• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಉಲ್ಟಾ ಹೊಡೆದ ಭವಿಷ್ಯ, ಢುಮ್ಕಿ ಹೊಡೆದ ಜ್ಯೋತಿಷಿಗಳು

|

ಅಮೆರಿಕಾದ ಅಧ್ಯಕ್ಷರಾಗಿ ಜೋ ಬೈಡನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ರಾಣಿ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಇನ್ನೆರಡು ತಿಂಗಳಲ್ಲಿ ಇವರು ಅಧಿಕಾರ ಸ್ವೀಕರಿಸಲಿದ್ದಾರೆ. ಆ ಮೂಲಕ, ಎರಡನೇ ಅವಧಿಗೆ ಆಯ್ಕೆ ಬಯಸಿದ್ದ ಡೊನಾಲ್ಡ್ ಟ್ರಂಪ್ ಗೆ ಮುಖಭಂಗವಾಗಿದೆ.

ವಿಶ್ವದ ಸೂಪರ್ ಪವರ್ ದೇಶವಾಗಿರುವುದರಿಂದ ಈ ಚುನಾವಣಾ ಫಲಿತಾಂಶದ ಮೇಲೆ, ಜಗತ್ತೇ ಕಾತರದಿಂದ ಕಾಯುತ್ತಿತ್ತು. ಅದಕ್ಕೆ ಸರಿಯಾಗಿ ಫಲಿತಾಂಶವೂ ಕೂಡಾ ಟ್ವೆಂಟಿ20 ಪಂದ್ಯದಂತೆ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿತ್ತು.

ಅಮೆರಿಕ ಚುನಾವಣೆ: ಯಾರಿಗೆ ಗೆಲುವು, ಟ್ರಂಪ್ ಮೇಲೆ ಗುರುತರ ಆರೋಪ: ಖ್ಯಾತ ಜ್ಯೋತಿಷಿಯ ಭವಿಷ್ಯ

ಆದರೆ, ಸೋಲನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದ ಡೊನಾಲ್ಡ್ ಟ್ರಂಪ್ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಸೋಮವಾರದಿಂದ ವಿವಿಧ ಕೋರ್ಟ್ ಗಳಲ್ಲಿ ಕ್ಯಾಂಪೇನ್ ಮಾಡಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕಾದ ಚುನಾವಣೆ ಭಾರತಕ್ಕೂ ಮಹತ್ವವಾಗಿರುವುದರಿಂದ ಹಲವು ಜ್ಯೋತಿಷಿಗಳು ಈ ಬಗ್ಗೆ ಭವಿಷ್ಯವಾಣಿಯನ್ನು ನುಡಿದಿದ್ದರು. ಅದರಲ್ಲಿ ಬಹುತೇಕ ಭವಿಷ್ಯಗಳು ಸುಳ್ಳಾಗಿವೆ ಎನ್ನುವುದು ಮಾತ್ರ ಸತ್ಯ. ಕೆಲವೊಂದು ಸ್ಯಾಂಪಲ್ ಗಳು ಹೀಗಿವೆ:

ಟ್ರಂಪ್ ಮುಂದೆ ಬಿಡೆನ್ ಮಂಡಿಯೂರಲಿದ್ದಾರೆ

ಟ್ರಂಪ್ ಮುಂದೆ ಬಿಡೆನ್ ಮಂಡಿಯೂರಲಿದ್ದಾರೆ

"ಬೈಡನ್ ಹುಟ್ಟಿದ್ದು 20.11.1942ರಲ್ಲಿ. ಅವರ ಕುಂಡಲಿಯ ಪ್ರಕಾರ ಮಂಗಳನು ಕಂಟಕ ಸ್ಥಾನದಲ್ಲಿದ್ದಾನೆ. ಆದರೂ, ಕೆಲವು ರಾಜ್ಯಗಳಲ್ಲಿ ಅವರ ಪರವಾಗಿ ಉತ್ತಮ ಮತದಾನವಾಗಲಿದೆ. ಆದರೆ, ಟ್ರಂಪ್ ಮುಂದೆ ಬೈಡನ್ ಮಂಡಿಯೂರಲಿದ್ದಾರೆ"ಎನ್ನುವ ಜ್ಯೋತಿಷ್ಯವನ್ನು ಡಾ.ಶಂಕರ್ ಚರಣ್ ತ್ರಿಪಾಠಿ ನುಡಿದಿದ್ದರು. (ಚಿತ್ರದಲ್ಲಿ ತ್ರಿಪಾಠಿ)

