ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Jupiter Transition In Capricorn: ಮಕರ ರಾಶಿಯಲ್ಲಿ ಗುರು ಸಂಚಾರ ದೋಷ ನಿವಾರಣೆಗೆ 5 ಪರಿಹಾರಗಳು

By ಪಂಡಿತ್ ಶ್ರೀ ಗಣೇಶ್ ಕುಮಾರ್
|
Google Oneindia Kannada News

ಮಕರ ರಾಶಿಯಲ್ಲಿ ಗುರು ಸಂಚಾರ ಹಾಗೂ ಅದೇ ರಾಶಿಯಲ್ಲಿ ಶನಿ- ಗುರು ಸಯೋಗದಿಂದ ದ್ವಾದಶ ರಾಶಿಗಳ ಮೇಲೆ ಏನು ಫಲ ಎಂಬುದನ್ನು ಈಗಾಗಲೇ ತಿಳಿಸಿದ್ದೇನೆ. ಇದೇ ನವೆಂಬರ್ ತಿಂಗಳ 20ನೇ ತಾರೀಕಿನಂದು ತನ್ನ ನೀಚ ಸ್ಥಾನವಾದ ಮಕರ ರಾಶಿಗೆ ಗುರು ಗ್ರಹದ ಪ್ರವೇಶ ಆಗುತ್ತಿದೆ. ಒಂದು ರಾಶಿಗೆ ಪ್ರವೇಶವಾದಲ್ಲಿ ಒಂದು ವರ್ಷಗಳ ಕಾಲ ಅಲ್ಲಿ ಗುರು ಸಂಚಾರ ಇರುತ್ತದೆ. ಈಗಾಗಲೇ ಈ ವರ್ಷದಲ್ಲಿ ಗುರು ಗ್ರಹ ಕೆಲ ಸಮಯ ಮಕರ ರಾಶಿಯಲ್ಲಿ ಸಮಯ ಕಳೆದಿದ್ದಾಗಿದೆ.

ಆದ್ದರಿಂದ ನವೆಂಬರ್ 20ರಿಂದ ಏಪ್ರಿಲ್ 5ನೇ ತಾರೀಕಿನ ತನಕ ಮಕರ ರಾಶಿಯಲ್ಲಿ ಸಂಚರಿಸುವ ಗುರು, ಆ ನಂತರ ಅಂದರೆ, ಏಪ್ರಿಲ್ ಆರನೇ ತಾರೀಕಿನಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲಿಂದ ಮತ್ತೆ ಸೆಪ್ಟೆಂಬರ್ 15ನೇ ತಾರೀಕು ಮಕರ ರಾಶಿಯನ್ನು ಪ್ರವೇಶಿಸಿ, ನವೆಂಬರ್ 20ರ ತನಕ ಇದೇ ರಾಶಿಯಲ್ಲಿ ಇರುತ್ತದೆ.

ಮಕರ ರಾಶಿಯಲ್ಲಿ ನ. 20ರಿಂದ ಗುರು ಸಂಚಾರ: ದ್ವಾದಶ ರಾಶಿಗಳಿಗೆ ಏನು ಫಲ?ಮಕರ ರಾಶಿಯಲ್ಲಿ ನ. 20ರಿಂದ ಗುರು ಸಂಚಾರ: ದ್ವಾದಶ ರಾಶಿಗಳಿಗೆ ಏನು ಫಲ?

ಎರಡೂ ಗ್ರಹಗಳು ಅದೇ ಸ್ಥಿತಿಯಲ್ಲಿ ಮತ್ತೆ ಹೀಗೆ ಒಟ್ಟಾಗಿರುವುದು ಅರವತ್ತು ವರ್ಷಗಳ ನಂತರ. ದೇಶದ ಆರ್ಥಿಕತೆಗೆ, ಅಭಿವೃದ್ಧಿಗೆ ಹಾಗೂ ಬೆಳವಣಿಗೆಗೆ ಇದು ಪೂರಕವಲ್ಲ. ಇನ್ನು ದೇಶದ ಪ್ರಮುಖ ನಾಯಕರ ಆರೋಗ್ಯ, ಆಯುಷ್ಯಕ್ಕೂ ಕೇಡು ತರುವಂಥ ಸಮಯ ಇದು.

