ ಮೇಲೆ ಕಣ್ಣಿಡುಡುವುದು ಉತ್ತಮ. ಟ್ರಂಪ್ ಒಮ್ಮೆ ದೋಸ್ತಿಯಾದರೆ ಅವರ ಹಿಂದೆ ಯಾವ ಕಣ್ಣೂ ಬೇಡ. ನಿಷ್ಠುರ ಆದರೆ ಮಾತ್ರ ಅಪಾಯಕಾರಿ. ಟ್ರಂಪ್ ಮತ್ಸರಿಯಲ್ಲ. ಪುಟಿನ್ ಮತ್ಸರ ಗೊತ್ತಾಗಲ್ಲ. ಟ್ರಂಪ್ ನ ಮತ್ಸರ ಗೊತ್ತಾಗಿಬಿಡುತ್ತದೆ. ಡೊನಾಲ್ಡ್ ಟ್ರಂಪ್ ಸ್ನೇಹವನ್ನು ವೃದ್ಧಿಸಿಕೊಳ್ಳಲು ಇನ್ನೂ ಕಾಲ ಮಿಂಚಿಲ್ಲ.

I Love India ಎಂದು ಸ್ನೇಹಿತ ಮೋದಿಯ ನೆನೆದ ಟ್ರಂಪ್

English summary
According to astrology who will be the best choice for India Donald Trump or Vladmir Putin? Here is an analysis by well known astrologer Prakash Ammannaya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more