• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2021 ರಿಂದ 2029ರ ವರೆಗಿನ ಪ್ರಧಾನಿ ಮೋದಿ ಕುಂಡಲಿ ಭವಿಷ್ಯ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ!

By ರಾಜೇಶ್ ಭಟ್
|
Google Oneindia Kannada News

ಜ್ಯೋತಿಷ್ಯ, ಭವಿಷ್ಯ ಮುಂತಾದವುಗಳನ್ನು ಕೆಲವೊಂದು ಜನರು ಎಷ್ಟೇ ತಮಾಷೆಯಾಗಿ ತೆಗೆದುಕೊಂಡರೂ, ಅದನ್ನು ನಂಬುವವರ ಸಂಖ್ಯೆ ಮತ್ತು ಯಾವುದರಿಂದಲೂ ಸಿಗದ ಪರಿಹಾರ ಈ ಮೂಲಕ ಸಿಗಬಹುದು ಎನ್ನುವವರ ಸಂಖ್ಯೆಗೇನೂ ಕೊರತೆಯಿಲ್ಲ.

ದೇಶ ಎದುರಿಸಬೇಕಾದ ಪ್ರಾಕೃತಿಕ ವಿಕೋಪ, ಯುದ್ದ, ರೋಗರುಜಿನಗಳ ಬಗ್ಗೆ ಹಲವು ಜ್ಯೋತಿಷಿಗಳು, ಸ್ವಾಮೀಜಿಗಳು ಈಗಾಗಲೇ ಹಲವು ಭವಿಷ್ಯವನ್ನು ಹೇಳಿಯಾಗಿದೆ. ಈ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ.

ಇಸ್ರೇಲ್ ರಾಜತಾಂತ್ರಿಕರಿಗೆ ರಕ್ಷಣೆ ನೀಡಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ ಇಸ್ರೇಲ್ ರಾಜತಾಂತ್ರಿಕರಿಗೆ ರಕ್ಷಣೆ ನೀಡಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ

ಕಳೆದ ಅಂದರೆ 2014ರಿಂದ ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಚಾರ್ಯ ಸಲೀಲ್ ಕುಮಾರ್ ಎನ್ನುವವರು ಭವಿಷ್ಯವೊಂದನ್ನು ನುಡಿದಿದ್ದಾರೆ.

ಇವರು, ಕೊರೊನಾ, ಭಾರತ-ಚೀನಾ ಗಡಿವಿವಾದದ ಬಗ್ಗೆಯೂ ಹಿಂದೆ ಭವಿಷ್ಯವನ್ನು ನುಡಿದಿದ್ದರು. ಸಲೀಲ್ ಅವರು 2021 ರಿಂದ 2029ರ ಅವಧಿಯಲ್ಲಿ ಮೋದಿಯ ಕುಂಡಲಿ ಯಾವರೀತಿ ಇರಲಿದೆ ಎನ್ನುವುದರ ವಿವರಣೆಯನ್ನು ನೀಡಿದ್ದಾರೆ.

ಕೊರೊನಾ ಲಸಿಕೆ: ವಿಶ್ವದಲ್ಲೇ ಅಪರೂಪದ ಹೆಗ್ಗಳಿಕೆಯತ್ತ ಭಾರತ ಕೊರೊನಾ ಲಸಿಕೆ: ವಿಶ್ವದಲ್ಲೇ ಅಪರೂಪದ ಹೆಗ್ಗಳಿಕೆಯತ್ತ ಭಾರತ

ಶನಿ ಮಹಾದೆಸೆ

ಶನಿ ಮಹಾದೆಸೆ

ಶನಿ ಮಹಾದೆಸೆಯಲ್ಲಿ ಮೋದಿಯವರ ಜನ್ಮವಾಗಿದೆ. ಇದಾದ ನಂತರ ಬುಧ, ಕೇತು, ಮತ್ತು ಸೂರ್ಯ ದೆಶೆ ಹಾದು ಬಂದಿದ್ದಾರೆ. ಹಾಗಾಗಿ, ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತವನ್ನು ಮೋದಿಯವರು ಕಂಡಿದ್ದಾರೆ. ಸದ್ಯ ಅವರ ಕುಂಡಲಿ ಚಂದ್ರ ದೆಶೆಯಲ್ಲಿದೆ. ಡಿಸೆಂಬರ್ 2020ರಿಂದ ಮಂಗಳ ಮಹಾದೆಶೆ ಆರಂಭವಾಗಿದೆ. ಇದು ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೂ ಈ ದೆಶೆ ಇರಲಿದೆ.

