ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಫಾ- ಸುನಫಾ ಯೋಗಗಳೇನಾದರೂ ನಿಮ್ಮ ಜಾತಕದಲ್ಲಿದೆಯಾ?

By ಪಂಡಿತ್: ಶ್ರೀ ಗಣೇಶಕುಮಾರ್
|
Google Oneindia Kannada News

ವೈದಿಕ ಜ್ಯೋತಿಷ ರೀತಿಯಾಗಿ ಇರುವ ಎರಡು ಯೋಗಗಳ ಬಗ್ಗೆ ಇಂದು ತಿಳಿಸಿಕೊಡುತ್ತೇನೆ. ಅವೇ ಸುನಫಾ ಯೋಗ ಮತ್ತು ಅನಫಾ ಯೋಗ. ಜಾತಕದಲ್ಲಿ ಚಂದ್ರನು ಬಲವಾದ ಸ್ಥಾನದಲ್ಲಿರುವವರಿಗೆ ಈ ಎರಡೂ ಯೋಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ಏಕೆಂದರೆ ದುರ್ಬಲ ಚಂದ್ರನು ಈ ಯೋಗಗಳನ್ನು ತಡೆಯುತ್ತಾನೆ.

ಜಾತಕದಲ್ಲಿ ಬಲವಾದ ಚಂದ್ರನನ್ನು ಗುರುತಿಸುವುದು ಹೇಗೆ?
ಒಬ್ಬ ವ್ಯಕ್ತಿಯು 'ಶುಕ್ಲ ಪಕ್ಷ'ದ 11 ನೇ 'ತಿಥಿ' ಮತ್ತು 'ಕೃಷ್ಣ ಪಕ್ಷ'ದ 5 ನೇ ತಿಥಿ ನಡುವೆ ಯಾವುದೇ ಸಮಯದಲ್ಲಿ ಜನಿಸಿರಬೇಕು. ಚಂದ್ರ 10 ರಿಂದ 20 ಡಿಗ್ರಿಗಳ ನಡುವೆ ಇದ್ದು, ಚಂದ್ರನಿಗೆ ದೋಷಪೂರಿತ ಅಥವಾ ಕ್ರೂರ ಗ್ರಹಗಳ ದೃಷ್ಟಿ ಇರಬಾರದು.
ಇನ್ನು ಜಾತಕದಲ್ಲಿ ಯಾವುದೇ ದೋಷಪೂರಿತ ಮನೆಯಲ್ಲಿ ಚಂದ್ರನು ಸ್ಥಿತನಾಗಿರಬಾರದು.

ಸುನಫಾ ಯೋಗ
ಜನ್ಮ ಜಾತಕದಲ್ಲಿ ಚಂದ್ರನು ಇರುವ ಮನೆಯಿಂದ ಮುಂದಿನ ಮನೆಯಲ್ಲಿ ಒಂದು ಗ್ರಹವಿದ್ದರೆ ಸುನಫಾ ಯೋಗವು ರೂಪುಗೊಳ್ಳುತ್ತದೆ, ಅದು ಆ ಜಾತಕರಿಗೆ ಸಂಪತ್ತು ಮತ್ತು ಖ್ಯಾತಿಯನ್ನು ನೀಡುತ್ತದೆ. ಆದರೆ ಚಂದ್ರನಿಂದ ಮುಂದಿನ ಮನೆಯಲ್ಲಿ ರವಿ ಗ್ರಹ ಮಾತ್ರ ಇರಬಾರದು. ಅಂಥ ಸನ್ನಿವೇಶದಲ್ಲಿ ಸುನಫಾ ಯೋಗ ರೂಪುಗೊಳ್ಳುವುದಕ್ಕೆ ರವಿ ಗ್ರಹದ ಜೊತೆಗೆ ಬೇರೆ ಯಾವುದಾದರೂ ಗ್ರಹ ಇರಬೇಕು.

