ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ ಪರಿಹಾರ: ದೇವಾಲಯದ ಗೋಪುರ ನೆರಳು ಮನೆ ಮೇಲೆ ಬಿದ್ದರೆ...

ತಮ್ಮ ಭವಿಷ್ಯದ ಬಗ್ಗೆ ಒನ್ಇಂಡಿಯಾ ಕನ್ನಡ ಓದುಗರು ಕೇಳುವ ಪ್ರಶ್ನೆಗೆ ಉತ್ತರಿಸುವ ಅಂಕಣ ಇದು. ಈ ಬಾರಿ ಎರಡು ಪ್ರಶ್ನೆಗಳಿಗೆ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಉತ್ತರಿಸಿದ್ದಾರೆ. ನೀವೂ ನಿಮ್ಮ ಪ್ರಶ್ನೆಗಳನ್ನು ಕಳುಹಿಸಬಹುದು

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ಭವಿಷ್ಯದ ಬಗ್ಗೆ ನಿಮಗಿರುವ ಪ್ರಶ್ನೆಗಳನ್ನು ಕಳಿಸಿದರೆ ಒನ್ಇಂಡಿಯಾ ಕನ್ನಡದ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಅವರು ಉತ್ತರ ನೀಡುತ್ತಾರೆ ಎಂದು ತಿಳಿಸಲಾಗಿತ್ತು. ಆ ನಂತರ ಅನೇಕ ಓದುಗರು ತಮ್ಮ ಪ್ರಶ್ನೆಗಳನ್ನು ಕಳುಹಿಸಿದ್ದರು. ಆ ಪೈಕಿ ಆಯ್ದ ಎರಡು ಪತ್ರಕ್ಕೆ ಜ್ಯೋತಿಷಿಗಳು ಉತ್ತರಿಸಿದ್ದಾರೆ.

ಅಂದಹಾಗೆ ನೀವು ಕೂಡ ಪ್ರಶ್ನೆ ಕಳುಹಿಸಬಹುದು. ನಿಮ್ಮ ಹೆಸರು, ಜನ್ಮ ದಿನಾಂಕ, ಹುಟ್ಟಿದ ಸಮಯ, ಊರು-ಜಿಲ್ಲೆ-ತಾಲೂಕು, ತಂದೆ-ತಾಯಿಯ ಹೆಸರು. ನಿಮ್ಮ ಪ್ರಶ್ನೆ ಇಷ್ಟೂ ವಿವರವನ್ನು ನಮಗೆ ಈ ಮೇಲ್ ಮೂಲಕ ಕಳುಹಿಸಿದರೆ, ಆಯ್ದ ಪ್ರಶ್ನೆಗಳಿಗೆ ಪರಿಹಾರ ಸಹಿತವಾಗಿ ಜ್ಯೋತಿಷಿಗಳು ಉತ್ತರ ನೀಡುತ್ತಾರೆ.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಮೊಬೈಲ್ ಫೋನ್ ನಂಬರ್ 9845682380 ಮೂಲಕ ಸಂಪರ್ಕಿಸಬಹುದು. ಇನ್ನು ಪರಿಹಾರ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದಂತೆ ಜ್ಯೋತಿಷಿಗಳು ಸೂಚಿಸಿದ್ದರ ಬಗ್ಗೆ ನಂಬಿಕೆ ಇದ್ದಲ್ಲಿ ಅನುಸರಿಸಬಹುದು. ಈ ವಿಚಾರದಲ್ಲಿ ಒನ್ ಇಂಡಿಯಾ ಕನ್ನಡ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ. -ಸಂಪಾದಕ

