ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕಾಶ್ ಅಮ್ಮಣ್ಣಾಯರಿಂದ ಪಂಚ ರಾಜ್ಯ ವಿಧಾನಸಭಾ ಚುನಾವಣೆ ವಿಶ್ಲೇಷಣೆ

By ಅನಿಲ್ ಆಚಾರ್
|
Google Oneindia Kannada News

Recommended Video

5 States Assembly Elections Results : 5 ರಾಜ್ಯಗಳ ಚುನಾವಣೆ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

ನಾಳೆ (ಡಿಸೆಂಬರ್ ಏಳು) ಕೊನೆ ಸುತ್ತು ಎಂಬಂತೆ ರಾಜಸ್ತಾನ, ತೆಲಂಗಾಣದಲ್ಲಿ ವಿಧಾನಸಭೆಗೆ ಮತದಾನ ನಡೆಯಲಿದೆ. ಅದಾಗಿ ನಾಲ್ಕು ದಿನಕ್ಕೆ ಡಿಸೆಂಬರ್ ಹನ್ನೊಂದನೇ ತಾರೀಕು ಫಲಿತಾಂಶ ಬರಲಿದೆ. ಒಟ್ಟು ಐದು ರಾಜ್ಯಗಳ ವಿಧಾನಸಭೆಯ ಚುನಾವಣೆ ಫಲಿತಾಂಶವು ಬರಲಿದೆ. ರಾಜಸ್ತಾನ, ಮಧ್ಯಪ್ರದೇಶ, ಮಿಜೋರಾಂ, ಛತ್ತೀಸ್ ಗಢ ಹಾಗೂ ತೆಲಂಗಾಣದ ಚುನಾವಣೆ ಫಲಿತಾಂಶ ಬರಲಿದೆ.

ಚುನಾವಣೆ ದಿನಾಂಕ ಕರ್ನಾಟಕದ ಭವಿಷ್ಯ ಸೂಚಿಸಿದೆ: ಜ್ಯೋತಿಷಿ ಅಮ್ಮಣ್ಣಾಯ ಚುನಾವಣೆ ದಿನಾಂಕ ಕರ್ನಾಟಕದ ಭವಿಷ್ಯ ಸೂಚಿಸಿದೆ: ಜ್ಯೋತಿಷಿ ಅಮ್ಮಣ್ಣಾಯ

ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಹಾಗೂ ಕೇಂದ್ರ ಸರಕಾರದ ಸಾಧನೆ ಮೌಲ್ಯಮಾಪನಕ್ಕೆ ಒಂದು ಮಿನಿ ಪರೀಕ್ಷೆ ಎಂದೇ ಪರಿಗಣಿಸುವಂಥ ಸವಾಲು. ಆ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ವಿಶ್ಲೇಷಣೆ ಇಲ್ಲಿದೆ. ಇದು ಸತ್ಯವೋ ಸುಳ್ಳೋ ಅಥವಾ ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂಬುದನ್ನು ತಿಳಿಯುವುದಕ್ಕೆ ಹೆಚ್ಚು ಸಮಯದ ಅಗತ್ಯವಿಲ್ಲ.

ಲೋಕಸಭೆ 2019 : ಬಿಜೆಪಿಯ ನಿದ್ದೆ ಕೆಡಿಸಲಿದೆ ಕಾಂಗ್ರೆಸ್ ನ ಹೊಸ ಕಾರ್ಯತಂತ್ರ! ಲೋಕಸಭೆ 2019 : ಬಿಜೆಪಿಯ ನಿದ್ದೆ ಕೆಡಿಸಲಿದೆ ಕಾಂಗ್ರೆಸ್ ನ ಹೊಸ ಕಾರ್ಯತಂತ್ರ!

ಕಳೆದ ವರ್ಷ ಡಿಸೆಂಬರ್ ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶದ ದಿನ ಅವರು ನುಡಿದ ಭವಿಷ್ಯದಿಂದ ಭಾರೀ ಚರ್ಚೆಗೆ ಕಾರಣರಾದರು. ಆ ನಂತರ ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ಬಹಳ ಮುಂಚಿತವಾಗಿ ಕರಾರುವಾಕ್ ‌ಭವಿಷ್ಯ ನುಡಿದವರು ಉಡುಪಿ ಜಿಲ್ಲೆ, ಕಾಪುವಿನ ಪ್ರಕಾಶ್ ಅಮ್ಮಣ್ಣಾಯ. ಇದೀಗ ಅವರೇ ಐದು ರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ಒನ್ ಇಂಡಿಯಾ ಕನ್ನಡದ ಜತೆ ಮಾತನಾಡಿದ್ದಾರೆ.

ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆ

ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆ

ಐದು ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ತಾನ, ಮಿಜೋರಾಂ, ತೆಲಂಗಾಣ ಹಾಗೂ ಛತ್ತೀಸ್ ಗಢ ವಿಧಾನಸಭಾ ಚುನಾವಣೆಯ ಫಲಿತಾಂಶವು ಕೇಂದ್ರ ಸರಕಾರಕ್ಕೆ ಆಶಾದಾಯಕವಾಗಿ ಕಾಣುವುದಿಲ್ಲ್. ಇನ್ನು ಇದನ್ನು ಮಿಶ್ರ ಫಲ ಎಂದು ಪರಿಗಣಿಸಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಹೇಳಬೇಕು ಅಂದರೆ ಈ ಫಲಿತಾಂಶವು ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆಯನ್ನೇ ಸೂಚಿಸುತ್ತದೆ.

