ಹತ್ತೊಂಬತ್ತು ದಿನಗಳ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ ಹಾರ್ದಿಕ್ ಪಟೇಲ್


ಅಹ್ಮದಾಬಾದ್, ಸೆಪ್ಟೆಂಬರ್ 12: ಮೀಸಲಾತಿ ಹಾಗೂ ರೈತರ ಸಾಲಮನ್ನಾಕ್ಕಾಗಿ ಒತ್ತಾಯಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದ ಪಾಟೀದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಬುಧವಾರ ತಮ್ಮ ಉಪವಾಸ ಕೊನೆಗೊಳಿಸಿದ್ದಾರೆ.

ಹತ್ತೊಂಬತ್ತು ದಿನಗಳ ನಂತರ ಅವರ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದರು. ಸರಕಾರದಿಂದ ಸ್ಪಂದನೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರಿಗೆ ಯಾವುದೇ ರೀತಿ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನೀರನ್ನು ಕೂಡ ಸೇವಿಸುವುದನ್ನು ನಿಲ್ಲಿಸಿದ ಮೇಲೆ ಆರೋಗ್ಯ ಕ್ಷೀಣಿಸುತ್ತಾ ಬಂದಿದ್ದರಿಂದ ಕಳೆದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೆಂಬಲಿಗರ ಒತ್ತಾಯಕ್ಕೆ ಮಣಿದು ಉಪವಾಸ ಸತ್ಯಾಗ್ರಹ ನಿಲ್ಲಿಸಿದ ನಂತರ ಟ್ವೀಟ್ ಮಾಡಿದ ಅವರು, ನನ್ನನ್ನು ಪ್ರೀತಿಸುವವರ ಸಲುವಾಗಿ, ಜೀವಂತ ಇರಲು ಬಯಸುವವರಿಗಾಗಿ ಸಾಯಲು ಕೂಡ ಸಿದ್ಧ. ಆದರೆ ನನ್ನ ಗೆಳೆಯರ ಸಲುವಾಗಿ ಬದುಕುತ್ತೇನೆ ಹೊರತು ನನ್ನನ್ನು ಕೊಲ್ಲಲು ಬಯಸುವವರ ಪ್ರಯತ್ನ ಸಫಲ ಆಗುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಾರ್ದಿಕ್ ಪಟೇಲ್: ಉಪವಾಸ ಮುಂದುವರಿಕೆ

24 ವರ್ಷದ ಹಾರ್ದಿಕ್ ಪಟೇಲ್ ಆಗಸ್ಟ್ 25ರಿದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರು. "ಈ ಹೋರಾಟ ಕಾಂಗ್ರೆಸ್ ಪ್ರೇರಿತವಾದದ್ದು" ಎಂದು ಸರಕಾರ ಆರೋಪ ಮಾಡಿತ್ತು.

Have a great day!
Read more...

English Summary

Patidar leader Hardik Patel, who was on an indefinite hunger strike demanding reservation for Patidars and loan waiver from farmers, broke his fast after 19 days today, saying he would not play into the hands of those who want to kill him.