• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷ್ಯ: ಮೀನ ರಾಶಿಯ ಮಕ್ಕಳ ಬಗ್ಗೆ ಗೊತ್ತಿರಲೇ ಬೇಕಾದ ವಿಚಾರ

By ಪಂಡಿತ್ ಶಂಕರ್
|

ಮನೆಯಲ್ಲಿ ಮಕ್ಕಳ ಗುಣಗಳನ್ನು ಅರಿತರೆ ಅವರ ಜತೆಗಿನ ಮಾತು-ಕತೆ, ಭವಿಷ್ಯ ರೂಪಿಸುವುದು, ಆಸಕ್ತಿಗೆ ತಕ್ಕಂತೆ ವಾತಾವರಣ ರೂಪಿಸುವುದು ಬಲು ಸಲೀಸು. ನಿಮ್ಮ ಮನೆಯಲ್ಲಿರುವ ಮಕ್ಕಳ ರಾಶಿ ಯಾವುದು? ಒನ್ಇಂಡಿಯಾ ಕನ್ನಡದಲ್ಲಿ ಸರಣಿ ಲೇಖನ ಆರಂಭ ಮಾಡಲಾಗಿದೆ. ಯಾವ ರಾಶಿಯ ಮಕ್ಕಳು ಹೇಗೆ ಎಂದು ತಿಳಿಸಿಕೊಡುವ ಸರಣಿ ಇದು.

ಗುರು ಸಂಚಾರ ದುಷ್ಪ್ರಭಾವಕ್ಕೆ ಜ್ಯೋತಿಷ್ಯ ಪರಿಹಾರೋಪಾಯ

ಮೀನ ರಾಶಿಯ ಮಕ್ಕಳು ಹೇಗೆ ಇರ್ತಾರೆ ಎಂಬುದರಿಂದ ಸರಣಿ ಶುರು ಮಾಡಿದ್ದೇವೆ. ಖಂಡಿತಾ ಇದರಿಂದ ನಿಮಗೆ ಸಹಾಯವಾಗುತ್ತದೆ. ಮೀನ ರಾಶಿಯ ಮಕ್ಕಳು ಉದಾರಿಗಳಾಗಿರುತ್ತವೆ. ಜತೆಗೆ ವಿನಯವಂತಿಕೆಗೇನೂ ಕೊರತೆ ಇರಲ್ಲ. ಕುಟುಂಬದ ಸದಸ್ಯರ ಬಗ್ಗೆ ಹಾಗೂ ಸೋದರ-ಸೋದರಿಯರ ಬಗ್ಗೆ ಉತ್ಕಟವಾದ ಪ್ರೀತಿ ಇರುತ್ತದೆ.

ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ?

ಅವರ ಹೃದಯದಲ್ಲಿ ಮೃದುವಾದ ಭಾವನೆಗಳಿಗೇ ಹೆಚ್ಚಿನ ಸ್ಥಾನವಾದ್ದರಿಂದ ಅವರಿಗೆ ಒಳಿತು- ಕೆಡುಕುಗಳು ಸುಲಭಕ್ಕೆ ಅರ್ಥವಾಗಲ್ಲ. ಆದ್ದರಿಂದ ಆ ರಾಶಿಯ ಪೋಷಕರು ಸರಿ-ತಪ್ಪುಗಳ ಬಗ್ಗೆ ಅವರಿಗೆ ತಿಳಿ ಹೇಳಬೇಕು. ಮೀನ ರಾಶಿಯ ಮಕ್ಕಳ ಓದಿನ ಬಗ್ಗೆ ತುಂಬ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಕುಂಭ ಮತ್ತು ಮೀನ ರಾಶಿ ಗುಣಸ್ವಭಾವಗಳು

