ಉಡುಪಿ, ಸೆಪ್ಟೆಂಬರ್ 12: ರಾಜ್ಯದ ಅತಿವೃಷ್ಠಿ ಹಾನಿ ಪರಿಶೀಲನೆಗೆ ಆಗಮಿಸಿರುವ ಕೇಂದ್ರ ಸರಕಾರದ ಅಧಿಕಾರಿಗಳ ತಂಡವು ಬುಧವಾರ ಉಡುಪಿ ಜಿಲ್ಲೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿತು. ಕಾರ್ಕಳ ತಾಲೂಕಿನ ಮಳೆ ಹಾನಿಗೊಳಗಾದ ಕುಕ್ಕಂದೂರು, ಮೀಯಾರು, ಹೊಸ್ಮಾರು, ಈದು, ನೂರಾಲ್ ಬೆಟ್ಟು ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ,ಕುಂದಾಪುರ ಎಸಿ ಭೂಬಾಲನ್, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೇಂದ್ರದ ತಂಡಕ್ಕೆ ಮಾಹಿತಿ ನೀಡಿದರು. ಆ ಬಳಿಕ ತಂಡವು ಕಾರ್ಕಳದ ಐಬಿಯಲ್ಲಿ ನಷ್ಡ ಪರಿಹಾರದ ಕುರಿತು ಸಮಾಲೋಚನೆ ನಡೆಸಿ, ಗರಿಷ್ಠ ಪರಿಹಾರದ ಭರವಸೆ ನೀಡಿತು.