ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿಂದ ಬಂದವು ಕುರಿ, ಗೂಳಿ, ಸಿಂಹ, ಮೀನ?

By * ಗೋವಿಂದ ರಾವ್ ವಿ. ಅಡಮನೆ
|
Google Oneindia Kannada News

Learn about zodiac signs
ಈಜಿಪ್ಟಿನವರು ಕುರಿ ಗೂಳಿ ಮುಂತಾದ ಹೆಸರುಗಳನ್ನು ಏಕೆ ಆಯ್ಕೆ ಮಾಡಿದರು ಅನ್ನುವುದಕ್ಕೂ ಸ್ವಾರಸ್ಯಕರವಾದ ವಾದ ಒಂದಿದೆ – ಈಗಿನ ಮಾರ್ಚ್ 21ರಿಂದ ಎಪ್ರಿಲ್ 21 – ಈಜಿಪ್ಟಿನಲ್ಲಿ ಕುರಿಗಳು ಮರಿ ಹಾಕುವ ಕಾಲ, ಆದ್ದರಿಂದ ಇದು ಮೇಷ ಮಾಸ. ತದನಂತರದ ತಿಂಗಳು ಈಜಿಪ್ಟಿನ ರೈತರು ಗೂಳಿಗಳನ್ನು ಉಪಯೋಗಿಸಿ ಭೂಮಿ ಉಳುವ ಕಾಲ, ಆದ್ದರಿಂದ ಅದು ವೃಷಭ ಮಾಸ. ಮುಂದಿನ ತಿಂಗಳು ಈಜಿಪ್ಟಿನವರಿಗೆ ಬಲು ಪ್ರಿಯವಾಗಿದ್ದ ಮೇಕೆಗಳು ಬಹಳವಾಗಿ ಅವಳಿಜವಳಿ ಮರಿಗಳನ್ನು ಹಾಕುತ್ತಿದ್ದ ಕಾಲ, ಆದ್ದರಿಂದ ಅದು ಮಿಥುನ ಮಾಸ. ತದನಂತರದ ಮಾಸದಲ್ಲಿ ಸೂರ್ಯನ ದಕ್ಷಿಣಾಭಿಮುಖ ಪಯಣ ಆರಂಭ, ಹಿಂದಕ್ಕೆ ತೆವಳಿಕೊಂಡು ನಡೆಯುವ ಏಡಿಯ ಚಲನೆಗೂ ಇದಕ್ಕೂ ಅವರಿಗೆ ಸಾಮ್ಯ ಗೋಚರಿಸಿದ್ದರಿಂದ ಅದು ಕರ್ಕಟಕ ಮಾಸ. ಆ ನಂತರದ ತಿಂಗಳು ಈಜಿಪ್ಟಿಗೆ ಉರಿಬಿಸಿಲಿನ ಕಾಲ. ಮರುಭೂಮಿಯ ಸಿಂಹಗಳು ನೀರಿಗೆಂದು ನೈಲ್ ನದಿ ದಂಡೆಗೆ ಬರುತ್ತಿದ್ದ ಕಾಲ ಅದಾದ್ದರಿಂದ ಸಿಂಹ ಮಾಸ. ಹೀಗೆ ಮುಂದುವರಿಯುತ್ತದೆ ಈ ವಾದ. ಈ ವಾದದ ತಿರುಳು – ಈಜಿಪ್ಟಿನವರು ತಮ್ಮ ನೆಲದಲ್ಲಿ ನಡೆಯತ್ತಿದ್ದ ನೈಸರ್ಗಿಕ ವಿದ್ಯಮಾನಗಳನ್ನು ಆಧರಿಸಿ ರಾಶಿಗಳಿಗೆ ನಾಮಕರಣ ಮಾಡಿದರೇ ವಿನಾ 'ದೈವೀಕ" ಕಾರಣಗಳಿಗಾಗಿ ಅಲ್ಲ.

ಇಂಗ್ಲಿಷ್ ಭಾಷೆಯ 'ಸ್ಟಾರ್" ಪದ ಯಾವ ಅರ್ಥದಲ್ಲಿ ಬಳಕೆ ಆಗುತ್ತಿದೆಯೋ ಆ ಅರ್ಥದಲ್ಲಿ ಭಾರತೀಯ ಪುರಾತನರು 'ನಕ್ಷತ್ರ" ಪದದ ಬಳಕೆ ಮಾಡುತ್ತಿರಲಿಲ್ಲ. ಭಾರತೀಯರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ನಕ್ಷತ್ರದ ಪರಿಕಲ್ಪನೆಯೇ ಇರುವಂತೆ ತೋರುತ್ತಿಲ್ಲ. ಸ್ವಗುರುತ್ವದಿಂದ ಗೋಲರೂಪ ತಳೆದಿರುವ ಸ್ವಪ್ರಕಾಶಕ ಬೃಹತ್ ಆಕಾಶಕಾಯಗಳನ್ನು ಉಲ್ಲೇಖಿಸಲು ಬಳಕೆ ಆಗುತ್ತಿರುವ ಆಂಗ್ಲ ಪದ 'ಸ್ಟಾರ್". ಇವು ತಮ್ಮ ಗರ್ಭದಲ್ಲಿ ಜರಗುವ ಬೈಜಿಕ ಸಮ್ಮಿಲನ ಕ್ರಿಯೆಗಳ ಪರಿಣಾಮವಾಗಿ ವಿದ್ಯುತ್ಕಾಂತೀಯ ವಿಕಿರಣಗಳನ್ನು (ದೃಗ್ಗೋಚರ ಬೆಳಕು ವಿದ್ಯುತ್ಕಾಂತೀಯ ರೋಹಿತದ ಒಂದು ಘಟಕ) ಹೊರಸೂಸುತ್ತವೆ. ಅನೂಹ್ಯ ದೂರದಲ್ಲಿ ಇರುವುದರಿಂದ ಬೆಳಕು ಬೀರುವ ಚುಕ್ಕಿಗಳಂತೆ ಇವು ರಾತ್ರಿಯ ವೇಳೆ ಗೋಚರಿಸುತ್ತವೆ. ಇವನ್ನು ನಕ್ಷತ್ರಗಳು ಅನ್ನುವುದಕ್ಕಿಂತ ತಾರೆಗಳು ಅನ್ನುವುದು ಸೂಕ್ತ.

