ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷಿಗಳಿಗೆ ಪ್ರಿಯವಾದ ದ್ವಾದಶ ರಾಶಿ

By * ಗೋವಿಂದ ರಾವ್ ವಿ. ಅಡಮನೆ
|
Google Oneindia Kannada News

Learn about zodiac signs
ಜ್ಯೋತಿಷಿಗಳು ಉಲ್ಲೇಖಿಸುವ ಎಲ್ಲ ದ್ವಾದಶ ರಾಶಿಗಳು ಇರುವುದು ಸೂರ್ಯನ ತೋರಿಕೆಯ ವಾರ್ಷಿಕ ಚಲನೆಯ ಕಕ್ಷೆಯನ್ನು ಖಗೋಲದಲ್ಲಿ ಪ್ರತಿನಿಧಿಸುವ ಕ್ರಾಂತಿವೃತ್ತ (ಎಕ್ಲಿಪ್ಟಿಕ್:) ಎಂಬ ಕಾಲ್ಪನಿಕ ಮಹಾವೃತ್ತದಲ್ಲಿ. ಜ್ಯೋತಿಷಿಗಳು ಉಲ್ಲೇಖಿಸುವ ದ್ವಾದಶ ರಾಶಿಗಳ ಕ್ಷೇತ್ರಫಲಗಳು ಸಮವಾಗಿವೆ (3600/12 = 300). ಅವರು ಉಲ್ಲೇಖಿಸುವ ಈ ರಾಶಿಗಳು ಉಂಟುಮಾಡಿರುವ ಚಕ್ರವೇ ರಾಶಿಚಕ್ರ. ಈ ರಾಶಿಚಕ್ರದ ಅಗಲ 180. ಕ್ರಾಂತಿವೃತ್ತ ರಾಶಿಚಕ್ರವನ್ನು ಸಮದ್ವಿಭಾಗಿಸುತ್ತದೆ. ಸೌರಮಂಡಲದ ಎಲ್ಲ ಗ್ರಹಗಳ ಮತ್ತು ಉಪಗ್ರಹಗಳ ಚಲನೆಯನ್ನು ಖಗೋಲದಲ್ಲಿ ಪ್ರತಿನಿಧಿಸುವ ಕಕ್ಷೆಗಳೂ ಕ್ರಾಂತಿವೃತ್ತದ ಆಸುಪಾಸಿನಲ್ಲಿ, ಅರ್ಥಾತ್ ರಾಶಿಚಕ್ರದಲ್ಲಿ ಇರಬೇಕಾದದ್ದು ಅನಿವಾರ್ಯ. ಆಧುನಿಕ ಖಗೋಲವಿಜ್ಞಾನದಲ್ಲಿ ಉಲ್ಲೇಖಿಸುವ 88 ರಾಶಿಗಳು (ಜ್ಯೋತಿಷಿಗಳು ಉಲ್ಲೇಖಿಸುವ ದ್ವಾದಶ ರಾಶಿಗಳೂ ಈ ಪಟ್ಟಿಯಲ್ಲಿ ಸೇರಿವೆ) ಸಮ ವಿಸ್ತೀರ್ಣ ಉಳ್ಳವುಗಳಲ್ಲ. ತತ್ಪರಿಣಾಮವಾಗಿ ಜ್ಯೋತಿಷಿಗಳು ಉಲ್ಲೇಖಿಸುವ ರಾಶಿಚಕ್ರದಲ್ಲಿ ಅವರು ಉಲ್ಲೇಖಿಸುವ ದ್ವಾದಶರಾಶಿಗಳು ಮಾತ್ರವಲ್ಲದೆ ಬೇರೆ ಕೆಲವು ರಾಶಿಗಳ ಭಾಗಗಳೂ ಸೇರಿವೆ.

ಯಾವುದೇ ರಾಶಿಯಲ್ಲಿ ಅದರ ಪ್ರಧಾನ ತಾರಾಪುಂಜದ ತಾರೆಗಳಲ್ಲದೆ ಇನ್ನೂ ಅನೇಕ ತಾರೆಗಳು ಇರುತ್ತವೆ. ಇವು ಪ್ರಧಾನ ತಾರಾಪುಂಜದ ಆಕೃತಿಯ ಒಳಗೂ ಇರಬಹುದು ಹೊರಗೂ ಇರಬಹುದು. ಒಂದು ರಾಶಿಯ ತಾರೆಗಳೇ ಆಗಲಿ ರಾಶಿಯ ಪ್ರಧಾನ ತಾರಾಪುಂಜದ ತಾರೆಗಳೇ ಆಗಲಿ ಭೂಮಿಯಿಂದ ಸಮ ದೂರಗಳಲ್ಲಿ ಇಲ್ಲ, ಎಂದೇ, ಈ ತಾರೆಗಳಿಂದ ಏಕಕಾಲದಲ್ಲಿ ಹೊಮ್ಮುವ ಯಾವ ಕಿರಣಗಳೂ ಏಕಕಾಲದಲ್ಲಿ ನಮ್ಮನ್ನು ತಲಪುವುದಿಲ್ಲ. ಇಂದು ನಾವು ನೋಡುತ್ತಿರುವ ತಾರೆಗಳು ವಾಸ್ತವವಾಗಿ ಇಂದಿನವು ಅಲ್ಲ! ಇಂದು ನಾವು ನೋಡುತ್ತಿರುವ ಎಲ್ಲ ತಾರೆಗಳು ವಿಶ್ವದ ಇತಿಹಾಸದ ಒಂದು ಕಾಲಘಟ್ಟದವೂ ಅಲ್ಲ!

