• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ರಾಜಕೀಯ ಪರಿಸ್ಥಿತಿ ಏನಾಗಲಿದೆ? ಏನು ಹೇಳುತ್ತದೆ ಜ್ಯೋತಿಷ್ಯ?

By ಹರಿ ಶಾಸ್ತ್ರಿ ಗುರೂಜಿ
|

ಕರ್ನಾಟಕ ರಾಜಕಾರಣದಲ್ಲಿ ಮಹಾನ್ ತಿರುವುಗಳು ಕಾಣುತ್ತಿವೆ. ಈ ಕ್ಷಣಕ್ಕೆ ಹೀಗಾಗಬಹುದು ಅಂದರೆ, ಮತ್ತೊಂದು ಕ್ಷಣಕ್ಕೆ ಹಾಗಲ್ಲ ಎಂಬ ಸುದ್ದಿ ಹೊರಬರುತ್ತಿದೆ. ಇಂಥ ಸನ್ನಿವೇಶದಲ್ಲಿ ಏನಾಗಬಹುದು ಕರ್ನಾಟಕ ರಾಜಕೀಯದ ಪರಿಸ್ಥಿತಿ ಎಂಬುದನ್ನು ಜ್ಯೋತಿಷ್ಯ ರೀತಿಯಾಗಿ ತಿಳಿಸುವ ಲೇಖನ ಇದು.

ಯಾವುದೇ ಪಕ್ಷ, ವ್ಯಕ್ತಿ, ಸಿದ್ಧಾಂತದ ಪರವಾದ ಒಲವು ನನಗಿಲ್ಲ. ಆ ಗ್ರಹಸ್ಥಿತಿಗಳ ಆಧಾರದಲ್ಲಿ, ಅಧ್ಯಯನ ಮಾಡಿದ ವಿದ್ಯೆಯ ಮೂಲಕ, ಗುರುಗಳ ಮಾರ್ಗದರ್ಶನದಿಂದ ಬಂದ ಅನುಭವ ನುಡಿಸುವ ಭವಿಷ್ಯ ಇದು. ಇದನ್ನು ಹೇಳುವ ನನಗೆ ಹೇಗೆ ಪೂರ್ವಗ್ರಹಗಳು ಇಲ್ಲವೋ ಹಾಗೆ ಓದುವವರಿಗೆ ಸಹ ಪೂರ್ವಗ್ರಹಗಳು ಇಲ್ಲದಿದ್ದರೆ ಉತ್ತಮ.

Operation ಕಮಲ ಯಶಸ್ಸಾಗಲು ಸಾಧ್ಯವಿಲ್ಲ ಅನ್ನೋದಿಕ್ಕೆ ಇಲ್ಲಿವೆ 4 ಕಾರಣಗಳು

ಇದೀಗ ಮುಖ್ಯ ಸಂಗತಿಗೆ ಬರುತ್ತಿದ್ದೇನೆ. ಜೆಡಿಎಸ್ ನಿಂದ ಕುಮಾರಸ್ವಾಮಿ, ಬಿಜೆಪಿಯಿಂದ ಯಡಿಯೂರಪ್ಪನವರು ಹಾಗೂ ಕಾಂಗ್ರೆಸ್ ನಿಂದ ಡಿ.ಕೆ.ಶಿವಕುಮಾರ್ ಈಗಿನ ಕುರ್ಚಿ ಆಟದಲ್ಲಿ ಕಾಣಿಸಿಕೊಳ್ಳುತ್ತಿರುವ ಅತಿ ಮುಖ್ಯ ಆಟಗಾರರು. ಯಾರಿಗೆ ಯಾರೂ ಕಡಿಮೆ ಇಲ್ಲ ಎಂಬಂತೆ ಇವರ ಜಾತಕ ಯೋಗಗಳಿವೆ.

