ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ರಾಹುಲ್, ಎಚ್ಡಿಕೆ, ಗ್ರಹಣ ಭವಿಷ್ಯ: ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ ಸಂದರ್ಶನ

|
Google Oneindia Kannada News

Recommended Video

ಜುಲೈ 27 ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣ : ಖ್ಯಾತ ಜ್ಯೋತಿಷಿ ಕಬಿಯಾಡಿ ಜಯರಾಮ ಆಚಾರ್ಯರಿಂದ ಗ್ರಹಣದ ವಿವರಣೆ

ಸೂರ್ಯಗ್ರಹಣವಾಗಲಿ, ಚಂದ್ರಗ್ರಹಣವಾಗಲಿ ಅದು ರಾಜ್ಯ ಮತ್ತು ದೇಶದ ರಾಜಕೀಯದಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವ ಚರ್ಚೆ ಪ್ರತೀ ಗ್ರಹಣದ ಸಂದರ್ಭದಲ್ಲೂ ನಡೆಯುವುದು ಸಾಮಾನ್ಯ.

ಇದೇ ಶುಕ್ರವಾರ ಮಧ್ಯರಾತ್ರಿ (ಜುಲೈ 27) ಸಂಭವಿಸಲಿರುವ ಕೇತುಗ್ರಸ್ತ ಚಂದ್ರಗ್ರಹಣ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಮೇಲೆ ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಯ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎನ್ನುವ ಗಹನಚರ್ಚೆ ಈಗಾಗಲೇ ತಾರಕಕ್ಕೇರಿದೆ.

ಚಂದ್ರಗ್ರಹಣ ವಿಶೇಷ: ಯಾವುದೇ ಗ್ರಹಣದ ಶುಭಾಶುಭ ಫಲಗಳ ಅವಧಿ ಎಷ್ಟು?ಚಂದ್ರಗ್ರಹಣ ವಿಶೇಷ: ಯಾವುದೇ ಗ್ರಹಣದ ಶುಭಾಶುಭ ಫಲಗಳ ಅವಧಿ ಎಷ್ಟು?

ನಾಡಿನ ಖ್ಯಾತಿ ಜ್ಯೋತಿಷಿಗಳಲ್ಲೊಬ್ಬರಾದ ಕಬ್ಯಾಡಿ ಜಯರಾಮ ಆಚಾರ್ಯ, ಕೇತುಗ್ರಸ್ತ ಚಂದ್ರಗ್ರಹಣದ ಆಗುಹೋಗಿನ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ರಾಜಕೀಯ ಮುಖಂಡರಿಗೆ ಇದರ ಫಲ ಏನು, ಶುಭವೋ ಅಥವಾ ಅಶುಭವೋ ಎನ್ನುವುದರ ಬಗ್ಗೆಯೂ ಕಬ್ಯಾಡಿ ಆಚಾರ್ಯರು ವಿವರಿಸಿದ್ದಾರೆ.

ಇದರ ಜೊತೆಗೆ, ಉಡುಪಿ ಶೀರೂರು ಶ್ರೀಗಳು ವಿಧಿವಶವಾದ ನಂತರದ ನಡೆಯುತ್ತಿರುವ ಮಠಾಧಿಪತಿಗಳ ನಡುವಿನ ತಿಕ್ಕಾಟದ ಬಗ್ಗೆ ಆಚಾರ್ಯರು 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ಪ್ರಸ್ತಾವಿಸಿದ್ದಾರೆ. ಅವರ ಸಂದರ್ಶನದ ಆಯ್ದಭಾಗ ಇಂತಿದೆ:

ಚಂದ್ರಗ್ರಹಣ ಹಿನ್ನೆಲೆಯಲ್ಲಿ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳುಚಂದ್ರಗ್ರಹಣ ಹಿನ್ನೆಲೆಯಲ್ಲಿ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಪ್ರ: ಖಗ್ರಾಸ ಚಂದ್ರಗ್ರಹಣದ ಬಗ್ಗೆ ಸ್ವಲ್ಪ ವಿವರಿಸಿ
ಕಬ್ಯಾಡಿ: ಇದೊಂದು ಕೌತುಕಮಯ ಘಟ್ಟ, ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ನಡೆಯುವಂತಹ ಪ್ರಕ್ರಿಯೆ ಇದು. ಭೂಮಿ ಸೂರ್ಯನ ಸುತ್ತ ಸುತ್ತುವಾಗ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಹುಣ್ಣಿಮಯ ದಿನದಂದು ಅಮವಾಸ್ಯೆಯ ರೀತಿಯಲ್ಲಿ ಕತ್ತಲು ಬರುವುದಕ್ಕೆ ಗ್ರಹಣ ಎನ್ನುತ್ತೇವೆ.

