• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷ್ಯ: ಶ್ರೀದೇವಿಯವರ ಸಾವು ಬಂದದ್ದಲ್ಲ, ತಂದುಕೊಂಡದ್ದು!

By ಪ್ರಕಾಶ್ ಅಮ್ಮಣ್ಣಾಯ
|
   ನಟಿ ಶ್ರೀದೇವಿ ಅಕಾಲ ಸಾವಿನ ಬಗ್ಗೆ ಜ್ಯೋತಿಷ್ಯ ವಿಶ್ಲೇಷಣೆ | Oneindia Kannada

   ದುಬೈನ ಹೋಟೆಲ್ ವೊಂದರಲ್ಲಿ ನಟಿ ಶ್ರೀದೇವಿ ನಿಧನರಾದ ಸುದ್ದಿ ಕೇಳಿದೆ. ಆ ತಕ್ಷಣ ಅವರ ಜಾತಕ ನೋಡೋಣ ಎಂದೆನಿಸಿತು. ಇಂಟರ್ ನೆಟ್ ನಲ್ಲಿ ಲಭ್ಯವಿರುವ ಅವರ ಜಾತಕವನ್ನು ಹುಡುಕಿ, ಪರಿಶೀಲನೆ ಮಾಡಿದಾಗ ನಿಜಕ್ಕೂ ಅಚ್ಚರಿಯಾಯಿತು. ಏಕೆಂದರೆ ಆಕೆಗೆ ಇದು ಸಾಯುವ ವಯಸ್ಸಲ್ಲ ಎಂಬುದನ್ನು ಜ್ಯೋತಿಷ್ಯ ಕೂಡ ಸೂಚಿಸುತ್ತಿದೆ.

   ಮಾಹಿತಿ ಪ್ರಕಾರ ಆಕೆಯ ಜನ್ಮ ದಿನಾಂಕ 13.8.1963 ಹಾಗೂ ಹುಟ್ಟಿದ ಸಮಯ ಬೆಳಗ್ಗೆ 5.30. ಸ್ಥಳ ಮದ್ರಾಸ್ (ಈಗಿನ ಚೆನ್ನೈ). ಆ ಪ್ರಕಾರ ಶ್ರೀದೇವಿಯದು ಕೃತ್ತಿಕಾ ನಕ್ಷತ್ರ ಮೂರನೇ ಪಾದ ವೃಷಭ ರಾಶಿ ಆಗುತ್ತದೆ. ಇನ್ನು ಲಗ್ನ ಕರ್ಕಾಟಕ. ಸದ್ಯಕ್ಕೆ ಶನಿ ಮಹರ್ದಶಾ, ಶನಿ ಭುಕ್ತಿ ನಡೆಯುತ್ತಿತ್ತು.

   ಶ್ರೀದೇವಿ ಸತ್ತಿದ್ದು ಹೇಗೆ? ಇಲ್ಲಿದೆ ಆಘಾತಕಾರಿ ಸುದ್ದಿ!

   ಗೋಚಾರದಲ್ಲಿ ಹೇಳಬೇಕು ಅಂದರೆ ಅಷ್ಟಮ ಅಂದರೆ ಎಂಟನೇ ಮನೆಯಲ್ಲಿ ಕಳೆದ ವರ್ಷದ ಅಕ್ಟೋಬರ್ ನಿಂದ ಶನಿಯ ಸಂಚಾರ ಆರಂಭವಾಗಿತ್ತು. ಅದಕ್ಕೂ ಮುನ್ನ ಅಂದರೆ ಕಳೆದ ವರ್ಷ ಜನವರಿಯಿಂದಲೇ ಶನಿ ಧನುಸ್ಸು ರಾಶಿಯನ್ನು ಪ್ರವೇಶ ಮಾಡಿದ್ದ. ಮತ್ತೆ ಜೂನ್ ನಿಂದ ನಾಲ್ಕು ತಿಂಗಳ ಕಾಲ ವಕ್ರಿಯಾಗಿ ವೃಶ್ಚಿಕ ರಾಶಿಯಲ್ಲಿ ಸ್ಥಿತನಾಗಿದ್ದ.

   ಜಾತಕದ ಪ್ರಕಾರ ಎಪ್ಪತ್ತು ವರ್ಷ ಆಯುಷ್ಯ

   ಜಾತಕದ ಪ್ರಕಾರ ಎಪ್ಪತ್ತು ವರ್ಷ ಆಯುಷ್ಯ

   ಶ್ರೀದೇವಿ ಅವರ ಜನ್ಮ ಕುಂಡಲಿ ಪರಿಶೀಲಿಸಿದಾಗ ಆಕೆಯ ಆಯುಷ್ಯ ಎಪ್ಪತ್ತು ವರ್ಷ ಎಂದು ಸೂಚಿಸುತ್ತದೆ. ಹಾಗಂತ ದೈಹಿಕವಾಗಿ ತುಂಬ ಚಟುವಟಿಕೆಯಿಂದ ಇರುತ್ತಿದ್ದರು ಅಂತಲ್ಲ. ಆದರೆ ಈ ಜಾತಕದ ಪ್ರಕಾರ, ಹಾಸಿಗೆ ಹಿಡಿದು, ಇತರರಿಂದ ಸೇವೆ ಪಡೆದು, ಅನಾರೋಗ್ಯ ಮತ್ತಿತರ ಸಮಸ್ಯೆಗಳನ್ನು ಅನುಭವಿಸಿಯಾದರೂ ಅಷ್ಟು ವರ್ಷ ಬದುಕಬೇಕಿತ್ತು.

