ಹಗಲಿನ ವೇಳೆ ಅಮಾಯಕ, ರಾತ್ರಿಯಲ್ಲಿ ಹಂತಕ: ಬಯಲಾದ 33 ಕೊಲೆಗಳ ರಹಸ್ಯ


ಭೋಪಾಲ್, ಸೆಪ್ಟೆಂಬರ್ 12: ಹಗಲಿನ ಹೊತ್ತು ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುತ್ತಾ ಬಟ್ಟೆ ಹೊಲಿಯುವ ತನ್ನ ವೃತ್ತಿಯನ್ನು ಮಾಡುತ್ತಿದ್ದ ಈತ ರಾತ್ರಿಯಾದ ಬಳಿಕ ಕ್ರೂರಿಯಾಗುತ್ತಿದ್ದ.

ರಾತ್ರಿಯಾದಂತೆ ಸೂಜಿಯ ದಾರದಿಂದ ಯಮಪಾಶಕ್ಕೆ ಅವನ ಹಿಡಿತ ಬದಲಾಗುತ್ತಿತ್ತು. ಸಾಯಿಸುವುದೂ ಆತನಿಗೆ ಬಟ್ಟೆ ಹೊಲಿದಷ್ಟೇ ಸಲೀಸಾಗಿತ್ತು. ಕಳೆದ ಎಂಟು ವರ್ಷಗಳಲ್ಲಿ ಅವರು ಕೊಂದಿದ್ದು ಬರೋಬ್ಬರಿ 33 ಮಂದಿಯನ್ನು.

ರಿಯಾನ್ ಶಾಲೆಯ ಪ್ರದ್ಯುಮ್ನ ಠಾಕೂರ್ ಕೊಲೆಗೆ ಒಂದು ವರ್ಷ

ಮಧ್ಯಪ್ರದೇಶದ ಭೋಪಾಲದ ಆದೇಶ್ ಖಮ್ರಾ (48) ಎಂಬಾತನನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ವೇಳೆ ಆತ ನೀಡಿದ ಮಾಹಿತಿಗಳನ್ನು ಕೇಳಿ ಬೆಚ್ಚಿಬಿದ್ದಿದ್ದಾರೆ.

2010ರಿಂದ ಶುರು
ಮಧ್ಯಪ್ರದೇಶ ಮಾತ್ರವಲ್ಲ
ಮಧ್ಯಪ್ರದೇಶ ಮಾತ್ರವಲ್ಲ

ಈ ಹತ್ಯೆಯ 'ಅಭ್ಯಾಸ' ಶುರುವಾಗಿದ್ದು 2010ರಲ್ಲಿ. ಮೊದಲು ಹತ್ಯೆ ಮಾಡಿದ್ದು ಅಮರಾವತಿಯಲ್ಲಿ. ಬಳಿಕ ನಾಸಿಕ್. ಮಧ್ಯಪ್ರದೇಶದ ಬಹುತೇಕ ಎಲ್ಲ ಭಾಗಗಳಲ್ಲಿ ಮೃತದೇಹಗಳು ಪತ್ತೆಯಾಗಿದ್ದವು. ಮಾತ್ರವಲ್ಲ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿಯೂ ಭೇದಿಸಲಾಗದ ಕೆಲವು ಕೊಲೆಗಳ ಸತ್ಯ ಈಗ ಬಯಲಾಗಿದೆ.

ಪಾತ್ರ ಒಪ್ಪಿಕೊಂಡ ಆರೋಪಿ
ಎಲ್ಲರೂ ಟ್ರಕ್ ಚಾಲಕರು
ಎಲ್ಲರೂ ಟ್ರಕ್ ಚಾಲಕರು

ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಕೊಲೆಯಾದ ವ್ಯಕ್ತಿಗಳೆಲ್ಲರೂ ಟ್ರಕ್ ಚಾಲಕರು ಮತ್ತು ಅವರ ಸಹಾಯಕರು. ಈ ಕೊಲೆಗಳ ಹಿಂದೆ, ಸಜ್ಜನನಂತೆ ಕಾಣಿಸುವ ಮೌನಿ ಖಮ್ರಾ ಇದ್ದಾನೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.

