ಅಧಿಕಾರಕ್ಕಾಗಿ ಮತ್ತೋರ್ವ ಅಣ್ಣ ಹುಟ್ಟಿಕೊಳ್ಳುತ್ತಾನೆ : ಕೋಡಿಮಠ ಶ್ರೀ


ಜಾರಕಿಹೊಳಿ ಸಂಘರ್ಷದ ಬಗ್ಗೆ ಕೋಡಿ ಮಠ ಶ್ರೀಗಳು ನುಡಿದ ಭವಿಷ್ಯ | Oneindia Kannada

ಹಾಸನ, ಸೆಪ್ಟೆಂಬರ್ 12: 'ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದ ಈಗ ನಿಜವಾಗಿದೆ ಎಂದು ಭಕ್ತಾದಿಗಳು ನಂಬಿದ್ದಾರೆ.

ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀಗಳು ತಾಳೆಗರಿ ಹಿಡಿದು ನುಡಿಯುವ ಒಗಟಿನ ಮಾತಿಗೆ ನಾನಾ ಅರ್ಥಗಳನ್ನು ಕಲ್ಪಿಸಲಾಗುತ್ತದೆ.

"ಬಿತ್ತಿದ ಬೆಳಸು ಪರರು ಕೊಯ್ದಾರು" ಎಂದು ಶ್ರೀಗಳು ಹೇಳಿದ್ದರು. ಅದರಂತೆ, ಬಿತ್ತಿದ ಬೀಜ, ಬೆಳೆದು ಬಂದ ಪೈರು ಇದು ಮುಂದಿನ ಅಸೆಂಬ್ಲಿ ಚುನಾವಣೆಯ ಭವಿಷ್ಯ ಎಂದು ಶ್ರೀಗಳು ಹೇಳಿದ್ದರು. ಇದರಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಬೆಳೆದ ಬೆಳೆಯನ್ನು ಪರರು(ಜೆಡಿಎಸ್) ಕೊಯ್ದುಕೊಂಡಿದ್ದಾರೆ ಎಂದು ಅರ್ಥೈಸಲಾಗಿತ್ತು.

ಪ್ರವಾಹದಿಂದ ಹೈರಾಣಾಗಿರುವ ನಾಡಿಗೆ ದಂಗು ಬಡಿಯುವ ಕೋಡಿಶ್ರೀಗಳ ಭವಿಷ್ಯ

ಜುಲೈ 27ರ ಚಂದ್ರಗ್ರಹಣ ನಂತರ ಆಗಸ್ಟ್ 11ರ ವೇಳೆಗೆ ಸಂಭವಿಸಿದ ಸೂರ್ಯಗ್ರಹಣದ ಪರಿಣಾಮದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದ್ದು, ಪ್ರಾಕೃತಿಕ ಸಂಪನ್ಮೂಲ ನಾಶ, ಭೂಕಂಪ, ಅತಿವೃಷ್ಟಿಯಾಗಲಿದೆ. ಈ ಬಾರಿ ವಿಶೇಷವಾಗಿ ಸೂರ್ಯ ಮತ್ತು ಚಂದ್ರ ಗ್ರಹಣಗಳು ಒಟ್ಟಿಗೆ ಬಂದಿವೆ. ವಿಶೇಷವಾಗಿ ಬರುವ ದಿನಗಳು ಕಷ್ಟ ತರಲಿವೆ ಎಂದು ಅರ್ಥೈಸಲಾಗಿತ್ತು. ಅಂದು ಸ್ವಾಮೀಜಿಗಳು ನೀಡಿದ್ದ ಒಗಟಿನ ಮಾತೇನು? ಅದನ್ನು ಏನೆಂದು ಅರ್ಥೈಸಲಾಗಿತ್ತು? ತಿಳಿಯಲು ಮುಂದೆ ಓದಿ...

ಏನೆಂದು ಭವಿಷ್ಯ ನುಡಿದಿದ್ದರು

'ಭ್ರಾತೃ ಬೆಂಕಿ ಹಿಡಿದಾನು...' ಕೋಡಿಮಠಶ್ರೀಗಳ ಭವಿಷ್ಯ ನಿಜವಾಯ್ತೆ!

"ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಪರಸಕ್ಕೆ ಭಂಗ, ಪ್ರಸಂಗಕ್ಕೆ ಹಾನಿ, ಭ್ರಾತೃ ಬೆಂಕಿ ಹಿಡಿದಾನು...'

ಭ್ರಾತೃ ಬೆಂಕಿ ಹಿಡಿಯುತ್ತಾನೆ ಎಂಬುದಕ್ಕೆ ಎಚ್​.ಡಿ.ಕುಮಾರಸ್ವಾಮಿಯವರ ಸಹೋದರ ರೇವಣ್ಣ ಬಂಡಾಯ ಏಳುತ್ತಾರೆ ಎಂದೂ ಕೆಲವರು ವಿಶ್ಲೇಷಿಸಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಸಂಕಷ್ಟದಲ್ಲಿ ಸಿಲುಕಿದರೆ ಸೋದರನಾಗಿ ಬೆಳಕು ತೋರಿಸಿ ರಕ್ಷಿಸುತ್ತಾರೆ ಎಂಬ ಅರ್ಥವನ್ನು ಹೇಳಿದ್ದರ್.