ಟ್ರಂಪ್ ಆರೋಪವೊಂದನ್ನು ಎದುರಿಸಬೇಕಾಗುತ್ತದೆ

ಟ್ರಂಪ್ ಆರೋಪವೊಂದನ್ನು ಎದುರಿಸಬೇಕಾಗುತ್ತದೆ

"ಇಬ್ಬರ ಜಾತಕವನ್ನು ಒಂದಕ್ಕೊಂದು ತುಲನೆ ಮಾಡಿದಾಗ ಟ್ರಂಪ್ ಗೆಲ್ಲಲಿದ್ದಾರೆ. ಆದರೆ, ಟ್ರಂಪ್ ಆರೋಪವೊಂದನ್ನು ಎದುರಿಸಬೇಕಾಗುತ್ತದೆ. ಮತದಾನದಲ್ಲಿ ಅಕ್ರಮ ಮತ್ತು ಕಳ್ಳ ವೋಟಿಂಗ್ ಆರೋಪ ಇವರು ಚುನಾವಣಾ ಫಲಿತಾಂಶದ ನಂತರ ಎದುರಿಸಬೇಕಾಗುತ್ತದೆ. ಟ್ರಂಪ್ ಕನಿಷ್ಠ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ"ಎಂದು ತ್ರಿಪಾಠಿ ನುಡಿದಿದ್ದ ಭವಿಷ್ಯ ಸುಳ್ಳಾಗಿದೆ.

ಉತ್ತರ ಭಾರತ ಮೂಲದ ಮನೀಜಾ ಅಹುಜಾ

ಉತ್ತರ ಭಾರತ ಮೂಲದ ಮನೀಜಾ ಅಹುಜಾ

ಉತ್ತರ ಭಾರತ ಮೂಲದ ಮನೀಜಾ ಅಹುಜಾ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದರು. ಇವರು ಪ್ರಕಾರ, "ಟ್ರಂಪ್ ಹುಟ್ಟಿದ್ದು 14.06.1946 ಜಮೈಕಾದಲ್ಲಿ. ಇದು ಸಿಂಹರಾಶಿಯ ಜಾತಕ. ನಾಲ್ಕು ಗ್ರಹಗತಿಗಳು ಮೈತ್ರಿಕಾರಕ ಸ್ಥಾನದಲ್ಲಿದೆ. ಇದು ಟ್ರಂಪ್ ಜಾತಕದ ಪ್ರಕಾರ ಮಹತ್ವವಾದದ್ದು. ಚುನಾವಣೆಯಲ್ಲಿ ಟ್ರಂಪ್ ಜಯಶೀಲರಾಗಲಿದ್ದಾರೆ"ಎಂದು ಇವರು ಹೇಳಿದ ಭವಿಷ್ಯವೂ ಪೊಳ್ಳಾಗಿದೆ. (ಚಿತ್ರದಲ್ಲಿ ಮನೀಜಾ ಅಹುಜಾ)

ನಾಸ್ಟ್ರಡಾಮಸ್ ನುಡಿದಿದ್ದಾರೆ ಎನ್ನಲಾಗುತ್ತಿರು ಭವಿಷ್ಯ

ನಾಸ್ಟ್ರಡಾಮಸ್ ನುಡಿದಿದ್ದಾರೆ ಎನ್ನಲಾಗುತ್ತಿರು ಭವಿಷ್ಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು ಖಚಿತ ಎಂದು ರಿಪಬ್ಲಿಕನ್ ಪಾರ್ಟಿಯ ಬೆಂಬಲಿಗರು ಫಿರ್ ಸೇ ಟ್ರಂಪ್ ಎನ್ನುವ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ. ನಾಸ್ಟ್ರಡಾಮಸ್ ನುಡಿದಿದ್ದಾರೆ ಎನ್ನಲಾಗುತ್ತಿರು ಭವಿಷ್ಯವನ್ನು ಮುಂದಿಟ್ಟುಕೊಂಡು ಟ್ರಂಪ್ ಬೆಂಬಲಿಗರು ಖುಷಿ ಪಡುತ್ತಿದ್ದರು ಮತ್ತು ಸಾಮಾಜಿಕ ತಾಣದಲ್ಲಿ ಇದನ್ನು ವೈರಲ್ ಮಾಡಿದ್ದರು.

ಕರಡಿಯ ಭವಿಷ್ಯ ಮಾತ್ರ ನಿಜವಾಗಿದೆ

ಕರಡಿಯ ಭವಿಷ್ಯ ಮಾತ್ರ ನಿಜವಾಗಿದೆ

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋಲಲಿದ್ದಾರೆ ಹಾಗೂ ಬೈಡನ್ ನೂತನ ಅಧ್ಯಕ್ಷರಾಗಲಿದ್ದಾರೆ ಎಂಬ ಮುನ್ಸೂಚನೆಯನ್ನ ಕರಡಿಯೊಂದು ನೀಡಿದೆ. 2 ಕಲ್ಲಂಗಡಿ ಹಣ್ಣುಗಳ ಮೇಲೆ ಬೈಡೆನ್ ಮತ್ತು ಟ್ರಂಪ್ ಕಲಾಕೃತಿ ಕೆತ್ತಿ, ಇದರಲ್ಲಿ ಕರಡಿ, ಬಿಡೆನ್ ಕಲಾಕೃತಿ ಇದ್ದ ಕಲ್ಲಂಡಿಯನ್ನು ಹೆಕ್ಕಿ ತಿಂದಿದೆ. ಆ ಮೂಲಕ ಕರಡಿಯ ಭವಿಷ್ಯ ಮಾತ್ರ ನಿಜವಾಗಿದೆ.

English summary
America President Election 2020: Almost All Astrology Prediction Went Wrong,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X