   ಸಾವಿನ ಮುನ್ಸೂಚನೆ ಸಿಕ್ಕಿರುತ್ತದೆ

   ಸಾವಿನ ಮುನ್ಸೂಚನೆ ಸಿಕ್ಕಿರುತ್ತದೆ

   ಇನ್ನೊಂದು ವಿಚಾರ. ಆಕೆಯ ಸಾವಿನ ಮುನ್ಸೂಚನೆ ಖಂಡಿತಾ ಗೊತ್ತಾಗಿರುತ್ತದೆ. ಒಂದು ಸಣ್ಣ ಉದಾಹರಣೆ ಹೇಳಬೇಕು ಅಂದರೆ, ಕೂದಲು ಉದುರುವುದು. ಪದೇಪದೇ ಮನಸ್ಸಿಗೆ ಭಯ ಉಂಟಾಗುವುದು. ಯಾರಾದರೂ ಬಲವಂತವಾಗಿ ಎಳೆದೊಯ್ಯುವಂತೆ ಕನಸಿನಲ್ಲಿ ಪದೇಪದೇ ಕಾಣಿಸಿಕೊಳ್ಳುವುದು...ಇಂಥ ಸೂಚನೆಗಳು ಸಿಕ್ಕು, ನಮ್ಮ ಆರನೇ ಇಂದ್ರಿಯಕ್ಕೆ ಎಚ್ಚರಿಕೆ ಸಿಗುತ್ತದೆ.

   ಬಿಗ್ ಬಿಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತೇ?

   ಬಂದಿರುವ ಸಾವಲ್ಲ, ತಂದುಕೊಂಡ ಸಾವು

   ಬಂದಿರುವ ಸಾವಲ್ಲ, ತಂದುಕೊಂಡ ಸಾವು

   ಶ್ರೀದೇವಿ ಅವರಿಗೆ ಸಾವು ಬಂದಿರುವುದಂತೂ ಖಂಡಿತಾ ಅಲ್ಲ. ಇದು ತಂದುಕೊಂಡ ಸಾವು. ಇದರರ್ಥವನ್ನು ಹೀಗೆ ಎಂದು ಬಿಡಿಸಿ ಹೇಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಇಂಥ ಸಂಗತಿಗಳನ್ನು ಒಂದೋ ಆ ಜಾತಕರ ಬಳಿ ಚರ್ಚಿಸಬಹುದು ಅಥವಾ ಅವರಿಗೆ ತೀರಾ ಹತ್ತಿರದ ಸಂಬಂಧಿಗಳ ಬಳಿ ಮಾತನಾಡಬಹುದು.

   ಮನುಷ್ಯರು ಬಲ್ಬ್ ಇದ್ದ ಹಾಗೆ

   ಮನುಷ್ಯರು ಬಲ್ಬ್ ಇದ್ದ ಹಾಗೆ

   ಮತ್ತೊಂದು ಸಂಗತಿ ಏನೆಂದರೆ ಮಾನವ ಬಲ್ಬ್ ಇದ್ದ ಹಾಗೆ. ಒಳಗಿನ ಫಿಲಮೆಂಟ್ ಗೆ ಇಷ್ಟು ಕಾಲ ಎಂದು ತಯಾರಕ ನಿರ್ಧರಿಸಿರುತ್ತಾನೆ. ಆದರೆ ಫಿಲಮೆಂಟ್ ಗೆ ಹರಿಯುವ ವಿದ್ಯುತ್ ಪ್ರಮಾಣ, ಅದಕ್ಕೆ ಬಳಕೆ ಆಗಿರುವ ವೈರ್ ಇನ್ನಿತರ ಅಂಶಗಳು ಕೂಡ ಬಾಳಿಕೆ ವಿಚಾರವನ್ನು ನಿರ್ಧರಿಸುತ್ತದೆ. ಅದೇ ರೀತಿ ಮನುಷ್ಯರ ಜೀವನ ಶೈಲಿ, ಪಾಪ-ಪುಣ್ಯ, ಸ್ವಯಂಕೃತ ಅಪರಾಧಗಳು ಇವೆಲ್ಲ ಸೇರಿ ಆಯುಷ್ಯ -ಆರೋಗ್ಯವನ್ನು ಉಳಿಸಿಕೊಳ್ಳುವುದು ನಮ್ಮ ಕೈಲಿ ಇರುತ್ತದೆ. ಈ ವಸ್ತುವಿನ ವಾರಂಟಿ ಅವಧಿ ಇಷ್ಟಿದೆ ಎಂದು ಜ್ಯೋತಿಷ್ಯ ಮೂಲಕ ತಿಳಿಸಬಹುದು. ಆ ವಸ್ತುವನ್ನು ಸಮಸ್ಯೆ ಆಗದಂತೆ ಕಾಯ್ದುಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

   ಬಿಗ್ ಬಿಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತೇ?

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   According vedic astrology actress Sridevi must live 70 years. Whether healthy or unhealthy this is what indicated by her horoscope. Sridevi horoscope analysis by well known astrologer Prakash Ammannaya.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more