ಆದರೆ, ಇದು ಕುಮಾರಸ್ವಾಮಿ-ರೇವಣ್ಣ ಅವರ ಬದಲಿಗೆ ಜಾರಕಿಹೊಳಿ ಸೋದರರ ಬಗ್ಗೆ ನುಡಿದಿದ್ದು ಎನ್ನಲಾಗಿದೆ.

ನಂಬಿದವರಿಂದ ವಿಶ್ವಾಸ ದ್ರೋಹ

ಬಂಧು-ಮಿತ್ರರಲ್ಲಿ ವಿರಸ, ಸಾಮಾಜಿಕವಾಗಿ ಇವರಿಗಿಂತ ಕೆಳ ಸ್ಥಾನದಲ್ಲಿ ಇರುವವರಿಂದ ಅವಮಾನ, ಅನಾರೋಗ್ಯ ಸಮಸ್ಯೆ, ನಂಬಿದವರಿಂದಲೇ ವಿಶ್ವಾಸ ದ್ರೋಹ ಈ ಎಲ್ಲವೂ ಕಾಣುತ್ತಿದೆ. ಅದಕ್ಕೆ ಕಾರಣ ಆರನೇ ಮನೆಗೆ ಪ್ರವೇಶಿಸುವ ಗುರು ಹಾಗೂ ಚಂದ್ರನಿಗೆ ಏಳನೇ ಸ್ಥಾನ ಹಾಗೂ ಲಗ್ನಕ್ಕೆ ಎಂಟನೇ ಸ್ಥಾನದ ಶನಿಯ ಪ್ರಭಾವ. ಜತೆಗೆ ವಿಪತ್ ತಾರೆಯ ನಕ್ಷತ್ರದಲ್ಲಿ ನಡೆಯುತ್ತಿರುವ ಬುಧ ದಶೆ ಹಾಗೂ ರಾಹು ಭುಕ್ತಿಯ ಪ್ರಭಾವದಿಂದ ಇಷ್ಟೆಲ್ಲ ಅನುಭವಿಸಬೇಕಾಗುತ್ತದೆ. ಇನ್ನು ಇವರು ಒತ್ತಡಗಳಿಂದ ಸರಕಾರ ವಿಸರ್ಜಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ತನಗೆ ಲಭಿಸದಿದ್ದರೆ ಇನ್ನೊಬ್ಬರಿಗೂ ಸಿಗಬಾರದು ಎಂಬ ಕಾರಣಕ್ಕೆ ಹಾಗೆ ಮಾಡುವ ಸಾಧ್ಯತೆ ಇದೆ. ಬಾಧಕಾಧಿಪತಿ ಶನಿಯು ರವಿಯ ಜತೆ ಇರುವುದು ಇದಕ್ಕೆ ಕಾರಣ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಅಭಿಪ್ರಾಯಪಟ್ಟಿದ್ದರು. ಪೂರ್ಣ ಪಾಠ ಇಲ್ಲಿ ಓದಿ

ಪ್ರಕಾಶ್ ಅಮ್ಮಣ್ಣಾಯರಿಂದ ಸಿಎಂ ಕುಮಾರಸ್ವಾಮಿ ಜಾತಕ ವಿಶ್ಲೇಷಣೆ

ರೇವಣ್ಣ ಅವರಿಗೆ ಅಕ್ಟೋಬರ್ ನಂತರ ಗುರು ಬಲ

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವುದು ಐದನೇ ಮನೆಯಲ್ಲಿ ಗುರು ಇರುವಾಗಲೇ. ಅಕ್ಟೋಬರ್ ನಂತರ ಕುಮಾರಸ್ವಾಮಿ ಅವರಿಗೆ ಗುರು ಆರನೇ ಮನೆಗೆ ಹೋಗುತ್ತದೆ. ಆಗ ಅವರಿಗೆ ಆರೋಗ್ಯ ಬಾಧೆ ಹಾಗೂ ಅಧಿಕಾರ ನಾಶದ ಸನ್ನಿವೇಶಗಳು ಕಾಣಿಸಿಕೊಳ್ಳುತ್ತದೆ. ಅಂಥ ಸ್ಥಿತಿಯಲ್ಲಿ ರೇವಣ್ಣ ಅವರಿಗೆ ಗುರು ಬಲ ಬರುವುದರಿಂದ ಹೆಚ್ಚಿನ ಅಧಿಕಾರ ಪ್ರಾಪ್ತಿ ಯೋಗ ಇದೆ. ಗುರು ಬಲ ಬಂದಾಗ ರೇವಣ್ಣ ಅವರಿಗೆ ಹೇಗೆ ಅಧಿಕಾರ ಸಿಗಬಹುದು ಎಂಬ ವಿಶ್ಲೇಷಣೆ ಮಾಡಿದಾಗ, ಈ ಹಿಂದೆ ಕುಮಾರಸ್ವಾಮಿ ಅವರು ಹೇಗೆ ಕಾಂಗ್ರೆಸ್ ನಿಂದ ಹೊರಬಂದು ಬಿಜೆಪಿ ಜತೆ ಸಖ್ಯ ಬೆಳೆಸಿ, ಹೇಗೆ ಮುಖ್ಯಮಂತ್ರಿ ಆದರೋ ಅದೇ ಮಾದರಿಯಲ್ಲಿ ರೇವಣ್ಣ ಅವರು ಬಿಜೆಪಿ ಜತೆಗೆ ಕೈ ಜೋಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಪಂಡಿತ್ ವಿಠಲ್ ಭಟ್ ಅವರು ವಿಶ್ಲೇಷಿಸಿದ್ದಾರೆ.

