• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಮತ್ತು ರಾಜೀವ್ ಜಾತಕಗಳ ಅಧ್ಯಯನ

By * ಎಚ್.ಆರ್. ಹನುಮಂತ ರಾವ್
|

ಸ್ವತಂತ್ರ ಭಾರತವನ್ನು, ಆಡಳಿತಾತ್ಮಕವಾಗಿ ಮುನ್ನಡೆಸಿದ ನೆಹರು ಕುಟುಂಬದವರಲ್ಲಿ ರಾಜೀವ್ ಗಾಂಧಿ ಮೂರನೇ ತಲೆಮಾರಿನವರು. ಈಗಲೂ ಈ ಕುಟುಂಬದವರು ಪರೋಕ್ಷವಾಗಿ ಈ ದೇಶವನ್ನಾಳುತ್ತಿರುವವರು. ಇದೀಗ, ಇಟಲಿ ದೇಶದ ಹೆಣ್ಣು ಸೋನಿಯಾ ಹಾಗು ರಾಜೀವರ ಪುತ್ರನಾಗಿ ರಾಹುಲ್‌ರವರೂ ಕೂಡ ದೇಶದ ಉನ್ನತ ಪದವಿಗೆ ಏರುವ ಸೂಚನೆಗಳಿವೆಯೆ? ಇದ್ದರೆ, ಅವರ ಮುಂದಿನ ಭವಿಷ್ಯವೇನು? ಹಾಗು ಈ ಪಿತ, ಸುತರಿಗೆ ಅವರವರ ಗ್ರಹಗತಿಗಳಿಂದಾದ, ಆಗಬಹುದಾದ ಪರಿಣಾಮಗಳಲ್ಲಿ, ಸಾಮರಸ್ಯಗಳೇನಾದರೂ ಇರಬಹುದೆ ಎಂಬ ಕುತೂಹಲ ಈ ಜಾತಕ ಅಧ್ಯಯನ ಲೇಖನಕ್ಕೆ ಸ್ಪೂರ್ತಿ.

ರಾಹುಲ್ ಗಾಂಧಿ: ಜನ್ಮ 19-6-1970, 12.00 Noon, 28.40 N., 77.13E., ಕೇತುದಶಾ ಏಷ್ಯಾ 5ವ, 10ತಿಂ, 7ದಿನ. ಲಗ್ನ: 0-46 ಕನ್ಯಾ, ರವಿ: 5-34 ಮಿಥುನ, ಚಂದ್ರ: 2-12 ಧನುಸ್, ಕುಜ: 19-10 ಮಿಥುನ, ಬುಧ: 16-51 ವೃಷಭ, ಗುರು: (ವ)4-5 ತುಲ, ಶುಕ್ರ 10-59 ಕಟಕ , ಶನಿ: 25-53 ಮೇಷ, ರಾಹು: 14-19 ಕುಂಭ, ಕೇತು: 14-19 ಸಿಂಹ.

ರಾಶಿ ಕುಂಡಲಿಯಲ್ಲಿನ ಲಗ್ನಾಂಶವು ಸಿಂಹದಿಂದ ಕನ್ಯಾ ರಾಶಿಗೆ ಸಂಕ್ರಮಣಗೊಂಡು ಸೊನ್ನೆ ಅಂಶ, 46 ನಿಮಿಷಕ್ಕೆ ಸರಿಯಾಗಿ ಉದಯ. ಇಂತಹ ಸಂದರ್ಭಗಳಲ್ಲಿ, ಲಗ್ನಭಾವದ ಅನ್ವಯ ಹಿಂದಿನ ರಾಶಿಗೋ ಅಥವಾ ಸಂಕ್ರಮಣವಾದ ನಂತರದ ಗೃಹಕ್ಕೋ ಎಂಬುದನ್ನು ಸ್ಪಷ್ಟಮಾಡಿ ನಂತರ ಜಾತಕವನ್ನು ವಿಶ್ಲೇಷಿಸಬೇಕು. ಹೀಗೆ, ರಾಹುಲ್‌ರ ಜಾತಕದಲ್ಲಿ ಕನ್ಯಾ ರಾಶಿಯನ್ನೇ ತನು (ಲಗ್ನ ಭಾವ) ಸ್ಥಾನವನ್ನಾಗಿ ಭಾವಿಸಿ, ಅವರ ಜಾತಕಫಲವನ್ನು ಇಲ್ಲಿ ಬಿಂಬಿಸಲಾಗಿದೆ. ಲಗ್ನಾಧಿಪತಿ ಹಾಗು ಕರ್ಮಾಧಿಪತಿ ಬುಧನು, ಅಷ್ಟಮ ಶನಿ ಹಾಗು ದಶಮದಲ್ಲಿಯ ರವಿ, ಕುಜರ ಮಧ್ಯೆ ಅಶುಭವಾಗಿ, ಆ ಕಾರಣ, ಬುಧನು ಭಾಗ್ಯದಲ್ಲಿ, ಶುಭನಾಗಿದ್ದಾಗ, ದಯಪಾಲಿಸಬಹುದಾದ ಉನ್ನತ ವಿದ್ಯೆ ಹಾಗು ರಾಜಕಾರಿಣಿಗಿರಬೇಕಾದ ವ್ಯಾವಹಾರಿಕ ಚತುರತೆ (ಬುಧನ ಗುಣ)ಯ ಕೊರತೆಯನ್ನು ಸ್ವಲ್ಪಮಟ್ಟಿಗೆ ಹೊಂದಿರುವ ಸಾಧ್ಯತೆ ಇದೆ. ಅಲ್ಲದೆ, ಹೆಚ್ಚಿನ ವ್ಯಾಸಂಗ ಮಾಡದೆ ಭಾರತಕ್ಕೆ ಮರಳಿರಬಹುದು.