ಜ್ಯೋತಿಷ್ಯ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ, ಎಚ್ ಡಿಕೆ ಸಿಎಂ ಜ್ಯೋತಿಷ್ಯ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ, ಎಚ್ ಡಿಕೆ ಸಿಎಂ

ವಿರೋಧ ಪಕ್ಷಗಳಿಗೆ ಉಸಿರು ಬಂದಂತಾಗುತ್ತದೆ

ವಿರೋಧ ಪಕ್ಷಗಳಿಗೆ ಉಸಿರು ಬಂದಂತಾಗುತ್ತದೆ

ಇನ್ನು ಈ ಫಲಿತಾಂಶದಿಂದ ವಿರೋಧ ಪಕ್ಷಗಳಿಗೆ ಉಸಿರು ಬಂದಂತಾಗುತ್ತದೆ. ಆದರೆ ಅದರಿಂದ ಉದ್ಭವಿಸುವ ಅತಿಯಾದ ವಿಶ್ವಾಸವು ಲೋಕಸಭೆ ಚುನಾವಣೆಗೆ ಮಾರಕವಾಗುತ್ತದೆ. ಈ ಐದು ರಾಜ್ಯಗಳ ಚುನಾವಣೆ ಫಲಿತಾಂಶದಿಂದ ವಿರೋಧ ಪಕ್ಷಗಳಲ್ಲಿರುವ ಮೈತ್ರಿ ಕೂಟಗಳಲ್ಲೇ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಬಿಜೆಪಿಗೆ ಹಿನ್ನಡೆಯು ಗೋಚರಿಸುತ್ತದೆ.

ಲೋಕಸಭಾ ಚುನಾವಣೆಯೊಟ್ಟಿಗೆ 7 ರಾಜ್ಯಗಳ ವಿಧಾನಸಭೆ ಚುನಾವಣೆ?ಲೋಕಸಭಾ ಚುನಾವಣೆಯೊಟ್ಟಿಗೆ 7 ರಾಜ್ಯಗಳ ವಿಧಾನಸಭೆ ಚುನಾವಣೆ?

ಮುಂದಿನ ಚುನಾವಣೆಗೆ ಪಾಠವಾಗಲಿದೆ

ಮುಂದಿನ ಚುನಾವಣೆಗೆ ಪಾಠವಾಗಲಿದೆ

ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲಬಹುದು. ಉಳಿದೆಡೆ ಸಮ್ಮಿಶ್ರ ಸರಕಾರ ಮಾಡುವಂತಾದೀತು. ಅಲ್ಲಿಯೂ ಬಿಜೆಪಿ ಸಮ್ಮಿಶ್ರ ಸರಕಾರ ರಚನೆ ಮಾಡಬಹುದು. ಡಿಸೆಂಬರ್ ಹನ್ನೊಂದರಂದು ಯೋಗಕಾರಕನಾಗಿ ರವಿಯು ಅಷ್ಟಮದಲ್ಲಿ ಇರುವುದು ಸೋತರೂ ಲಾಭವಾಗುವುದನ್ನು ಸೂಚಿಸುತ್ತದೆ. ನೈಸರ್ಗಿಕವಾಗಿ ಮೇಷ ಲಗ್ನಕ್ಕೆ ಶನಿಯು ಧನುರಾಶಿ ನವಮದಲ್ಲಿ ಬಲಿಷ್ಠನೇ. ಆದರೂ ಈ ಸಲದ ಚುನಾವಣೆಗಳು ಬಿಜೆಪಿಯೊಳಗಿನ ಸಹಮತದ ಪ್ರಯತ್ನದ್ದಲ್ಲ. ಆದರೆ ಮುಂದಿನ ಚುನಾವಣೆಗೆ ಪಾಠವಂತೂ ಆಗುತ್ತದೆ.

ಎಬಿಪಿ ನ್ಯೂಸ್ ಸಮೀಕ್ಷೆ: ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಹವಾಎಬಿಪಿ ನ್ಯೂಸ್ ಸಮೀಕ್ಷೆ: ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಹವಾ

2019ರ ಫೆಬ್ರವರಿ ನಂತರ ಉತ್ತಮ ಫಲ

2019ರ ಫೆಬ್ರವರಿ ನಂತರ ಉತ್ತಮ ಫಲ

ಫೆಬ್ರವರಿವರೆಗೆ ದೇಶದ ಯಜಮಾನ ಪೀಠದಲ್ಲಿರುವ ಮೋದಿ ಅವರ ಚಂದ್ರ ದಶೆಯಲ್ಲಿ ಅವರ ಜನನ ಲಗ್ನದ ಅಷ್ಟಮಾಧಿಪ ಬುಧ ಭುಕ್ತಿ, ಖರದ್ರೇಕ್ಕಾಣಾಧಿಪನೂ, ದಶಾಧಿಪ ಚಂದ್ರನಿಗೆ ಪ್ರತ್ಯರ ತಾರೆಯಲ್ಲಿ ಇರುವ ಬುಧ ಭುಕ್ತಿಯೂ ಆಗಿರುವುದರಿಂದ ಉತ್ತಮ ಫಲ ಎಂದು ಹೇಳಲಾಗದು. 2019ರ ಫೆಬ್ರವರಿ ನಂತರ ಉತ್ತಮ ಫಲವು ಮೋದಿ ಅವರಿಗಿದೆ.

ಉಪ ಚುನಾವಣೆ ಎಂದರೆ ಬಿಜೆಪಿ ಬೆಚ್ಚಿಬೀಳುವುದೇಕೆ? ಉಪ ಚುನಾವಣೆ ಎಂದರೆ ಬಿಜೆಪಿ ಬೆಚ್ಚಿಬೀಳುವುದೇಕೆ?

English summary
5 state assembly elections results predictions according to Vedic astrology by well known astrologer Udupi based Prakash Ammannaya. Rajasthan, Madhya Pradesh, Chhattisgarh, Mizoram and Telangana results will be announced on December 11th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X