ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಹಿಣಿಯಂತೆ ಪ್ರೀತಿಸಿ, ಮಹಾರಾಣಿಯಂತೆ ಬದುಕಿರಿ

By * ಧವಳ
|
Google Oneindia Kannada News

Love compatibility astrology
ಇಡೀ ಜಗವೇ ಪ್ರೀತಿ ಎನ್ನುವ ಎರಡಕ್ಷರದ ಮೇಲೆ ನಿಂತಿದೆ. ಅಷ್ಟಕ್ಕೂ ಪ್ರೀತಿ ಹುಟ್ಟಿದ್ದಾದರೂ ಎಲ್ಲಿಂದ? ಎಂಬ ಪ್ರಶ್ನೆಗೆ ಉತ್ತರ ಯಾರಿಗಾದರೂ ಗೊತ್ತಿದೆಯಾ? ಗೊತ್ತಿದ್ದರೆ ದಯವಿಟ್ಟು ತಿಳಿಸಿ, ಪ್ಲೀಸ್. ಅಂದ ಹಾಗೆ, ಪ್ರೀತಿ ಹುಟ್ಟಿದ್ದು ಚೀನಾದಲ್ಲಿ ಎಂಬ ಜೋಕೂ ಇದೆ. ಯಾಕೆಂದರೆ, ಪ್ರೀತಿಗೆ ಗ್ಯಾರಂಟಿ ಮತ್ತು ವಾರಂಟಿ ಎರಡೂ ಇರುವುದಿಲ್ಲವಲ್ಲ, ಅದಕ್ಕಾಗಿ! ಎಂಗೆ?

ಕರ್ಕಾಟಕ ರಾಶಿ ಪುರುಷ - ಸಿಂಹ ರಾಶಿ ಸ್ತ್ರೀ : ಇವರಿಬ್ಬರು ಮದುವೆಯಾದರೆ ಸ್ತ್ರೀ ಮಹಾರಾಣಿಯಂತೆ ಇರಬೇಕೆಂದು ಬಯಸುತ್ತಾಳೆ. ಗಂಡನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ಬಯಸುತ್ತಾಳೆ. ಕರ್ಕಾಟಕ ರಾಶಿ ಪುರುಷರು ಪ್ರೇಮಮಯ ಹೃದಯವನ್ನು ಹೊಂದಿರುತ್ತಾರೆ. ಆತ ತನ್ನ ಪತ್ನಿಯನ್ನು ಪ್ರಾಮಾಣಿಕ ಮನದಿಂದ ಪ್ರೀತಿಸುತ್ತಾರೆ. ಸಿಂಹ ರಾಶಿ ಸ್ತ್ರೀಗೂ ಸಹ ತನ್ನ ಸಂಗಾತಿಯ ಬಗ್ಗೆ ಅಪಾರವಾದ ಪ್ರೀತಿ ಇರುತ್ತದೆ. ಇಬ್ಬರು ತಮ್ಮ ಬಾಳು ಬಂಗಾರವಾಗಿ ಇರಬೇಕು ಎಂದು ಬಯಸುವ ಮನದವರು.

ಅಷ್ಟೆ ಅಲ್ಲದೆ ಬದುಕನ್ನು ಎಷ್ಟು ಪ್ರೀತಿಸಿದರೆ ಅಷ್ಟು ಉತ್ತಮ ಜೀವನ ತಮ್ಮದಾಗುತ್ತದೆ ಎಂದು ಬಲ್ಲ ಜೋಡಿ ಇವರು. ತಮ್ಮ ಸಂಸಾರ ನೂರ್ಕಾಲ ಹೀಗೆ ಸುಖ-ಸಂತೋಷದಿಂದ ಇರಬೇಕು ಎಂದು ಬಯಸುವ ಮನಸ್ಥಿತಿಯನ್ನು ಇವರಿಬ್ಬರೂ ಹೊಂದಿರುತ್ತಾರೆ. ಒಬ್ಬರನೊಬ್ಬರು ಬಿಟ್ಟು ಹೋಗಬೇಕು ಎನ್ನುವ ಸಂಗತಿಯನ್ನು ಕನಸು-ಮನಸಿನಲ್ಲೂ ಬಯಸರು. ಎಲ್ಲಿ ಅಂತಹ ಮನಸ್ಥಿತಿ ಇರುತ್ತದೆಯೋ ಅಲ್ಲಿ ಯಾವುದೇ ಬಗೆಯ ಅವಘಡ ನಡೆಯದು. ಇಬ್ಬರು ಎಂತಹ ಪರಿಸ್ಥಿತಿ ಬಂದ್ರೂ ಹೊಂದಿಕೊಂಡು ಬಾಳುತ್ತಾರೆ. ಒಬ್ಬರನ್ನೊಬ್ಬರು ಪ್ರೀತಿಸಿ ಬದುಕುತ್ತಾರೆ.