ಮಾಧ್ಯಮಗಳಿಗೆ ಕೊಟ್ಟ ಅವರ ಹೇಳಿಕೆಗಳು ಕೆಲವೊಮ್ಮೆ ಸಲ್ಲದ ವಿವಾದಗಳಿಗೆ ಕಾರಣವಾಗಿದ್ದನ್ನು ಪತ್ರಿಕೆಗಳಲ್ಲಿ ಓದಿದ ನೆನಪು. ಏನಾದರೂ, ದಶಮ ಸ್ಥಾನ (ಕರ್ಮ ಸ್ಥಾನ)ದಲ್ಲಿಯ ರವಿ(ಸರ್ಕಾರ) ಹಾಗು ಕುಜ(ಅಧಿಕಾರ)ರ ಸಂಪರ್ಕ ಇವರು ಇಷ್ಟಪಟ್ಟೋ ಅಥವಾ ಅದೃಷ್ಟ ಒಲಿದುಬಂದೋ ದೇಶದ ಜವಾಬ್ದಾರಿಯುತ ಪದವಿಯನ್ನು ಹೊಂದುವ ಸಾಧ್ಯತೆ ನಿಚ್ಚಳವಾಗಿದೆ. ತನ್ಮಧ್ಯೆ, ಇವರ ಅಧಿಕಾರದಲಿ, ಅಷ್ಟಮದಲ್ಲಿಯ ನೀಚ ಶನಿಯು ಕರ್ಮಸ್ಥಾನವನ್ನು ವೀಕ್ಷಿಸುವ ಕಾರಣ ಅಗಾಗ್ಗೆ ಅಶಾಂತಿ, ನೈಸರ್ಗಿಕ ವಿಕೋಪ ಮತ್ತು ಪ್ರತಿಭಟನೆಗಳು ಸಂಭವಿಸಬಹುದು.

ನವಾಂಶದಲ್ಲಿಯ ಬುಧನು ಕರ್ಮಾಧಿಪತಿ ಹಾಗು ಸಪ್ತಮಾ(ಕಳತ್ರ)ಧಿಪತಿಯಾಗಿ ಶುಭನು. ಇಲ್ಲಿ ಒಳ್ಳೆಯದನ್ನೆ ಮಾಡುವವನು. ಜೊತೆಗೆ, ಸುಖಸ್ಥಾನದಲ್ಲಿನ ಕುಜನು ಇವರ ಕಳತ್ರ, ದಶಮ ಹಾಗು ಲಾಭ ಸ್ಥಾನಗಳನ್ನು ದೃಷ್ಟಿಸುವುದರಿಂದ ಹೆಚ್ಚಿನ ಬಲವನ್ನು ಹೊಂದಿ, ದೇಶದ ಅತ್ಯುನ್ನತ ಸ್ಥಾನಕ್ಕೆ, ಮುಂದೊಂದು ದಿನ ಸರ್ವಾನುಮತದ, ಏಕೈಕ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಈ ಹಿಂದೆ ಆಳಿ ಹೋದ ಪ್ರಧಾನ ಮಂತ್ರಿಗಳೊಬ್ಬರು ಒಂದು ವಿಶೇಷ ಸಂದರ್ಭದಲ್ಲಿ ಹೇಗೆ ಉನ್ನತ ಸ್ಥಾನವನ್ನೇರಿದರೆಂಬುದು ಈಗ ಚರಿತ್ರೆಗೆ ಸೇರಿಹೋದ ವಿಷಯ.