ಯಡಿಯೂರಪ್ಪನವರ ಪ್ರಯತ್ನ ಭಾಗಶಃ ವಿಫಲ

ಯಡಿಯೂರಪ್ಪನವರ ಪ್ರಯತ್ನ ಭಾಗಶಃ ವಿಫಲ

ಯಡಿಯೂರಪ್ಪನವರದು ವೃಶ್ಚಿಕ ರಾಶಿ. ಅವರ ಜನ್ಮ ಜಾತಕ ಪರಾಮರ್ಶೆ ಮಾಡಿದರೆ ಶುಕ್ರ ಬಹಳ ಉಚ್ಚನಾಗಿದ್ದಾನೆ. ಅದೇ ರೀತಿ ಕೆಲವು ದುರ್ಬಲ ಗ್ರಹ ಸ್ಥಿತಿಗಳೂ ಇವೆ. ಆದರೆ ಸದ್ಯದ ಮಟ್ಟಿಗಂತೂ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಕಾಣಿಸುತ್ತಿಲ್ಲ. ಸದ್ಯಕ್ಕೆ ನಡೆಯುತ್ತಿರುವ ಕುಜ ದಶೆ ಪೂರ್ತಿಯಾಗಿ, ನವೆಂಬರ್ ನಲ್ಲಿ ರಾಹು ದಶೆ ಶುರುವಾಗುತ್ತದೆ. ಆಗ ಕುಜ-ರಾಹು ಸಂಧಿ ಶಾಂತಿಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು. ಈಗ ಅವರ ಪಕ್ಷದಿಂದ ಕೈಗೆತ್ತಿಕೊಳ್ಳಲಾಗಿದೆ ಎನ್ನಲಾಗಿರುವ ಕಾರ್ಯ ಏನಿದೆ, ಅದರಲ್ಲಿ ಸಫಲತೆ ಕಾಣುವುದು ಅಸಾಧ್ಯ. ಆದರೆ ಪೂರ್ಣ ಪ್ರಮಾಣದಲ್ಲಿ ವಿಫಲವಾಗುತ್ತದಾ ಅಂದರೆ, ಅದಕ್ಕೆ ಉತ್ತರ ಇಲ್ಲ. ಭಾಗಶಃ ವಿಫಲ ಆಗುತ್ತದೆ. ಏಕೆಂದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರದು ಆರಿದ್ರಾ ನಕ್ಷತ್ರ, ಮಿಥುನ ರಾಶಿ. ಜಾತಕ ರೀತಿಯಲ್ಲಿ ಶತ್ರು ಬಾಧೆಯನ್ನು ಅನುಭವಿಸಲೇಬೇಕು.