ಹುಚ್ಚರಿಗೆ ಹುಚ್ಚುತನ ಜಾಸ್ತಿಯಾಗುವುದು, ಸಮುದ್ರದಲ್ಲಿ ಅಲೆಗಳ ಏರಿಳಿತ ಜಾಸ್ತಿಯಾಗುವುದು.. ಈ ರೀತಿಯ ಪ್ರಕ್ರಿಯೆ ಗ್ರಹಣದಂದು ಜಾಸ್ತಿಯಾಗಿರುತ್ತದೆ. ಹಿಂದೆ ಮುನಿಗಳು ರಚಿಸಿದ ಶಾಸ್ತ್ರಗಳ ಪ್ರಕಾರ, ಸೂರ್ಯಚಂದ್ರನ ಕಿರಣಗಳು ಮನುಷ್ಯನ ಮೇಲೆ ಬೀಳುವುದರಿಂದ ಗ್ರಹಣ ಪ್ರಭಾವ ಜನಸಾಮಾನ್ಯರಿಗೆ ಇದ್ದೇ ಇರುತ್ತದೆ.

ಪ್ರಕೃತಿ ವಿಕೋಪಕ್ಕೆ ಕಾರಣವಾದ ಉದಾಹರೆಣೆಗಳಿವೆಯೇ?

ಪ್ರಕೃತಿ ವಿಕೋಪಕ್ಕೆ ಕಾರಣವಾದ ಉದಾಹರೆಣೆಗಳಿವೆಯೇ?

ಪ್ರ: ಸೂರ್ಯ ಅಥವಾ ಚಂದ್ರಗ್ರಹಣ ಪ್ರಕೃತಿ ವಿಕೋಪಕ್ಕೆ ಕಾರಣವಾದ ಉದಾಹರೆಣೆಗಳಿವೆಯೇ?

ಕಬ್ಯಾಡಿ: ಯಾವ ಪ್ರದೇಶದಲ್ಲಿ ಈ ಚಂದ್ರಗ್ರಹಣ ಕಾಣಿಸಲ್ಪಡುತ್ತದೋ, ಜೊತೆಗೆ ಈ ಬಾರಿಯ ಚಂದ್ರಗ್ರಹಣ ಕೇತುಜೊತೆ ಇರುವುದರಿಂದಾಗಿ, ಭೂಮಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಸ್ವಲ್ಪಮಟ್ಟಿಗೆ ಇದೆ. ಇದು ರಕ್ತಚಂದನ ಗ್ರಹಣ, ಬಹಳ ದೊಡ್ಡ ವಿಕೋಪ ಉಂಟಾಗುತ್ತದೆ ಎನ್ನುವುದೆಲ್ಲಾ ಬರೀ ಸುಳ್ಳು.

ಎಲ್ಲಾ ಚಂದ್ರಗ್ರಹಣದಷ್ಟೇ ಈ ಗ್ರಹಣವೂ ಪ್ರಭಾವ ಬೀರುವುದು. ಹಾಗಾಗಿ ಯಾವುದೇ ವಿಶೇಷ ದುಸ್ಪರಿಣಾಮ ಈ ಗ್ರಹಣದಿಂದ ಉಂಟಾಗುವುದಿಲ್ಲ. ಅವರವರ ಜಾತಕಫಲದಲ್ಲಿ ಬೇರೇನಾದರೂ ತೊಂದರೆಯಿದ್ದರೆ ಮಾತ್ರ ಸಮಸ್ಯೆಯಾಗಬಹುದೇ ಹೊರತು ಗ್ರಹಣದಿಂದಲ್ಲ. ಚಂದ್ರ ಜಲಕಾರಕನಾಗಿರುವುದರಿಂದ ಅತಿವೃಷ್ಟಿ ಅಲ್ಲಲ್ಲಿ ಆಗಬಹುದು.

ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಗ್ಗೆ?

ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಗ್ಗೆ?