ಲಾಭಾಧಿಪತಿ ಚಂದ್ರನು ಮಾತೃಸ್ಥಾನದಲ್ಲಿದ್ದು, ಕುಜ ಹಾಗು ರವಿಯ ನೇರ ದೃಷ್ಟಿಯಲ್ಲಿರುವದರಿಂದ ರಾಹುಲರ ತಾಯಿ ಆರ್ಯ ಕುಲೀನ ಸ್ತ್ರೀಯಾಗಿ, ಆ ಜನರ ರೂಪ, ಲಾವಣ್ಯಗಳನ್ನು ಹೊಂದಿರಬಹುದೆಂದೂ, ಆಕೆಯು ಇಟಲಿಯ ದೇಶದ ಪ್ರಜೆಯಾಗಿರುವುದು ಈ ಅಭಿಪ್ರಾಯವನ್ನು ಸಮರ್ಥಿಸುತ್ತದೆ. ರಾಹುಲರು ಸ್ವಪ್ರಯತ್ನವಿಲ್ಲದೆಯೂ, ತಾಯಿಯ ಮೂಲಕ, ಸುಖದ ಜೀವನ ಹಾಗೂ ರಾಜಕೀಯ ರಂಗದಲ್ಲಿಯ ಉನ್ನತ ಸ್ಥಾನವನ್ನು ಪಡೆಯಬಲ್ಲ ಅಂಶ ಕೂಡ ಸ್ಪಷ್ಟವಾಗಿದೆ. ಸುಖ ಸ್ಥಾನ(ಚತುರ್ಥ ಭಾವ) ಹಾಗು ಸಪ್ತಮಾಧಿಪತಿ ಗುರುವು ಜನ್ಮಕಾಲದಲ್ಲಿ ಅಪಸವ್ಯ(retrograde)ದಲ್ಲಿದ್ದು, ಅಷ್ಟಮ ಶನಿ ಕುಟುಂಬ ಸ್ಥಾನವನ್ನು ವೀಕ್ಷಿಸಿದರೂ, ಗುರುವು ದ್ವಿತೀಯ ಭಾವದಲ್ಲಿದ್ದು, ಭಾಗ್ಯದಲ್ಲಿ ಸಪ್ತಮವು ಅಕಳಂಕಿತವಾಗಿ ದಾಂಪತ್ಯಕ್ಕೆ ಅನುಕೂಲಕರನಾಗಿರುವುದನ್ನು ಸೂಚಿಸುತ್ತದೆ.

ಅಷ್ಟಮ ಶನಿಯ ಪ್ರಭಾವದಿಂದ ವೈವಾಹಿಕ ಜೀವನವು ಪ್ರಾರಂಭದಲ್ಲಿ ಅಹಿತಕರವಾಗಬಹುದಾದರೂ, ನಂತರದ ದಿನಗಳಲ್ಲಿ ನೆಮ್ಮದಿಯ ಜೀವನ ನಡೆಸಬಲ್ಲರು. ಇದೀಗ ಅವರಿಗೆ ಚಂದ್ರ ದೆಶೆ ನಡೆಯುತ್ತಿದ್ದು, ಇಸವಿ 2012ರ ಮಧ್ಯಾವಧಿಗೂ ಮುನ್ನ, ಕುಜದೆಶೆಯು ಪ್ರಾರಂಭವಾಗುವುದು. 2012-2019ರ ಅವಧಿ ಇವರನ್ನು ಉನ್ನತ ಪದವಿಗಳಿಗೆ ಕೊಂಡಯ್ಯುವ ದಶಾ ಕಾಲವು. ಷಷ್ಠ್ಯದಲ್ಲಿಯ ರಾಹುವು ಇವರ ವ್ಯಯಸ್ಥಾನವನ್ನು ವೀಕ್ಷಿಸುವುದರಿಂದ, ಅನುಭವದ ಇಲ್ಲವೆ ದಕ್ಷ ಸಲಹೆಗಾರರ ಅಭಾವದಿಂದಲೊ ದೇಶದ ಒಳಗೂ, ಹೊರಗೂ ಇವರಿಗೆ ಶತೃಗಳುಂಟಾಗುವ ಸಾಧ್ಯತೆ ಇದೆ. ಆ ಕಾರಣ, ಮಾನಸಿಕ ಕ್ಷೋಭೆ, ಅಶಾಂತಿ ಮತ್ತು ಆರೋಗ್ಯದ ವಿಚಾರದಲ್ಲಿ ವ್ಯತ್ಯಯಗಳನ್ನು ಅನುಭವಿಸುವ ಸೂಚನೆಗಳಿವೆ. ಇವರಿಗೆ, ರಾಹು ದಶೆಯ ಗುರು, ಯಾ ಶನಿಭುಕ್ತಿ ಅಥವಾ ಶನಿ ದಶ, ರಾಹು, ಯಾ ಗುರುಭುಕ್ತಿಯ ಅವಧಿಗಳಲ್ಲಿ ಕಷ್ಟ, ನಷ್ಟಗಳ ಸಾದ್ಯತೆಯುಂಟು.

ತಂದೆಗಿಂತ ಹೆಚ್ಚು ಜವಾಬ್ದಾರಿ ಹೊರುವ ಯೋಗ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more