ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ್ಮರಾಶಿ, ನಕ್ಷತ್ರ : ತಿಳಿಯಲೇಬೇಕಾದ ಅಂಶಗಳು

By * ಗೋವಿಂದ ರಾವ್ ವಿ. ಅಡಮನೆ
|
Google Oneindia Kannada News

Learn about zodiac signs
ಜನ್ಮರಾಶಿ ಮತ್ತು ನಕ್ಷತ್ರಗಳಿಗೆ ಜ್ಯೋತಿಷಿಗಳು ಬಲು ಪ್ರಾಧಾನ್ಯ ನೀಡುತ್ತಾರೆ. ಅವರು ನೀಡುತ್ತಿರುವ ಪ್ರಾಧಾನ್ಯ ಯುಕ್ತವಾದದ್ದೇ? ಎಂಬುದನ್ನು ನೀವೇ ತೀರ್ಮಾನಿಸಲು ಅಗತ್ಯವಾದ ಕೆಲವು ಮೂಲಭೂತ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಲೇಖನ ಬರೆಯುತ್ತಿದ್ದೇನೆ. ರಾಶಿಗೆ ಸಂಬಂಧಿಸಿದಂತೆ ನೀವು ತಿಳಿದಿರಲೇ ಬೇಕಾದ ಅಂಶಗಳು ಇಂತಿವೆ.

ರಾಶಿಯನ್ನು, ಅರ್ಥಾತ್ ತಾರಾರಾಶಿಯನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಅಧ್ಯಯಿಸಲು ಅನುಕೂಲ ಆಗಲಿ ಎಂದು ಖಗೋಲದ ಒಟ್ಟು ಕ್ಷೇತ್ರವನ್ನು 88 ಭಾಗಗಳಾಗಿ ಇಂಟರ್ ನ್ಯಾಷನಲ್ ಅಸ್ಟ್ರನಾಮಿಕಲ್ ಯೂನಿಯನ್ ವಿಭಜಿಸಿದೆ. ಆಧುನಿಕ ಖಗೋಲ ವಿಜ್ಞಾನದ ಪ್ರಕಾರ ಈ ವಿಭಾಗಗಳಿಗೆ ತಾರಾರಾಶಿಗಳು (ಕಾನ್ಸ್ಟಲೇಷನ್ಸ್) ಎಂದು ಹೆಸರು. ಎಂದೇ, ಖಗೋಲದ ಒಂದು ಸೀಮಿತ ಕ್ಷೇತ್ರದಲ್ಲಿ ಇರುವ ತಾರೆಗಳ ಸಮೂಹವೇ ರಾಶಿ, ಪ್ರತೀ ಭಾಗದಲ್ಲಿಯೂ ಅನೇಕ ತಾರೆಗಳು ಇರುವುದರಿಂದ. ತಾರಾನಿಬಿಡ ಆಕಾಶವನ್ನು ತದೇಕಚಿತ್ತದಿಂದ ಅವಲೋಕಿಸುತ್ತಿದ್ದರೆ ಕೆಲವು ಒಂಟಿ ತಾರೆಗಳು ತಮ್ಮ ಉಜ್ವಲತೆಯಿಂದಾಗಿ ನಮ್ಮ ಗಮನ ಮೊದಲು ಸೆಳೆಯುತ್ತವೆ. ತದನಂತರ ಸಾಪೇಕ್ಷವಾಗಿ ಆಸುಪಾಸಿನಲ್ಲಿ ಇರುವ ಕೆಲವು ತಾರೆಗಳು ನಮ್ಮ ಮನಃಪಟಲದಲ್ಲಿ ವಿಶಷ್ಟ ಆಕೃತಿಗಳನ್ನು ಮೂಡಿಸುವುದರ ಮುಖೇನ ನಮ್ಮ ಗಮನ ಸೆಳೆಯುತ್ತವೆ.

ವೀಕ್ಷಕನ ಮನಃಪಟಲದಲ್ಲಿ ನಿರ್ದಿಷ್ಟ ಚಿತ್ರ ಬಿಂಬಿಸುವ ತಾರೆಗಳ ಇಂಥ ಸಮೂಹವನ್ನು, ಅರ್ಥಾತ್ ಪುಂಜವನ್ನು ಅಥವ ತಾರಾರಾಶಿಗಳು ಅನ್ನುವುದು ವಾಡಿಕೆ. ಇದೇ ಬಹುಜನಪ್ರಿಯ ವ್ಯಾಖ್ಯಾನ. ಎಲ್ಲ ಸಂಸ್ಕೃತಿಗಳಲ್ಲಿ ಪುರಾತನರು ಇಂಥ ಅನೇಕ ಪುಂಜಗಳನ್ನು ಗುರುತಿಸಿ ಅವು ಅವರ ಮನಸ್ಸಿನಲ್ಲಿ ಮೂಡಿಸಿದ ಬಿಂಬಗಳ ಹೆಸರನ್ನೇ ಇಟ್ಟರು. ಆಧುನಿಕ ಖಗೋಲ ವಿಜ್ಞಾನಿಗಳು ಕೂಡ ತಾವು ಗುರುತಿಸಿದ ಪ್ರತೀ ರಾಶಿಯಲ್ಲಿ ಒಂದು ತಾರಾಪುಂಜವನ್ನು ಗುರುತಿಸಿ ಅದಕ್ಕೊಂದು ಹೆಸರು ಕೊಟ್ಟು ಆ ಹೆಸರಿನಿಂದಲೇ ರಾಶಿಯನ್ನು ಗುರುತಿಸುತ್ತಾರೆ.

ಈಗಾಗಲೇ ಜನಪ್ರಿಯವಾಗಿದ್ದ ಪುರಾತನ ರಾಶಿ ನಾಮಗಳನ್ನು ಅಂತೆಯೇ ಉಳಿಸಿಕೊಂಡಿದ್ದಾರೆ. ಪುರಾತನರು ಒಂದೇ ರಾಶಿಗೆ ವಿಭಿನ್ನ ಸಂಸ್ಕೃತಿಗಳಲ್ಲಿ ವಿಭಿನ್ನ ಹೆಸರುಗಳು ಇರುವ ಉದಾಹರಣೆಗಳೂ ಇವೆ. ಚಿತ್ರ 1 ರಲ್ಲಿ ಇರುವ ತಾರಾ ಸಮೂಹದ ವಿನ್ಯಾಸ ಗಮನಿಸಿ. ಭಾರತೀಯರಿಗೆ ಇದು ಸಪ್ತರ್ಷಿ ಮಂಡಲ, ಬ್ರಿಟನ್ ದ್ವೀಪವಾಸಿಗಳಿಗೆ 'ನೇಗಿಲು (ದಿ ಪ್ಲೌ)", ಯುರೋಪಿನವರಿಗೆ 'ಉದ್ದ ಹಿಡಿಯ ಸೌಟು (ಬಿಗ್ ಡಿಪ್ಪರ್)", ಉತ್ತರ ಇಂಗ್ಲೆಂಡಿನವರಿಗೆ 'ಕಸಾಯಿ ಕತ್ತಿ (ಬುಚರ್ಸ್ ಕ್ಲೀವರ್), ಅಮೇರಿಕದ ಮೂಲನಿವಾಸಿಗಳಿಗೆ 'ದೊಡ್ಡ ಕರಡಿ (ಬಿಗ್ ಬೇರ್)".

English summary
What do you know about horoscope, zodiac signs, sun sign and moon sign? People give lot of importance to what horoscope says, but are not aware about what it says. Here is educative article about zodiac signs by Govind Rao V Adamane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X