ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕರ ರಾಶಿಯ ಮಕ್ಕಳ ಬಗ್ಗೆ ಇವೆಲ್ಲ ನಿಮಗೆ ಗೊತ್ತಿದೆಯೆ?

By ಶಂಕರ್ ಭಟ್
|
Google Oneindia Kannada News

ಇಂದಿನ ಲೇಖನದಲ್ಲಿ ಮಕರ ರಾಶಿಯ ಮಕ್ಕಳ ಬಗ್ಗೆ ತಿಳಿಸಿಕೊಡಲಾಗುವುದು. ಈ ಮಕ್ಕಳು ತಮ್ಮ ಓರಗೆಯವರಂತಲ್ಲ. ಪ್ರಬುದ್ಧತೆ ಜಾಸ್ತಿ ಇರುತ್ತದೆ. ತನಗಿಂತ ಹೆಚ್ಚಿನ ವಯಸ್ಸಿನವರ ಜತೆಗೆ ಈ ಮಕ್ಕಳು ಸ್ನೇಹ ಮಾಡುತ್ತವೆ. ತಾನು ಬಹಳ ಬೇಗ ಬೆಳೆಯುತ್ತಿದ್ದೇನೆ ಎಂದು ಬಿಂಬಿಸಿಕೊಳ್ಳಲು ಈ ಬಯಸುತ್ತವೆ. ವಿಪರೀತವಾದ ಆಶಾವಾದ, ಗುರಿಯೆಡೆಗಿನ ನಿರ್ದಿಷ್ಟ ಗುಣ ಎದ್ದು ಕಾಣುತ್ತವೆ.

ಕುಂಭ ರಾಶಿಯ ಮಕ್ಕಳ ಬಗ್ಗೆ ಈ 6 ಸಂಗತಿ ಗೊತ್ತಿರಲಿಕುಂಭ ರಾಶಿಯ ಮಕ್ಕಳ ಬಗ್ಗೆ ಈ 6 ಸಂಗತಿ ಗೊತ್ತಿರಲಿ

ತನಗೆ ಏನು ಎಂಬ ಬಗ್ಗೆ ಸ್ಪಷ್ಟತೆ ಇರುವ ಈ ಮಕ್ಕಳು ಅವುಗಳನ್ನು ದಕ್ಕಿಸಿಕೊಳ್ಳುವ ವಿಚಾರದಲ್ಲು ದೃಢ ಮನಸ್ಸು ಹೊಂದಿರುತ್ತವೆ. ಸಮತೋಲನವಾದ ದೃಷ್ಟಿಕೋನವಿರುತ್ತದೆ. ತುಂಬ ಕ್ರಿಯಾತ್ಮಕವಾಗಿ ಯೋಚಿಸುವ ಮಕರ ರಾಶಿಯ ಮಕ್ಕಳು ಹೊಸ ವಿಷಯಗಳ ಬಗ್ಗೆ ಆಸಕ್ತಿ ತೋರುತ್ತವೆ. ಸಂಗೀತವನ್ನು ಬಲು ಇಷ್ಟಪಡುವ ಇವರು, ಒಳ್ಳೆ ಸಂಗೀತ ಕೇಳುವುದರಲ್ಲೇ ಸಮಯ ಕಳೆಯುತ್ತಾರೆ.

ಬುದ್ಧಿವಂತ ಅಥವಾ ಬುದ್ಧಿವಂತೆ ಅನ್ನಿಸಿಕೊಳ್ಳುವುದು, ಒಳ್ಳೆ ಮಾರ್ಕ್ಸ್ ತೆಗೆಯುವುದು ಈ ಮಕ್ಕಳ ಗುರಿಯಾಗಿರುತ್ತದೆ. ಸದಾ ಓದಿನ ಬಗ್ಗೆ ಯೋಚಿಸುವ ಇವರಿಗೆ ವಿಶ್ರಾಂತಿ ಸ್ವಲ್ಪ ಕಡಿಮೆಯೇ. ಓದಿನ ಮಧ್ಯೆ ಸ್ವಲ್ಪ ಬಿಡುವು ಕೂಡ ತೆಗೆದುಕೊಳ್ಳಬೇಕು ಅನ್ನೋದು ತಿಳಿಸಿಕೊಡಬೇಕು.

ಜ್ಯೋತಿಷ್ಯ: ಮೀನ ರಾಶಿಯ ಮಕ್ಕಳ ಬಗ್ಗೆ ಗೊತ್ತಿರಲೇ ಬೇಕಾದ ವಿಚಾರಜ್ಯೋತಿಷ್ಯ: ಮೀನ ರಾಶಿಯ ಮಕ್ಕಳ ಬಗ್ಗೆ ಗೊತ್ತಿರಲೇ ಬೇಕಾದ ವಿಚಾರ

ಈ ಮಕ್ಕಳು ಹೆಚ್ಚಾಗಿ ಒಳಾಂಗಣದ ಆಟಗಳನ್ನೇ ಇಷ್ಟ ಪಡುತ್ತವೆ. ಆಟದ ಮೈದಾನಕ್ಕೆ ಹೋಗು, ಮನೆಯಿಂದ ಹೊರಗೂ ಒಂದಿಷ್ಟು ಸಮಯ ಕಳೆಯಬೇಕು ಎಂಬುದನ್ನು ಸಹ ಇವರಿಗೆ ತಿಳಿ ಹೇಳಬೇಕು.

