ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 2ನೇ ಅಲೆ, ಖ್ಯಾತ ಜ್ಯೋತಿಷಿಯ ಭವಿಷ್ಯ: ಸಹನೆ ಕಳೆದುಕೊಳ್ಳಬೇಡಿ, ನಿರ್ಬಂಧ ಸಹಿಸಿಕೊಳ್ಳಿ

By ಸುದರ್ಶನ್ ರಾವ್
|
Google Oneindia Kannada News

ಕೊರೊನಾ ಆರ್ಭಟ ಕಮ್ಮಿಯಾಯಿತು, ಜನಜೀವನ ಸಾಮಾನ್ಯ ಸ್ಥಿತಿಗೆ ಬಂತು ಎನ್ನುವಷ್ಟರಲ್ಲಿ ಮತ್ತೆ ಕೋವಿಡ್ ಹಾವಳಿ ಆರಂಭವಾಗಿದೆ. ಇದೇ ಒಂದು ವರ್ಷದ ಹಿಂದೆ ಇದ್ದ ಪರಿಸ್ಥಿತಿ ಮತ್ತೆ ಬರುತ್ತಾ ಎನ್ನುವ ಭಯ ಕಾಡಲಾರಂಭಿಸಿದೆ.

ರಾಜ್ಯದಲ್ಲೂ ಎಲ್ಲೋ ಅಲ್ಪಸ್ವಲ್ಪ ಇದ್ದ ಹೊಸ ಸೋಂಕಿತರ ಪ್ರಮಾಣ ದಿನಂಪ್ರತಿ ಸಾವಿರದ ಗಡಿ ದಾಟುತ್ತಿದೆ. ಮತ್ತೆ, ಕ್ವಾರಂಟೈನ್, ಸೀಲ್ಡೌನ್, ನೈಟ್ ಕರ್ಪ್ಯೂ ಮುಂತಾದ ಪದಗಳು ಧುತ್ತಲೇ ಎದ್ದೇಳಲಾರಂಭಿಸಿದ್ದು ಸಾರ್ವಜನಿಕರಿಗೆ ಭೀತಿ ಹುಟ್ಟು ಹಾಕುತ್ತಿದೆ.

ಪಶ್ಚಿಮ ಬಂಗಾಳ ಚುನಾವಣಾ 'ಜ್ಯೋತಿಷ್ಯ ಭವಿಷ್ಯ': ಬಿಜೆಪಿ ಗಣನೀಯ ಸಾಧನೆ, ಆದರೆ..ಪಶ್ಚಿಮ ಬಂಗಾಳ ಚುನಾವಣಾ 'ಜ್ಯೋತಿಷ್ಯ ಭವಿಷ್ಯ': ಬಿಜೆಪಿ ಗಣನೀಯ ಸಾಧನೆ, ಆದರೆ..

ಕೊರೊನಾ ವಿಚಾರದಲ್ಲಿ ಹಲವರು ಭವಿಷ್ಯವನ್ನು ನುಡಿದಿದ್ದರು. ಯುಗಾದಿಯ ತನಕ ಇದರ ತೊಂದರೆ ಇರುತ್ತದೆ, ಆನಂತರ ಹಬ್ಬದ ಬಳಿಕ ಹೇಳುತ್ತೇನೆ ಎಂದು ಕೋಡಿಮಠದ ಶ್ರೀಗಳು ಈಗಾಗಲೇ ನುಡಿದಿದ್ದಾರೆ.

ಗೊರವಯ್ಯ ನುಡಿದ ಐತಿಹಾಸಿಕ ಮೈಲಾರ ಕಾರ್ಣಿಕದ ಮತ್ತೊಂದು ಅರ್ಥ!ಗೊರವಯ್ಯ ನುಡಿದ ಐತಿಹಾಸಿಕ ಮೈಲಾರ ಕಾರ್ಣಿಕದ ಮತ್ತೊಂದು ಅರ್ಥ!

ಇನ್ನು, ಇತ್ತೀಚೆಗೆ ನಡೆದ ಮೈಲಾರ ಕಾರ್ಣಿಕದಲ್ಲೂ ನಾಡಿಗೆ ಶುಭ ತರುವ ಸುದ್ದಿ ಬಂದಿರಲಿಲ್ಲ ಎಂದು ಅರ್ಥೈಸಿಕೊಳ್ಳಲಾಗಿತ್ತು. ಈ ನಡುವೆ, ಜಗದಾಂಬ ಜ್ಯೋತಿಷ್ಯ ಚಾನೆಲ್ ನ ವಿವೇಕ್ ಮುದ್ಗಿಲ್, ಕೊರೊನಾ ಎರಡನೇ ಹಾವಳಿಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.