ಜಾತಕ ವಿಮರ್ಶೆ: ಎಚ್.ಡಿ.ರೇವಣ್ಣ ರಾಜಕೀಯ ಔನ್ನತ್ಯಕ್ಕೆ ಕಾಲ ಸನ್ನಿಹಿತ

ಸಮ್ಮಿಶ್ರ, ಮೈತ್ರಿ ಸರ್ಕಾರಗಳ ಬಗ್ಗೆ ಭವಿಷ್ಯ

ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಸಾಧ್ಯತೆ ಬಗ್ಗೆ ಹೇಳಿದ್ದ ಶ್ರೀಗಳು, ಈ ಹಿಂದೆ ಗುಜರಾತ್ ಹಾಗೂ ಉತ್ತರಪ್ರದೇಶ ಚುನಾವಣೆ ಬಗ್ಗೆ ಕೂಡಾ ಇದೇ ರೀತಿ ವ್ಯಾಖ್ಯಾನ ನೀಡಿದ್ದರು.

ಇದಾದ ನಂತರ ಈ ವರ್ಷದ ಆದಿಯಲ್ಲಿ, 'ಕಷ್ಟಪಟ್ಟು ದುಡಿಯುವವರು ಒಬ್ಬರು, ಅದರ ಲಾಭವನ್ನು ತೆಗೆದುಕೊಳ್ಳುವವರು ಇನ್ನೊಬ್ಬರು' ಎಂದು ಉತ್ತರಪ್ರದೇಶ ಮತ್ತು ಗುಜರಾತ್ ಚುನಾವಣೆಯನ್ನು ಉಲ್ಲೇಖಿಸಿ ಶ್ರೀಗಳು ಹೇಳಿದ್ದರು. ಇವಿಎಂ ಯಂತ್ರಗಳು ದೋಷಪೂರಿತ ಎನ್ನುವುದು ನನ್ನ ಮಾತಿನ ಉದ್ದೇಶ ಎಂದು ಶ್ರೀಗಳು ಅದಾದ ನಂತರ ಹೇಳಿದ್ದರು. ಎರಡೂ ರಾಜ್ಯಗಳಲ್ಲಿ ಸೋತ ನಂತರ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಇವಿಎಂ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೊನೆಗೊಳಿಸಲಿದೆಯೇ ಜುಲೈ ಚಂದ್ರ ಗ್ರಹಣ?

ಯಾರು ಆ ಹೊಸ ಸೋದರ

ಹಾಸನದ ಮಾಡಾಳು ಗೌರಮ್ಮನ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಪ್ರಕೃತಿ ವಿಕೋಪದಿಂದ ದೊಡ್ಡ ದೊಡ್ಡ ನಗರಗಳು ಹಾನಿಗೊಳ್ಳಲಿದೆ. ಯಾರು ಭಕ್ತಿಯಿಂದ ನಡೆದುಕೊಳ್ಳುತ್ತಾರೋ ಅಂತವರಿಗೆ ಒಳ್ಳೆಯದೂ ಆಗುತ್ತದೆ ಎಂದರು. ನವೆಂಬರ್​ವರೆಗೆ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿರುತ್ತದೆ. ಬೆಳಗಾವಿ ಸಹೋದರರಂತೆ ಅಧಿಕಾರಕ್ಕಾಗಿ ಮತ್ತೋರ್ವ ಅಣ್ಣ ಹುಟ್ಟಿಕೊಳ್ಳುತ್ತಾನೆ ನೋಡುತ್ತಿರಿ ಎಂದು ಹೇಳಿದ್ದಾರೆ.

Have a great day!
Read more...

English Summary

Did Kodi Mutt Seer predicted about Jarkiholi brothers and Government conflict. Kodi Mutt Seer Dr. Shivananda Shivayogi Rajendra Swamiji prediction during the eve of Lunar eclipse. Kodi Mutt seer also predicted about more rainfall, earthquake and rift in Karnataka politics.