 Anapha Yoga And Sunapha Yoga In Kundli Meaning And Benefits In Kannada

ಉದಾಹರಣೆಗೆ, ಜಾತಕದ 9 ನೇ ಮನೆಯಲ್ಲಿ ಚಂದ್ರನಿದ್ದು ಮತ್ತು ರವಿಯನ್ನು ಹೊರತುಪಡಿಸಿ ಯಾವುದಾದರೂ ಗ್ರಹ 10 ನೇ ಮನೆಯಲ್ಲಿ ಇದ್ದರೆ ಮಾತ್ರ ಸುನಫಾ ಯೋಗವು ರೂಪುಗೊಳ್ಳುತ್ತದೆ.

ಸುನಫಾ ಯೋಗ ಅನೇಕ ಜನರ ಜಾತಕಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಅವುಗಳಲ್ಲಿ ಬಹುತೇಕರು ಈ ಯೋಗದ ಶುಭ ಫಲಿತಾಂಶಗಳನ್ನು ಪಡೆಯುವುದಿಲ್ಲ. ಅದರ ಹಿಂದಿನ ಕಾರಣಗಳು ಏನೆಂದರೆ, ಸುನಫಾ ಯೋಗದ ಶುಭ ಫಲ ಪಡೆಯುವುದಕ್ಕೆ ಜನ್ಮ ಜಾತಕದಲ್ಲಿ ಚಂದ್ರನು ಉತ್ತಮ ಸ್ಥಾನದಲ್ಲಿರಬೇಕು ಮತ್ತು ಚಂದ್ರನಿಂದ ಮುಂದಿನ ಮನೆಯಲ್ಲಿ ಇರುವ ಗ್ರಹವೂ ಉತ್ತಮ ಸ್ಥಾನದಲ್ಲಿರಬೇಕು.

ಎರಡೂ ಗ್ರಹಗಳು ಸರಿಯಾದ ಸ್ಥಾನದಲ್ಲಿಲ್ಲದಿದ್ದರೆ, ಸುನಫಾ ಯೋಗವು ದುರ್ಬಲಗೊಳ್ಳುತ್ತದೆ ಮತ್ತು ಆ ಜಾತಕರಿಗೆ ಅದರ ಉತ್ತಮ ಫಲಿತಾಂಶಗಳನ್ನು ನೀಡಲು ಸಾಧ್ಯವಾಗಲ್ಲ.

ಇದರ ಹೊರತಾಗಿ, ಜನ್ಮ ಜಾತಕದಲ್ಲಿನ ಚಂದ್ರನು ಯಾವುದೇ ದೋಷಪೂರಿತ ಗ್ರಹ/ ಗ್ರಹಗಳೊಂದಿಗೆ ಸಂಯೋಗವಾಗಬಾರದು.ಇನ್ನು ಈ ಯೋಗದ ಶಕ್ತಿ ಅಥವಾ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವಾಗ, ಸ್ಥಳೀಯರ ಜಾತಕದಲ್ಲಿ ಚಂದ್ರ ಎಲ್ಲಿ ಸ್ಥಿತನಾಗಿದ್ದಾನೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಉದಾಹರಣೆಗೆ, ಕರ್ಕಾಟಕ ರಾಶಿಯಲ್ಲಿ ಇರುವ ಚಂದ್ರನಿಂದ ರೂಪುಗೊಂಡ ಸುನಫಾ ಯೋಗವು ವೃಶ್ಚಿಕ ರಾಶಿಯ ಚಂದ್ರನಿಂದ ರೂಪುಗೊಂಡ ಸುನಫಾ ಯೋಗಕ್ಕಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ.

ಅನಫಾ
ಜನ್ಮ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಗ್ರಹ ಇದ್ದಲ್ಲಿ ಅನಫಾ ಯೋಗವು ರೂಪುಗೊಳ್ಳುತ್ತದೆ. ಅನಫಾ ಯೋಗವು ಆ ಜಾತಕರಿಗೆ ಉತ್ತಮ ಆರೋಗ್ಯ, ಖ್ಯಾತಿ ಮತ್ತು ಜೀವನದಲ್ಲಿ ಆಧ್ಯಾತ್ಮಿಕ ಬೆಳವಣಿಗೆಯನ್ನು ನೀಡುತ್ತದೆ.