ಸೌರಕಕ್ಷೆ ಆಧಾರಿತ ರಾಶಿಚಕ್ರದ ಪರಿಕಲ್ಪನೆಯನ್ನು ಗ್ರೀಕರಿಂದ ಎರವಲು ಪಡೆಯುವ ಮುನ್ನ ನಮ್ಮ ಪುರಾತನರು ಬಳಸುತ್ತಿದ್ದದ್ದು ಚಾಂದ್ರಕಕ್ಷೆ ಆಧಾರಿತ ನಕ್ಷತ್ರ ಚಕ್ರದ ಪರಿಕಲ್ಪನೆಯನ್ನು. ಇವರು ಚಾಂದ್ರಕಕ್ಷೆಯನ್ನು 27 ಸಮಖಂಡಗಳಾಗಿ ವಿಭಾಗಿಸಿ ಅವನ್ನು 'ನಕ್ಷತ್ರ"ಗಳು ಎಂದು ಕರೆದರು. ಪ್ರತೀ ನಕ್ಷತ್ರದ ವಿಸ್ತಾರ 13020". ಅಶ್ವಿನಿಯಿಂದ ಮೊದಲ್ಗೊಂಡು ರೇವತಿಯೊಂದಿಗೆ ಅಂತ್ಯವಾಗುವ 27 ನಕ್ಷತ್ರಗಳೇ ಈ ಖಂಡನಾಮಗಳು. ಪ್ರತೀ ಖಂಡದಲ್ಲಿ ಇದ್ದ ನಕ್ಷತ್ರಗಳ ಪೈಕಿ ಅಂದು ಸುಲಭವಾಗಿ ಗುರುತಿಸಬಹುದಾಗಿದ್ದ ತಾರೆಯೊಂದನ್ನು ಖಂಡಸೂಚಕವಾಗಿ ಆಯ್ದು ಅದಕ್ಕೆ ಆ ಖಂಡನಾಮವನ್ನೇ ಇಟ್ಟರು. ಅಶ್ವಿನಿ ಎಂದು ಗುರುತಿಸಲಾಗುತ್ತಿದ್ದ ತಾರೆಯು ಅಶ್ವಿನಿ ಎಂಬ ನಕ್ಷತ್ರವನ್ನು, ಅರ್ಥಾತ್ ಖಂಡವನ್ನು ಗುರುತಿಸಲು ಇದ್ದ ಸೂಚಕವೇ ವಿನಾ ಸ್ವತಂತ್ರ ತಾರೆಯಲ್ಲ ಎಂಬುದು ಗಮನಿಸಬೇಕಾದ ಅಂಶ. ಈ ತಾರೆಗಳ ಪೈಕಿ ಅನೇಕವನ್ನು 'ಬೆಳಕಿನ ಮಾಲಿನ್ಯ"ದಿಂದಾಗಿ ಇಂದು ಗುರುತಿಸುವುದು ಅತೀ ಕಷ್ಟ. ಅಂದ ಹಾಗೆ ಭಾರತೀಯ ಪೌರಾಣಿಕರ ಕಲ್ಪನೆಯಲ್ಲಿ ತಾರಾಪತಿ ಚಂದ್ರನಿಗೆ 27 ಜನ ಪತ್ನಿಯರು. ಚಂದ್ರನ ಅರಮನೆಯಲ್ಲಿ ಇವರಿಗೆ ತಲಾ ಒಂದರಂತೆ 27 ಕೊಠಡಿಗಳಿವೆ. ಚಂದ್ರ ಅನುಕ್ರಮವಾಗಿ ಈ ಕೊಠಡಿಗಳಿಗೆ ಭೇಟಿ ನೀಡುತ್ತಾನೆ!

English summary
What do you know about horoscope, zodiac signs, sun sign and moon sign? People give lot of importance to what horoscope says, but are not aware about what it says. Here is educative article about zodiac signs by Govind Rao V Adamane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X