ಜ್ಯೋತಿಷಿಗಳಿಗೆ ಪ್ರಿಯವಾದ ದ್ವಾದಶ ರಾಶಿಗಳ ಹೆಸರುಗಳು ಮಾತ್ರ ಹೆಚ್ಚುಕಮ್ಮಿ ಎಲ್ಲ ದೇಶಗಳಲ್ಲಿ ಒಂದೇ ಆಗಿರುವುದು ಏಕೆ? ಈ ಕುರಿತು ಸಂಶೋಧಕರ ಅಂಬೋಣ ಇಂತಿದೆ: ಈ ದ್ವಾದಶ ರಾಶಿಗಳನ್ನು ಮೊದಲು ಗುರುತಿಸಿ ನಾಮಕರಣ ಮಾಡಿದವರು ಈಜಿಪ್ಟಿನವರು. ಅದನ್ನು ಗ್ರೀಕರು ಎರವಲು ಪಡೆದು ತಮ್ಮ ಭಾಷೆಗೆ ಹೆಸರುಗಳನ್ನು ಭಾಷಾಂತರ ಮಾಡಿಕೊಂಡರು. ಅಷ್ಟೇ ಅಲ್ಲದೆ ತಮ್ಮ ಸಂಸ್ಕೃತಿಯ ಪುರಾಣದ ಕಥೆಗಳನ್ನು ಜೋಡಿಸಿದರು.

ಗ್ರೀಕರಿಂದ ಭಾರತೀಯರು ಇದನ್ನು ಎರವಲು ಪಡೆದು ಗ್ರೀಕರು ಬಳಸುತ್ತಿದ್ದ ಹೆಸರುಗಳ ಪೈಕಿ ಒಂಭತ್ತನ್ನು ಯಥಾವತ್ತಾಗಿ ಸಂಸ್ಕೃತಕ್ಕೆ ಭಾಷಾಂತರಿಸಿಕೊಂಡರು(ಏರೀಸ್-ಮೇಷ, ಟಾರಸ್-ವೃಷಭ, ಜೆಮಿನಿ-ಮಿಥುನ, ಕ್ಯಾನ್ಸರ್-ಕರ್ಕಾಟಕ, ಲಿಯೋ-ಸಿಂಹ, ವರ್ಗೋ-ಕನ್ಯಾ, ಲೀಬ್ರಾ-ತುಲಾ, ಸ್ಕಾರ್ಪಿಯನ್-ವೃಶ್ಚಿಕ, ಪೀಸಸ್-ಮೀನ). ಮೂರರ ಹೆಸರುಗಳನ್ನು ಮೂಲ ಹೆಸರುಗಳ ಧ್ವನಿತಾರ್ಥ ಕೊಡುವ ಹಾಗೂ ತಮ್ಮ ಸಂಸ್ಕೃತಿಗೆ ವಿಹಿತವಾದ ಸಂಸ್ಕೃತ ಹೆಸರುಗಳಾಗಿ ಬದಲಿಸಿಕೊಂಡರು (ಸಜಿಟೆರಿಅಸ್ -ಧನು – ಗ್ರೀಕರ ಪ್ರಕಾರ: ಅರ್ಧಮನುಷ್ಯ ಅರ್ಧ ಕುದುರೆ ಆಕೃತಿ. ಕ್ಯಾಪ್ರಿಕಾರ್ನ್ – ಮಕರ, ಗ್ರೀಕರ ಪ್ರಕಾರ: ಮೀನಿನಂಥ ಬಾಲ ಇರುವ ಆಡಿನ ಆಕೃತಿ. ಅಕ್ವೇರಿಅಸ್-ಕುಂಭ, ಗ್ರೀಕರ ಪ್ರಕಾರ: ಬಿಂದಿಗೆಧಾರಿ ವ್ಯಕ್ತಿಯ ಆಕೃತಿ).

English summary
What do you know about horoscope, zodiac signs, sun sign and moon sign? People give lot of importance to what horoscope says, but are not aware about what it says. Here is educative article about zodiac signs by Govind Rao V Adamane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X