ಕರ್ಕಾಟಕ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ಹೆಣ್ಣಿನ ಮನಸ್ಸು ಅರಿತವರು ಯಾರಿದ್ದಾರೆ ಎನ್ನುವ ಮಾತು ನಾವು ಪುರಾಣ-ಪುಣ್ಯ ಕಥೆಯಲ್ಲಿ ಮಾತ್ರವಲ್ಲ ಇತಿಹಾಸದಿಂದ ಪ್ರಸ್ತುತ ಕಾಲದವರೆಗೂ ಓದುತ್ತಲೇ ಬಂದಿದ್ದೇವೆ. ಅದೇ ರೀತಿ ಈ ಹೆಣ್ಣಿನ ಮನವನ್ನು ಅರಿಯುವ ಕೆಲಸ ಹುಟ್ಟಿಸಿದ ದೇವರಿಗೆ ಸಾಧ್ಯ ಇಲ್ಲವೇನೋ. ಎಲ್ಲಾ ವಿಷಯದಲ್ಲೂ ಓಕೆ ಆಗಿರುವ ಕರ್ಕಾಟಕ ರಾಶಿ ಸ್ತ್ರೀಗೆ ಆಗಾಗ ಒಂಟಿಯಾಗಿ ಇರಬೇಕು ಎನ್ನುವ ಮನಸ್ಥಿತಿ ಉಂಟಾಗುತ್ತದೆಯಂತೆ. ಹಾಗೆ ಒಂಟಿಯಾಗಿ ಮೂಲೆ ಸೇರಿದಾಗ ಅವರಿಗೆ ಅವರೇ ಪ್ರಪಂಚ. ಇನ್ಯಾವುದರ ಬಗ್ಗೆ ಅರಿವು ಇರಲ್ಲ. ಇಂತಹ ವಿಚಿತ್ರ ಎಲ್ಲಾದರು ಕಂಡಿದ್ದೀರಾ? ಒಂಟಿ ಮನಸು ಸೈತಾನನ ಕಾರಗಾರ ಎಂದು ಹೇಳ್ತಾರೆ. ಆದರೆ ಈಕೆಯ ವಿಷಯದಲ್ಲಿ ಹಾಗಲ್ಲ, ಒಂಟಿಯಾಗಿ ಇದ್ದಷ್ಟು ಕಾಲ ಭವಿಷ್ಯದ ಬಗ್ಗೆ ಯೋಚಿಸುತ್ತಲೇ ಇರ್ತಾಳಂತೆ.

ಮತ್ತೊಂದು ವಿಚಿತ್ರ ಏನು ಗೊತ್ತೇ, ಈ ಜೋಡಿ ಬೆಳಿಗ್ಗೆ ಆದ ತಕ್ಷಣ ಜಗಳಕ್ಕೆ ನಿಲ್ತಾರೆ. ಆದರೆ ರಾತ್ರಿ ಆದಂತೆ ಒಟ್ಟಾಗಿ ಬಾಳ್ತಾರೆ. ಪ್ರಾಯಶಃ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಇವರನ್ನು ನೋಡೇ ಹಿಂದಿನ ಕಾಲದಲ್ಲಿ ರಚಿತವಾಗಿರಬೇಕು ಎಂದು ಕಾಣುತ್ತದೆ. ಏನೇ ಇರಲಿ ಜಗಳದಿಂದ ಸಂಬಂಧಗಳು ಹಾಳಾಗುತ್ತದೆಯೇ ವಿನಃ ಯಾವುದೇ ಬಗೆಯ ಪ್ರಯೋಜನ ಇರದು. ಆ ಸಂಗಾತಿಯನ್ನು ಅರಿತರೆ ಜೀವನ ಸುಂದರ ರಮ್ಯಲೋಕ ಆಗುತ್ತದೆ. ಯೋಚಿಸಿ ನಿಮ್ಮ ಬದುಕು ನಿಮ್ಮ ಕೈಲೆ ಇದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)

English summary
Love is the only force which can bind married or unmarried couple for ever. Love compatibility astrology of cancer - virgo couple and cancer - leo couple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X