• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬದುಕಲ್ಲಿ ಸಿಹಿ ಇದ್ದಷ್ಟೇ ಕಹಿಯೂ ಇರುತ್ತದೆ

By * ಧವಳ
|

ದಾಂಪತ್ಯ ಬದುಕಲ್ಲಿ ಸಿಹಿ ಇದ್ದಷ್ಟೇ ಕಹಿಯೂ ಇರುತ್ತದೆ. ಅದನ್ನು ಅರಿತು ಗಂಡ ಹೆಂಡದಿರಿಬ್ಬರು ನಡೆದುಕೊಂಡರೆ ಬಾಳು ಬೇವು ಬೆಲ್ಲ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳ ಆಡಿ ಬೇರೆ ಆಗುವುದಕ್ಕಿಂತ, ಯೋಚಿಸಿ, ಸಹನೆಯಿಂದ ಹೊಂದಿಕೊಂಡು ಹೋಗುವುದು ಜಾಣ ದಂಪತಿಗಳ ಲಕ್ಷಣ. ಇದು ಎಲ್ಲಾ ರೀತಿಯಿಂದಲೂ ಉತ್ತಮ.

ಕನ್ಯಾ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ಇವರ ಬಾಂಧವ್ಯ ಹೆಚ್ಚು ಗಟ್ಟಿಯಾಗಿರುವುದು ಪ್ರೇಮದ ಅಡಿಪಾಯಕ್ಕಿಂತ ನಂಬಿಕೆಯ ತಳಹದಿಯ ಮೇಲೆ. ಇಬ್ಬರೂ ಒಂದೇ ರಾಶಿಯವರು ಆದ ಕಾರಣ ಯೋಚನಾ ಶೈಲಿ ಒಂದೇ ರೀತಿಯಲ್ಲಿ ಇರುತ್ತದೆ. ಅದೂ ಸಹ ಸಾಕಷ್ಟು ಸರ್ತಿ ಇಬ್ಬರಲ್ಲಿ ಜಗಳ ಗಲಾಟೆ ತಂದಿಡುವುದಕ್ಕೆ ಕಾರಣ ಆಗುತ್ತದೆ. ಸಾಮಾನ್ಯವಾಗಿ ಇಬ್ಬರ ನಡುವೆ ಕಾಡುವುದು ಈಗೋ. ಅದನ್ನು ತಹಬಂದಿಗೆ ತಂದುಕೊಂಡರೆ ಸಾಕಷ್ಟು ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ. ಗಂಡ ತನಗೆ ತನ್ನ ಪತ್ನಿ ಹೆಚ್ಚಿನ ಗೌರವ ಮರ್ಯಾದೆ ನೀಡಬೇಕು ಎನ್ನುವ ಆಶಯ ಹೊಂದಿರುತ್ತಾನೆ. ಆದರೆ ಕೊಟ್ಟು ತೆಗೆದುಗೊಳ್ಳುವ ಮನೋಭಾವ ಇದ್ದಾಗ ಮಾತ್ರ ಎಲ್ಲವೂ ಸಾಧ್ಯ. ಏನೇ ಗಲಾಟೆ ಗದ್ದಲ ಇರಲಿ ಕ್ಷಮಿಸುವ ಗುಣ ಇಬ್ಬರಲ್ಲೂ ಇರುತ್ತದೆ. ಅದೇ ಅವರ ಬಾಳ ಪಯಣವು ಸುಗಮವಾಗಿ ನಡೆಯುವಂತೆ ಮಾಡುವ ಸಾಧನ.

ಕನ್ಯಾ ರಾಶಿ ಸ್ತ್ರೀ - ತುಲಾ ರಾಶಿ ಪುರುಷ : ಈ ಜೋಡಿ ಪ್ರೀತಿಸುವುದರಲ್ಲಿ ಅಳತೆ ಮೀರುತ್ತಾರೆ. ಇಷ್ಟು ಸಾಕು, ಅಷ್ಟು ಮಾತ್ರ ಬೇಕು ಎನ್ನುವ ಅಂಶಕ್ಕೆ ಪ್ರೀತಿಯಲ್ಲಿ ಆದ್ಯತೆ ಇರುವುದಿಲ್ಲ. ಇಬ್ಬರು ಸ್ಪರ್ಧೆಯ ಮೇಲೆ ಪ್ರೀತಿಸುತ್ತಾರೆ. ತಮ್ಮ ಬಾಳಸಂಗಾತಿಗಾಗಿ ಏನು ಬೇಕಾದರೂ ಕಷ್ಟ ಪಡಲು ಸಿದ್ಧರಾಗಿರುತ್ತಾರೆ. ಇಷ್ಟೊಂದು ಪ್ರೀತಿಸುವವರು ಆಗಾಗ ಬಿಟ್ಟು ಬೇರೆ ಆಗ್ತಾರೆ ಎನ್ನುವುದು ಸಹ ಇವರ ಬದುಕಿನ ಆಶ್ಚರ್ಯಕರ ಸಂಗತಿಗಳಲ್ಲೊಂದು. ಆಗ ಉಂಟಾಗುವುದು ಖೇದ. ಕನ್ಯಾ ರಾಶಿ ಸ್ತ್ರೀಯರು ಸ್ವಾತಂತ್ರ ಪ್ರಿಯರು, ಪತಿಯನ್ನು ಎಷ್ಟೇ ಪ್ರೀತಿಸಿದರೂ, ಅಷ್ಟೆ ಬೇಗ ಮುನಿದು ಬಿಡ್ತಾರೆ. ತಮಾಷೆ ಅಂದ್ರೆ ಆಕೆಗೆ ತಾನ್ಯಾಕೆ ಗಂಡನ ಮೇಲೆ ಜಗಳ ಆಡಿದೆ, ಯಾವ ಕಾರಣಕ್ಕೆ ಈ ಪರಿ ಕೋಪಿಸಿಕೊಂಡೆ ಎನ್ನುವ ಸಂಗತಿ ತಿಳಿದೇ ಇರುವುದಿಲ್ಲ. ದಾಂಪತ್ಯ ಬದುಕಲ್ಲಿ ಸಿಹಿ ಇದ್ದಷ್ಟೇ ಕಹಿಯೂ ಇರುತ್ತದೆ. ಅದನ್ನು ಅರಿತು ನಡೆಯುವುದು ಎಲ್ಲಾ ರೀತಿಯಿಂದಲೂ ಉತ್ತಮ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳ ಆಡಿ ಬೇರೆ ಆಗುವುದಕ್ಕಿಂತ ಯೋಚಿಸಿ, ಸಹನೆಯಿಂದ ಹೊಂದಿ ಕೊಂಡು ಹೋಗುವುದು ಎಲ್ಲಾ ರೀತಿಯಿಂದಲೂ ಉತ್ತಮ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Virgo - Libra love compatibility astrology. Couple should remember one thing, that is happiness and sorrow are part and parcel of life. Take whatever comes with pinch of salt. The secret of happy life lies in better understanding between husband and wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more