ಒಳ್ಳೆ ಹಾಸ್ಯ ಪ್ರಜ್ಞೆ

ಒಳ್ಳೆ ಹಾಸ್ಯ ಪ್ರಜ್ಞೆ

ಮೇಲ್ನೋಟಕ್ಕೆ ತುಂಬ ಗಂಭೀರವಾಗಿ ಕಂಡರೂ ಈ ಮಕ್ಕಳಿಗೆ ಒಳ್ಳೆ ಹಾಸ್ಯ ಪ್ರಜ್ಞೆ ಇರುತ್ತದೆ. ಆದರೆ ಅದು ಹೆಚ್ಚಾಗಬೇಕು. ತಮ್ಮ ಭಾವನೆಗಳನ್ನು ಹೇಗೆ ಹೊರಗೆ ಹಂಚಿಕೊಳ್ಳಬೇಕು ಎಂಬುದನ್ನು ಈ ಮಕ್ಕಳಿಗೆ ಪೋಷಕರೇ ಹೇಳಿಕೊಡಬೇಕು. ಗುಮ್ಮನಗುಸುಗ ಅಂತ ಅವರೇ ನಿರ್ಲಕ್ಷಿಸುತ್ತಾ ಬಂದರೆ ಮಾನಸಿಕವಾಗಿ ಈ ಮಕ್ಕಳು ಕುಗ್ಗಿ ಹೋಗುತ್ತವೆ.

ಏನು ಬೇಕು ಅಂತ ಗುರುತಿಸಿ

ಏನು ಬೇಕು ಅಂತ ಗುರುತಿಸಿ

ವಿನಯವಂತಿಕೆ ಅನ್ನೋದು ಈ ಮಕ್ಕಳ ಇನ್ನೊಂದು ಮುಖ್ಯ ಗುಣ. ಪೋಷಕರ ಬಗ್ಗೆ ಈ ಮಕ್ಕಳಿಗೆ ತುಂಬ ಗೌರವ ಇರುತ್ತದೆ. ಈ ಮಗು ತನಗೆ ಬೇಕಾದ್ದು ಇದೇ ಎಂದು ಬಾಯಿ ಬಿಟ್ಟು ಹೇಳುವುದಿಲ್ಲ. ಆದರೆ ಅದು ಬಯಸುವುದನ್ನು ಪೋಷಕರೇ ಗುರುತಿಸಿ, ಅದಕ್ಕೆ ನೀಡಬೇಕು. ಮಕರ ರಾಶಿಯ ಮಗುವಿನ ನಿರೀಕ್ಷೆ ಅದಾಗಿರುತ್ತದೆ.

ಸ್ನೇಹಿತರು ಕಡಿಮೆ

ಸ್ನೇಹಿತರು ಕಡಿಮೆ

ವಾಸ್ತವದಲ್ಲಿ ಉಪಯೋಗ ಆಗುವಂಥ ಕೆಲಸಗಳನ್ನೇ ಈ ಮಕ್ಕಳು ಹೆಚ್ಚಾಗಿ ಮಾಡುತ್ತವೆ. ಓದುವುದನ್ನು ತುಂಬ ಇಷ್ಟ ಪಡುತ್ತವೆ. ಮನೆಯಲ್ಲಿ ಕೂಡ ಇರುವ ವಸ್ತು ಆಚೀಚೆ ಆದರೆ ಈ ರಾಶಿಯ ಮಕ್ಕಳು ಬೇಗ ಬೇಸರ ಆಗಿಬಿಡುತ್ತವೆ. ವಿಚಿತ್ರ ಏನೆಂದರೆ, ಈ ಮಕ್ಕಳಿಗೆ ಸ್ನೇಹಿತರು ಅಥವಾ ಸ್ನೇಹಿತೆಯರು ಕಡಿಮೆ ಇರುತ್ತಾರೆ.

ಸ್ವಚ್ಛತೆ, ಆಹಾರ ಪಥ್ಯದ ಬಗ್ಗೆ ಗಮನವಿರಲಿ

ಸ್ವಚ್ಛತೆ, ಆಹಾರ ಪಥ್ಯದ ಬಗ್ಗೆ ಗಮನವಿರಲಿ

ಮಕರ ರಾಶಿಯ ಮಕ್ಕಳು ಅಗಾಗ ಕಾಯಿಲೆ ಬೀಳುತ್ತವೆ. ಅವುಗಳ ಆಹಾರ ಪಥ್ಯ ಹಾಗೂ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಏಕೆಂದರೆ, ದೇಹ ಪ್ರಕೃತಿಗೆ ಒಗ್ಗದ ಆಹಾರ ಸೇವಿಸಿ ಅಥವಾ ಸ್ವಚ್ಛತೆ ಇಲ್ಲದ ಕಡೆ ಇದ್ದು ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ.

English summary
Know all about the capricorn kids in Kannada. Read about children who belongs to zodiac sign Capricorn in Child Astrology here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X