• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷ್ಯ: ಫೆಬ್ರವರಿ ಮಧ್ಯದಿಂದ ಜೂನ್ ವರೆಗೆ ಯಡಿಯೂರಪ್ಪನವರಿಗೆ ಆತಂಕ

By ಶ್ರೀನಿವಾಸ ಗುರೂಜಿ
|

ಈ ವರ್ಷದ ಏಪ್ರಿಲ್ ನಲ್ಲಿ ಮಕರ ರಾಶಿಗೆ ಗುರು ಗ್ರಹದ ಪ್ರವೇಶ ಆಗಲಿದೆ. ಶನಿಯ ಜತೆಗೂಡಿ ಗುರು ಗ್ರಹವು ಅಲ್ಲಿ ಕೆಲ ಇರುತ್ತದೆ. ಅದರ ಪರಿಣಾಮವು ಫೆಬ್ರವರಿ ಮಧ್ಯ ಭಾಗದಿಂದಲೇ ಗೋಚರಿಸಲು ಆರಂಭವಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಆ ಬದಲಾವಣೆಯನ್ನು ಗಮನಿಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಜಾತಕಕ್ಕೆ ಹೋಲಿಸಿದರೆ ಯಡಿಯೂರಪ್ಪ ಅವರ ಜಾತಕ ದುರ್ಬಲವಾಗಿದೆ.

ಆದ್ದರಿಂದ ಕರ್ನಾಟಕ ರಾಜಕೀಯದಲ್ಲಿ ಸಂಚಲನವೊಂದು ನಡೆಯಲಿದೆ. ಇದು ಫೆಬ್ರವರಿ ತಿಂಗಳ ಆರಂಭ. ಏಪ್ರಿಲ್-ಮೇ-ಜೂನ್ ಈ ಮೂರು ತಿಂಗಳಲ್ಲಿ ಆ ಸಂಚಲನಕ್ಕೆ ರಾಜ್ಯ ಹಾಗೂ ಇಲ್ಲಿನ ಜನರು ಸಾಕ್ಷಿ ಆಗಲಿದ್ದಾರೆ. ಮುಖ್ಯವಾಗಿ ಬಿ. ಎಸ್. ಯಡಿಯೂರಪ್ಪ ಅವರು ನಿರ್ಧಾರವೊಂದನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ರಾಜ್ಯ ರಾಜಕಾರಣಕ್ಕೆ ಅವರ ಉತ್ತರಾಧಿಕಾರಿ ಹೆಸರನ್ನು ಸೂಚಿಸುವ ಸಾಧ್ಯತೆ ಕಾಣುತ್ತಿದೆ. ಇದರ ಜತೆ ಜತೆಗೆ ತಮ್ಮ ಕುಟುಂಬದ ವ್ಯಕ್ತಿಯೊಬ್ಬರನ್ನು ರಾಜ್ಯ ರಾಜಕಾರಣಕ್ಕೆ ಸಕ್ರಿಯವಾಗಿ ಕರೆತರುವ ಸಾಧ್ಯತೆ ಇದೆ. ಪಕ್ಷದೊಳಗೆ ಅಥವಾ ಸರ್ಕಾರದೊಳಗೂ ಸ್ಥಾನಮಾನ ಕಲ್ಪಿಸಬಹುದು. ಈ ಅವಧಿಯಲ್ಲಿ ಪಕ್ಷದೊಳಗೆ ಆಂತರಿಕ ಭಿನ್ನಮತ ದೊಡ್ಡ ಮಟ್ಟಕ್ಕೆ ಹೆಚ್ಚಾಗಲಿದೆ.

ಮೈ ಮರೆತರೆ ಹಗರಣದ ಸ್ವರೂಪದಲ್ಲಿ ಅಪಮಾನವೊಂದನ್ನು ಎದುರುಗೊಳ್ಳಬಹುದು. ಇದಕ್ಕೆ ಬೇಕಾದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಒಂದು ಅವಕಾಶ ಇದೆ. ಆದರೆ ಅದರಿಂದ ಬಹಳ ದೊಡ್ಡ ಮಟ್ಟದಲ್ಲಿ ಸಹಾಯ ಆಗಬಹುದು ಎನಿಸುತ್ತಿಲ್ಲ. ಏಕೆಂದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗುರು ಶಾಪ ಕಾಣಿಸುತ್ತಿದೆ.