ಪ್ರ: ಕುಮಾರಸ್ವಾಮಿಯವರ ಬಗ್ಗೆ ಹೇಳಿ

ಕಬ್ಯಾಡಿ: ಅವರದ್ದು ಆದ್ರಾ ನಕ್ಷತ್ರ, ಮಿಥುನ ರಾಶಿ. ಗ್ರಹಣಕ್ಕೆ ಸಂಬಂಧಪಟ್ಟ ವ್ಯವಸ್ಥೆಯಲ್ಲಿ ಅವರ ರಾಶಿ ಬರದೇ ಇದ್ದರೂ, ಅವರಿಗೆ ಅಷ್ಟಮದಲ್ಲಿ ಕೇತು ಇರುವಾಗ ಈ ಗ್ರಹಣ ಸಂಭವಿಸುತ್ತಿರುವುದರಿಂದ, ಅವರಿಗೂ ಗ್ರಹಣದ ಪರಿಣಾಮ ಸ್ವಲ್ಪಮಟ್ಟಿಗೆ ತಟ್ಟಬಹುದು.

ಅಕ್ಟೋಬರ್ ಹನ್ನೊಂದರ ನಂತರ ಗುರು, ರಾಹು ಮತ್ತು ಶನಿ ಪ್ರತಿಕೂಲನಾಗುವುದರಿಂದ ರಾಜಕೀಯ ಸ್ಥಿತ್ಯಂತರ ಆಗಬಹುದು. ನನ್ನದಾದ ಅನಾಲಸಿಸ್ ಪ್ರಕಾರ ಹೇಳುವುದಾದರೆ, ಎಚ್ಡಿಕೆ ಅವರಿಗೆ ಗ್ರಹಣದ ಪ್ರಭಾವ ಇರಲಿದೆ.

ಚಂದ್ರ ಗ್ರಹಣದ ಕೆಡುಕಿನ ಬಗ್ಗೆ ಯಡಿಯೂರಪ್ಪನವರು ಹೇಳಿದ್ದೇನು?ಚಂದ್ರ ಗ್ರಹಣದ ಕೆಡುಕಿನ ಬಗ್ಗೆ ಯಡಿಯೂರಪ್ಪನವರು ಹೇಳಿದ್ದೇನು?

ಮೋದಿ ಅವರದ್ದು ಅನೂರಾಧ ನಕ್ಷತ್ರ

ಮೋದಿ ಅವರದ್ದು ಅನೂರಾಧ ನಕ್ಷತ್ರ

ಪ್ರ: ಪ್ರಧಾನಿ ಮೋದಿಯವರ ಬಗ್ಗೆ?

ಕಬ್ಯಾಡಿ: ಅವರದ್ದು ಅನೂರಾಧ ನಕ್ಷತ್ರ, ವೃಶ್ಚಿಕ ರಾಶಿ. ಈ ರಾಶಿಯವರಿಗೆ ಗುರು ಅನುಕೂಲಕರನಾಗುತ್ತಾನೆ. ಶನಿಯೂ ತೃತೀಯ ಲಗ್ನಕ್ಕೂ ಹೋಗುತ್ತಾನೆ. ಗ್ರಹಣ ಕಾಲದಲ್ಲಿ ಕುಜ, ಕೇತು ಎರಡೂ ಅನುಕೂಲಕರನಾಗಿರುವುದರಿಂದ ಈ ಗ್ರಹಣ ಅವರಿಗೆ ಮಂಗಳಕಾರಕ.

ಅಕ್ಟೋಬರ್ ಹನ್ನೊಂದರ ನಂತರ ಅವರಿಗೆ ರಾಜಕೀಯದಲ್ಲಿ ಇನ್ನೂ ಉನ್ನತಿ ಸಿಗಲಿದೆ. ಅವರ ಭವಿಷ್ಯ ಇನ್ನೂ ಉಜ್ವಲವಾಗುವುದು, ಅವರ ರಾಷ್ಟ್ರೀಯ ನಾಯಕತ್ವಕ್ಕೆ ಇನ್ನೂ ಗಟ್ಟಿತನ ಬರಲಿದೆ.

