ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಭ ರಾಶಿಯ ಮಕ್ಕಳ ಬಗ್ಗೆ ಈ 6 ಸಂಗತಿ ಗೊತ್ತಿರಲಿ

By ಪಂಡಿತ್ ಶಂಕರ್
|
Google Oneindia Kannada News

Recommended Video

Kumbha Rashi (Aquarius) kids astrology|6 Interesting Facts |Oneindia Kannada

ಈ ಹಿಂದಿನ ಲೇಖನದಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಸರಣಿ ಆರಂಭಿಸುತ್ತಿರುವ ಕುರಿತು ತಿಳಿಸಿದ್ದೆವು. ಅದರ ಮೊದಲ ಭಾಗವಾಗಿ ಮೀನ ರಾಶಿಯ ಮಕ್ಕಳ ಬಗ್ಗೆ ಬಹಳ ಆಸಕ್ತಿಕರವಾದ ಅಂಶಗಳನ್ನು ತಿಳಿಸಿದ್ದೆವು. ಅದಕ್ಕೆ ತುಂಬ ಒಳ್ಳೆ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಸರಣಿಯ ಮುಂದಿನ ಲೇಖನವಾಗಿ ಕುಂಭ ರಾಶಿಯ ಮಕ್ಕಳ ಬಗ್ಗೆ ಇಂದು ತಿಳಿಸಿಕೊಡ್ತೀವಿ.

ಜ್ಯೋತಿಷ್ಯ: ಮೀನ ರಾಶಿಯ ಮಕ್ಕಳ ಬಗ್ಗೆ ಗೊತ್ತಿರಲೇ ಬೇಕಾದ ವಿಚಾರಜ್ಯೋತಿಷ್ಯ: ಮೀನ ರಾಶಿಯ ಮಕ್ಕಳ ಬಗ್ಗೆ ಗೊತ್ತಿರಲೇ ಬೇಕಾದ ವಿಚಾರ

ನಿಮ್ಮ ಮಗು ಜನವರಿ 20 - ಫೆಬ್ರವರಿ 19ರ ಮಧ್ಯೆ ಜನಿಸಿದ್ದರೆ ಆ ಮಗುವಿನ ರಾಶಿ ಕುಂಭ ಆಗುತ್ತದೆ. ಹಾಗಿದ್ದರೆ ನಿಮ್ಮ ಮಗು ಅತಿ ಬುದ್ಧಿವಂತ, ವಿಶಾಲ ಮನೋಭಾವ ಹೊಂದಿರುವಂಥದ್ದು. ಕುಂಭ ರಾಶಿಯ ಈ ಮಕ್ಕಳು ಸಾಮಾನ್ಯವಾಗಿಯೇ ತರ್ಕ ಮಾಡುವಂಥ ಮೆದುಳು ಹೊಂದಿರುತ್ತವೆ. ಯಾವುದನ್ನೇ ಆಗಲಿ ತಾರ್ಕಿಕವಾಗಿ ಚಿಂತಿಸುತ್ತವೆ.

ಅದೃಷ್ಟ ಸಂಖ್ಯೆ 2 ವ್ಯಕ್ತಿಗಳ ಗುಣ, ವೃತ್ತಿ, ಅದೃಷ್ಟದ ವರ್ಷಗಳುಅದೃಷ್ಟ ಸಂಖ್ಯೆ 2 ವ್ಯಕ್ತಿಗಳ ಗುಣ, ವೃತ್ತಿ, ಅದೃಷ್ಟದ ವರ್ಷಗಳು

ನೀವು ಯಾವುದೇ ವಿಚಾರ ಹೇಳಿದರೆ ಸುಮ್ಮನೆ ಒಪ್ಪಿಕೊಂಡು ಬಿಡುವ ಪೈಕಿಯಲ್ಲ ಈ ಮಕ್ಕಳು. ಪ್ರಶ್ನೆ ಮಾಡುತ್ತವೆ, ಮಾಡುತ್ತಲೇ ಇರುತ್ತವೆ. ನೀವು ಕೊಟ್ಟ ಉತ್ತರದಿಂದ ಸಮಾಧಾನ ಆಗುವ ತನಕ ಪ್ರಶ್ನೆಗಳ ಸರಣಿ ನಿಲ್ಲುವುದಿಲ್ಲ. ಮಾಡುವ ಕೆಲಸದಲ್ಲಿ ಈ ಮಕ್ಕಳಿಗೆ ಅಗಾಧವಾದ ಸ್ಪಷ್ಟತೆ ಇರುತ್ತದೆ. ಅಷ್ಟೇ ಅಲ್ಲ, ಅದರ ಫಲಿತಾಂಶದ ಬಗ್ಗೆ ಕೂಡ ಕರಾರುವಾಕ್ ಆದ ಆಲೋಚನೆ ಇರುತ್ತದೆ.

