ಸಂಜೆ 5 ಗಂಟೆಗೆ ಆಯೋಗದಿಂದ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ


ನವದೆಹಲಿ, ಮಾರ್ಚ್ 10 : ಕೇಂದ್ರ ಚುನಾವಣಾ ಆಯೋಗ ಭಾನುವಾರ ಸಂಜೆ ಪತ್ರಿಕಾಗೋಷ್ಠಿ ಕರೆದಿದೆ. 2019ರ ಲೋಕಸಭಾ ಚುನಾವಣೆ ದಿನಾಂಕವನ್ನು ಇಂದು ಘೋಷಣೆ ಮಾಡಲಿದೆಯೇ? ಕಾದು ನೋಡಬೇಕು.

ಭಾನುವಾರ ಸಂಜೆ 5 ಗಂಟೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯನ್ನು ಕರೆದಿದೆ. ನಾಲ್ಕು ರಾಜ್ಯಗಳ ವಿಧಾನಸಭೆ, ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಮಾಧ್ಯಮಗಳ ವರದಿ ಹೇಳಿದೆ.

ಲೋಕಸಭಾ ಚುನಾವಣೆ 2019 : ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಲೋಕಸಭಾ ಚುನಾವಣೆ ಜೊತೆಗೆ ಆಂಧ್ರಪ್ರದೇಶ, ಓಡಿಸ್ಸಾ, ಸಿಕ್ಕಿಂ, ಅರುಣಾಚಲ ಪ್ರದೇಶ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆ ಮಾಡಿದರೆ ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ.

.
.

ಮುಂದಿನ ವಾರದ ಆರಂಭದಲ್ಲಿ ಚುನಾವಣೆ ದಿನಾಂಕ ಘೋಷಣೆ

ಪ್ರತಿಪಕ್ಷ ಕಾಂಗ್ರೆಸ್ ಚುನಾವಣಾ ದಿನಾಂಕ ಘೋಷಣೆ ಮಾಡುವುದಕ್ಕೆ ಏಕೆ ವಿಳಂಬ ಮಾಡಲಾಗುತ್ತಿದೆ ಎಂದು ಪ್ರಶ್ನೆ ಮಾಡಿತ್ತು. ಪಕ್ಷದ ನಾಯಕ ಅಹಮದ್ ಪಟೇಲ್ ಅವರು ಆಯೋಗ, 'ನರೇಂದ್ರ ಮೋದಿ ಅವರ ಪ್ರವಾಸ ಮುಗಿಯಲು ಕಾಯುತ್ತಿದೆಯೇ?' ಎಂದು ಪ್ರಶ್ನೆ ಮಾಡಿದ್ದರು.

ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್ ಚಂದ್ರ ಅಧಿಕಾರ ಸ್ವೀಕಾರ!

543 ಲೋಕಸಭಾ ಕ್ಷೇತ್ರಗಳಿಗೆ 10 ಹಂತದಲ್ಲಿ ಮತದಾನ ನಡೆಯುವ ನಿರೀಕ್ಷೆ ಇದೆ. ಹಾಲಿ ಇರುವ 16ನೇ ಲೋಕಸಭೆಯ ಅವಧಿ ಜೂನ್ 3ಕ್ಕೆ ಅಂತ್ಯಗೊಳ್ಳಿದೆ.

ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚುನಾವಣಾ ಆಯೋಗ 2014ರ ಲೋಕಸಭಾ ಚುನಾವಣೆಗೆ ಮಾರ್ಚ್ 5ರಂದು ದಿನಾಂಕ ಘೋಷಣೆ ಮಾಡಿತ್ತು. 9 ಹಂತದಲ್ಲಿ ಚುನಾವಣೆ ನಡೆದಿತ್ತು.

English Summary

The Election Commission (EC) is expected to announce the schedule for 2019 general elections today at 5 PM. The EC is likely to hold a press conference today at 5 pm in Vigyan Bhawan.
Read more...