Astrologer solution and suggestion to Oneindia Kannada readers questions

ದೇವಾಲಯದ ಗೋಪುರ ನೆರಳು ಮನೆ ಮೇಲೆ ಬೀಳುತ್ತಿದೆ, ಏನು ಮಾಡಲಿ?
ಪ್ರಶ್ನೆ: ನಮಸ್ತೆ. ನಾನು ಕೇಳುತ್ತಿರುವ ಪ್ರಶ್ನೆಗೆ ಸಿಗುವ ಉತ್ತರದಿಂದ ಹಲವರಿಗೆ ಅನುಕೂಲವಾಗುತ್ತದೆ. ನಮ್ಮ ಮನೆ ಗ್ರಾಮದೇವತೆ ದೇವಸ್ಥಾನದ ಹತ್ತಿರ ಇದೆ. ದೇವಾಲಯದ ಕಳಸದ ನೆರಳು ನಮ್ಮ ಮನೆ ಮೇಲೆ ಬೀಳುತ್ತದೆ. ಸೂರ್ಯಾಸ್ತದ ವೇಳೆ ಈ ರೀತಿ ನೆರಳು ಬೀಳುತ್ತಿದ್ದು, ನಮ್ಮ ರೀತಿಯೇ ಹಲವು ಮಂದಿ ಇಲ್ಲಿದ್ದಾರೆ. ನೆಮ್ಮದಿಯೇ ಇಲ್ಲದಂತಾಗಿದೆ. ಕೇಳಿದವರೆಲ್ಲ ಈ ಮನೆ ಬಿಡುವಂತೆ ಹೇಳುತ್ತಿದ್ದಾರೆ. ಈ ಮನೆ ಬಿಟ್ಟರೆ ನಮಗೆ ಮತ್ತೂ ಸಮಸ್ಯೆಯಾಗುತ್ತದೆ. ದಯವಿಟ್ಟು ನಮಗೆ ಪರಿಹಾರ ತಿಳಿಸಿ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]
-ಕಡೂರು
ಉತ್ತರ: ದೇಗುಲದ ಗೋಪುರದ ನೆರಳು ಎಲ್ಲೀತನಕ ಇಅರುತ್ತದೋ ಅಥವಾ ಅದರ ನೆರಳು ಬೀಳುತ್ತದೋ ಅಷ್ಟು ದೂರದವರೆಗೆ ಅಲ್ಲಿಯ ದೇವಸ್ಥಾನದ ಅರ್ಚಕರ ವಿನಾ ಬೇರೆಯವರು ವಾಸ ಮಾಡುವಂತಿಲ್ಲ. ಒಂದು ಪಕ್ಷ ಹಾಗೆ ವಾಸವಿದ್ದರೆ ಕಷ್ಟಗಳ ಸರಮಾಲೆ ಎದುರಿಸಬೇಕಾಗುತ್ತದೆ. ಇನ್ನು ಇದಕ್ಕೆ ಪರಿಹಾರ ಅಂದರೆ ಶೀಘ್ರವಾಗಿ ಆ ಮನೆಯನ್ನು ಖಾಲಿ ಮಾಡಬೇಕಾಗುತ್ತದೆ. ಅದು ಸಾಧ್ಯವಾಗದ ಪಕ್ಷದಲ್ಲಿ ಯಾವ ದೇವಸ್ಥಾನದ ನೆರಳು ಬೀಳುತ್ತದೋ ಆ ದೇವಾಲಯದಲ್ಲಿರುವ ದೇವರ ಮೂರ್ತಿಗೆ ನಿತ್ಯ ನೀವು ಪೂಜೆ ಸಲ್ಲಿಸಬೇಕು. ಮತ್ತು ನಿತ್ಯವೂ ನಿಮ್ಮ ಹೆಸರಿನಲ್ಲಿ ದೀಪ ಹಚ್ಚಬೇಕು. ದೀಪಕ್ಕೆ ಎಣ್ಣೆ, ಬತ್ತಿ ಇತ್ಯಾದಿಗಳನ್ನು ನೀವೇ ಪೂರೈಸಬೇಕು. ನಿಮಗೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಖುದ್ದಾಗಿ ಭೇಟಿ ಮಾಡಿ. ನಿಮಗೆ ಒಳ್ಳೆಯದಾಗಲಿ.