ಮಹಾಯೋಗ ಪುರುಷ ಫಲ ಮೋದಿಯವರಷ್ಟು ಗಟ್ಟಿಯಾಗಿಲ್ಲ

ಮಹಾಯೋಗ ಪುರುಷ ಫಲ ಮೋದಿಯವರಷ್ಟು ಗಟ್ಟಿಯಾಗಿಲ್ಲ

ಪ್ರ: ರಾಹುಲ್ ಗಾಂಧಿಯವರ ಬಗ್ಗೆ?

ಕಬ್ಯಾಡಿ: ರಾಹುಲ್ ಅವರದ್ದು ಜ್ಯೇಷ್ಠ ನಕ್ಷತ್ರ, ವೃಶ್ಚಿಕ ರಾಶಿ, ಕೆಲವೊಷ್ಟು ಸುಧಾರಣೆ ಅವರಿಗೆ ಕಾಣಲಿದೆ. ಆದರೆ ಮೋದಿಯವರಿಗೆ ಇರುವಂತ ಗಜಕೇಸರಿಯೋಗ, ಶಶಿಮಂಗಳ ಯೋಗ, ಮಹಾಸಾಮ್ರಾಟ ಯೊಗ, ಬುದ್ದಿಮಾಧುರ್ಯ ಫಲ ಮುಂತಾದ ಮಹಾಯೋಗ ಪುರುಷ ಫಲ ಮೋದಿಯವರಷ್ಟು ಗಟ್ಟಿಯಾಗಿ ರಾಹುಲ್ ಗಾಂಧಿ ಅವರಿಗಿಲ್ಲ.

ಹಾಗಾಗಿ, ಮೋದಿ ಮತ್ತು ರಾಹುಲ್ ನಡುವಿನ ಸ್ಪರ್ಧೆಯಲ್ಲಿ ಮೋದಿಯವರ ಪ್ರಾಭಲ್ಯವೇ ಹೆಚ್ಚಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಹೆಚ್ಚಿನ ಸೀಟುಗಳಿಸುವ ಸಾಧ್ಯತೆಯಿದ್ದರೂ, ಅವರು ಪ್ರಧಾನಮಂತ್ರಿ ಆಗುವ ಸಾಧ್ಯತೆ ಗ್ರಹಣದ ಪ್ರಭಾವ ಮತ್ತು ಅವರ ಜಾತಕದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಹನ್ನೆರಡು ರಾಶಿಗಳ ಮೇಲೆ ಜುಲೈ 27ರ ಚಂದ್ರ ಗ್ರಹಣದ ಫಲಾಫಲಹನ್ನೆರಡು ರಾಶಿಗಳ ಮೇಲೆ ಜುಲೈ 27ರ ಚಂದ್ರ ಗ್ರಹಣದ ಫಲಾಫಲ

ಸಿದ್ದರಾಮಯ್ಯನವರ ಜಾತಕ ಹೇಗಿದೆ?

ಸಿದ್ದರಾಮಯ್ಯನವರ ಜಾತಕ ಹೇಗಿದೆ?

ಪ್ರ: ಸಿದ್ದರಾಮಯ್ಯನವರ ಕುರಿತು?

ಕಬ್ಯಾಡಿ: ವಿಶಾಖ ನಕ್ಷತ್ರ, ಅವರೂ ವೃಶ್ಚಿಕ ರಾಶಿಯವರೇ, ಅವರಿಗೂ ರಾಜಕೀಯವಾಗಿ ಬಲ ಹೆಚ್ಚುಬಂದಿದೆ. ಮೋದಿ, ರಾಹುಲ್ ಮತ್ತು ಸಿದ್ದರಾಮಯ್ಯ ಮೂವರದ್ದೂ ವೃಶ್ಚಿಕ ರಾಶಿಯೇ ಆಗಿದ್ದರೂ, ಮೋದಿಯವರದ್ದು ಅನುರಾಧ ನಕ್ಷತ್ರವಾಗಿರುವುದರಿಂದ, ಯೋಗಫಲದ ವಿಚಾರದಲ್ಲಿ ವ್ಯತ್ಯಾಸವಿದೆ.

ಮೂಲಜಾತಕ, ದಶಾಕಾಲ, ಗೋಚರಿತ ಯೋಗಫಲ ಇವನ್ನೆಲ್ಲಾ ಕ್ರೋಢೀಕರಿಸಿದರೆ, ಮೋದಿಯವರಷ್ಟು ಗಟ್ಟಿಯಾದ ಫಲ ಇವರಿಗಿಲ್ಲ.