ಕಳೆದ ವಾರ ಪೊಲೀಸರು ಖಮ್ರಾನನ್ನು ಬಂಧಿಸಿದಾಗ 30 ಕೊಲೆಗಳಲ್ಲಿನ ತನ್ನ ಪಾತ್ರವನ್ನು ಒಪ್ಪಿಕೊಂಡಾಗ ಪೊಲೀಸರು ಬೆಚ್ಚಿಬಿದ್ದಿದ್ದರು. ಮಂಗಳವಾರ ವಿಚಾರಣೆ ವೇಳೆ ಆತ ಇನ್ನೂ ಮೂರು ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬೆಂಗಳೂರಿನ ಸೈಬರ್ ಕೆಫೆಯಲ್ಲಿ 10ರೂ.ಗಾಗಿ ನಡೆಯಿತು ಟೆಕ್ಕಿಯ ಹತ್ಯೆ

ಅಪರೂಪದ ಪ್ರಕರಣ
ಹಂತಕನನ್ನು ಹಿಡಿದ ಮಹಿಳಾ ಅಧಿಕಾರಿ
ಹಂತಕನನ್ನು ಹಿಡಿದ ಮಹಿಳಾ ಅಧಿಕಾರಿ

ಖಮ್ರಾನನ್ನು ಸತತ ಮೂರು ದಿನ ಬೆನ್ನಟ್ಟಿದ್ದ ಮಹಿಳಾ ಪೊಲೀಸ್ ಅಧಿಕಾರಿ ಬಿಟ್ಟು ಶರ್ಮಾ ಕೊನೆಗೂ ಆತನನ್ನು ಉತ್ತರ ಪ್ರದೇಶದ ಸುಲ್ತಾನಪುರ ಕಾಡಿನಲ್ಲಿ ಹಿಡಿಯುವಲ್ಲಿ ಸಫಲವಾದ ಬಳಿಕ ಎಂಟು ವರ್ಷದ ಹಿಂದೆ ನಡೆದ ಕೃತ್ಯಗಳು ಬೆಳಕಿಗೆ ಬಂದಿವೆ.

ಇತ್ತೀಚೆಗೆ ನಡೆದ ಇಬ್ಬರು ಟ್ರಕ್ ಚಾಲಕರ ಕೊಲೆ ಪ್ರಕರಣದಲ್ಲಿ ಖಮ್ರಾನನ್ನು ಬೆನ್ನತ್ತಿ ಬಂಧಿಸಿದ ಬಿಟ್ಟು ಶರ್ಮಾ ಮತ್ತು ಎಸ್‌ಪಿ ಲೋಧಾ ರಾಹುಲ್ ಕುಮಾರ್ ಅವರು 'ಇದು ಅಪರೂಪದ ಪ್ರಕರಣ' ಎಂದಿದ್ದಾರೆ.

ಕಷ್ಟದಿಂದ ಮುಕ್ತಿ
ಮುಕ್ತಿ ನೀಡುವ ಉದ್ದೇಶಕ್ಕೆ ಕೊಲೆ!
ಮುಕ್ತಿ ನೀಡುವ ಉದ್ದೇಶಕ್ಕೆ ಕೊಲೆ!

ಖಮ್ರಾನ ಜತೆಗೆ ಸಹ ಆರೋಪಿ ಜಯಕರಣ್ ಎಂಬಾತನನ್ನು ಕೂಡ ಬಂಧಿಸಲಾಗಿದೆ. ಈ ಚಾಲಕರನ್ನೇ ಏಕೆ ಕೊಂದಿದ್ದು ಎಂದು ಪ್ರಶ್ನಿಸಿದಾಗಲೆಲ್ಲಾ ಆತ ನಗುತ್ತಾ ನೀಡುವ ಉತ್ತರ 'ಮೋಕ್ಷ ಕಲ್ಪಿಸಲು'!