5 Solution To Ill Effect Of Jupiter Transition In Capricorn

ಗೋಚಾರದಲ್ಲಿ ಎರಡು, ಐದು, ಏಳು, ಒಂಬತ್ತು ಹಾಗೂ ಹನ್ನೊಂದನೇ ಮನೆಯಲ್ಲಿ ಗುರು ಸಂಚಾರ ಮಾಡುವಾಗ ಸಾಮಾನ್ಯವಾಗಿ ಶುಭ ಫಲ ನೀಡುತ್ತದೆ. ಆದರೆ ಈ ಬಾರಿ ಇರುವುದೇ ನೀಚ ಕ್ಷೇತ್ರದಲ್ಲಿ. ಆದ್ದರಿಂದ ಅಷ್ಟೇನೂ ಶುಭ ಫಲ ನೀಡುವುದಿಲ್ಲ. ಅದರಲ್ಲೂ ಗುರು ಜನ್ಮ, ಆರು, ಎಂಟು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವ ರಾಶಿಗಳವರು ಮತ್ತೂ ಎಚ್ಚರಿಕೆಯಿಂದ ಇರಬೇಕು.

ಮಿಥುನ, ಸಿಂಹ, ಮಕರ ಹಾಗೂ ಕುಂಭ ರಾಶಿಯವರು ಕಡ್ಡಾಯವಾಗಿ ಜಾತಕ ಪರಿಶೀಲನೆ ಮಾಡಿಸಿಕೊಳ್ಳಿ. ಇನ್ನು ಐದು ಪರಿಹಾರಗಳಲ್ಲಿ ಒಂದು ಅಥವಾ ನಿಮ್ಮಿಂದ ಸಾಧ್ಯವಾದದ್ದನ್ನು ಮಾಡಿಸಿಕೊಳ್ಳಿ.

* ಮನೆಯಲ್ಲಿ ಗುರು ಅಷ್ಟೋತ್ತರ ಪಠಣ ಮಾಡಬೇಕು.

* ಹಳದಿ ಬಟ್ಟೆಯಲ್ಲಿ ಕಡಲೇಕಾಳು ಕಟ್ಟಿ, ವೀಳ್ಯದೆಲೆ, ಅಡಿಕೆ ಹಾಗೂ ದಕ್ಷಿಣೆ ಸಹಿತವಾಗಿ ಬ್ರಾಹ್ಮಣರಿಗೆ ದಕ್ಷಿಣೆ ನೀಡಬೇಕು.

* ಜಾತಕವನ್ನು ಪರಿಶೀಲನೆ ಮಾಡಿಸಿದ ನಂತರ ಕನಕ ಪುಷ್ಯರಾಗ ರತ್ನವನ್ನು ಧಾರಣೆ ಮಾಡಬಹುದು.

*ನೀವು ನಡೆದುಕೊಳ್ಳುವ ಗುರುಗಳಿಗೆ, ಉದಾಹರಣೆಗೆ ರಾಘವೇಂದ್ರ ಸ್ವಾಮಿ, ಶೃಂಗೇರಿ ಶಂಕರಾಚಾರ್ಯರು ಸೇರಿದಂತೆ ಸಾಯಿಬಾಬ ಮತ್ಯಾವುದೇ ಗುರುಗಳಿಗೆ ವಸ್ತ್ರ ಸಮರ್ಪಣೆಯನ್ನು ಮಾಡಬೇಕು.

* ಇನ್ನು ತೀರ್ಥ ಕ್ಷೇತ್ರ ದರ್ಶನ. ಅಂದರೆ ಗಾಣಾಘಾಪುರ, ಮಂತ್ರಾಲಯ, ಶೃಂಗೇರಿ, ಶಿರಡಿ ಸೇರಿದಂತೆ ಗುರುಗಳ ಸನ್ನಿಧಾನದಲ್ಲಿ ದರ್ಶನ ಪಡೆದು, ಸೇವೆ ಸಲ್ಲಿಸಬೇಕು. ಅಥವಾ ಗುರು ಜಪ ಸಹಿತ ಹವನ ಮಾಡಬಹುದು.

ಈ ಪೈಕಿ ಯಾವುದನ್ನು ನೀವು ಮಾಡಬೇಕು ಎಂದು ತಿಳಿದುಕೊಳ್ಳುವುದಕ್ಕೆ ವೈಯಕ್ತಿಕವಾಗಿ ಭೇಟಿಯಾಗಿ.

ವೈಯಕ್ತಿಕ ಭೇಟಿಗಾಗಿ ಸಂಪರ್ಕಿಸಿ

ಪಂಡಿತ್ ಶ್ರೀ ಗಣೇಶ್ ಕುಮಾರ್

ಭಾರತೀಯ ಪ್ರಖ್ಯಾತ ಜ್ಯೋತಿಷಿಗಳು.

ಶ್ರೀ ಪಂಚಮುಖಿ ಜೋತಿಷ್ಯಂ

ಮೈಸೂರು ಸರ್ಕಲ್ (ಶಿರ್ಸಿ ಸರ್ಕಲ್), ಚಾಮರಾಜಪೇಟೆ, ಬೆಂಗಳೂರು. ಮೊ. 98805 33337

English summary
Jupiter entering Capricorn on November 20, 2020. Here is the 5 solution to ill effect of Jupiter transition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X