ವಾಮಾಚಾರ ಪ್ರಯೋಗಿಸಲು ಗ್ರಹಣದ ವೇಳೆಯೇ ಯಾಕೆ?

ವಾಮಾಚಾರ ಪ್ರಯೋಗಿಸಲು ಗ್ರಹಣದ ವೇಳೆಯೇ ಯಾಕೆ?

ಪ್ರ: ವಾಮಾಚಾರ ಪ್ರಯೋಗಿಸಲು ಗ್ರಹಣದ ವೇಳೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಯಾವುದಾದರೂ ಕಾರಣವಿದೆಯೇ?

ಕಬ್ಯಾಡಿ: ಗ್ರಹಣದ ವೇಳೆಯಲ್ಲಿ ಮಾಡುವ ಹೋಮಹವನ, ಪೂಜೆಗಳಿಗೆ ಫಲ ಜಾಸ್ತಿ ಎಂದು ಶಾಸ್ತ್ರ ಹೇಳುತ್ತದೆ. ಅದರಂತೆಯೇ ಅಥರ್ವಣ ಪ್ರಯೋಗ ಅಂದರೆ ವಾಮಾಚಾರದ ಕೆಲಸಗಳೂ ಹೆಚ್ಚು ಪ್ರಭಾವವನ್ನು ಬೀರುತ್ತದೆ. ಹಾಗಾಗಿ, ಮಂತ್ರವಾದಿಗಳು ಗ್ರಹಣದ ಕಾಲವನ್ನೇ ಹೆಚ್ಚು ಆಯ್ಕೆಮಾಡುತ್ತಾರೆ.

ಸಾಮಾನ್ಯವಾಗಿ ಅಮವಾಸ್ಯೆಯ ದಿನ ವಾಮಾಚಾರದ ಕೆಲಸ ಹೆಚ್ಚು ನಡೆಯುವಂತದ್ದು, ಹುಣ್ಣಿಮೆಯ ದಿನ ಗ್ರಹಣ ಬಂದಾಗ ಅಮವಾಸ್ಯೆಯಂತೇ ಕತ್ತಲಾಗುವುದರಿಂದ, ಪಾಕೃತಿಕ ವಿಕೋಪಕ್ಕೂ ಗ್ರಹಣ ಕಾರಣವಾಗುವುದರಿಂದ, ವಾಮಾಚಾರ ಕೆಲಸಕ್ಕೆ ಹೆಚ್ಚು ಶಕ್ತಿಯಿರಲಿದೆ ಎನ್ನುವುದು ಇಂದ್ರಜಾಲ ಪ್ರಕ್ರಿಯೆಯಲ್ಲಿ ಹೇಳಲಾಗಿದೆ.

ಉದ್ಯೋಗಿಗಳು ನೈಟ್ ಶಿಫ್ಟ್ ನಲ್ಲಿದ್ದರೆ, ಅಂತವರಿಗೆ ಪರಿಹಾರ?

ಉದ್ಯೋಗಿಗಳು ನೈಟ್ ಶಿಫ್ಟ್ ನಲ್ಲಿದ್ದರೆ, ಅಂತವರಿಗೆ ಪರಿಹಾರ?

ಪ್ರ: ಗ್ರಹಣ ಸಂಭವಿಸುವ ವೇಳೆ, ಉದ್ಯೋಗಿಗಳು ನೈಟ್ ಶಿಫ್ಟ್ ನಲ್ಲಿದ್ದರೆ, ಅಂತವರಿಗೆ ಹೇಗೆ ಪರಿಹಾರ?

ಕಬ್ಯಾಡಿ: ಗ್ರಹಣದ ಪೂರ್ವಭಾವಿಯಾಗಿ ಸ್ನಾನ ಮಾಡಿ ಶುಚಿಯಾಗಿದ್ದರೆ ಒಳ್ಲೆಯದು. ತನ್ನದಾದ ಆವರಣದೊಳಗೆ, ಹೆಚ್ಚು ಬೆಳಕಿನ ವ್ಯವಸ್ಥೆ ಇಲ್ಲದೇ ಇರುವಂತಹ ಜಾಗವನ್ನು ಆಯ್ಕೆಮಾಡಿಕೊಂಡು, ಆದಷ್ಟು ಆವರಣದ ಕೇಂದ್ರದ ಭಾಗದಲ್ಲಿ ಜಪತಪ ಮಾಡಿದರೆ ಒಳ್ಳೆಯದು.