ಮಿತ್ರರಿಂದಲೇ ಕಿರಿಕಿರಿ ಅನುಭವಿಸಬೇಕಿತ್ತು

ಮಿತ್ರರಿಂದಲೇ ಕಿರಿಕಿರಿ ಅನುಭವಿಸಬೇಕಿತ್ತು

ಅದು ಬಿಜೆಪಿಯ ಈಗಿನ ಬೆಳವಣಿಗೆಯಿಂದ ಅಂತಲ್ಲದಿದ್ದರೂ ಮತ್ತೊಂದು ಬಗೆಯಲ್ಲಿ ಆಗಲೇಬೇಕಿತ್ತು. ಇನ್ನು ಸಪ್ತಮ ಶನಿಯು ಭಾಗೀದಾರರು, ಪಾರ್ಟ್ ನರ್ ಷಿಪ್ ನ ತೊಂದರೆಯನ್ನು ಸೂಚಿಸುತ್ತದೆ. ಅವರು ಯಾರ ಜತೆ ಮಿತ್ರತ್ವ ಮಾಡಿಕೊಂಡಿದ್ದಾರೋ ಅವರಿಂದಲೇ ಕಿರಿಕಿರಿ ಅನುಭವಿಸಲು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಇನ್ನು ಈ ಎಲ್ಲ ಬೆಳವಣಿಗೆಗಳನ್ನು ತಡೆದು, ಸರಕಾರ ಉಳಿಸುವುದಕ್ಕೆ ಓಡಾಡುತ್ತಿರುವ ಡಿ.ಕೆ.ಶಿವಕುಮಾರ್ ಅವರದು ಉತ್ತರಾ ನಕ್ಷತ್ರ ಕನ್ಯಾ ರಾಶಿ. ಅವರಿಗೆ ಒಳ್ಳೆ ಹೆಸರು ಬರಲಿದೆ. ಯಾವುದೇ ಅತಿರೇಕದ ಬೆಳವಣಿಗೆ ಆಗದಂತೆ ತಡೆಯುವ ಅಗಾಧ ಸಾಮರ್ಥ್ಯ ಇವರ ಜಾತಕದಲ್ಲೇ ಇದೆ. ಅಪರೂಪವಾದ ಅಮರ ಅನಂತ ಯೋಗದಲ್ಲಿ ಇವರು ಜನಿಸಿದ್ದಾರೆ. ಸದ್ಯದ ಗೋಚಾರ ಫಲ ಏನೇ ಇದ್ದರೂ ಜನ್ಮ ಜಾತಕದ ಯೋಗಗಳು ಅಪೂರ್ವವಾಗಿವೆ. ಇವೆಲ್ಲ ಸೇರಿ ಇವರನ್ನು ಒಂದಿಲ್ಲೊಂದು ದಿನ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂರಿಸುತ್ತದೆ.

ಫೆಬ್ರವರಿ ಇಪ್ಪತ್ತೆಂಟನೇ ತಾರೀಕು ಕಳೆಯುವ ತನಕ ಇದೇ ಸ್ಥಿತಿ

ಫೆಬ್ರವರಿ ಇಪ್ಪತ್ತೆಂಟನೇ ತಾರೀಕು ಕಳೆಯುವ ತನಕ ಇದೇ ಸ್ಥಿತಿ

ಸದ್ಯದ ಸನ್ನಿವೇಶ ನೋಡಿದರೆ, ಫೆಬ್ರವರಿ ಇಪ್ಪತ್ತೆಂಟನೇ ತಾರೀಕು ಕಳೆಯುವ ತನಕ ಈ ಡೋಲಾಯಮಾನ ಸ್ಥಿತಿ ಕರ್ನಾಟಕದಲ್ಲಿ ಮುಂದುವರಿಯಲಿದೆ. ಅದಕ್ಕೆ ಮುಖ್ಯ ಕಾರಣ ಕುಮಾರಸ್ವಾಮಿ ಅವರ ಜಾತಕ. ಆರೋಗ್ಯದ ವಿಚಾರದಲ್ಲಿ ತೀರಾ ಎಚ್ಚರಿಕೆಯಿಂದ ಇರಬೇಕು. ಜತೆಗೆ ಜತೆಯಲ್ಲಿದ್ದುಕೊಂಡೇ ವಂಚನೆ ಮಾಡುವವರ ಬಗ್ಗೆ ನಿಗಾ ವಹಿಸಬೇಕು. ಯಡಿಯೂರಪ್ಪ ಜನ್ಮ ಜಾತಕದ ಪರಾಮರ್ಶೆ ಮಾಡುವಾಗ ಹಠದ ಸ್ವಭಾವದಿಂದ ಏನನ್ನಾದರೂ ದಕ್ಕಿಸಿಕೊಳ್ಳುವ ವ್ಯಕ್ತಿತ್ವದ ಅವರು, ಎದುರಾಳಿಗೆ ಏಟು ನೀಡಲು ನಿರ್ಧರಿಸಿದರೆ ಅದು ತಪ್ಪುವಂತೆಯೇ ಇಲ್ಲ. ಕಣ್ಣಿಗೆ ಹೋಗುವಂಥ ಅಪಾಯ ರೆಪ್ಪೆಯನ್ನಾದರೂ ಸವರಿಕೊಂಡು ಹೋಗುವಂತೆ ಕುಮಾರಸ್ವಾಮಿ ಅವರಿಗೆ ಅಪಾಯದ ಸಂಭವನೀಯತೆ ಇದ್ದೇ ಇದೆ. ಇನ್ನು ಈ ತಿಂಗಳ ಹದಿನೈದು ದಿನ, ಫೆಬ್ರವರಿಯಲ್ಲಿ ಇಪ್ಪತ್ತೆಂಟು ದಿನ ಕಳೆದ ಮೇಲೆ ಮತ್ತೊಂದು ಬಗೆಯ ಸವಾಲು ಎದುರಾಗುತ್ತದೆ.