ಬಿಜೆಪಿಗೆ ಇರುವ ದೌರ್ಬಾಗ್ಯ

ಬಿಜೆಪಿಗೆ ಇರುವ ದೌರ್ಬಾಗ್ಯ

ಬಿಜೆಪಿಗೆ ಇರುವ ದೌರ್ಬಾಗ್ಯ ಏನಂದರೆ ಮೋದಿಗೆ ಪರ್ಯಾಯವಾಗಿ ಯಾವ ನಾಯಕನು ಇಲ್ಲದೇ ಇರುವುದು. ಸರಕಾರದ ಎಲ್ಲಾ ಒತ್ತಡ ಮೋದಿ ಮತ್ತು ಅಮಿತ್ ಶಾ ಅವರ ಮೇಲಿದೆ. ಅಮಿತ್ ಶಾ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ ಎಂದು ಹಿಂದೆನೇ ಹೇಳಿದ್ದೆ, ಆದರೆ, ಅವರ ಜಾತಕ ತುಂಬಾ ಪವರ್ಫುಲ್ ಆಗಿದೆ. ಶನಿಗೋಚರ ಮೋದಿಯವರ ಕುಂಡಲಿಯಲ್ಲಿ ಪ್ರಭಾವಿಯಾಗಿ ಮುಂದುವರಿಯಲಿದೆ.

ಆಚಾರ್ಯ ಸಲೀಲ್ ಕುಮಾರ್ ಎನ್ನುವವರ ಭವಿಷ್ಯ

ಆಚಾರ್ಯ ಸಲೀಲ್ ಕುಮಾರ್ ಎನ್ನುವವರ ಭವಿಷ್ಯ

2022ರ ವರೆಗೆ ಮೋದಿಯವರ ಜಾತಕದಲ್ಲಿನ ಶನಿಪ್ರಭಾವ ಚೆನ್ನಾಗಿ ಇರಲಿದೆ. 2022ರ ಅಂತ್ಯದಿಂದ ಮುಂದಿನ ಒಂದು ವರ್ಷ ಮೋದಿಯವರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ಮುಂದಿನ ಚುನಾವಣೆಯ ವೇಳೆ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಅವಧಿಯಲ್ಲಿ ಮೋದಿಗೆ ಆರೋಗ್ಯ ಸಮಸ್ಯೆ ಎದುರಾಗಬಹುದು ಮತ್ತು ಅವರ ಭದ್ರತೆಯವರೂ ಇನ್ನೂ ಅಲರ್ಟ್ ಆಗಿ ಇರಬೇಕಾಗುತ್ತದೆ.

ಮೋದಿ ಜಯಭೇರಿ ಬಾರಿಸುವ ಸಾಧ್ಯತೆ

ಮೋದಿ ಜಯಭೇರಿ ಬಾರಿಸುವ ಸಾಧ್ಯತೆ

ಮುಂದಿನ ಚುನಾವಣೆಯಲ್ಲೂ ಮೋದಿ ಜಯಭೇರಿ ಬಾರಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಬಿಜೆಪಿಯವರು ಗೆಲುವಿಗಾಗಿ ಭಾರೀ ಪರಿಶ್ರಮ ಪಡಬೇಕಾಗಿದೆ. ಮೋದಿಯವರ ರಾಜಯೋಗ ಇನ್ನೂ ಮುಂದುವರಿಯಲಿದೆ. 2021ಕ್ಕೆ ದೇಶಕ್ಕೆ ಸಂಘರ್ಷದ ಸಮಯವಾಗಿದೆ. ಅಂತರಾಷ್ಟ್ರೀಯವಾಗಿ ಮೋದಿಯವರ ಹೆಸರು ಇನ್ನೂ ಜನಪ್ರಿಯಗೊಳ್ಳಲಿದೆ. ಬಿಜೆಪಿಯವರು ಸಾಕಷ್ಟು ನಾಯಕರನ್ನು ತಯಾರು ಮಾಡಿಕೊಂಡರೆ ಪಕ್ಷಕ್ಕೆ ಒಳ್ಳೆಯದು. ಮೋದಿ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು.

English summary
Astrological Prediction Of PM Modi From 2021 To 2029, Health Is The Issue, 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X