ತುಂಬ ಬುದ್ಧಿವಂತಿಕೆ ಇರುವ ಈ ಮಕ್ಕಳಿಗೆ ಹೇಳಿಕೊಡುವ ಪಾಠ ಥಟ್ಟನೆ ಅರ್ಥವಾಗುತ್ತದೆ. ಕ್ರಿಯೇಟಿವ್ ಅನಿಸುವ ವಿಚಾರಗಳ ಬಗ್ಗೆಯೇ ಇವರ ಒಲವು ಹೆಚ್ಚು. ಭಾವನಾಜೀವಿಗಳಾದ ಇವರನ್ನು ಪೋಷಕರು ಸ್ವಲ್ಪ ನಿಯಂತ್ರಿಸಬೇಕು. ನಿಮ್ಮ ಮಗನೋ ಮಗಳೋ ಮೀನ ರಾಶಿಯವರಾದರೆ ಕಲೆ, ನೃತ್ಯ, ನಾಟಕ ಮತ್ತು ಸಂಗೀತದ ಆಸಕ್ತಿಗಳನ್ನು ಪ್ರೋತ್ಸಾಹಿಸಿ. ಈ ಕ್ಷೇತ್ರಗಳಲ್ಲಿ ಅವರು ಮಿಂಚಬಲ್ಲರು.

ಮೀನ ರಾಶಿಯ ಮಕ್ಕಳ ಬಗ್ಗೆ ಈ ಎಂಟು ಅಂಶಗಳು ನಿಮಗೆ ಗೊತ್ತಿರಲಿ.

ವಿಪರೀತ ಸೂಕ್ಷ್ಮ ಸ್ವಭಾವದವರು

ವಿಪರೀತ ಸೂಕ್ಷ್ಮ ಸ್ವಭಾವದವರು

ಹೇಗೆ ಚಿನ್ನಕ್ಕೆ ಹಾಲ್ ಮಾರ್ಕ್ ಅಂತೀವೋ ಹಾಗೆ, ಮೀನ ರಾಶಿಯವರ ಗುಣದಲ್ಲಿ ಸೂಕ್ಷ್ಮತೆ ಹಾಸುಹೊಕ್ಕಾಗಿರುತ್ತದೆ. ಇದರರ್ಥ ಆ ಮಗುವಿಗೆ ನಿಮ್ಮ ಗಮನ ಹೆಚ್ಚು ಅಗತ್ಯವಿರುತ್ತದೆ. ನಿಮ್ಮ ಕನ್ನಡಿಯಂತೆ ಆ ಮಗು. ನಿಮ್ಮ ಸುಪ್ತ ಪ್ರಜ್ಞೆಯಲ್ಲಿ ಕಾಣಿಸಿಕೊಳ್ಳುವ ಭಾವನೆಗಳೂ ಅದರ ಮೇಲೆ ಪ್ರಭಾವ ಬೀರುತ್ತದೆ.

ಶಿಸ್ತಿನ ವಿಚಾರಕ್ಕೆ ಬಂದರೆ ದೊಡ್ಡ ಕಣ್ಣು ಬಿಟ್ಟು ನೋಡಿದರೂ ಸಾಕು, ಪುಟ್ಟ ಮೀನಿಗೆ ಅರ್ಥವಾಗಿ ಬಿಡುತ್ತದೆ, 'ಇನ್ನು ಸಾಕು' ಎಂಬ ಸೂಚನೆ ಅದು ಅಂತ.

ಏಕಾಂಗಿಯಾಗಿ ಇರಬಲ್ಲರು

ಏಕಾಂಗಿಯಾಗಿ ಇರಬಲ್ಲರು

ಯಾಕೋ ಯಾರೂ ತನ್ನ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ ಎನಿಸಿದಾಗ ವರ್ತನೆಯಲ್ಲಿ ಬದಲಾವಣೆ ಗೋಚರಿಸುತ್ತದೆ. ಆಗ ಆ ಸನ್ನಿವೇಶದಿಂದ ಒಂದು ಹೆಜ್ಜೆ ಹಿಂದೆ ಸರಿದು ಬಿಡುತ್ತದೆ ಮೀನ ರಾಶಿಯ ಮಗು. ತೀರಾ ಹಚ್ಚಿಕೊಂಡು ನೋವು ಪಡುವುದು ಅದಕ್ಕೆ ಇಷ್ಟವಿಲ್ಲ. ಆದರೆ ಸ್ವಲ್ಪ ಮಟ್ಟಿಗಿನ ಪ್ರೀತಿ, ಬೆಂಬಲ ನೀಡಿದರೂ ತುಂಬ ದೀರ್ಘಾವಧಿವರೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಜತೆಗೆ ತನ್ನದೇ ಚಿಪ್ಪಿನಿಂದ ಆಚೆ ಬಂದು ಬೆರೆಯುತ್ತದೆ.