ವಿಪರೀತ ಚಟುವಟಿಕೆ

ವಿಪರೀತ ಚಟುವಟಿಕೆ

ಕುಂಭ ರಾಶಿಯ ಮಕ್ಕಳು ವಿಪರೀತ ಚಟುವಟಿಕೆಯಿಂದ ಇರುತ್ತವೆ. ಸ್ವಲ್ಪ ಭಾವನಾ ಜೀವಿಗಳು ಹಾಗೂ ಬುದ್ಧಿವಂತರಾಗಿರುತ್ತವೆ. ಯಾವುದಕ್ಕೂ ಸಿದ್ಧ ಎಂಬ ಧೋರಣೆ ಇರುತ್ತದೆ. ಹೊಸಬರನ್ನು ಭೇಟಿ ಆಗುವುದರಲ್ಲಿ, ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಹಾಗೂ ಹೊಸ ಸ್ಥಳಗಳನ್ನು ನೋಡುವುದರಲ್ಲಿ ವಿಪರೀತವಾದ ಉತ್ಸಾಹ ಇರುತ್ತದೆ.

ತನಗೆ ಯಾವುದರ ಬಗ್ಗೆಯೂ ಭಯವಿಲ್ಲ ಎಂದು ತೋರಿಸಿಕೊಳ್ಳುವ ಉತ್ಸಾಹ ಪುಟಿಯುತ್ತಿರುತ್ತದೆ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತವಾಗಿರುತ್ತವೆ.

ಜ್ಞಾನ ಬಂದ ಗಿರಾಕಿ

ಜ್ಞಾನ ಬಂದ ಗಿರಾಕಿ

ನೀವು ಗಂಭೀರವಾಗಿದ್ದನ್ನು ಹೇಳುವಾಗ ಕೂಡ ಕೇಳೋದಿಲ್ಲ, ಉದ್ದೇಶ ಪೂರ್ವಕವಾಗಿ ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ ಅತ ಕುಂಭ ರಾಶಿಯ ಮಗುವಿನ ಬಗ್ಗೆ ನಿಮಗೆ ತಕರಾರಿದ್ದರೆ, ದಯವಿಟ್ಟು ನಿಮ್ಮ ಆಲೋಚನೆ ಬದಲಿಸಿಕೊಳ್ಳಿ. ಏಕೆಂದರೆ ಅದರ ಮಿದುಳು ಅಷ್ಟು ಚಟುವಟಿಕೆಯಿಂದ ಇರುತ್ತದೆ. ಕ್ಷಣಕ್ಷಣಕ್ಕೂ ಬದಲಾಗುವ ಆದ್ಯತೆಯಲ್ಲಿ ಕೆಲವು ಮೆದುಳಿನ ಹಿಂದೆ ಸರಿದುಹೋಗುತ್ತದೆ.

ಆ ಕಾರಣಕ್ಕೆ ಮಗು ನಿರ್ಲಕ್ಷ್ಯ ಮಾಡ್ತಿದೆ ಎಂದುಕೊಳ್ಳಬೇಡಿ. ಎಲ್ಲ ವಿಚಾರಗಳನ್ನೂ ಒಂದೇ ಕಾಲಕ್ಕೆ ನೆನಪಿನಲ್ಲಿ ಇರಿಸಿಕೊಳ್ಳುವುದು ಕಷ್ಟವಾಗುತ್ತದೆ.

ಭಾವುಕ ಜೀವಿಗಳು

ಭಾವುಕ ಜೀವಿಗಳು

ಕುಂಭ ರಾಶಿಯ ಮಕ್ಕಳು ಭಾವುಕ ಜೀವಿಗಳು. ತಮ್ಮದೇ ವಯಸ್ಸಿನ ಮಕ್ಕಳ ಜತೆಗೆ ಖುಷಿಯಿಂದ ಸಮಯ ಕಳೆಯುವುದನ್ನು ಇಷ್ಟಪಡುತ್ತವೆ. ಈ ಮಕ್ಕಳಿಗೆ ಪ್ರಕೃತಿಯೆಂದರೆ ಅಚ್ಚುಮೆಚ್ಚು. ಪ್ರಕೃತಿ ಮಧ್ಯೆ ಕಳೆಯುವ ವೇಳೆಯಲ್ಲೇ ಮತ್ತಷ್ಟು ಉತ್ಸಾಹದಿಂದ ಪುಟಿಯುತ್ತವೆ.

