• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಶ್ಚಿಮ ಬಂಗಾಳ ಚುನಾವಣಾ 'ಜ್ಯೋತಿಷ್ಯ ಭವಿಷ್ಯ': ಬಿಜೆಪಿ ಗಣನೀಯ ಸಾಧನೆ, ಆದರೆ..

|
Google Oneindia Kannada News

ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಿದೆ. ಅದರಂತೆ, ಮಾರ್ಚ್ 27ರಿಂದ ಏಪ್ರಿಲ್ 29ರ ವರೆಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ದಿನಾಂಕ ಘೋಷಣೆಗೂ ಮುನ್ನವೇ ಬಿಜೆಪಿ ತನ್ನ ಚುನಾವಣಾ ತಯಾರಿಯನ್ನು ನಡೆಸಿಯಾಗಿತ್ತು. ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಲವು ಬಾರಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು.

ಮಮತಾ ಬ್ಯಾನರ್ಜಿ ಘೋಷಿಸಿದ ಅಪರೂಪದ ಆಫರ್: ಇದರಿಂದ ಜನಸಾಮಾನ್ಯರಿಗೆ ಏನು ಲಾಭ? ಮಮತಾ ಬ್ಯಾನರ್ಜಿ ಘೋಷಿಸಿದ ಅಪರೂಪದ ಆಫರ್: ಇದರಿಂದ ಜನಸಾಮಾನ್ಯರಿಗೆ ಏನು ಲಾಭ?

ಇನ್ನು, ಪ್ರಧಾನಿ ಮೋದಿ ಕೂಡಾ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಇನ್ನೊಂದು ಕಡೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಮತ್ತೆ ಗೆಲುವಿಗಾಗಿ ಭರ್ಜರಿ ರಣತಂತ್ರ ರೂಪಿಸುತ್ತಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿದ್ದರಿಂದ, ಈ ಬಾರಿಯ ಅಸೆಂಬ್ಲಿ ಚುನಾವಣೆ ಇನ್ನಿಲ್ಲದ ಪೈಪೋಟಿಗೆ ವೇದಿಕೆಯಾಗಿ ರೂಪುಗೊಂಡಿದೆ. ಈ ನಡುವೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎನ್ನುವುದನ್ನು ಖ್ಯಾತ ಜ್ಯೋತಿಷಿಯೊಬ್ಬರು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಹೇಳಿದ್ದಾರೆ. ಅವರ ಪ್ರಕಾರ, ಬಿಜೆಪಿ ಉತ್ತಮ ಸಾಧನೆ ತೋರುತ್ತದೆ. ಆದರೆ..

ಗೊರವಯ್ಯ ನುಡಿದ ಐತಿಹಾಸಿಕ ಮೈಲಾರ ಕಾರ್ಣಿಕದ ಮತ್ತೊಂದು ಅರ್ಥ! ಗೊರವಯ್ಯ ನುಡಿದ ಐತಿಹಾಸಿಕ ಮೈಲಾರ ಕಾರ್ಣಿಕದ ಮತ್ತೊಂದು ಅರ್ಥ!

ಆಚಾರ್ಯ ಸಲೀಲ್ ಎನ್ನುವ ಜ್ಯೋತಿಷಿ

ಆಚಾರ್ಯ ಸಲೀಲ್ ಎನ್ನುವ ಜ್ಯೋತಿಷಿ

ಆಚಾರ್ಯ ಸಲೀಲ್ ಎನ್ನುವ ಜ್ಯೋತಿಷಿಯೊಬ್ಬರು ಬಂಗಾಳ ಚುನಾವಣೆಯಲ್ಲಿ ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ ಎನ್ನುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಪ್ಪತ್ತು ಸ್ಥಾನವನ್ನು ಗೆಲ್ಲಲಿದೆ ಎಂದು ಹೇಳಿದ್ದರು. ಬಿಜೆಪಿ ಹದಿನೆಂಟು ಸ್ಥಾನವನ್ನು ಗೆದ್ದಿತ್ತು. ಟಿಎಂಸಿ ಪಕ್ಷದ ಕುಂಡಲಿಯ ಆಧಾರದ ಮೇಲೆ ಆ ಪಕ್ಷ ಎಷ್ಟು ಗೆಲುವು ಸಾಧಿಸಲಿದೆ ಎನ್ನುವುದನ್ನು ಆಚಾರ್ಯ ಸಲೀಲ್ ಹೇಳಿದ್ದಾರೆ.

