ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮ ಜೀವನದ ಸುಧಾರಣೆಗೆ ಬೆಡ್ ರೂಮ್ ಗೆ 10 ವಾಸ್ತು ಸಲಹೆ

By ಪಂಡಿತ್ ಶಂಕರ್
|
Google Oneindia Kannada News

ಉದ್ಯೋಗ, ಸಂಬಂಧ ಹೀಗೆ ಜೀವನದಲ್ಲಿ ಪದೇಪದೇ ಹೊಡೆತ ಬೀಳ್ತಿದೆ ಅಂತನ್ನಿಸಿದರೆ ಯೋಚನೆ ಶುರುವಾಗುತ್ತದೆ. ಪ್ರೀತಿ ಹಾಗೂ ಸಮಯ ನೀಡದಿದ್ದರೆ ಯಾವ ಸಂಬಂಧವಾದರೂ ಉಸಿರಾಡುವುದು ಕಷ್ಟ. ಅಂಥ ಸಂದರ್ಭದಲ್ಲೇ ದೇವರ ಮೊರೆ ಹೋಗ್ತೀರಿ. ಆಧ್ಯಾತ್ಮಿಕ ಸಲಹೆಗಾರರ ಬಳಿಯೂ ತೆರಳುತ್ತೀರಿ.

ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ?ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ?

ಆದರೆ, ನಿಮ್ಮ ಸಮಸ್ಯೆಗೆ ಉತ್ತರ ಮನೆಯಲ್ಲೇ ಇದೆ. ಹೌದು, ನಿಮ್ಮ ಮನೆಯು ವಾಸ್ತು ಪ್ರಕಾರ ಇದ್ದರೆ ಅದರಲ್ಲೇ ಪರಿಹಾರ ಸಿಕ್ಕುತ್ತದೆ. ಸರಿಯಾದ ವಾಸ್ತು ಇರುವ ಮನೆಯಿಂದ ಸಕಾರಾತ್ಮಕ ಪರಿಣಾಮ ಆಗುತ್ತದೆ. ಒಳ್ಳೆ ಅದೃಷ್ಟ ಹಾಗೂ ಸಂತೋಷ ತರುತ್ತದೆ. ನಿಮ್ಮ ಪ್ರೇಮ ಬದುಕಿನ ಸಮಸ್ಯೆಗಳಿಗೂ ಅದರಲ್ಲೇ ಉತ್ತರವಿದೆ.

ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ?ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ?

ಪ್ರೇಮ ಬದುಕನ್ನು ಮತ್ತಷ್ಟು ಚಂದವಾಗಿಸಿಕೊಳ್ಳಲು ನಿಮ್ಮ ಕೋಣೆಯ ವಾಸ್ತುವನ್ನು ಬದಲಾಯಿಸಿಕೊಳ್ಳಿ. ಏಕೆಂದರೆ ಬಾಳಸಂಗಾತಿಯ ಜತೆಗೆ ಬಹಳ ಸಮಯವನ್ನು ಕಳೆಯುವ ಸ್ಥಳ ಇದೇ. ಬಾಳಸಂಗಾತಿಯ ಜತೆಗಿನ ಮನಸ್ತಾಪ ನಿವಾರಿಸಿಕೊಳ್ಳುವುದಕ್ಕೆ, ಪ್ರೀತಿ- ಪ್ರೇಮ ವಿಚಾರಗಳಲ್ಲಿ ಸಂತೋಷ ಕಾಣುವುದಿಕ್ಕೆ ಇಲ್ಲಿ ಕೆಲವು ವಾಸ್ತು ಸಲಹೆಗಳಿವೆ.

ಕನಿಷ್ಠ 90 ಡಿಗ್ರಿಯಷ್ಟು ಬಾಗಿಲು ತೆಗೆದಿರಲಿ

ಕನಿಷ್ಠ 90 ಡಿಗ್ರಿಯಷ್ಟು ಬಾಗಿಲು ತೆಗೆದಿರಲಿ

ಜೀವನದ ಅವಕಾಶವನ್ನು ಪ್ರತಿನಿಧಿಸುವ ಸಂಕೇತ ನಿಮ್ಮ ಮಲಗುವ ಕೋಣೆಯ ಬಾಗಿಲು. ಆದ್ದರಿಂದ ಸಕಾರಾತ್ಮಕ ಅವಕಾಶಗಳು ಪ್ರವೇಶ ಮಾಡಲು ಕನಿಷ್ಠ 90 ಡಿಗ್ರಿಯಷ್ಟು ಬಾಗಿಲು ತೆಗೆದಿರಬೇಕು. ಒಂದು ವೇಳೆ ಬಾಗಿಲು ತೆರೆಯದಿದ್ದರೆ ಅವಕಾಶಗಳು ಕೂಡ ನಿಂತುಹೋಗುತ್ತವೆ.