ತಮಾಷೆಗೂ ಸುಳ್ಳು ಹೇಳಬೇಡಿ

ತಮಾಷೆಗೂ ಸುಳ್ಳು ಹೇಳಬೇಡಿ

ಈ ಮಕ್ಕಳಿಗೆ ಮಾತು ಕೊಟ್ಟರೆ ಎಷ್ಟೇ ಕಷ್ಟವಾದರೂ ಅದನ್ನು ಈಡೇರಿಸಲೇ ಬೇಕು. ಇಲ್ಲದಿದ್ದರೆ ಬಹಳ ಬೇಗ ನೊಂದುಕೊಳ್ಳುತ್ತಾರೆ. ತಮಾಷೆಗೆ ಅಂತ ಕೂಡ ಹೇಳಿದ ಮಾತನ್ನು ತಪ್ಪಿಬಿಟ್ಟರೆ ಮಕ್ಕಳ ಮನಸಿನ ಮೇಲೆ ದೀರ್ಘಾವಧಿಯವರೆಗೆ ಪರಿಣಾಮ ಬೀರುತ್ತದೆ.

ಸ್ನೇಹಪರ, ಆದರೆ ಸೂಕ್ಷ್ಮ ಸ್ವಭಾವ

ಸ್ನೇಹಪರ, ಆದರೆ ಸೂಕ್ಷ್ಮ ಸ್ವಭಾವ

ಚಟುವಟಿಕೆ, ಸ್ನೇಹಪರ, ಚೂಟಿ... ಹೀಗೆ ಈ ಮಕ್ಕಳ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರುತ್ತವೆ. ಅದೆಲ್ಲವೂ ನಿಜ. ಆದರೆ ಈ ಮಕ್ಕಳು ಹೆಚ್ಚಿನ ಗಮನವನ್ನು ನಿರೀಕ್ಷಿಸುತ್ತವೆ. ಅವುಗಳ ಮಾತನ್ನು ಕೇಳಿಸಿಕೊಳ್ಳಲಿಲ್ಲ ಅಂದರೆ, ನಿರ್ಲಕ್ಷ್ಯ ಮಾಡಿದರೆ, ಸ್ನೇಹಪರವಾಗಿಲ್ಲ ಅಂದರೆ ಈ ಮಕ್ಕಳು ಸಿಟ್ಟಾಗುತ್ತವೆ. ರೆಬೆಲ್ ಸ್ಟಾರ್ ಕೂಡ ಆಗಿ ಎಲ್ಲಕ್ಕೂ ಉಲ್ಟಾ ಹೊಡೆಯುತ್ತವೆ.

ಊಹಾಶಕ್ತಿ ಹಾಗೂ ಕ್ರಿಯೇಟಿವಿಟಿ ಅಪಾರ

ಊಹಾಶಕ್ತಿ ಹಾಗೂ ಕ್ರಿಯೇಟಿವಿಟಿ ಅಪಾರ

ಈ ಮಕ್ಕಳ ಊಹಾಶಕ್ತಿ ಹಾಗೂ ಕ್ರಿಯೇಟಿವಿಟಿ ಅಪಾರವಾಗಿರುತ್ತವೆ. ತನ್ನದೇ ಲೋಕದಲ್ಲಿ ವಿಹರಿಸುವ ಈ ಮಕ್ಕಳಲ್ಲಿ ಸುಪ್ತ ಪ್ರಜ್ಞೆ ಸದಾ ಜಾಗೃತವಾಗಿರುತ್ತದೆ. ಒಂದು ಸಮಸ್ಯೆಯನ್ನು ಪೂರ್ತಿಯಾಗಿ ಕೇಳಿಸಿಕೊಳ್ಳುವ ಮುನ್ನವೇ ಅದಕ್ಕೆ ಪರಿಹಾರವನ್ನು ಹೇಳಬಲ್ಲಂಥ ಶಕ್ತಿ ಇರುತ್ತದೆ.

English summary
Know all about the Aquarius kids in Kannada. Read about children who belongs to zodiac sign Aquarius in Child Astrology here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X