• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಂಡತಿ ದಡ್ಡಿ ಅಂತ ಹೀಗಳಿದೀರಿ, ಜೋಕೆ!

By * ಧವಳ
|

ಸಂಸಾರ ರಥವನ್ನು ಎಳೆಯುವ ಗಂಡು, ಹೆಣ್ಣಿನಲ್ಲಿ ಯಾರ ಪ್ರಾಮುಖ್ಯತೆ ಹೆಚ್ಚು? ಯಾರ ಜಾಣ್ಮೆ ಹೆಚ್ಚಾಗಿರುತ್ತದೆ? ನಾನೇ ಹೆಚ್ಚು, ನಾನೇ ಜಾಣ ಎಂಬ ಅಹಂ ನಿಮ್ಮಲ್ಲಿ ತುಂಬಿಕೊಂಡಿತೆಂದರೆ ನೀವು ಕೆಟ್ಟಿರೆಂದೇ ಅರ್ಥ. ಅದರಲ್ಲೂ, ಹೆಣ್ಣನ್ನು ಯಾವುದೇ ರೀತಿಯಲ್ಲೂ ಕಡೆಗಣಿಸಬೇಡಿ. ನಲಿಯುತ ಬಾಳುವ ಮನೆಗೆ ಹೆಣ್ಣೇ ಕಾರಣ ಎಂಬುದನ್ನು ಮರೆಯಬೇಡಿ.

ಸಿಂಹ ರಾಶಿ ಪುರುಷ - ಕನ್ಯಾ ರಾಶಿ ಸ್ತ್ರೀ : ಈ ಜೋಡಿಯಲ್ಲಿ ಸ್ವಲ್ಪ ಹೆಚ್ಚುಕಡಿಮೆ ಗಣಗಳು ಜೊತೆಯಾಗಿವೆ. ಅಂದ್ರೆ ಒಂದು ಗಣ ಅತಿ ಹೆಚ್ಚಾದರೆ ಮತ್ತೊಂದು ತುಂಬಾ ಕಡಿಮೆ. ಅಂತಹುದರಲ್ಲಿ ಇಬ್ಬರಲ್ಲೂ ಗಲಾಟೆ ಗದ್ದಲ ಇದ್ದದ್ದೇ. ಸರಿ ಯಾರೇ ಆಗಿರಲಿ, ಆಗ ಈ ಜಗಳ ಪರಿಹಾರ ಆಗಲ್ಲ ಎಂದು ತಿಳಿದರೆ ಅದು ತಪ್ಪು ಗ್ರಹಿಕೆ. ಯಾಕೆಂದ್ರೆ ಆ ಜೋಡಿ ಜಗಳವನ್ನು ಕೇವಲ ಆ ಕ್ಷಣಕ್ಕೆ ಮೀಸಲಾಗಿಡ್ತಾರೆ. ಇಬ್ಬರು ಪ್ರೀತಿಯ ವಿಷಯದಲ್ಲಿ ಪಕ್ಕಾ ಪರ್ಫೆಕ್ಟ್. ಆದ್ರೆ ಗಂಡಸು ಬುದ್ಧಿ ಎಲ್ಲಿಗೆ ಹೋಗುತ್ತೆ ಎನ್ನುವ ಕೊರಗು ಈಕೆಯದು. ಕಾರಣ ಇಷ್ಟೆ. ಆತನೇ ಮನೆಯ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಷ್ಟ ಪಡುತ್ತಾನೆ. ಆದರೆ ಅದು ಎಲ್ಲಾ ಸಂದರ್ಭದಲ್ಲೂ ಸರಿಯಲ್ಲ. ಈ ಅಂಶದ ಬಗ್ಗೆ ಕೇಳಿದರೆ ಆತ ಹೇಳೋದೇ ಬೇರೆ. ಪುರುಷ ಸಿಂಹನ ಪ್ರಕಾರ, ತನ್ನ ಹೆಂಡತಿಗೆ ತಿಳಿವಳಿಕೆ ತುಂಬಾ ಕಡಿಮೆ. ನಾನು ಆದ್ರೆ ತುಂಬಾ ಜಾಣ. ಸೊ ನನಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಸಾಧ್ಯ. ವಿಶೇಷ ಅಂದ್ರೆ ಕನ್ಯಾ ರಾಶಿ ಸ್ತ್ರೀ ಪುರುಷನಷ್ಟೇ ಬುದ್ಧಿವಂತಿಕೆ, ಜಾಣ್ಮೆ, ತಿಳಿವಳಿಕೆ ಹೊಂದಿರುತ್ತಾಳೆ. ಇಷ್ಟೆಲ್ಲಾ ಕಿರಿಕಿರಿ ಇದ್ರೂ ಪ್ರೀತಿ -ನಂಬಿಕೆಯ ವಿಷಯದಲ್ಲಿ ತುಂಬಾ ಆಸ್ಥೆ ಇರುತ್ತದೆ. ವಿರುದ್ಧ ರೀತಿಯ ಅಂಶಗಳು ಒಟ್ಟಾಗಿವೆ ಎಂದು ಅನ್ನಿಸಿದರು ಈ ದಂಪತಿಗಳ ಬದುಕು ಸುಂದರವಾಗಿ ಇರುತ್ತದೆ.