ಸುನಫಾ ಯೋಗದಂತೆಯೇ, ಚಂದ್ರನ ಹಿಂದಿನ ಮನೆಯಲ್ಲಿ ರವಿ ಇದ್ದಲ್ಲಿ ಮಾತ್ರ ಅನಫಾ ಯೋಗವು ರೂಪುಗೊಳ್ಳುವುದಿಲ್ಲ. ಅದರ ಹೊರತಾಗಿಯೂ ಜಾತಕದಲ್ಲಿ ಅನಫಾ ಯೋಗದ ಫಲ ಸಿಗಬೇಕಿದ್ದಲ್ಲಿ ರವಿಯೊಂದಿಗೆ ಬೇರೆ ಯಾವುದಾದರೂ ಗ್ರಹ ಇರಬೇಕು.

ಸುನಫಾ ಯೋಗದಲ್ಲಿ ತಿಳಿಸಿದಂತೆಯೇ ಈ ಯೋಗಕ್ಕೂ ಆ ವ್ಯಕ್ತಿಯ ಜನ್ಮ ಜಾತಕದಲ್ಲಿನ ಚಂದ್ರನು ಯಾವುದೇ ದೋಷಪೂರಿತ ಗ್ರಹ ಅಥವಾ ಗ್ರಹಗಳೊಂದಿಗೆ ಸಂಯೋಗವಾಗದಿದ್ದರೆ ಮತ್ತು ಯಾವುದೇ ದೋಷಪೂರಿತ ಗ್ರಹದ / ಅಂಶಗಳಿಂದ ಮುಕ್ತವಾಗಿದ್ದರೆ ಮಾತ್ರ ಅನಫಾ ಯೋಗದ ಶುಭ ಫಲಗಳು ದೊರೆಯುತ್ತವೆ.

ಸುನಫಾ ಮತ್ತು ಅನಫಾ ಯೋಗಗಳ ಪರಿಣಾಮಗಳು
ಯಾವ ವ್ಯಕ್ತಿಯ ಜಾತಕದಲ್ಲಿ ಸುನಫಾ - ಅನಫಾ ಯೋಗಗಳು ಇರುತ್ತವೋ, ಆ ವ್ಯಕ್ತಿಯು ಪ್ರಸಿದ್ಧ, ಗೌರವಾನ್ವಿತ, ಆರ್ಥಿಕವಾಗಿ ಸದೃಢ, ಕರುಣಾಮಯಿ, ಶ್ರೀಮಂತ ಮತ್ತು ಸಮುದಾಯದ ಅಥವಾ ಸಂಘಟನೆಯ ನಾಯಕರಾಗಿರುತ್ತಾರೆ.

ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಜೀವನದಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಹಾಗೂ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಾರೆ. ಈ ಯೋಗಗಳು ಆ ಜಾತಕರಿಗೆ ಆಯಾ ಗ್ರಹಗಳ ದಶಾ ಮತ್ತು ಅಂತರ್ದಶಾ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

ಶ್ರೀ ಪಂಚಮುಖಿ ಜ್ಯೋತಿಷ್ಯo - ಪಂಡಿತ್: ಶ್ರೀ ಗಣೇಶಕುಮಾರ್,

ಸೂಚನೆ: ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಸ್ತ್ರೀ-ಪುರುಷ - ಆಕರ್ಷಣೆ , ದಾಂಪತ್ಯ, ಪ್ರೇಮವಿಚಾರ , ಮಾನಸಿಕ, ಗೃಹಶಾಂತಿ, ಆರೋಗ್ಯ, ಹಣಕಾಸು, ಮಾಟಭಾದೆ, ಶತ್ರುಕಾಟ, ಅಲ್ಲದೇ ರಾಜಯೋಗವಶಗಳು, ಅಖಂಡಯೋಗವಶಗಳು ಇನ್ನಿತರ ನಿಮ್ಮ ಯಾವುದೇ ಕಠಿಣ, ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಪರಿಹಾರ ಶತಸಿದ್ದ .

(ಫೋನಿನ ಮೂಲಕ ಪರಿಹಾರ) PH:-9880533337 .
ಮೈಸೂರು ಸರ್ಕಲ್ (ಸಿರಸಿ ವೃತ್ತ) ಚಾಮರಾಜಪೇಟೆ, ಬೆಂಗಳೂರು.

English summary
Here we talking about the Anapha Yoga and Sunapha Yoga in your kundli meaning and benefits according to astrology. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X