ಚೆನ್ನೈ-ಮೈಸೂರು ಶತಾಬ್ಧಿ ರೈಲಿಗೆ ಅನುಭೂತಿ ಕೋಚ್ ಸೇವೆ


ಬೆಂಗಳೂರು, ಜನವರಿ 12: ರೈಲಿನಲ್ಲಿ ವಿಮಾನ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ನೀಡಲು ರೈಲ್ವೆ ಇಲಾಖೆ ಸಜ್ಜಾಗಿದೆ. ಚೆನ್ನೈನಿಂದ ಶುಕ್ರವಾರ ಹೊರಡುವ ಶತಾಬ್ಧಿ ರೈಲಿನಲ್ಲಿ ಅನುಭೂತಿ ಬೋಗಿಗಳು ಸೇರ್ಪಡೆಯಾಗಲಿದ್ದು, ಪ್ರಯಾಣಿಕರಿಗೆ ಸಂಕ್ರಾಂತಿ ಹಬ್ಬದ ಕೊಡುಗೆ ನೀಡುತ್ತಿದೆ.

Advertisement

ಚೆನ್ನೈ ಸೆಂಟ್ರಲ್- ಮೈಸೂರು ಶತಾಬ್ಧಿ ಎಕ್ಸ್ ಪ್ರೆಸ್ ಪ್ರಯಾಣಿಕರಿಗೆ ಪೊಂಗಲ್- ಸಂಕ್ರಾಂತಿ ಕೊಡುಗೆಗಾಗಿ ಹಲವು ಲಕ್ಸುರಿ ಸೌಲಭ್ಯ ಒದಗಿಸುವ ಅನುಭೂತಿ ಕೋಚ್ ಸೇವೆ ಆರಂಭಿಸುತ್ತಿದೆ.

Advertisement

ನೈಋತ್ಯ ರೈಲ್ವೆ ವಲಯ ಅನಭೂತಿ ಕೋಚ್ ಗಳನ್ನು ಪರಿಚಯಿಸುತ್ತಿದ್ದು, ಅನುಭೂತಿ ಕೋಚಿಂಗ್ ಗಳ ಬುಕಿಂಗ್ ಗಾಗಿ ಪ್ರಯಾಣಿಕರು ರೈಲು ಸಂಖ್ಯೆ 12007/12008 ರ ಬದಲಾಗಿ 22007 ಹಾಗೂ 22008 ಸಂಖ್ಯೆಯನ್ನು ಟಿಕೇಟ್ ರಿಸರ್ವೇಷನ್ ವೇಳೆ ಬಳಸಲು ಕೋರಲಾಗಿದೆ.

ಸಂಕ್ರಾಂತಿ, ಗಣರಾಜ್ಯೋತ್ಸವದಂದು ವಿಶೇಷ ರೈಲು ಸಂಚಾರ

ಈ ಹೊಸ ಬಗೆಯ ಅನುಭೂತಿ ಕೋಚ್ ಗಳು ಕುಳಿತುಕೊಳ್ಳುವ ಆಸನ ಹಾಗೂ ಒಳಾಂಗಣದ ವಿನ್ಯಾಸಲ್ಲಿ ಬದಲಾವಣೆ ಮಾಡಿದ್ದು, ಶೌಚಾಲಯಗಳ ಬಳಕೆಯನ್ನು ಪಾಶ್ಚಿಮಾತ್ಯ ಶೈಲಿಯಲ್ಲಿ ಮತ್ತಷ್ಟು ಸರಳೀಕರಣಗೊಳಿಸಲಾಗಿದೆ. ವೃದ್ಧರು ಹಾಗೂ ಮಹಿಳೆಯರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಈ ಸೌಲಭ್ಯವು ಕೇವಲ ಅನುಭೂತಿ ಕೋಚ್ ಗಳನ್ನು ಬುಕಿಂಗ್ ಮಾಡಿದ ಪ್ರಯಾಣಿಕರಿಗೆ ಮಾತ್ರ ಲಭ್ಯವಾಗಲಿದೆ. ಪ್ರಯಾಣಿಕರು ರೈಲ್ವೆ ಟಿಕೇಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸುವಾಗ ಬದಲಾದ ರೈಲುಗಳ ಸಂಖ್ಯೆಯನ್ನು ಆಧರಿಸಿ ಟಿಕೇಟ್ ಬುಕಿಂಗ್ ಮಾಡಿಸಲು ನೈಋತ್ಯ ರೈಲ್ವೆ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.

English Summary

Passenger of Chennai-Mysuru shatabdi express will get the opportunity to travel by the features -rich 'Anubhuti' coach from January 12. The Southern Railway announced an Anubhuti coach will be introduced in Chennai central-mysuru chennai central shatabdi express as a pongal gift for passengers.
Advertisement