ಮರುಮದುವೆ ಯೋಗ ಇದೆಯಾ, ಭವಿಷ್ಯ ಹೇಗಿದೆ?
ಪ್ರಶ್ನೆ: ನಮಸ್ತೆ. ನನ್ನ ಜನ್ಮದಿನಾಂಕ, ಹುಟ್ಟಿದ ಸಮಯ, ಊರು ಮುಂತಾದ ವಿವರಗಳನ್ನು ಕಳಿಸಿದ್ದೇನೆ. ನನ್ನ ಎರಡನೇ ಮದುವೆಗೆ ಪ್ರಯತ್ನ ನಡೆಯುತ್ತಿದೆ. ಇನ್ನು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ವಿಪರೀತ ಕಿರಿಕಿರಿ ಇದೆ. ಜೀವನದಲ್ಲಿ ಬಹಳ ನೊಂದಿದ್ದೇನೆ. ನನಗೆ ಮರುಮದುವೆ ಯೋಗ ಇದೆಯಾ? ಒಂದು ವೇಳೆ ಇದ್ದರೆ ಯಾವಾಗ ಮತ್ತು ನನ್ನ ಭವಿಷ್ಯ ಹೇಗಿದೆ?[ಜ್ಯೋತಿಷ್ಯ: ಮರುವಿವಾಹ ಯಾರಿಗೆ, ಯಾಕೆ ಆಗುತ್ತದೆ?]
-ಹೆಸರು, ಊರು ಬೇಡ
ಉತ್ತರ: ನಿಮ್ಮ ಜಾತಕದಲ್ಲಿ ಚಂದ್ರನಿಂದ ಸಪ್ತಮಾಧಿಪತಿ ಕುಜ ನೀಚ ಸ್ಥಿತಿಯಲ್ಲಿದ್ದಾನೆ. ವ್ಯಯಾಧಿಪತಿ ಬುಧ ಸಪ್ತಮದಲ್ಲಿ ಇದ್ದಾನೆ. ಆ ಕಾರಣಕ್ಕೆ ಎರಡನೇ ಮದುವೆ ಕಷ್ಟ. ಒಂದು ವೇಳೆ ವಿವಾಹ ಆದರೂ ಅದು ಗಟ್ಟಿಯಾಗಿ ನಿಲ್ಲುವುದು ಕಷ್ಟ. ಆದರೆ ಹಾಗಂತ ಎರಡನೇ ಮದುವೆ ಯೋಗ ಇಲ್ಲವೇ ಇಲ್ಲ ಎಂದಲ್ಲ. ಈ ವರ್ಷ ಸೆಪ್ಟೆಂಬರ್ ತನಕ ನಿಮಗೆ ಕಷ್ಟಗಳು ಹಿಗೇ ಇರುತ್ತವೆ. ಇನ್ನು ವಿವಾಹದ ವಿಚಾರಕ್ಕೆ ಬಂದರೆ ಈ ವರ್ಷದ ನವೆಂಬರ್ ನಂತರ ಸಾಧ್ಯತೆಗಳಿವೆ. ಅದರೆ ಅದಕ್ಕೂ ಮೊದಲು ಕಡ್ಡಾಯವಾಗಿ ಕುಜ ಶಾಂತಿ ಹವನ, ಪುರುಷ ಸೂಕ್ತ ಹವನ ಹಾಗೂ ಬುಧ ಶಾಂತಿ ಹವನ ಮಾಡಿಸಿ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಖುದ್ದಾಗಿ ಭೇಟಿಯಾಗಿ. ನಿಮ್ಮ ಇಷ್ಟಾರ್ಥ ನೆರವೇರಲಿ.

English summary
Here is the suggestions and solution given by Astrologer Pandit Vittal Bhat to Oneindia Kannada readers questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X