ಇದ್ಯಾವುದೂ ಸಾಧ್ಯವಾಗದ ಪಕ್ಷದಲ್ಲಿ ರಾತ್ರಿ ಪಾಳಯದವರು ತಮ್ಮ ಶಿಫ್ಟ್ ಮುಗಿದ ನಂತರ ಮನೆಗೆ ಬಂದು ಮತ್ತೆ ಶುಚಿಯಾಗಿ, ಜಪತಪ ಮಾಡಿ, ಎಳ್ಳೆಣ್ಣೆ ಶಿವ ದೇವರಿಗೆ ಅರ್ಪಿಸಿದರೆ ಪರಿಹಾರ ಸಿಗುತ್ತದೆ.

ಪ್ರಮುಖ ಮಾಧ್ವ ಪೀಠದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷ

ಪ್ರಮುಖ ಮಾಧ್ವ ಪೀಠದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷ

ಪ್ರ: ನಾಡಿನ ಪ್ರಮುಖ ಮಾಧ್ವ ಪೀಠದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷಕ್ಕೂ, ಗ್ರಹಣಕ್ಕೂ ಸಂಬಂಧವಿದೆಯಾ?

ಕಬ್ಯಾಡಿ: ಗ್ರಹಣದ ಪೂರ್ವಭಾವಿಯಾಗಿ ನಡೆದಿರುವಂತಹ ಘಟನೆಯಾಗಿರುವುದರಿಂದ, ಉಡುಪಿ ಮಠದ ಸಮಸ್ಯೆಗೂ ಗ್ರಹಣಕ್ಕೂ ಯಾವುದೇ ಸಂಬಂಧವಿಲ್ಲ. ಶೀರೂರು ಶ್ರೀಗಳ ಪರಿಚಯ ನನಗೆ ಮೂರು ದಶಕಗಳ ಹಿಂದಿನಿಂದಲೂ ಇದೆ. ಅವರಿಗೆ ಹಲವಾರು ರೀತಿಯ ದುಶ್ಚಟಗಳು ಇದ್ದದ್ದು ಹೌದು. ಅವರ ಜಾತಕ ಸರಿಯಿಲ್ಲ, ಸನ್ಯಾಸತ್ವ ಕೊಟ್ಟಿದ್ದೇ ತಪ್ಪು ಎಂದು ನಾವು ಹೇಳಿದ್ದೆವು.

ಪೇಜಾವರ ಶ್ರೀಗಳ ಬಗ್ಗೆ ಅವರು ಮಾತನಾಡಿದ್ದಾರೆ, ಅವರು ಮಲಗಿಕೊಳ್ಳುವುದು ದಿನಕ್ಕೆ ಮೂರ್ನಾಲ್ಕು ಗಂಟೆ, ಮಿಕ್ಕೆಲ್ಲಾ ಅವಧಿಯಲ್ಲಿ ಅವರ ಸನ್ಯಾಸ ಜೀವನ ತೆರೆದ ಪುಸ್ತಕ. ಪೇಜಾವರ ಶ್ರೀಗಳನ್ನು ಕಳೆದ ಐವತ್ತು ವರ್ಷದಿಂದ ಬಲ್ಲೆ. ನಾನು ಅವರ ಪರವಾಗಿ ಜಾಮೀನಿಗೆ ನಿಂತು ಹೇಳಬಲ್ಲೆ, ಅವರು ಸ್ತ್ರೀಲಂಪಟ ಅಲ್ಲ. ಅವರೊಬ್ಬರು ಪರಿಪೂರ್ಣ ಯತಿವರ್ಯರು.

ಪರಿಹಾರವೇ ಸಿಗದ ಸಮಸ್ಯೆಯಾಗಿದ್ದರು ಶೀರೂರು ಶ್ರೀ : ಜಯರಾಮಾಚಾರ್ಯ ಪರಿಹಾರವೇ ಸಿಗದ ಸಮಸ್ಯೆಯಾಗಿದ್ದರು ಶೀರೂರು ಶ್ರೀ : ಜಯರಾಮಾಚಾರ್ಯ

English summary
An exclusive interview with noted astrologer Kabiyadi Jayarama Acharya. During his interview, Kabiyadi Acharya predicted that Narendra Modi will retain the power and he has briefly explained about lunar eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X