ಅದರ ನಿವಾರಣೆ ಆಗಬೇಕು ಅಂದಲ್ಲಿ, ಈ ಹಿಂದೆ ಅವರು ನೀಡಿದ್ದ ಮಾತೊಂದನ್ನು ನೆನಪಿಸಿಕೊಂಡು, ಕಡ್ಡಾಯವಾಗಿ ಪೂರ್ಣಗೊಳಿಸಬೇಕಾಗುತ್ತದೆ. ಫೆಬ್ರವರಿ ಹದಿನೈದರ ನಂತರ ಅವರ ಆಲೋಚನೆ ಮುಂಚಿನಂತೆ ಇರುವುದಕ್ಕೆ ಅವಕಾಶ ಇರುವುದಿಲ್ಲ. ಆದರೂ ಗುರು ದತ್ತಾತ್ರೇಯರ ಮೊರೆ ಹೋದರೆ ಕೆಲವು ಅಪಾಯಗಳಿಂದ ತಪ್ಪಿಸಿಕೊಳ್ಳುವ ದಾರಿ ಕಾಣಿಸಬಹುದು.

ಬಹು ಕಾಲದಿಂದ ಯಡಿಯೂರಪ್ಪ ಅವರ ಜತೆಯಲ್ಲೇ ಇರುವ ವ್ಯಕ್ತಿಯೊಬ್ಬರ ಸಲಹೆಯೂ ಅಪಾಯಕಾರಿಯಾಗಿ ಪರಿಣಮಿಸಬಹುದು. ಅದರಲ್ಲೂ ಧಾರ್ಮಿಕ ವಿಚಾರದಲ್ಲಿ ಜನರು ಸಿಟ್ಟಿಗೇಳುವಂಥ ನಿರ್ಧಾರವನ್ನು ಸರ್ಕಾರದ ಪರವಾಗಿ ಘೋಷಿಸುವಂಥ ಸಾಧ್ಯತೆಗಳಿವೆ. ಇವೆಲ್ಲ ಯಾಕೆ ಹೇಳಬೇಕಾಗಿದೆ ಅಂದರೆ, ಜೂನ್ ತನಕ ಇರುವ ಅಪಾಯವನ್ನು ಅವರು ದಾಟಲು ನೆರವಾಗಬಹುದು ಎಂಬ ಕಾರಣಕ್ಕೆ. ಉಳಿದಂತೆ ಆ ದೈವೇಚ್ಛೆ.

(ಈ ಮೇಲ್ಕಂಡ ಅಭಿಪ್ರಾಯವು ಲೇಖಕರವೇ ಹೊರತು ಒನ್ ಇಂಡಿಯಾ ಕನ್ನಡ ಜವಾಬ್ದಾರ ಅಲ್ಲ)

ವೈಯಕ್ತಿಕವಾಗಿ ಭೇಟಿ ಮಾಡಬೇಕಿದ್ದಲ್ಲಿ ವಿಳಾಸ ಮತ್ತು ಸಂಪರ್ಕ ಸಂಖ್ಯೆ:

ಶ್ರೀನಿವಾಸನ್

ಪ್ರಧಾನ ಜ್ಯೋತಿಷ್ಯರು

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ

# 37, 27ನೇ ಕ್ರಾಸ್, 12ನೇ ಮುಖ್ಯರಸ್ತೆ

ವಾಸುದೇವ್ ಅಡಿಗಾಸ್ ಹೋಟೆಲ್ ಹತ್ತಿರ

ಜಯನಗರ 4ನೇ ಬ್ಲಾಕ್, opp ಸಿಂಡಿಕೇಟ್ ಬ್ಯಾಂಕ್

ಬೆಂಗಳೂರು 560011

ಸಂಪರ್ಕ ಸಂಖ್ಯೆ 9886665656- 9886155755

English summary
According vedic astrology drastic changes can expect in Karnataka politics and CM Yeddyurappa political career. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X