'ಟ್ರಕ್ ಚಾಲಕರದು ಕಷ್ಟದ ಜೀವನ. ನಾವು ಅವರಿಗೆ ಮುಕ್ತಿ ನೀಡುತ್ತೇವೆ. ಅವರ ನೋವಿನಿಂದ ವಿಮೋಚನೆ ನೀಡುವುದು' ಎಂದು ಮತ್ತೆ ನಗುತ್ತಾನೆ.

ಕಾರಿನೊಳಗೆ ಕೂತಿದ್ದ ಶಿವಮೊಗ್ಗ ಮಾರ್ಕೆಟ್ ಗಿರಿಯನ್ನು ಕೊಂದ ಮುಸುಕುಧಾರಿಗಳು

ಊರಿಗೆ ಊರೇ ಆಘಾತದಲ್ಲಿ

ಮೌನಿ, ಸಜ್ಜನ ವ್ಯಕ್ತಿ!

ಖಮ್ರಾ ಹುಟ್ಟಿ ಬೆಳೆದ ಊರು ಮಂದಿದೀಪ್‌ನಲ್ಲಿರುವ ಸ್ನೇಹಿತರು, ಸಂಬಂಧಿಕರು ಆಘಾತಕ್ಕೆ ಒಳಗಾಗಿದ್ದಾರೆ.

ತಾವೊಬ್ಬ ಕ್ರೂರ ಕೊಲೆಗಡುಕನ ಜತೆಯಲ್ಲಿಯೇ ಬದುಕುತ್ತಿದ್ದೆವು ಎಂಬ ಸತ್ಯವನ್ನು ಅವರಿಗೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ. 'ಅವನು ಹೆಚ್ಚು ಮೌನಿಯಾಗಿದ್ದ. ಮಿಗಿಲಾಗಿ ಉತ್ತಮ ನಡವಳಿಕೆ ಹೊಂದಿದ್ದ. ಅಷ್ಟೊಂದು ಜನರನ್ನು ಕೊಂದಿದ್ದಾನೆ ಎಂದರೆ ನಂಬಲು ಸಾಧ್ಯವೇ ಇಲ್ಲ' ಎನ್ನುತ್ತಾರೆ ಆತನ ನೆರೆಹೊರೆಯವರು.

ಕುಡಿಸಿ ಸಾಯಿಸುತ್ತಿದ್ದ
ಗೆಳೆತನ ಬೆಳೆಸಿ ಕೊಲೆ
ಗೆಳೆತನ ಬೆಳೆಸಿ ಕೊಲೆ

ಎಲ್ಲರೊಂದಿಗೆ ಸ್ನೇಹದೊಂದಿಗೆ ವರ್ತಿಸುತ್ತಿದ್ದ ಖರ್ಮಾ, ಟ್ರಕ್ ಚಾಲಕರ ಗೆಳೆತನ ಸಂಪಾದಿಸಿ, ವಂಚಿಸುತ್ತಿದ್ದ. ಆತನ ಸಹಚರರು ಟ್ರಕ್‌ಅನ್ನು ಲೂಟಿ ಮಾಡುತ್ತಿದ್ದರು. ಹೆಚ್ಚಿನ ಸಂದರ್ಭದಲ್ಲಿ ಉದ್ದನೆಯ ಹಗ್ಗದಿಂದ ಅವರ ಉಸಿರುಗಟ್ಟಿಸಿ ಕೊಲ್ಲುತ್ತಿದ್ದ. ಕೆಲವೊಮ್ಮೆ ವಿಷವನ್ನು ಕುಡಿಸುತ್ತಿದ್ದ.

ಇದಕ್ಕೂ ಮುನ್ನ ಚಾಲಕರಿಗೆ ಮಿತಿಮೀರಿ ಮದ್ಯಪಾನ ಮಾಡಿಸುತ್ತಿದ್ದ, ಮಾದಕ ವಸ್ತುಗಳನ್ನು ನೀಡುತ್ತಿದ್ದ. ಅವರನ್ನು ಕೊಂದು, ಅವರ ಗುರುತು ಸಿಗದಂತೆ ಬಟ್ಟೆಗಳನ್ನು ಕಳಚಿ ನಗ್ನವಾಗಿಸುತ್ತಿದ್ದ. ಬಳಿಕ ದೇಹಗಳನ್ನು ಚರಂಡಿ, ಅಥವಾ ದುರ್ಗಮ ಕಣಿವೆಗಳಿಗೆ ಎಸೆಯುತ್ತಿದ್ದ.