ನೆಮ್ಮದಿ ನೀಡುವ ವಸ್ತುಗಳಿರಲಿ

ನೆಮ್ಮದಿ ನೀಡುವ ವಸ್ತುಗಳಿರಲಿ

ಕೋಣೆಯೊಳಗೆ ಪ್ರವೇಶಿಸುತ್ತಿದ್ದ ಹಾಗೆ ಕಾಣುವ ಮೊದಲ ವಸ್ತು ಮನಸಿಗೆ ಶಾಂತಿ ಹಾಗೂ ನೆಮ್ಮದಿ ನೀಡುವಂತಿರಬೇಕು. ತುಂಬ ಚಂದದ ಫೋಟೋ ಅಥವಾ ಹೂವುಗಳನ್ನು ಕಣ್ಣಿಗೆ ಕಾಣುವಂತೆ ಇಡಿ.

ಬೇಡದ ವಸ್ತುಗಳನ್ನು ಹೊರಹಾಕಿ

ಬೇಡದ ವಸ್ತುಗಳನ್ನು ಹೊರಹಾಕಿ

ಪ್ರೇಮ ಜೀವನದಲ್ಲಿ ಶಾಂತಿ- ನೆಮ್ಮದಿ ನೆಲೆಸಬೇಕು ಅಂದರೆ ಮನೆಯಲ್ಲಿರುವ ಬೇಡದ ವಸ್ತುಗಳನ್ನು ಹೊರ ಹಾಕಿ. ಅದರಲ್ಲೂ ಮಂಚದ ಕೆಳಗೆ ಬೇಡದ ವಸ್ತುಗಳನ್ನು ಇಡಲೇಬೇಡಿ. ಇದರಿಂದ ಪದೇಪದೇ ಹಿಂದಿನ ಘಟನೆಗಳು ನೆನಪಾಗಿ, ಮಾನಸಿಕ ಕ್ಷೋಭೆ ಉಂಟಾಗುತ್ತದೆ.

ದಕ್ಷಿಣ ದಿಕ್ಕಿಗೆ ತಲೆ ಮಾಡಿ ಮಲಗಿ

ದಕ್ಷಿಣ ದಿಕ್ಕಿಗೆ ತಲೆ ಮಾಡಿ ಮಲಗಿ

ದಕ್ಷಿಣ ದಿಕ್ಕಿಗೆ ತಲೆ ಮಾಡಿ ಮಲಗಿ. ಏಕೆಂದರೆ ಉತ್ತರದಿಂದ ಸಕಾರಾತ್ಮಕವಾದ ಶಕ್ತಿ ಪ್ರವೇಶ ಆಗುತ್ತದೆ. ನಮ್ಮ ರಕ್ತದಲ್ಲಿರುವ ಕಬ್ಬಿಣದ ಅಂಶವು ಮ್ಯಾಗ್ನೆಟಿಕ್ ಶಕ್ತಿಯನ್ನು ಆಕರ್ಷಿಸುತ್ತದೆ.

ಕನ್ನಡಿ ನೇರವಾಗಿ ಕಾಣಬಾರದು

ಕನ್ನಡಿ ನೇರವಾಗಿ ಕಾಣಬಾರದು

ನಿಮ್ಮ ಮಂಚವೋ ಅಥವಾ ಹಾಸಿಗೆಯೋ ಕಾಲು ಮಾಡಿ ಮಲಗುವ ಜಾಗದಲ್ಲಿ ಗೋಡೆಯ ಮೇಲೆ ಕನ್ನಡಿಯನ್ನು ಹಾಕಬೇಡಿ. ಇದರಿಂದ ನಿದ್ದೆಗೆ ತೊಂದರೆ ಆಗುತ್ತದೆ. ನಿದ್ದೆ ಮಾಡುವ ಸಮಯದಲ್ಲಿ ನಿಮ್ಮ ಒತ್ತಡವೆಲ್ಲ ಹೊರಗೆ ಬರಬೇಕು. ಆದರೆ ಅಲ್ಲಿ ಕನ್ನಡಿ ಇದ್ದರೆ ಒತ್ತಡವನ್ನು ಹಿಡಿದಿಟ್ಟುಕೊಂಡು ಪ್ರತಿಫಲಿಸುತ್ತದೆ. ಒಂದು ವೇಳೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಅಂತಾದರೆ ರಾತ್ರಿ ಮಲಗುವ ಮುನ್ನ ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಿ.