01.01.1998ರಲ್ಲಿ ಟಿಎಂಸಿ (ತೃಣಮೂಲ ಕಾಂಗ್ರೆಸ್) ಪಕ್ಷ ಸ್ಥಾಪನೆಗೊಂಡಿತು

01.01.1998ರಲ್ಲಿ ಟಿಎಂಸಿ (ತೃಣಮೂಲ ಕಾಂಗ್ರೆಸ್) ಪಕ್ಷ ಸ್ಥಾಪನೆಗೊಂಡಿತು

01.01.1998ರಲ್ಲಿ ಟಿಎಂಸಿ (ತೃಣಮೂಲ ಕಾಂಗ್ರೆಸ್) ಪಕ್ಷ ಸ್ಥಾಪನೆಗೊಂಡಿತು. ಮೀನ ಲಗ್ನದಲ್ಲಿ ಪಕ್ಷದ ಸ್ಥಾಪನೆಯಾಗಿತ್ತು ಮತ್ತು ಆ ವೇಳೆ ಶನಿ ರಾಶಿಯು ಲಗ್ನದಲ್ಲಿದ್ದನು. ಕುಂಡಲಿಯಲ್ಲಿ ಏಳನೇ ಮತ್ತು ಎಂಟನೇ ಸ್ಥಾನ ಖಾಲಿ ಮತ್ತು ಹತ್ತನೇ ಮನೆಯಲ್ಲಿ ಸೂರ್ಯನಿದ್ದಿದ್ದರಿಂದ ಇದೊಂದು ಅತ್ಯುತ್ತಮ ಹೊಂದಾಣಿಕೆಯಾಗಿತ್ತು. ಶುಕ್ರ, ಚಂದ್ರ, ಗುರು ಮತ್ತು ಮಂಗಳ ಹನ್ನೊಂದನೇ ಸ್ಥಾನದಲ್ಲಿ ಮತ್ತು ಕೇತು ಹನ್ನೆರಡನೇ ಸ್ಥಾನದಲ್ಲಿದ್ದ.

ಚುನಾವಣೆಯ ಸಮಯದಲ್ಲಿ ಬಿಜೆಪಿಯ ಕುಂಡಲಿ

ಚುನಾವಣೆಯ ಸಮಯದಲ್ಲಿ ಬಿಜೆಪಿಯ ಕುಂಡಲಿ

ಆದರೆ, ಶನಿಯ ಗೋಚರ ಎಲ್ಲಾ ಗ್ರಹಗಳ ಮೇಲಿದೆ. ಚುನಾವಣೆ ನಡೆಯುವ ಎಂಟು ಹಂತದ ದಿನಾಂಕದ ವೇಳೆಯ ಗ್ರಹಗತಿಯನ್ನು ಅವಲೋಕಿಸಿದಾಗ, ಮೊದಲ ಐದು ಹಂತದ ಚುನಾವಣೆಯಲ್ಲಿ ಟಿಎಂಸಿಗೆ ಲೀಡ್ ಸಿಗಲಿದೆ. ಜೊತೆಗೆ, ಚುನಾವಣೆಯ ವೇಳೆ ಹಿಂಸೆಯ ಘಟನೆಗಳು ಹೆಚ್ಚಾಗಲಿದೆ. ಚುನಾವಣೆಯ ಸಮಯದಲ್ಲಿ ಬಿಜೆಪಿಯ ಕುಂಡಲಿಯನ್ನು ಅವಲೋಕಿಸಿದಾಗ ಬಿಜೆಪಿ ಉತ್ತಮ ಸಾಧನೆಯನ್ನಂತೂ ಮಾಡುತ್ತದೆ"ಎಂದು ಆಚಾರ್ಯ ಸಲೀಲ್ ಹೇಳಿದ್ದಾರೆ.

ಮಮತಾ ಮತ್ತೆ ಅಧಿಕಾರಕ್ಕೇರಲಿದ್ದಾರೆ

ಮಮತಾ ಮತ್ತೆ ಅಧಿಕಾರಕ್ಕೇರಲಿದ್ದಾರೆ

"ಬಿಜೆಪಿ ಉತ್ತಮ ಸಾಧನೆಯನ್ನು ಮಾಡಿದರೂ, ಸರಕಾರ ರಚಿಸುವಷ್ಟು ಸೀಟ್ ಬಿಜೆಪಿಗೆ ಸಿಗುವುದಿಲ್ಲ. ಟಿಎಂಸಿಗೂ ಸರಕಾರ ರಚಿಸಲು ಕೆಲವು ಸೀಟ್ ಕಮ್ಮಿಯಾಗಬಹುದು. ಆದರೆ, ಸಣ್ಣಪುಟ್ಟ ಪಕ್ಷಗಳ ಬೆಂಬಲದಿಂದ ಮಮತಾ ಮತ್ತೆ ಅಧಿಕಾರಕ್ಕೇರಲಿದ್ದಾರೆ. ಟಿಎಂಸಿಗೆ 160-180, ಬಿಜೆಪಿಗೆ 50-60 ಮತ್ತು ಕಾಂಗ್ರೆಸ್ಸಿಗೆ 25-30 ಸೀಟು ಸಿಗಬಹುದು"ಎಂದು ಆಚಾರ್ಯ ಸಲೀಲ್ ಅಭಿಪ್ರಾಯ ಪಟ್ಟಿದ್ದಾರೆ.

English summary
Acharya Salil astrological predictions on West Bengal Assembly Elections 2021. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X