 'ಮುತ್ತಿನ ರಾಶಿ ಮೂರು ಪಾಲು ಆತಲೇ' ಎನ್ನುವ ಗೊರವಯ್ಯನ ಕಾರಣಿಕ

'ಮುತ್ತಿನ ರಾಶಿ ಮೂರು ಪಾಲು ಆತಲೇ' ಎನ್ನುವ ಗೊರವಯ್ಯನ ಕಾರಣಿಕ

'ಮುತ್ತಿನ ರಾಶಿ ಮೂರು ಪಾಲು ಆತಲೇ' ಎನ್ನುವ ಕಾರಣಿಕವನ್ನು ಗೊರವಯ್ಯ ನುಡಿದಿದ್ದರು. ಇದನ್ನು, ಭಕ್ತರು ಬೇಕಾದ ರೀತಿಯಲ್ಲಿ ಅರ್ಥೈಸಿಕೊಂಡಿದ್ದರು. ಅದರಲ್ಲಿ, 'ರಾಜಕೀಯ, ಕೃಷಿ ಮತ್ತು ವ್ಯಾವಹಾರಿಕ ಕ್ಷೇತ್ರದಲ್ಲಿ ಏಳಿಗೆಯಾಗುವುದಿಲ್ಲ. ಎಲ್ಲಾ ರಂಗದಲ್ಲೂ ಏರುಪೇರಾಗುವ ಸಾಧ್ಯತೆಯಿದ್ದು, ಚೇತರಿಕೆ ಕಾಣುವುದು ಕಷ್ಟ' ಎಂದೂ ಅರ್ಥೈಸಿಕೊಳ್ಳಲಾಗಿತ್ತು.

 ಖ್ಯಾತ ಜ್ಯೋತಿಷಿ ವಿವೇಕ್ ಮುದ್ಗಲ್

ಖ್ಯಾತ ಜ್ಯೋತಿಷಿ ವಿವೇಕ್ ಮುದ್ಗಲ್

ಖ್ಯಾತ ಜ್ಯೋತಿಷಿ ವಿವೇಕ್ ಮುದ್ಗಿಲ್ ಹೇಳುವುದು ಹೀಗೆ, 'ಕೊರೊನಾ ಎರಡನೇ ಅಲೆಯ ವಿಚಾರದಲ್ಲಿ ನನ್ನ ಹಿಂಬಾಲಕರು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಕೆಲವೊಂದು ರಾಜ್ಯಗಳಲ್ಲಿ ಮಾತ್ರ ಯಾಕೆ ಈ ಅಲೆಯ ಪ್ರಭಾವ ಹೆಚ್ಚಾಗುತ್ತಿದೆ. ಇದಕ್ಕೆ ನಿರ್ಲ್ಯಕ್ಷತನ ಕಾರಣವೇ ಎಂದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದಕ್ಕೆಲ್ಲಾ ಕಾರಣ ಜಗದ್ ಲಗ್ನ ಕುಂಡಲಿ' ಎಂದು ಮುದ್ಗಿಲ್ ಅಭಿಪ್ರಾಯ ಪಟ್ಟಿದ್ದಾರೆ.

 ಗುರು ಮತ್ತು ಶನಿ ನಾಲ್ಕನೇ ಮನೆಯಲ್ಲಿ

ಗುರು ಮತ್ತು ಶನಿ ನಾಲ್ಕನೇ ಮನೆಯಲ್ಲಿ

ಗುರು ಮತ್ತು ಶನಿ ನಾಲ್ಕನೇ ಮನೆಯಲ್ಲಿ ಮತ್ತು ರಾಹು ಮತ್ತು ಮಂಗಳ ರಾಶಿಯು ಅಷ್ಟಮ ಸ್ಥಾನದಲ್ಲಿದ್ದಾನೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಯಾಕೆ ಕೊರೊನಾ ಅಲೆ ಜಾಸ್ತಿಯಾಗುತ್ತಿರುವುದಕ್ಕೆ ಕಾರಣವಿದೆ. ಗುರು ಮತ್ತು ಶನಿ ನಾಲ್ಕನೇ ಮನೆಯಲ್ಲಿದ್ದಾನೆ, ನಾಲ್ಕನೇ ಮನೆಯನ್ನು ಜನರ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಗುರು ಮತ್ತು ಶನಿ ಒಂದೇ ಮನೆಯಲ್ಲಿದ್ದಾಗ, ಒಂದಲ್ಲಾ ಒಂದು ಸಮಸ್ಯೆ ಎದುರಾಗುವುದು ನಿಶ್ಚಿತ.

