ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಗ್ರಹಗಳಲ್ಲಿ ಒಂದಾದ ಶನಿದೇವರ ಮಹಾತ್ಮೆ

|
Google Oneindia Kannada News

Lord Saturn
ನವಗ್ರಹಗಳಲ್ಲಿ ಒಂದಾದ ಶನಿದೇವರ ಬಗ್ಗೆ ತಿಳಿಸುವ ಸಣ್ಣ ಪ್ರಯತ್ನ ಈ ಲೇಖನದ ಮೂಲಕ:

ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಿವ್ಯ ನವಗ್ರಹಗಳಲ್ಲಿ ಒಂದು ಶನಿ. ಛಾಯಾದೇವಿ ಮತ್ತು ಸೂರ್ಯ ದೇವರ ಪುತ್ರನೇ ಶನಿಮಹಾರಾಜ. ಹಿಂದೂ ಸಂಪ್ರದಾಯದ ಪ್ರಕಾರ ಶನಿ ಯಮದೇವರ ಹಿರಿಯ ಸಹೋದರ. ಸೂರ್ಯದೇವರ ಇಬ್ಬರು ಪುತ್ರರಾದ ನ್ಯಾಯದೇವರಂದೇ ಹೇಳಲಾಗುವ ಯಮ ಮತ್ತು ಶನಿ ಜೀವಿತಕಾಲದಲ್ಲಿ ಮತ್ತು ಮರಣಾನಂತರ ಅವರವರು ಮಾಡಿದ ತಪ್ಪಿಗೆ ಶಿಕ್ಷೆ ನೀಡುತ್ತಾನೆ.

ಶನಿದೇವರು ಸೂರ್ಯನನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಲು 30 ವರ್ಷ ತೆಗೆದುಕೊಳ್ಳುತ್ತಾನೆ. ಶನಿ ಕಪ್ಪು ಬಣ್ಣದವನಾಗಿದ್ದು ಸುಂದರರೂಪಿಯಾಗಿದ್ದು, ಕಾಲಭೈರವನನ್ನು ಪೂಜಿಸುವವನಾಗಿದ್ದಾನೆ. ಮನುಷ್ಯನ ಜೀವಿತಾವಧಿಯಲ್ಲಿ ಮೂರು ಬಾರಿ ಪ್ರವೇಶ ಮಾಡುತ್ತಾನೆ ಎನ್ನುವುದು ಜ್ಯೋತಿಷ ಶಾಸ್ತ್ರ.

ಪುಂಗುಶನಿ, ಮಂಕುಶನಿ ಮತ್ತು ಕಟ್ಟಕಡೆಯ ಬಾರಿಗೆ ಮರಣಶನಿಯ ರೂಪದಲ್ಲಿ ಶನೀಶ್ಚ್ವರ ಪ್ರವೇಶವಾಗುತ್ತಾನೆ. ಪುಂಗುಶನಿ ಒಳ್ಳೆದನ್ನು, ಮಂಕುಶನಿ ಮತ್ತು ಮರಣಶನಿ ಕೆಟ್ಟದನ್ನು ಮಾಡುತ್ತಾನೆ, ಆದರೆ ಇದೆಲ್ಲಾ ಮನುಷ್ಯನ ಜನ್ಮಕುಂಡಲಿ ಮತ್ತು ಹಿಂದಿನ ಜನ್ಮದ ಪಾಪದ ಫಲಕ್ಕೆ ಅನುಗುಣವಾಗಿ ಶನಿ ಒಳ್ಳೆದು, ಕೆಟ್ಟದನ್ನು ಮಾಡುತ್ತಾನೆ ಎನ್ನುತ್ತೆ ಜ್ಯೋತಿಷ್ಯ.

ರಾಮಾಯಣದಲ್ಲಿ ಬರುವ ಕಥೆಯಂತೆ ಆಂಜನೇಯ ಪರಮಭಕ್ತರಿಗೆ ಶನಿಕಾಟ ವಿರುವುದಿಲ್ಲ. ರಾವಣನ ಬಿಗಿ ಹಿಡಿತದಿಂದ ಆಂಜನೇಯ ಶನಿಯನ್ನು ರಕ್ಷಿಸಿದ ಎಂದು ಒಂದು ಕಡೆ ಹೇಳಿದರೆ, ಶನಿ ಮತ್ತು ಹನುಮಂತನ ನಡುವೆ ಜಟಾಪಟಿ ನಡೆದಾಗ ಶನಿ ಹನುಮಂತನ ಹೆಗಲೇರುತ್ತಾನೆ. ಆಗ ಹನುಮಂತ ಬೆಟ್ಟದಾಕಾರವಾಗಿ ಬೆಳೆದಾಗ ಶನಿ ಅವನ ತೋಳುಗಳ ನಡುವೆ ಸಿಲುಕಿ ನರಳುತ್ತಿದ್ದಾಗ ಹನುಮಂತ ಅವನನ್ನು ಕಷ್ಟದಿಂದ ಪಾರು ಮಾಡುತ್ತಾನೆ. ಹಾಗಾಗಿ ಶನಿಗೆ ಹನುಮಂತನ ಮೇಲೆ ಕೃತಜ್ಞತೆ.

ಶನಿಯನ್ನು ಸಂತೃಪ್ತಿ ಪಡಿಸುವ ಮಾರ್ಗಗಳು ಯಾವುವು? ಮುಂದೆ ಓದಿ...

English summary
Shani is one of the Navagraha, and is embodied in the planet Saturn and is the Lord of Saturday.The word Shani also denotes the seventh day or Saturday in most Indian languages. Shani takes about 30 years to revolve around the Sun. Shani is also known as Shanaishchara,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X