• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ಚುನಾವಣೆ: ಯಾರಿಗೆ ಗೆಲುವು, ಟ್ರಂಪ್ ಮೇಲೆ ಗುರುತರ ಆರೋಪ: ಖ್ಯಾತ ಜ್ಯೋತಿಷಿಯ ಭವಿಷ್ಯ

|

ಭಾರೀ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದ್ದು, ಇಂದು (ನವೆಂಬರ್ 3) ಚುನಾವಣೆ ನಡೆಯಲಿದೆ. ರಿಪಬ್ಲಿಕ್ ಪಾರ್ಟಿಯ ಅಭ್ಯರ್ಥಿ ಡೊನಾಲ್ದ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಇದುವರೆಗಿನ ಟ್ರೆಂಡ್ ನೋಡಿದರೆ ಯಾರೇ ಗೆದ್ದರೂ ಅಂತರ ಬಹಳ ಕಮ್ಮಿಯಿರಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಟ್ರಂಪ್ ಅಥವಾ ಬಿಡೆನ್ ಗೆಲುವು ಅಷ್ಟೇನೂ ಸುಲಭವಾಗಿಲ್ಲ. ಇನ್ನೂರು ವರ್ಷಗಳ ಇತಿಹಾಸವಿರುವ ಈ ಚುನಾವಣೆಯ ಬಗ್ಗೆ ಹಲವರು ತಮ್ಮ ಭವಿಷ್ಯವನ್ನು ನುಡಿದಿದ್ದರು.

ಭವಿಷ್ಯವಾಣಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರಿಗೆ ಕಿರೀಟ?

ಟ್ರಂಪ್ ಮತ್ತು ಬಿಡೆನ್ ಅವರ ಜಾತಕಫಲದ ಆಧಾರದ ಮೇಲೆ ಭವಿಷ್ಯ ನುಡಿಯಲಾಗುತ್ತಿದೆ. ನಾಸ್ಟ್ರಡಾಮಸ್ ಹೇಳಿದ್ದಾನೆ, 2020ರಲ್ಲಿ ಟ್ರಂಪ್ ಮತ್ತೆ ಗೆದ್ದು ಇನ್ನೊಮ್ಮೆ ಅಮೆರಿಕ ಅಧ್ಯಕ್ಷರಾಗಲಿದ್ದಾರಂತೆ ಎನ್ನುವ ಪೋಸ್ಟ್ ಗಳು, ಸೋಷಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿದೆ.

ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..?

ಉತ್ತರ ಭಾರತ ಮೂಲದ ಖ್ಯಾತ ಜ್ಯೋತಿಷ್ಯೆಯೊಬ್ಬರು, ಟ್ರಂಪ್ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಈಗ, ಅಲಹಾಬಾದ್ ಮೂಲಕ ಜ್ಯೋತಿಷಿಯೊಬ್ಬರು ಟ್ರಂಪ್ ಮತ್ತು ಬಿಡೆನ್ ಭವಿಷ್ಯದ ಬಗ್ಗೆ ಮತ್ತು ಟ್ರಂಪ್ ಎದುರಿಸಬೇಕಾದ ಆರೋಪದ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಅದು ಹೀಗಿದೆ:

ಮನೀಜಾ ಅಹುಜಾ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಭವಿಷ್ಯ

ಮನೀಜಾ ಅಹುಜಾ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಭವಿಷ್ಯ

ಉತ್ತರ ಭಾರತ ಮೂಲದ ಮನೀಜಾ ಅಹುಜಾ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಭವಿಷ್ಯ ನುಡಿದು, ಟ್ರಂಪ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ್ದರು. "ಟ್ರಂಪ್ ಹುಟ್ಟಿದ್ದು 14.06.1946 ಜಮೈಕಾದಲ್ಲಿ. ಇದು ಸಿಂಹರಾಶಿಯ ಜಾತಕ. ನಾಲ್ಕು ಗ್ರಹಗತಿಗಳು ಮೈತ್ರಿಕಾರಕ ಸ್ಥಾನದಲ್ಲಿದೆ. ಇದು ಟ್ರಂಪ್ ಜಾತಕದ ಪ್ರಕಾರ ಮಹತ್ವವಾದದ್ದು"ಎಂದು ಅಹುಜಾ ಹೇಳಿದ್ದರು.

ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾಗಲಿದ್ದಾರೆ

ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾಗಲಿದ್ದಾರೆ

ಅಲಹಾಬಾದ್ ಮೂಲದ ಡಾ.ಶಂಕರ್ ಚರಣ್ ತ್ರಿಪಾಠಿ ಪ್ರಕಾರ, "ಡೊನಾಲ್ಡ್ ಟ್ರಂಪ್ ಹುಟ್ಟಿದ್ದು 14.06.1946ರಲ್ಲಿ, ಸಿಂಹ ರಾಶಿಯಲ್ಲಿ. ಸೂರ್ಯ ಈಗ ಹತ್ತನೇ ಸ್ಥಾನದಲ್ಲಿದ್ದಾನೆ, ರಾಹು ಕೂಡಾ ಇದೇ ಸ್ಥಾನದಲ್ಲಿದ್ದಾನೆ. ಇದು ಟ್ರಂಪ್ ಮೇಲುಗೈಗೆ ಸಹಾಯವಾಗಲಿದೆ. ಗುರು ಮತ್ತು ಸೂರ್ಯನ ಹೊಂದಾಣಿಕೆಯಿಂದಾಗಿ ಟ್ರಂಪ್ ಜಾತಕದ ಪ್ರಕಾರ, ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಲಿದ್ದಾರೆ"ಎಂದು ತ್ರಿಪಾಠಿ ಹೇಳಿದ್ದಾರೆ.

ಬಿಡೆನ್ ಹುಟ್ಟಿದ್ದು 20.11.1942ರಲ್ಲಿ

ಬಿಡೆನ್ ಹುಟ್ಟಿದ್ದು 20.11.1942ರಲ್ಲಿ

ಇನ್ನು ತ್ರಿಪಾಠಿಯವರ ಪ್ರಕಾರ, ಬಿಡೆನ್ ಹುಟ್ಟಿದ್ದು 20.11.1942ರಲ್ಲಿ. ಅವರ ಕುಂಡಲಿಯ ಪ್ರಕಾರ ಮಂಗಳನು ಕಂಟಕ ಸ್ಥಾನದಲ್ಲಿದ್ದಾನೆ. ಆದರೂ, ಕೆಲವು ರಾಜ್ಯಗಳಲ್ಲಿ ಅವರ ಪರವಾಗಿ ಉತ್ತಮ ಮತದಾನವಾಗಲಿದೆ. ಆದರೆ, ಟ್ರಂಪ್ ಮುಂದೆ ಬಿಡೆನ್ ಮಂಡಿಯೂರಲಿದ್ದಾರೆ"ಎನ್ನುವ ಜ್ಯೋತಿಷ್ಯವನ್ನು ತ್ರಿಪಾಠಿ ನುಡಿದಿದ್ದಾರೆ.

ಡಾ.ಶಂಕರ್ ಚರಣ್ ತ್ರಿಪಾಠಿ ಭವಿಷ್ಯ

ಡಾ.ಶಂಕರ್ ಚರಣ್ ತ್ರಿಪಾಠಿ ಭವಿಷ್ಯ

"ಇಬ್ಬರ ಜಾತಕವನ್ನು ಒಂದಕ್ಕೊಂದು ತುಲನೆ ಮಾಡಿದಾಗ ಟ್ರಂಪ್ ಗೆಲ್ಲಲಿದ್ದಾರೆ ಎಂದು ಹೇಳಬಹುದು. ಆದರೆ, ಟ್ರಂಪ್ ಆರೋಪವೊಂದನ್ನು ಎದುರಿಸಬೇಕಾಗುತ್ತದೆ. ಮತದಾನದಲ್ಲಿ ಅಕ್ರಮ ಮತ್ತು ಕಳ್ಳ ವೋಟಿಂಗ್ ಆರೋಪ ಇವರು ಚುನಾವಣಾ ಫಲಿತಾಂಶದ ನಂತರ ಎದುರಿಸಬೇಕಾಗುತ್ತದೆ. ಟ್ರಂಪ್ ಕನಿಷ್ಠ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ"ಎಂದು ಡಾ.ಶಂಕರ್ ಚರಣ್ ತ್ರಿಪಾಠಿ ಭವಿಷ್ಯ ನುಡಿದಿದ್ದಾರೆ.

English summary
America President Election: Who Will Win, Noted Astrologer From Allahabad Dr. Shankar Charan Tripathi Prediction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X