ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿ ಮಾಡಿದರೆ ಮದುವೆಗೆ ಹೆದರಬಾರದು!

By * ಧವಳ
|
Google Oneindia Kannada News

Love compatibility astrology
ಮೇಷ ರಾಶಿ ಸ್ತ್ರೀ - ಧನಸ್ಸು ರಾಶಿ ಪುರುಷ : ಮೊದಲ ನೋಟದಲ್ಲೇ ಇಬ್ಬರಲ್ಲೂ ಕಣ್ ಕಣ್ಣ ಸಲಿಗೆ... ಆರಂಭ ಆಗಿಬಿಡುತ್ತದೆ. ಇದು ಪ್ರೇಮವಾಗಿರಬಹುದು, ಇಲ್ಲವೇ ಸ್ನೇಹ. ಆದರೆ ಸ್ನೇಹಕ್ಕೆ ಹೆಚ್ಚು ಬೆಲೆ ಕೊಟ್ರೆ ಒಳ್ಳೆಯದು. ಇಬ್ಬರಲ್ಲೂ ಉಚ್ಚ ಮಟ್ಟದ ಸ್ವಭಾವ ಇರುತ್ತದೆ, ಆದರೆ ಆತ್ಮಬಲ ಇರದು. ಸದಾ ಯಾವುದೋ ಕಾರಣದಿಂದ ಹೆದರಿ ಹೈರಾಣಾಗಿ ಬಿಟ್ಟಿರುತ್ತಾರೆ! ಪ್ರೀತಿಯ ವಿಷಯಕ್ಕೆ ಬರುವುದಾದರೆ ಇವರಿಬ್ಬರೂ ತಮ್ಮ ಪ್ರೀತಿ ಕೈ ತಪ್ಪಿ ಹೋಗುತ್ತೇನೋ ಎನ್ನುವ ಭಯದಿಂದ ಸದಾ ಬಳಲುತ್ತಾ ಇರ್ತಾರೆ. ಧನಸ್ಸು ರಾಶಿ ಪುರುಷ ಈ ಕಾರಣ ಮುಂದಿಟ್ಟುಕೊಂಡು ಅನ್ ಮ್ಯಾರಿಡ್ ಆಗಿ ಉಳಿದು ಬಿಡ್ತಾರೆ. ಇಂತಹವರಿಗೆ ಕನ್ಯಾ ಇಲ್ಲವೇ ಕುಂಭರಾಶಿ ಹೆಣ್ಣುಮಕ್ಕಳು ಸೂಟಬಲ್ ಮ್ಯಾಚ್. ಧನಸ್ಸು ಪ್ರಯತ್ನಿಸಿ!

ಮೇಷ ರಾಶಿ ಪುರುಷ - ಧನಸ್ಸು ರಾಶಿ ಸ್ತ್ರೀ : ಧನಸ್ಸು ರಾಶಿಯ ಹೆಣ್ಣುಮಕ್ಕಳು ಸಿಕ್ಕಾಪಟ್ಟೆ ಧೈರ್ಯಶಾಲಿಗಳು. ಸತ್ಯಕ್ಕೆ ಹೆಚ್ಚು ಆದ್ಯತೆ ಕೊಡುವಂತಹ ಸ್ವಭಾವದವರು. ಬಾಳಸಂಗಾತಿ ತಮ್ಮ ಬ್ಯಾಕ್ಬೋನ್ ಆಗಬೇಕೆಂಬ ಪ್ರಾಮಾಣಿಕ ಆಸೆ ಹೊಂದಿರುವ ವ್ಯಕ್ತಿತ್ವದವರು. ಆದರೆ ಮೇಷರಾಶಿಯ ಪುರುಷ ಹಾಗೆ ಇರುವುದಿಲ್ಲ. ಈ ಹೆಣ್ಣುಮಗಳ ಬೋಲ್ಡ್ ನೆಸ್ ಈ ಗಂಡುಪ್ರಾಣಿಗೆ ಅನುಮಾನ ಹುಟ್ಟಿಸುವುದಕ್ಕೆ ಕಾರಣ ಆಗುತ್ತೆ. ಎಲ್ಲರಿಗೂ ಗೊತ್ತಿರುವ ಹಾಗೆ 'ಅನುಮಾನಂ ಪೆದ್ದ ರೋಗಂ', ಅದು ಸಂಸಾರ ಹಾಗೂ ಮನಸ್ಸುಗಳನ್ನು ಒಡೆದು ಚೂರುಚೂರು ಮಾಡಿ ಬಿಡುತ್ತದೆ. ಗಂಡಸಿನ ಈ ಅನುಮಾನದ ರೋಗದಿಂದ ಸಂಸಾರವು ಕತ್ತಿ ಅಲುಗಿನ ಮೇಲೆ ನಡೆಯುವ ದೊಂಬರ ಹುಡುಗಿಯಂತೆ ಸೂಕ್ಷ್ಮವಾಗಿ ನಡಿತಾ ಇರುತ್ತದೆ. ಅತಿಯಾದ ಅನುಮಾನ ಅನಾಹುತಕ್ಕೆ ಕಾರಣ ಎನ್ನುವುದನ್ನು ಎಂದಿಗೂ ಮರೆಯಬಾರದು. ಇದನ್ನು ಆರಂಭಿಕ ಹಂತದಲ್ಲೇ ಸರಿಪಡಿಸಿಕೊಂಡರೆ ಲೈಫು ಲವ್ಲಿ ಲವ್ಲಿ. ಇಲ್ಲದೆ ಹೋದರೆ ಬದುಕು ವಾಸಿಯಾಗದ ಹುಣ್ಣಾಗುತ್ತದೆ ಎಚ್ಚರ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X