• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಖಮಯ ದಾಂಪತ್ಯ : ಹಣಕ್ಕಿಂತ ನೆಮ್ಮದಿ ಮುಖ್ಯ

By * ಧವಳ
|

ದುಡ್ಡು ಬೇಡವನ್ನುವವರು ಎಲ್ಲವ್ರೆ? ದುಡ್ಡು ಎಲ್ಲದಕ್ಕೂ ಬೇಕು. ಸುಖಮಯ, ಶಾಂತಿಯ ಜೀವನಕ್ಕೆ ಹಣ ಬೇಕೇ ಬೇಕು. ಆದರೆ, ದುಡ್ಡು ನಮ್ಮ ಹಿಂದೆ ಬರಬೇಕೆಯೇ ಹೊರತು, ನಾವು ಅದರ ಹಿಂದಲ್ಲ. ನಾವೇ ಹಣದ ಹಿಂದೆ ಬಿದ್ದಾಗ ನೆಮ್ಮದಿ ಮರೀಚಿಕೆಯಾಗುತ್ತದೆ, ಸಾಮರಸ್ಯವನ್ನು ಕಲಕಿಬಿಡುತ್ತದೆ. ಹಣದಿಂದ ನೆಮ್ಮದಿ ಕೊಳ್ಳಲು ಸಾಧ್ಯವೆ?

ಸಿಂಹ ರಾಶಿ ಪುರುಷ - ತುಲಾ ರಾಶಿ ಸ್ತ್ರೀ : ತುಲಾ ರಾಶಿ ಸ್ತ್ರೀ ತಾನು ಎಲ್ಲರಿಗಿಂತ ಮೊದಲಿಗಳಾಗಿ ಇರಬೇಕೆಂದು ಬಯಸುತ್ತಾಳೆ. ಆದರೆ ಸಿಂಹ ರಾಶಿ ಪುರುಷರಿಗೆ ಅದು ಇಷ್ಟವಿಲ್ಲ. ಆದರೆ ಇವರಿಬ್ಬರಿಗೂ ಕೆಲಸ ಮಾಡುವುದೆಂದರೆ ತುಂಬಾ ಇಷ್ಟ. ಹಣ ಮಾಡುವ ಬಗ್ಗೆ ಇಬ್ಬರಿಗೂ ಆಸಕ್ತಿ ಇರುತ್ತದೆ. ಎಲ್ಲಿ ಹಣದ ಸಂಗತಿ ಬರುತ್ತದೆಯೋ ಅಲ್ಲಿ ಜಗಳ, ವಾದ ವಿವಾದ ಇದ್ದೇ ಇರುತ್ತದೆ. ಸಿಂಹ ರಾಶಿಯವರು ಮದುವೆಯ ಬಳಿಕ ಮತ್ತಷ್ಟು ಶಾಂತ ಸ್ವಭಾವದವರು, ಭಾವುಕರು ಆಗುತ್ತಾರೆ. ಹಣದ ವಿಷಯದಲ್ಲಿ ಎಂತಹುದೇ ವಾದ ವಿವಾದ ಇರಲಿ, ಆದರೆ ದಾಂಪತ್ಯದ ವಿಷಯದಲ್ಲಿ ವಿಶ್ವಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.. ಪ್ರೀತಿ, ಬಾಂಧವ್ಯದ ವಿಷಯದಲ್ಲಿ ನಂಬಿಕೆ ದೃಢವಾಗಿರುತ್ತದೆ.

ಸಿಂಹ ರಾಶಿ ಸ್ತ್ರೀ - ವೃಶ್ಚಿಕ ರಾಶಿ ಪುರುಷ : ವೃಶ್ಚಿಕ ರಾಶಿ ಪುರುಷರು ಕೆಲವು ವಿಷಯಗಳನ್ನು ಅವರ ಸಂಗಾತಿ ಕೇಳಲಿ ಬಿಡಲಿ ಹೇಳ್ತಾನೆ ಇರ್ತಾರೆ. ಹಣದ ವಿಷಯದಲ್ಲಿ ಗಲಾಟೆ ತಪ್ಪುವುದಿಲ್ಲ. ಸ್ತ್ರೀ ಖರ್ಚು ಮಾಡುವುದರಲ್ಲಿ ಮುಂದೆ. ಪುರುಷ ಅದಕ್ಕೆ ಆಸ್ಪದ ನೀಡುವುದಿಲ್ಲ. ಇಬ್ಬರು ಬಜೆಟ್ ತಯಾರಿಸಿಕೊಂಡು ಅದರಂತೆ ನಡೆದರೆ ಯಾವುದೇ ರೀತಿಯ ಜಗಳ-ಗಲಾಟೆ ಇರದು. ಮನೆಯಲ್ಲಿ ನೆಮ್ಮದಿಗಿಂತ ಯಾವುದು ಮುಖ್ಯ? ಗುಣದಲ್ಲಿ ಮಾಡಿಕೊಳ್ಳುವ ಅಲ್ಪ ಮಾರ್ಪಾಟಿನಿಂದ ಎಲ್ಲವು ಸರಿಯಾಗುತ್ತದೆ. ಬದುಕು ಹಾಯಾಗಿರುತ್ತದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Leo - libra and Leo - Scorpio love compatibility astrology. Though money is important for a comfortable life, it is not possible to buy peace with money. Tips for happy married life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more