ಮೂಲೆಗೆ ಒತ್ತಿಕೊಂಡಂತೆ ಮಲಗಬಾರದು

ಮೂಲೆಗೆ ಒತ್ತಿಕೊಂಡಂತೆ ಮಲಗಬಾರದು

ಕೋಣೆಯಲ್ಲಿನ ಮೂಲೆಗಳಿಗೆ ಒತ್ತಿಕೊಂಡಂತೆ ಮಲಗಬಾರದು. ನಿಮ್ಮಲ್ಲಿನ ಶಕ್ತಿಗೆ ಅದು ತಡೆಯೊಡ್ಡುತ್ತದೆ. ಈ ರೀತಿ ಮೂಲೆಗಳಿರುವ ಅಂದರೆ ಚೂಪು-ಚೂಪೆನಿಸಿದ ಮೂಲೆಗಳ ಅಡ್ಡ ಪರಿಣಾಮದಿಂದ ತಪ್ಪಿಸಿಕೊಳ್ಳಬೇಕು ಅಂದರೆ ಅವುಗಳ ಮುಂದೆ ಗಿಡಗಳನ್ನು ಇಡಿ.

ಬಾಗಿದಂತಿರುವ ಛಾವಣಿ ಕೆಳಗೆ ಮಲಗಬೇಡಿ

ಬಾಗಿದಂತಿರುವ ಛಾವಣಿ ಕೆಳಗೆ ಮಲಗಬೇಡಿ

ಕಬ್ಬಿಣದ ಕಂಬ (ಬೀಮ್ ಗಳು) ಕಾಣುವಂತೆ ಇರುವ ಕಡೆ ಅಥವಾ ಬಾಗಿದಂತಿರುವ ಛಾವಣಿ ಇರುವ ಕೆಳಗೆ ಮಲಗಬಾರದು. ಇದರಿಂದ ನೆಮ್ಮದಿ ಪಡೆಯುವುದು ಕಷ್ಟ. ಒಂದು ವೇಳೆ ಇಂಥ ಸಮಸ್ಯೆಯಿದ್ದಲ್ಲಿ ಅಲ್ಲೊಂದು ಗಂಟೆ ಕಟ್ಟಬೇಕು.

ಒಳ್ಳೆ ಆಲೋಚನೆ ಮಾಡಿ

ಒಳ್ಳೆ ಆಲೋಚನೆ ಮಾಡಿ

ನೀವು ಮಲಗುವ ಕೋಣೆಯಲ್ಲಿ ಇರುವಾಗ ಒಳ್ಳೆ ಆಲೋಚನೆಗಳಷ್ಟೇ ಮಾಡಿ. ಏಕೆಂದರೆ ಈ ಸ್ಥಳವು ನೆಮ್ಮದಿ ಹಾಗೂ ಸಂತೋಷದ ಆವಾಸ ಇದ್ದಂತೆ.

ಬೇಸರವಿದ್ದಾಗ ಅಲ್ಲಿರಬೇಡಿ

ಬೇಸರವಿದ್ದಾಗ ಅಲ್ಲಿರಬೇಡಿ

ನಿಮಗೆ ಸಿಟ್ಟೋ ಕೋಪವೋ ಅಸಮಾಧಾನವೋ ಒತ್ತಡವೋ ಇದ್ದಾಗ ಮಲಗುವ ಕೋಣೆಯಲ್ಲಿ ಇರಬೇಡಿ. ಏಕೆಂದರೆ ಪ್ರೀತಿ-ಪ್ರೇಮ ಹಾಗೂ ಸಂತೋಷದ ಬಗ್ಗೆ ಯೋಚನೆ ಮಾಡಲು ಮಾತ್ರ ಇದು ಸರಿಯಾದ ಸ್ಥಳ.

ಶುದ್ಧ ಹಾಗೂ ಸ್ವಚ್ಛವಾಗಿರಲಿ

ಶುದ್ಧ ಹಾಗೂ ಸ್ವಚ್ಛವಾಗಿರಲಿ

ಧೂಳಿನಿಂದ ಕೂಡಿದ ಕೋಣೆಯು ಸಂಬಂಧದಲ್ಲಿನ ಅಸಮಾಧಾನವನ್ನು ಸೂಚಿಸುತ್ತದೆ. ಆದ್ದರಿಂದ ಸ್ವಚ್ಛವಾಗಿಟ್ಟುಕೊಳ್ಳಿ. ಸ್ವಚ್ಛ ಹಾಗೂ ಶುದ್ಧವಾಗಿಟ್ಟುಕೊಂಡ ಕೋಣೆಯಿಂದ ಪ್ರೇಮ ಸಂಬಂಧದಲ್ಲಿ ನೆಮ್ಮದಿ- ತೃಪ್ತಿ ಇರುತ್ತದೆ.

English summary
Some times due to unfavourable vastu of your bedroom results into the quarrels and bad relationship with your spouse. Here are some Vastu Tips to improve your love life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X