ಹೀಗೆ ಚಾಲಕರ ದೇಹಗಳು ಮಧ್ಯಪ್ರದೇಶದಿಂದ ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ಗಳಿಗೂ ತಲುಪಿದ್ದವು. ಪೊಲೀಸರಿಗೆ ಪ್ರಕರಣಗಳ ಸಾಕ್ಷ್ಯಗಳೇ ಸಿಗುತ್ತಿರಲಿಲ್ಲ.

ಪಶ್ಚಾತ್ತಾಪವಿಲ್ಲ
ಪ್ರತಿ ವಿವರವೂ ನೆನಪಿದೆ
ಪ್ರತಿ ವಿವರವೂ ನೆನಪಿದೆ

ಖಮ್ರಾನಿಗೆ ತಾನು ಮಾಡಿದ ಕೊಲೆಗಳ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆತನಿಗೆ ತಾನು ಕೊಂದ ಪ್ರತಿಯೊಬ್ಬರ ಪ್ರತಿ ಮಾಹಿತಿಯೂ ನೆನಪಿದೆ.

ಹತ್ಯೆಯಾದ ವ್ಯಕ್ತಿ ಕೊನೆಯ ಬಾರಿಗೆ ಏನು ತಿಂದಿದ್ದ, ಯಾವ ಬಟ್ಟೆ ಹಾಕಿಕೊಂಡಿದ್ದ, ಆತನನ್ನು ಎಲ್ಲಿ ಮತ್ತು ಹೇಗೆ ಕೊಲ್ಲಲಾಯಿತು, ದೇಹವನ್ನು ಎಲ್ಲಿ ನಿಖರವಾಗಿ ಎಸೆಯಲಾಯಿತು ಇವೆಲ್ಲವನ್ನೂ ಆತ ವಿವರವಾಗಿ ಬಾಯ್ಬಿಟ್ಟಿದ್ದಾನೆ. ಈ ದೇಹಗಳ ಮರಣೋತ್ತರ ಪರೀಕ್ಷೆಯ ವರದಿಗೂ ಆತನ ಹೇಳಿಕೆಗೂ ತಾಳೆಯಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಅಶೋಕ್ ಖಮ್ರಾ ಪ್ರೇರಣೆ

ಅಂಕಲ್‌ ಸ್ಫೂರ್ತಿ

ಖಮ್ರಾ ತನಗಿಂತಲೂ ಕ್ರೂರಿಯಾಗಿದ್ದ ಅಂಕಲ್ ಅಶೋಕ್ ಖಮ್ರಾನಿಂದ ಸ್ಫೂರ್ತಿ ಪಡೆದಿದ್ದಾಗಿ ಹೇಳಿಕೊಂಡಿದ್ದಾನೆ. ಹಿಂದೆಯೂ ಟ್ರಕ್ ಚಾಲಕರ ಹತ್ಯೆಯ ಪ್ರಕರಣದ ಜಾಲವನ್ನು ಭೇದಿಸಲಾಗಿತ್ತು. ಅಶೋಕ್ ಖಮ್ರಾ ಸುಮಾರು 100 ಟ್ರಕ್ ಚಾಲಕರನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದ. ಆತನನ್ನು 2010ರಲ್ಲಿ ಬಂಧಿಸಿ ಭೋಪಾಲ್‌ಗೆ ರೈಲಿನಲ್ಲಿ ಕರೆತರುವಾಗ ತಪ್ಪಿಸಿಕೊಂಡಿದ್ದ. ಇಲ್ಲಿಯವರೆಗೂ ಆತನ ಸುಳಿವು ಸಿಕ್ಕಿಲ್ಲ.

Have a great day!
Read more...

English Summary

Tailor Aadesh Khamra who was tailor the day, become a killer at night. He admitted killing of 33 truck drivers and their helpers from 2010 in Bhopal, Madhya pradesh.