 ಏಪ್ರಿಲ್ ಮಧ್ಯಭಾಗದಲ್ಲಿ ಗ್ರಹಗತಿಗಳು ಬದಲಾಗಲಿದೆ

ಏಪ್ರಿಲ್ ಮಧ್ಯಭಾಗದಲ್ಲಿ ಗ್ರಹಗತಿಗಳು ಬದಲಾಗಲಿದೆ

ರಾಹು ಮತ್ತು ಮಂಗಳ ತುಲಾ ರಾಶಿಯ ಕುಂಡಲಿಯಲ್ಲಿದ್ದಾನೆ ಮತ್ತು ಅಷ್ಟನೇ ಸ್ಥಾನದಲ್ಲಿದ್ದಾನೆ, ಇದನ್ನು ಮೃತ್ಯು, ಅಪಘಾತ, ರೋಗರುಜಿನದ ಸ್ಥಾನ ಎಂದು ಕರೆಯಲಾಗುತ್ತದೆ. ಆದರೆ, ಇದ್ಯಾವುದಕ್ಕೂ ಜನರು ಭಯ ಪಡಬೇಕಾಗಿಲ್ಲ. ಏಪ್ರಿಲ್ ಮಧ್ಯಭಾಗದಲ್ಲಿ ಗ್ರಹಗತಿಗಳು ಬದಲಾಗಲಿದೆ, ಆದರೆ ಜನರು ಎಚ್ಚರ ತಪ್ಪಬಾರದು ಎಂದು ಮುದ್ಗಿಲ್ ಹೇಳಿದ್ದಾರೆ.

 ಮಾರ್ಗಸೂಚಿಯನ್ನು ಪಾಲಿಸಿದರೆ ಕೊರೊನಾ ವೈರಸ್ ಲೆಕ್ಕಕ್ಕಿಲ್ಲ

ಮಾರ್ಗಸೂಚಿಯನ್ನು ಪಾಲಿಸಿದರೆ ಕೊರೊನಾ ವೈರಸ್ ಲೆಕ್ಕಕ್ಕಿಲ್ಲ

ಮಾರ್ಗಸೂಚಿಯನ್ನು ಪಾಲಿಸಿದರೆ ಕೊರೊನಾ ವೈರಸ್ ಲೆಕ್ಕಕ್ಕೇ ಪರಿಗಣಿಸುವುದು ಬೇಡ. ಗ್ರಹಗತಿಗಳ ಪ್ರಭಾವ ಇದ್ದರೂ, ಇದಕ್ಕೆ ಭಗವಂತ ಪರಿಹಾರವನ್ನು ಕೊಟ್ಟಿರುತ್ತಾನೆ. ಮಕರ ಮತ್ತು ವೃಶ್ಚಿಕ ರಾಶಿಯಲ್ಲಿ ಗ್ರಹಗಳ ಸಂಯೋಗದಿಂದಾಗಿ ದಕ್ಷಿಣ ಮತ್ತು ಪಶ್ಚಿಮದ ಭಾಗದಲ್ಲಿ ಕೊರೊನಾ ಪ್ರಭಾವ ಹೆಚ್ಚಿರಲಿದೆ. ಜನರು ಇನ್ನೂ ಸ್ವಲ್ಪದಿನ ನಿರ್ಬಂಧವನ್ನು ಸಹಿಸಿಕೊಳ್ಲಬೇಕಿದೆ'ಎಂದು ವಿವೇಕ್ ಮುದ್ಗಿಲ್ ತಮ್ಮ ಭವಿಷ್ಯದಲ್ಲಿ ನುಡಿದಿದ್ದಾರೆ.

English summary
Astrological Prediction By Vivek Mudgil On Corona Second Wave
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X