ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿ ಮಾತು ಕೇಳೋದು ತಪ್ಪಲ್ಲ ಕಣ್ರೀ

By * ಧವಳ
|
Google Oneindia Kannada News

Listen to your wife, at least sometimes
ಗಂಡೇ ಆಗಲಿ ಹೆಣ್ಣೇ ಆಗಲಿ ಅಹಂಕಾರವನ್ನು ಅಲಂಕರಿಸಿಕೊಂಡರೆ ಬದುಕು ಸರ್ವನಾಶ ಖಂಡಿತ. ಹೆಂಡತಿ ಮಾತನ್ನು ನಾನೇಕೆ ಕೇಳಬೇಕು, ನಾನು ಮನೆ ಯಜಮಾನ ಎಂಬಂತಹ ಒಣ ಪ್ರತಿಷ್ಠೆಗಳು ಬದುಕನ್ನು ಕಟ್ಟಿಕೊಡಲು ಸಹಕರಿಸುವುದಿಲ್ಲ. ಹಾಗಾಗಿ, ಆಗಾಗ ಹೆಂಡತಿ ಮಾತನ್ನು ಕೇಳಿದರೆ ತಪ್ಪೇನೂ ಇಲ್ಲ. ಇದು ಗಂಡ ಕಂಡುಕೊಳ್ಳಬೇಕಾದ ಸಾರ್ವಕಾಲಿಕ ಸತ್ಯ.

ಸಿಂಹ ರಾಶಿ ಪುರುಷ - ವೃಶ್ಚಿಕ ರಾಶಿ ಸ್ತ್ರೀ : ಸಿಂಹ ರಾಶಿ ಪುರುಷರು ಹಠಮಾರಿ ಸ್ವಭಾವದವರು. ಈ ಸಂಗತಿ ದಂಪತಿಗಳಲ್ಲಿ ಕೋಪತಾಪ ಹುಟ್ಟಲು ಕಾರಣ ಆಗುತ್ತದೆ. ಈ ಜೋಡಿಗಳ ಬಾಂಧವ್ಯ ಗಟ್ಟಿಯಾಗಿರಬೇಕಾದರೆ ಇಬ್ಬರಲ್ಲೂ ಪ್ರೀತಿಗಿಂತ ನಂಬಿಕೆ ಒಂದು ಪಟ್ಟು ಹೆಚ್ಚಾಗಿರಬೇಕು. ಈ ಸ್ತ್ರೀ ಮೌನವಾಗಿ ಕುಳಿತಿದ್ದಾಳೆ ಎಂದರೆ ಆಕೆ ಶಾಂತವಾಗಿದ್ದಾಳೆ ಎಂದು ಅರ್ಥವಲ್ಲ. ಮನದಲ್ಲಿ ಉಂಟಾಗಿರುವ ಬಿರುಗಾಳಿಯನ್ನು ಆಕೆ ಶಾಂತ ಮಾಡಿಕೊಳ್ಳುವ ಪ್ರಯತ್ನದಲ್ಲಿ ಆಕೆ ಇದ್ದಾಳೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸಿಂಹ ರಾಶಿ ಪುರುಷರು ಸ್ವಲ್ಪ ಮನಸ್ಸು ಬಿಚ್ಚಿ ನೋಡಿದರೆ ಸಮಸ್ಯೆಯ ಅರಿವು ಉಂಟಾಗುತ್ತದೆ. ಅದು ಅವರ ಕೈಲಿ ಸಾಧ್ಯ. ಆಗ ಸಂಗಾತಿಯ ಬೇಸರದ ಆಳ ಅರಿತು ಅದರ ಪರಿಹಾರದತ್ತ ಗಮನ ನೀಡಬಹುದು. ಬದುಕಿಗಿಂತ ಅಹಂಕಾರ ದೊಡ್ಡದಲ್ಲ. ಹೆಂಡತಿಯ ಮಾತನ್ನು ಕೇಳುವುದು ತಪ್ಪಲ್ಲ. ಕನಿಷ್ಠ ಭಾಗವಾದರೂ ಅವರು ತಿಳಿಸಿದಂತೆ ನಡೆದರೆ ಜೀವನ ಚಂದದ ಗಾನ ಆಗುತ್ತದೆ.

ಸಿಂಹ ರಾಶಿ ಸ್ತ್ರೀ - ಧನಸ್ಸು ರಾಶಿ ಪುರುಷ :
ಶಾಂತಮೂರ್ತಿ, ಧೈರ್ಯಶಾಲಿ ಆಲೋಚನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸ್ವಭಾವ ಸಿಂಹ ರಾಶಿ ಸ್ತ್ರೀಯಲ್ಲಿರುವ ಮತ್ತೊಂದಷ್ಟು ಗುಣಗಳು. ತಾನು ಎಲ್ಲರಿಗಿಂತ ವಿಶೇಷ ಎಂದು ಆಕೆ ಭಾವಿಸುತ್ತಾಳೆ. ಸಿಕ್ಕಾಪಟ್ಟೆ ಆರಾಮದಾಯಕ ಬದುಕಿಗೆ ಈಕೆ ಆದ್ಯತೆ ನೀಡುತ್ತಾಳೆ. ತನ್ನ ಸಂಗಾತಿಯಿಂದ ಮಿತಿಮೀರಿದ ವಸ್ತುಗಳನ್ನು ಕೊಳ್ಳುವುದಕ್ಕೆ ಆದ್ಯತೆ ನೀಡುತ್ತಾಳೆ. ಪುರುಷ ತನ್ನ ಸಂಗಾತಿಯ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿರುತ್ತಾನೆ. ಅವಳಿಗಾಗಿ ಎಲ್ಲಾ ಬಗೆಯ ತ್ಯಾಗಕ್ಕೂ ಸಿದ್ಧ ನಾಗಿರುತ್ತಾನೆ. ಈ ಸ್ತ್ರೀಯರಿಗೆ ಕಾಣಿಕೆಗಳನ್ನು ಕೊಟ್ಟು ಗಂಡ ಒಲಿಸಿಕೊಳ್ಳಬಹುದು. ಕೋಪ-ತಾಪ ಸಿಟ್ಟು ಸೆಡವಿನಲ್ಲಿ ಈಕೆ ಇದ್ದರೆ ಆಗ ಅವಳನ್ನು ಶಾಂತ ಮಾಡಬಹುದಾದ ಅತ್ಯಂತ ಸುಲಭ ಸಾಧನ ಅವಳಿಗೆ ಗಿಫ್ಟ್ ಗಳನ್ನು ನೀಡುವುದು. ಪಾಕೆಟ್ ಖಾಲಿಯಾದರೂ ಮನೆಯಲ್ಲಿ ಶಾಂತಿಯು ತುಂಬುತ್ತದೆ, ನೆಮ್ಮದಿ ನೆಲೆಸುತ್ತದೆ. ಪ್ರಯತ್ನಿಸಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)

English summary
Leo - sagittarius and Leo - Scorpio love compatibility astrology. The secret of happy and long married life is in listening to your partner, especially wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X