ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಾ! ಅಕ್ಷಯ ತೃತೀಯಕ್ಕೆ ಇಷ್ಟೆಲ್ಲ ಇತಿಹಾಸ ಇದೆಯಾ?

By ದೈವಜ್ಞ ಶಂಕರ್ ಭಟ್
|
Google Oneindia Kannada News

Recommended Video

Akshaya Tritiya 2018 : ಈ ದಿನದ ಹಿಂದೆ ಎಷ್ಟೆಲ್ಲಾ ಇತಿಹಾಸ ಇದೆ ನೋಡಿ| Oneindia Kananda

ಏಪ್ರಿಲ್ ಹದಿನೆಂಟನೇ ತಾರೀಕು (ಬುಧವಾರ) ಅಕ್ಷಯ ತೃತೀಯ. ಈ ಅತ್ಯಂತ ಶುಭ ದಿನದ ಬಗ್ಗೆ ಇತಿಹಾಸದಲ್ಲಿ ದಾಖಲಾಗಿರುವ ಅಂಶಗಳೇನು ಎಂಬುದರ ಬಗ್ಗೆ ತಿಳಿಸಿಕೊಡುವ ಲೇಖನವಿದು. ಜತೆಗೆ ಇನ್ನೂ ಒಂದಷ್ಟು ಆಸಕ್ತಿಕರ ಮಾಹಿತಿಗಳನ್ನು ನಿಮ್ಮ ಗಮನಕ್ಕೆ ತರುತ್ತೇವೆ.

Akshaya Tritiya mythological significance, worship of Goddess Lakshmi

* ತ್ರೇತಾ ಯುಗದ ಆರಂಭ ಆಗಿದ್ದು ಇದೇ ಅಕ್ಷಯ ತೃತೀಯದಂದೇ.

* ನರ-ನಾರಾಯಣರು, ಪರಶುರಾಮ ಹಾಗೂ ಹಯಗ್ರೀವರ ಜಯಂತಿ ಇದೇ ದಿನದಂದು.

* ಈ ಭೂಮಿಗೆ ಗಂಗೆಯ ಆಗಮನವಾದದ್ದು ಅಕ್ಷಯ ತೃತೀಯದಂದು.

* ಪಾಂಡವರಿಗೆ ಅಕ್ಷಯ ಪಾತ್ರೆ ದೊರೆತ ದಿನ ಇದು.

* ವೇದವ್ಯಾಸರು ಮಹಾಭಾರತವನ್ನು ಬರೆದದ್ದು ಅಕ್ಷಯ ತೃತೀಯದಂದು.

* ಕಾಶಿಯಲ್ಲಿ ದೇವಿ ಅನ್ನಪೂರ್ಣೆಯು ಆ ಪರಮೇಶ್ವರನಿಗೆ ಕಾಣಿಸಿಕೊಂಡ ದಿನವಿದು.

* ಕುಬೇರನಿಗೆ ಸಂಪತ್ತಿನ ಒಡೆಯನಾಗಿ ಹಾಗೂ ಪಾರುಪತ್ತೇದಾರನಾಗಿ ನೇಮಿಸಿದ ದಿನ ಇದು ಎಂಬ ನಂಬಿಕೆ ಕೂಡ ಇದೆ.

ಏಪ್ರಿಲ್ 18ಕ್ಕೆ ಅಕ್ಷಯ ತೃತೀಯ, ದಿನದ ಮಹತ್ವ ಏನು, ಮಾಡಬೇಕಾದ್ದೇನು?ಏಪ್ರಿಲ್ 18ಕ್ಕೆ ಅಕ್ಷಯ ತೃತೀಯ, ದಿನದ ಮಹತ್ವ ಏನು, ಮಾಡಬೇಕಾದ್ದೇನು?

ಈ ದಿನ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಪೂಜಿಸಬೇಕು. ಒಳ್ಳೆ ಬೆಳೆ ಆಗಲಿ ಎಂದು ಭೂ ದೇವಿಯನ್ನು ಪೂಜೆ ಮಾಡುವ ರೂಢಿ ಕೂಡ ಇದೆ. ಆ ಮೂಲಕ ಧಾನ್ಯ ಲಕ್ಷ್ಮಿಯನ್ನು ಪೂಜಿಸಿ, ಅಭಿವೃದ್ಧಿಗಾಗಿ ಪ್ರಾರ್ಥಿಸಲಾಗುತ್ತಿದೆ. ಹಣ್ಣಿನ ಗಿಡ ನೆಡುವುದಕ್ಕೆ, ಆಯುರ್ವೇದಿಕ ಮೂಲಿಕೆಗಳ ಸಸಿಗಳನ್ನು ನೆಡುವುದಕ್ಕೆ ಅಕ್ಷಯ ತೃತೀಯ ಪ್ರಶಸ್ತವಾದ ದಿನ ಎಂಬ ನಂಬಿಕೆ ಇದೆ.

ಹಾಗೆ ಸಸಿಗಳನ್ನು ನೆಡುವುದರಿಂದ ಹಣ್ಣುಗಳಿಗಾಗಲೀ ಆಯುರ್ವೇದ ಸಸ್ಯಗಳಾಗಲೀ ಕೊರತೆ ಬೀಳುವುದಿಲ್ಲ ಎಂಬುದು ನಂಬಿಕೆ.

English summary
Akshaya Tritiya on April 18, 2018. That is on Wednesday. What is the significance of this day? What Hindu mythology and history tells about Akshaya Tritiya? Here is the interesting details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X