ಅದ್ಭುತವಾದ ಊಹಾ ಶಕ್ತಿ

ಅದ್ಭುತವಾದ ಊಹಾ ಶಕ್ತಿ

ಮೀನರಾಶಿಯ ಮಕ್ಕಳಿಗೆ ಅದ್ಭುತವಾದ ಊಹಾ ಶಕ್ತಿ ಇರುತ್ತದೆ. ಒಳ್ಳೆ ಕಥೆಗಾರರ ಮನಸ್ಸು ಅವರದು. ಅವರ ಕ್ರಿಯೇಟಿವಿಟಿಯನ್ನು ಪ್ರೋತ್ಸಾಹಿಸಿ. ಏನೂ ಎಲ್ಲದಕ್ಕೂ ಕಥೆ ಹೇಳುತ್ತಲ್ಲಾ, ಹೀಗೇ ಆದರೆ ಮುಂದೇನು ಅಂತ ಗಾಬರಿ ಆಗಬೇಡಿ.

ಬೇಗನೇ ಜನರನ್ನು ನಂಬಿಬಿಡ್ತಾರೆ

ಬೇಗನೇ ಜನರನ್ನು ನಂಬಿಬಿಡ್ತಾರೆ

ಈ ಮಕ್ಕಳ ಗುಣವೇ ಹಾಗೆ, ಎಲ್ಲದರಲ್ಲೂ ಒಳಿತೇ ಕಾಣುತ್ತದೆ. ಎಲ್ಲರೂ ಒಳ್ಳೆಯವರಾಗಿಯೇ ಕಾಣ್ತಾರೆ. ಅವರ ಪರಿಸರದಲ್ಲಿನ ಎಲ್ಲರನ್ನೂ ಬೇಗ ನಂಬಿಬಿಡ್ತಾರೆ. ಜನರಲ್ಲಿ ನಂಬಿಕೆ ಇಡುವುದು ಖಂಡಿತಾ ತಪ್ಪಲ್ಲ. ಆದರೆ ಯಾರೋ ತನಗೆ ಕೇಡು ಬಗೆಯಲು ಬಯಸಿದವರನ್ನೂ ನಂಬಿಬಿಡುವುದು ಅಪಾಯ.

ಸೂಕ್ಷ್ಮ ಮನಸ್ಸಿನ ಮಗು

ಸೂಕ್ಷ್ಮ ಮನಸ್ಸಿನ ಮಗು

ಸೂಕ್ಷ್ಮವಾದ ಮೀನ ರಾಶಿಯ ಮಕ್ಕಳು ಎಲ್ಲವನ್ನೂ ಹೃದಯಕ್ಕೆ ತೆಗೆದುಕೊಂಡು ಬಿಡುತ್ತವೆ. ಜನರನ್ನು ಬಹಳ ನಂಬುವ ಇವರಿಗೆ ಯಾವುದೇ ವಿಚಾರದಲ್ಲಿ ದ್ರೋಹ ಆಯಿತು ಎಂದಾಗ ಜೀರ್ಣಿಸಿಕೊಳ್ಳುವುದು ಕಷ್ಟ. ಅದಕ್ಕೆ ಅಂತ ಅವರು ಇತರರನ್ನು ದೂಷಿಸುವುದಿಲ್ಲ. ತಮ್ಮನ್ನೇ ಹಳಿದುಕೊಳ್ಳುತ್ತಾರೆ.