ಸಿಂಹ ರಾಶಿ ಸ್ತ್ರೀ - ತುಲಾ ರಾಶಿ ಪುರುಷ : ತುಲಾ ರಾಶಿ ಪುರುಷನ ವಿಷಯದಲ್ಲಿ ಸ್ವಲ್ಪ ಗಂಭೀರವಾದ ಸಂಗತಿಯೊಂದಿದೆ. ಆತನಿಗೆ ಪಾರ್ಟಿಗಳಿಗೆ ಹೋಗುವುದಕ್ಕೆ ಸಿಕ್ಕಾಪಟ್ಟೆ ಆಸಕ್ತಿ. ದಂಪತಿಗಳು ಸದಾ ಒಟ್ಟಿಗೆ ಇದ್ರೆ ಸರಿ, ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಅಯ್ಯೋ ನನಗೆ ಮೂಡಿಲ್ಲ ಎಂದು ಹೆಣ್ಣುಮಗಳು ಹೇಳಿದಳಂದ್ರೆ ಈತನ ಆಸಕ್ತಿ ಅಕ್ಕಪಕ್ಕ ಹೊರಳುತ್ತದೆ. ಅದೆಷ್ಟರ ಮಟ್ಟಿಗೆ ಅಂದ್ರೆ, ಯಾವುದೇ ಸಣ್ಣ-ಪುಟ್ಟ ಫಂಕ್ಷನ್ಗೆ ಆಗಲಿ ಈತನ ಜೊತೆ ಇಷ್ಟ ಇರಲಿ ಇಲ್ಲದೆ ಇರಲಿ ಹೋಗಲೇಬೇಕು. ಅದು ಆಕೆಯ ಭವಿಷ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಅಪ್ಪಿತಪ್ಪಿ ಆತ ಒಬ್ಬನೇ ಕಾರ್ಯಕ್ರಮಗಳಿಗೆ ಹೋದನೋ ಸ್ವಲ್ಪ ಗಮನ ಅತ್ತಿತ್ತ ಹರಿಸುತ್ತಾನೆ. ಸಿಂಹ ರಾಶಿ ಸ್ತ್ರೀ ಸುಮ್ಸುಮ್ನೆ ಕೋಪ ಮಾಡಿಕೊಳ್ಳುವುದಿಲ್ಲ. ಆದರೆ ಬದುಕಲ್ಲಿ ಸಂಗಾತಿಯ ಈ ಗುಣ ಆಕೆಯಲ್ಲಿ ಕೋಪ ತರಿಸುತ್ತದೆ. ಏನೆ ಹೇಳಿ ದಾಂಪತ್ಯ ಗೀತೆಯಲ್ಲಿ ನಂಬಿಕೆ ತುಂಬಾ ಮುಖ್ಯ. ಹೊರಗಡೆಯ ಆಹಾರ ತಿಂದು ಆರೋಗ್ಯ ಕೆಡಿಸಿ ಕೊಳ್ಳುವುದಕ್ಕಿಂತ ಮನೆಯಲ್ಲಿ ಹಾಯಾಗಿ ಸುರಕ್ಷಿತವಾಗಿದ್ದರೆ ಅದರಿಂದ ಆಗುವ ಪ್ರಯೋಜನ ಯಾರಿಗೆ ಹೇಳಿ? ತಪ್ಪು ಹೆಜ್ಜೆ ಇಡುವುದಕ್ಕೆ ಮುನ್ನ ಒಮ್ಮೆ ಯೋಚಿಸಿ. ನಿರ್ಧರಿಸಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Leo - libra love compatibility astrology. Never underestimate your wife or better half. The secret of successful married life lies in understanding your spouce better.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more