ಮೂವರು ವಿವಿಧ ಯೋಗವುಳ್ಳ ಮಹಾನ್ ಜಾತಕರು

ಮೂವರು ವಿವಿಧ ಯೋಗವುಳ್ಳ ಮಹಾನ್ ಜಾತಕರು

ಹೀಗೆ ಮೂವರು ವಿವಿಧ ಯೋಗವುಳ್ಳ, ವಿವಿಧ ಪಕ್ಷಗಳನ್ನು ಪ್ರತಿನಿಧಿಸುವ ನಾಯಕರು ಕಾದಾಟ ನಡೆಸುವಾಗ ರಾಜ್ಯದಲ್ಲಿ ವಿಧಾನಸಭೆ ವಿಸರ್ಜನೆ ಆಗುವ ಹಾಗೂ ರಾಷ್ಟ್ರಪತಿ ಆಳ್ವಿಕೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿ ಇನ್ನೊಂದು ವಿಚಾರ ಸ್ಪಷ್ಟವಾಗಿ ಹೇಳಿಬಿಡಬೇಕು. ಫೆಬ್ರವರಿ ಇಪ್ಪತ್ತೆಂಟನೇ ತಾರೀಕಿನ ತನಕ ಕುಮಾರಸ್ವಾಮಿ ಅವರಿಗೆ ಕುರ್ಚಿ ಮೇಲೆ ಕೂರುವುದೇ ಅತ್ಯಂತ ಸವಾಲಾಗುತ್ತದೆ. ಇನ್ನು ಯಡಿಯೂರಪ್ಪ ಅವರ ಜಾತಕದಲ್ಲಿನ ದಶೆ ಬದಲಾವಣೆ, ಶಿವಕುಮಾರ್ ಅವರ ಜಾತಕದಲ್ಲಿನ ಗೋಚಾರ ಸ್ಥಿತಿಯಿಂದ ಉದ್ಭವ ಆಗುವ ಪರಸ್ಪರರ ಮಧ್ಯದ ತಿಕ್ಕಾಟ- ಎಳೆದಾಟದಲ್ಲಿ ಕರ್ನಾಟಕದಲ್ಲಿ ರಾಜಕೀಯ ಅನಿಶ್ಚಿತತೆ ಎದುರಾಗುತ್ತದೆ. ಒಂದು ವೇಳೆ ಫೆಬ್ರವರಿ ಇಪ್ಪತ್ತೆಂಟನೇ ತಾರೀಕಿನ ಸವಾಲನ್ನು ಕುಮಾರಸ್ವಾಮಿ ಯಶಸ್ವಿಯಾಗಿ ದಾಟಿದರೆ ಆ ನಂತರ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅಲುಗಾಡಿಸುವುದು ಸಲೀಸಲ್ಲ.

ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is the detailed analysis of operation lotus and Karnataka political crisis by well known astrologer Hari Guruji. JDS, BJP and Congress major leaders HD Kumaraswamy, BS Yeddyurappa and DK Shivakumar horoscope analysis also done according to vedic astrology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more