ಇಷ್ಟವಾದ ಕೆಲಸಕ್ಕೆ ಬಿಡಿಸಲಾರದ ನಂಟು

ಇಷ್ಟವಾದ ಕೆಲಸಕ್ಕೆ ಬಿಡಿಸಲಾರದ ನಂಟು

ಯಾವುದಾದರೂ ಕೆಲಸ ಈ ಮಕ್ಕಳಿಗೆ ತೃಪ್ತಿ ನೀಡುತ್ತದೆ ಅಂದರೆ ಅದರಲ್ಲಿ ಮುಳುಗಿ ಹೋಗ್ತಾರೆ. ತನಗೆ ಪ್ರಿಯವಾದ ಕೆಲಸ ಅಂದರೆ ಮುಗಿಯಿತು ಅದರಲ್ಲೇ ತನ್ಮಯರಾಗಿರುತ್ತಾರೆ. ಯಾವುದೋ ಒಂದು ಗೊಂಬೆ ಇಷ್ಟವಾಯಿತು ಅಂದರೂ ಸದಾ ಅದು ಜತೆಗೆ ಇರಬೇಕು. ಅದು ಜ್ಯೋತಿಷ್ಯದಲ್ಲೇ ಇರುವ ಮೀನ ರಾಶಿಯ ಮಕ್ಕಳ ಗುಣ. ವಯಸ್ಸು ಆದಂತೆ ಆರಿಸಿಕೊಂಡ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಈ ಗುಣ ನೆರವಾಗುತ್ತದೆ.

ಆದರ್ಶವಾದಿ ಮೀನ

ಆದರ್ಶವಾದಿ ಮೀನ

ಎಲ್ಲದರಲ್ಲೂ ಹೀಗೇ ಇರಬೇಕು ಎಂಬ ಧೋರಣೆ ಈ ಮಕ್ಕಳದು. ಅದುಕೊಂಡ ಆದರ್ಶಗಳಲ್ಲಿ ಸ್ವಲ್ಪವೂ ರಾಜಿಯಾಗದ ಇವರ ಗುಣ ಮೆಚ್ಚತಕ್ಕದ್ದೇ. ಆದರೆ ಉಳಿದವರಿಂದಲೂ ಅದೇ ಮಟ್ಟ ನಿರೀಕ್ಷಿಸುವುದು ಹೇಗೆ ಸಾಧ್ಯ? ತಾವಂದುಕೊಂಡಂತೆ ನಡೆದಿಲ್ಲ ಎಂಬುದನ್ನು ಈ ರಾಶಿಯ ಮಕ್ಕಳು ಉಳಿದ ರಾಶಿಯವರಿಗಿಂತ ಹೆಚ್ಚಾಗಿ ಹೃದಯಕ್ಕೆ ತೆಗೆದುಕೊಳ್ತಾರೆ. ಆ ಮಕ್ಕಳ ಪೋಷಕರು ಅಂಥ ಸನ್ನಿವೇಶದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ.

ಹಗಲುಗನಸು ಕಾಣುವ ಮಕ್ಕಳು

ಹಗಲುಗನಸು ಕಾಣುವ ಮಕ್ಕಳು

ಎಲ್ಲದರಲ್ಲೂ ನಿಖರತೆ ಬಯಸುವ ವ್ಯಕ್ತಿಯ ವಾಸ್ತವ ಬದುಕು ಹೇಗಿರುತ್ತದೆ ಎಂಬುದನ್ನು ಊಹಿಸುವುದು ಕಷ್ಟವಲ್ಲ. ಇನ್ನು ಇವರಿಗೆ ಹಗಲುಗನಸು ಜಾಸ್ತಿ. ಸಮಸ್ಯೆಗಳು ಎದುರಾದಾಗ ಅವುಗಳ ಎದುರು ನಿಂತು ಬಡಿದಾಡುವುದನ್ನು ಕಲಿಸಬೇಕು. ಅವರದೇ ಫ್ಯಾಂಟಸಿ ಲೋಕದಲ್ಲಿದ್ದು, ಸಮಸ್ಯೆಗಳಿಗೆ ಬೆನ್ನು ತೋರಿಸಿದರೆ ಪ್ರಯೋಜನವಿಲ್ಲ. ಎಷ್ಟೋ ನಿರಾಶೆಗಳಿಗೆ ಕೆಲವು ಕನಸುಗಳು ಮದ್ದು ಅನ್ನೋದು ನಿಜ. ಆದರೆ ಕನಸುಗಳೇ ಎಲ್ಲಕ್ಕೂ ಮದ್ದಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Know all about the Pisces kids in Kannada. Read about children who belongs to zodiac sign Pisces in Child Astrology here.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more